ಟೆನ್ ಟೆನ್ ಟೆನ್

ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!

Team Udayavani, Jul 25, 2019, 5:00 AM IST

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

1. ಭಾರತದ ಮೊದಲ ಗಗನಯಾನಿ ರಾಕೇಶ್‌ ಶರ್ಮಾ ಮೂಲತಃ ಪಂಜಾಬ್‌ನವರು.
2. ಐದು ವರ್ಷದ ಹುಡುಗನಾಗಿದ್ದಾಗಲೇ ರಾಕೇಶ್‌, ಜೆಟ್‌ ವಿಮಾನದಂತೆ ಹಾರುವ ಆಟ ಆಡುತ್ತಿದ್ದರು.
3. ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಿಂದ ಉತ್ತೀರ್ಣರಾದ ಅವರು, ತಮ್ಮ ಕನಸಿನಂತೆಯೇ ಭಾರತೀಯ ವಾಯುಸೇನೆಯಲ್ಲಿ ಟೆಸ್ಟ್‌ ಪೈಲಟ್‌ ಆದರು.
4. 1971ರ ಪಾಕಿಸ್ತಾನದ ವಿರುದ್ಧದ ಯುದ್ಧ ಕಾರ್ಯಾಚರಣೆಯಲ್ಲಿ 21 ಯುದ್ಧ ವಿಮಾನಗಳನ್ನು ಹಾರಿಸಿದ್ದರು.
5. 1982ರಲ್ಲಿ ಇಸ್ರೋ ಮತ್ತು ಸೋವಿಯತ್‌ ಇಂಟರ್‌ಕಾಸ್ಮೋಸ್‌ದ ಜಂಟಿ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಗಗನಯಾತ್ರಿಯಾಗಿ ಆಯ್ಕೆಯಾದರು.
6. 1984ರ ಏಪ್ರಿಲ್‌ 2ರಂದು, ಯೂರಿ ಮಾಲಿಶೇವ್‌ ಹಾಗೂ ಗೆನ್ನಾಡಿ ಸ್ಟ್ರೆಕಲೋವ್‌ ಜೊತೆಗೆ ಸೋಯುಜ್‌ ಟಿ-11 ಬಾಹ್ಯಾಕಾಶ ನೌಕೆಯಲ್ಲಿ ಅವರು ಅಂತರಿಕ್ಷ ಪ್ರಯಾಣ ಕೈಗೊಂಡರು.
7. 7 ದಿನ, 21 ನಿಮಿಷ 40 ನಿಮಿಷಗಳ ಕಾಲ ರಾಕೇಶ್‌ ಶರ್ಮಾ ಮತ್ತು ತಂಡ, ಬಾಹ್ಯಾಕಾಶದಲ್ಲಿತ್ತು
8. ರಾಕೇಶ್‌ ಶರ್ಮಾ ತಮ್ಮ ಜೊತೆಗೆ ಬಾಹ್ಯಾಕಾಶಕ್ಕೆ ಒಯ್ದಿದ್ದು ಹಲ್ವ, ಪಲಾವ್‌ ಮತ್ತು ಆಲೂ ಚೋಲೆಯನ್ನು. ಅದರ ಸವಿಯನ್ನು ರಷ್ಯಾದ ಸಹಯಾತ್ರಿಗಳು ಬಹುವಾಗಿ ಮೆಚ್ಚಿಕೊಂಡರಂತೆ.
9. ಅಂತರಿಕ್ಷದಲ್ಲಿ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಆಕಾಶನೌಕೆಯಲ್ಲಿಯೇ “ಶೂನ್ಯ ಗುರುತ್ವ ಯೋಗ’ ಅಭ್ಯಾಸ ಮಾಡಿದ್ದರು ರಾಕೇಶ್‌ ಶರ್ಮಾ.
10. ಬಾಹ್ಯಾಕಾಶದಿಂದ ನೇರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜೊತೆ ಫೋನ್‌ನಲ್ಲಿ ಮಾತಾಡುವಾಗ ಇಂದಿರಾಗಾಂಧಿ “ಅಲ್ಲಿಂದ ಭಾರತ ಹೇಗೆ ಕಾಣುತ್ತಿದೆ’ ಎಂದು ಕೇಳಿದ್ದರು. ಆಗ ಶರ್ಮಾ ನೀಡಿದ ಉತ್ತರ- “ಸಾರೇ ಜಹಾನ್‌ ಸೆ ಅಚ್ಛಾ’ (ಇಡೀ ಪ್ರಪಂಚವೇ ಇಲ್ಲಿಂದ ಚೆನ್ನಾಗಿ ಕಾಣುತ್ತಿದೆ)

ಪ್ರಿಯಾಂಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಾತ್ರಿ ಝಗಮಗಿಸುವ ದೀಪಗಳಿಂದ ಮಿಂಚುವ ಸೇತುವೆಯ ವೈಭವ ಒಂದೆಡೆಯಾದರೆ, ಮುಸ್ಸಂಜೆಯಲ್ಲಿ ಮುಳುಗುವ ಸೂರ್ಯನ ಕಿರಣಗಳಿಗೆ ಬರುವ ಹೊಸ ವರ್ಣದ ಕಳೆಯನ್ನು ನೋಡಿ ಖುಷಿಪಡಲೆಂದೇ...

  • 70 ಲಕ್ಷ ವರ್ಷಗಳ ಹಿಂದೆ ಬದುಕಿದ್ದ ಆಮೆಯ ಪಳೆಯುಳಿಕೆಯನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಅದು ಕಾರಿನಷ್ಟು ಗಾತ್ರವನ್ನು ಹೊಂದಿದೆ! ಇಂದು ನಾವು ನೋಡುತ್ತಿರುವ...

  • ಮೇಜಿನ ಮೇಲೆ ಒಂದು ಖಾಲಿ ಬಾಟಲ್ ಮತ್ತು ಒಂದು ಹಗ್ಗದ ತುಂಡನ್ನು ಇಟ್ಟಿದೆ. ಜಾದೂಗಾರನ ಸವಾಲೇನೆಂದರೆ ಆ ಹಗ್ಗದಿಂದ ಬಾಟಲನ್ನು ಎತ್ತಬೇಕು. ಇದೇನು ಮಹಾ? ಹಗ್ಗವನ್ನು...

  • ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು... 1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ...

  • ಗೊಗ್ಗಯ್ಯನ ಮೂಗು ಬೆಳೆಯುತ್ತಾ ಹೋಯಿತು. ಅದನ್ನು ಹೊತ್ತುಕೊಂಡು ತಿರುಗಾಡುವುದೇ ಕಷ್ಟವಾಗತೊಡಗಿತು. ಕಡೆಗೊಂದು ದಿನ ಅದಕ್ಕೆ ಪರಿಹಾರವೂ ಸಿಕ್ಕಿತು. ಆ ಹುಡುಗ...

ಹೊಸ ಸೇರ್ಪಡೆ