ಟೆನ್ ಟೆನ್ ಟೆನ್

Team Udayavani, Aug 29, 2019, 5:00 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಇನ್ಫೋಸಿಸ್‌ ಸಾಫ್ಟ್ವೇರ್‌ ಸಂಸ್ಥೆಯ ಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರ ಪೂರ್ಣ ಹೆಸರು, ನಾಗವಾರ ರಾಮರಾವ್‌ ನಾರಾಯಣ ಮೂರ್ತಿ.
2. ಅವರು ಹುಟ್ಟಿದ್ದು ಈಗಿನ ಚಿಕ್ಕಬಳ್ಳಾಪುರ (ಆಗಿನ ಕೋಲಾರ) ಜಿಲ್ಲೆಯ ಶಿಡ್ಲಘಟ್ಟದಲ್ಲಿ.
3. ಅವರನ್ನು “ಭಾರತದ ಮಾಹಿತಿ ತಂತ್ರಜ್ಞಾನದ ಜನಕ’ ಎಂದು ಗುರುತಿಸಲಾಗುತ್ತದೆ.
4. ಐಐಟಿ ಕಾನ್‌ಪುರದಲ್ಲಿ ಕಂಪ್ಯೂಟರ್‌ ಸೈನ್ಸ್‌ ಪದವಿ ಓದಿರುವ ಅವರು, 1976ರಲ್ಲಿ ಸಾಫೊóàನಿಕ್ಸ್‌ ಎಂಬ ಕಂಪನಿ ಪ್ರಾರಂಭಿಸಿದ್ದರು.
5. ಆದರೆ, ಆ ಕಂಪನಿ ಒಂದೂವರೆ ವರ್ಷಗಳಲ್ಲಿಯೇ ಮುಚ್ಚಲ್ಪಟ್ಟಿತು. ಆಗ ಅವರು, ಆರು ಜನ ಸ್ನೇಹಿತರೊಡಗೂಡಿ ಇನ್ಫೋಸಿಸ್‌ ಕಂಪನಿಯನ್ನು ಹುಟ್ಟು ಹಾಕಿದರು.
6. ಇನ್ಫೋಸಿಸ್‌ ಸ್ಥಾಪನೆಗೆ ಮೂರ್ತಿ ಅವರು, ತಮ್ಮ ಮಡದಿ ಸುಧಾ ಮೂರ್ತಿ ಅವರಿಂದಲೇ 10 ಸಾವಿರ ರೂ. ಸಾಲ ಪಡೆದಿದ್ದರು.
7. 1990ರಲ್ಲಿ ಇನ್ಫೋಸಿಸ್‌ ನಷ್ಟಕ್ಕೆ ಸಿಲುಕಿ ಮುಚ್ಚಲ್ಪಡುವ ಸ್ಥಿತಿ ಬಂದಾಗಲೂ ಎದೆಗುಂದದ ಮೂರ್ತಿಯವರು ಮತ್ತೆ ಕಂಪನಿಯನ್ನು ಬಲಿಷ್ಟಗೊಳಿಸಿದರು.
8. ಸರಳ ಜೀವನ ನಡೆಸುವ ಮೂರ್ತಿಯವರು ಪ್ರತಿ ತಿಂಗಳು ತಪ್ಪದೇ ಖರ್ಚು ಮಾಡುವುದು ಪುಸ್ತಕ ಖರೀದಿಗೆ ಮಾತ್ರ.
9. ಮಡದಿ ಸುಧಾಗೆ ಪುಸ್ತಕಗಳನ್ನೇ ಉಡುಗೊರೆಯಾಗಿ ನೀಡುವ ಮೂರ್ತಿ, ಪ್ರತಿ ಬಾರಿಯೂ ಮೊದಲ ಪುಟದಲ್ಲಿ “ಟು ಯು, ಫ್ರಂ ಮಿ’ ಎಂದು ಬರೆಯುತ್ತಾರಂತೆ.
10. ಪದ್ಮಶ್ರೀ, ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.

ಸಂಗ್ರಹ: ಪ್ರಿಯಾಂಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೀನು ಯಾರಿಗೂ ಏನೂ ಮಾಡೋಲ್ಲ ಅನ್ನೋದೇನೋ ನಿಜ. ಆದರೆ, ಅದರಲ್ಲೂ ವಿಷಕಾರಿ ಮೀನುಗಳು ಉಂಟು ಅನ್ನೋದಕ್ಕೆ ಈ ಜೆಲ್ಲಿ ಮೀನೇ ಉದಾಹರಣೆ. ಈ ಮೀನು ಎಲ್ಲವನ್ನೂ ಕಾಲಿನ ಮೂಲಕವೇ...

  • ಹಿಮಕ್ಕೂ, ಹಿಮಕರಡಿಗಳಿಗೂ ಅವಿನಾಭಾವ ನಂಟು. ಹಿಮ ಇಲ್ಲದೇ ಹೋದರೆ ಹಿಮಕರಡಿ ಭೂಮಿಯಿಂದಲೇ ಇಲ್ಲವಾಗುವವು. ಹಿಮಕರಡಿಗಳು ಉತ್ತರಧೃವದಲ್ಲಿ ವಾಸಿಸುವ ಜೀವಿಗಳು....

  • "ಕುಮಾರ ಬಂದಾಗ, ಸೈನಿಕರು ಮತ್ತು ಸೇವಕರು ಎಲ್ಲರೂ ಸೇರಿಕೊಂಡು ರಾಜನಿಗೆ ಜಯವಾಗಲಿ ಅಂತ ಹೇಳಬೇಕು' ಎಂದು ಶಂಕರ ಹೇಳಿದ. ಎಲ್ಲರೂ ತಲೆಯಲ್ಲಾಡಿಸಿದರು. ಆದರೆ ಒಬ್ಬಳು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ಮಂಗನಿಂದ ಮಾನವ "ವಿಕಾಸವಾದ ಸಿದ್ಧಾಂತ'ವನ್ನು ಪ್ರತಿಪಾದಿಸಿದ...

  • ಬೇಕಾದ ಪರಿಕರ: ಒಂದು ಕಾರ್ಡಿನ ಮೇಲೆ ಸಂಖ್ಯೆ ಬರೆಯಲಾದ ಮುಳ್ಳಿಲ್ಲದ ಗಡಿಯಾರ. ಪರಿಣಾಮ: ನಿಮ್ಮ ಸಭಿಕರಲ್ಲಿ ಒಬ್ಬರಿಗೆ ಹನ್ನೆರಡಕ್ಕಿಂತ ಕಡಿಮೆ ಸಂಖ್ಯೆಯನ್ನು...

ಹೊಸ ಸೇರ್ಪಡೆ