ಮಕ್ಕಳೆಲ್ಲಿ ಹೋದರು?

Team Udayavani, Feb 28, 2019, 12:30 AM IST

6.jpg

ಫೋನು ರಿಂಗಣಿಸಿತು. “ಸ್ಮಿತಾ ಬಂದಿದ್ದಾಳಾ ನಿಮ್ಮನೆಗೆ?’, ಮೂಲೆ ಮನೆಯ ಸರೋಜಮ್ಮ ತಮ್ಮ ಮಗಳ ಬಗ್ಗೆ ವಿಚಾರಿಸಿದರು. ದೀಪಿಕಾಳ ತಾಯಿ “ಇಲ್ಲ. ದೀಪಿಕಾ, ಸ್ವೀಟೀನೂ ಕಾಣಿಸ್ತಿಲ್ಲ’ ಎಂದರು. ಸರೋಜಮ್ಮನಿಗೂ ಆಶ್ಚರ್ಯವಾಯಿತು, ಮೂವರು ಸ್ನೇಹಿತರು ಎಲ್ಲಿಗೆ ಹೋದರೆಂದು.

ಅಂದು ಶುಕ್ರವಾರ. ಶಾಲೆಗೆ ಹೊರಡುವ ಸಮಯ. ಅಮ್ಮ ದೀಪಿಕಾಳ ಜಡೆ ಬಾಚುತ್ತಿದ್ದರು. ದೀಪಿಕಾ ಕೇಳಿದಳು, “ಅಮ್ಮ ಈ ಸ್ಟ್ರೀಟ್‌ ಲೈಟ್‌ನ ದೀಪಗಳು ಏಕೆ ಆರಿಲ್ಲ? ಮೂರು ದಿನ ಆಯಿತು’. ಅಮ್ಮ ಏನೂ ಹೇಳಲಿಲ್ಲ. ದೀಪಿಕಾ ಮುಂದುವರೆಸಿದಳು, “ಈ ಸ್ಟ್ರೀಟ್‌ಲೈಟ್‌ನ ಸ್ವಿಚ್‌ ಎಲ್ಲಿರುತ್ತೆ? ಯಾರು ಆರಿಸುತ್ತಾರೆ?’ ಅಮ್ಮನ ಸಹನೆ ಮೀರಿತು. “ನಿನ್ನ ಈ ತಲೆಹರಟೆ ಪ್ರಶ್ನೆಗಳನ್ನೆಲ್ಲ ನಿಮ್ಮ ಟೀಚರ್‌ಗೆ ಕೇಳು. ಸ್ಕೂಲ್‌ ಬಸ್ಸು ಬರೋ ಹೊತ್ತಾಯಿತು ಹೊರಡು ಇನ್ನು.’

ಭಾನುವಾರ ಎಂಟು ಗಂಟೆ. ದೀಪಿಕಾ ಮನೆಯಲ್ಲಿ ಕಾಣಿಸಲಿಲ್ಲ. ಬೆಳಗ್ಗಿನಿಂದಲೇ ಅವಳ ಕೋಣೆಯಲ್ಲಿ ದೀಪ ಉರಿಯುತ್ತಿದ್ದುದನ್ನು ಅಮ್ಮ ಗಮನಿಸಿದ್ದರು. ಎಂಟು ಗಂಟೆಯಾದರೂ ಹಾಲನ್ನೂ ಕುಡಿಯದೆ ಎಲ್ಲಿ ಹೋದಳೆಂದು ಅಮ್ಮ ಯೋಚಿಸಿದರು. “ದೀಪಿಕಾ’ ಎಂದರು. ಉತ್ತರ ಬರಲಿಲ್ಲ. ಅವರಿಗೆ ಗಾಬರಿಯಾಯಿತು. ಎದುರು ಮನೆಯ ಗೆಳತಿ ಸ್ವೀಟಿಯ ಮನೆಗೆ ಹೋಗಿರಬಹುದೆಂದುಕೊಂಡು ಅಲ್ಲಿಗೆ ಹೋಗಿ ವಿಚಾರಿಸಿದರು. ಅಲ್ಲಿ ದೀಪಿಕಾ ಇರಲಿಲ್ಲ. ಸ್ವೀಟಿಯ ಅಮ್ಮ, “ಇಲ್ಲ, ನಮ್ಮ ಸ್ವೀಟೀನೂ ಕಾಣಿಸುತ್ತಿಲ್ಲ. ಇಬ್ಬರೂ ಬೆಳಗ್ಗೆ ಬೆಳಗ್ಗೆ ಏನೋ ಮಾತಾಡಿಕೊಳ್ಳುತ್ತಿದ್ದರು.’

ಅಮ್ಮಂದಿಬ್ಬರೂ ಮುಖಮುಖ ನೋಡಿಕೊಂಡರು. ದೀಪಿಕಾಳ ತಾಯಿ ಮನೆಯೊಳಗೆ ಬಂದರು. ಫೋನು ರಿಂಗಣಿಸಿತು. “ಸ್ಮಿತಾ ಬಂದಿದ್ದಾಳಾ ನಿಮ್ಮನೆಗೆ?’, ಮೂಲೆ ಮನೆಯ ಸರೋಜಮ್ಮ ತಮ್ಮ ಮಗಳ ಬಗ್ಗೆ ವಿಚಾರಿಸಿದರು. ದೀಪಿಕಾಳ ತಾಯಿ “ಇಲ್ಲ. ದೀಪಿಕಾ, ಸ್ವೀಟೀನೂ ಕಾಣಿಸ್ತಿಲ್ಲ’ ಎಂದರು. ಸರೋಜಮ್ಮನಿಗೂ ಆಶ್ಚರ್ಯವಾಯಿತು, ಮೂವರು ಸ್ನೇಹಿತರು ಎಲ್ಲಿಗೆ ಹೋದರೆಂದು. ದೀಪಿಕಾಳ ತಾಯಿ ಗಾಬರಿಯಿಂದಲೇ ಮನೆಯ ಹೊರಗೆ ಬಂದರು. ಅದೇ ವೇಳೆಗೆ ಸ್ಮಿತಾಳ ತಾಯಿ ಸರೋಜಮ್ಮ ಹಾಗು ಸ್ವೀಟಿಯ ತಾಯಿಯೂ ಕಾಣಿಸಿದರು. “ವಿಶೇಷ ಘಟನೆ ಏನಾದರೂ ನಡೆಯಿತೆ? ಮೂವರೂ ಮಾತಾಡಿಕೊಂಡು ಎಲ್ಲಿಗಾದರೂ ಹೋದರೇ?’ ಎಂದು ಮೂವರೂ ಮಾತಾಡಿಕೊಂಡರು. ಮೂವರೂ ಬೆಳಗ್ಗೆ ಬೇಗ ಎದ್ದು ಏನೋ ತಯಾರಿ ಮಾಡಿಕೊಳ್ಳುತ್ತಿದ್ದರೆಂದು ತಿಳಿಯಿತು. ಏನು ವಿಷಯವೆಂದು ಯಾರಿಗೂ ಅವರು ಹೇಳಿರಲಿಲ್ಲ. ಅಷ್ಟರಲ್ಲಿ ಸ್ವೀಟಿಯ ಅಮ್ಮನಿಗೆ ಒಂದು ವಿಷಯ ನೆನಪಾಯಿತು ” ಸ್ವೀಟಿ ನೆನ್ನೆ ನೀರಿನ ಟ್ಯಾಂಕಿನ ಆಫೀಸ್‌ ಎಲ್ಲಿದೆ ಎಂದು ಕೇಳುತ್ತಿದ್ದಳು’ ಎಂದರು ಅವರು. ಅಷ್ಟರಲ್ಲಿ ಸರೋಜಮ್ಮನೂ ತಮ್ಮ ಮಗಳು ಕರೆಂಟ್‌ ಆಫೀಸು ಎಲ್ಲಿದೆ ಎಂದು ವಿಚಾರಿಸಿದ್ದನ್ನು ನೆನಪಿಸಿಕೊಂಡರು. ಅಷ್ಟರಲ್ಲಿ ದೀಪಿಕಾಳ ತಾಯಿ ಹೇಳಿದರು, “ಹೌದೆ? ದೀಪಿಕಾ ಕೂಡ ಏನೇನೋ ತಲೆ ಹರಟೆ ಪ್ರಶ್ನೆ ಕೇಳಿದ್ದಳು. ನೆನ್ನೆ ಯಾಕೆ ಸ್ಟ್ರೀಟ್‌ಲೈಟ್‌ ಆರಿಸಿಲ್ಲ, ಆರಿಸೋರು ಯಾರು?’ ಅಂತ.

ಮೂವರನ್ನೂ ಹುಡುಕಿಕೊಂಡು ಮೂವರು ತಾಯಂದಿರು ಮನೆಯಿಂದ ಹೊರಟರು. ಅಲ್ಲಿ ಇಲ್ಲಿ ವಿಚಾರಿಸಿದರು. ಎರಡು ರಸ್ತೆಗಳ ಆಚೆ ಎಲೆಕ್ಟ್ರಿಕ್‌ ಹಾಗು ನೀರು ಸರಬರಾಜು ಕಚೇರಿಗಳಿವೆ ಎಂದು ತಿಳಿಯಿತು. ಅವರನ್ನು ಹುಡುಕಿಕೊಂಡು ಅದೇ ದಿಕ್ಕಿನಲ್ಲಿ ಹೊರಟರು.

ಅಂದು ಶನಿವಾರವಾದ್ದರಿಂದ ಜನ ಸಂಚಾರ ಕಡಿಮೆ ಇತ್ತು. ಮಕ್ಕಳು ಎಲ್ಲೂ ದೂರ ಹೋಗೋದಿಲ್ಲ ಎಂದು ಧೈರ್ಯ ತೆಗೆದುಕೊಂಡರೂ ಅಳುಕಿತ್ತು. ವಿದ್ಯುಚ್ಛಕ್ತಿ ಹಾಗು ಜಲಮಂಡಲಿಯ ಗೇಟಿನ ಬಳಿ ಬಂದಾಗ ಅವರಿಗೊಂದು ಆಶ್ಚರ್ಯ ಕಾದಿತ್ತು. ಗೇಟಿನ ಬಳಿ ಎಂಟರಿಂದ ಹತ್ತು ವಯಸ್ಸಿನ, ಹತ್ತು- ಹನ್ನೆರೆಡು ಮಕ್ಕಳು ಘೋಷಣೆಗಳನ್ನು ಕೂಗುತ್ತಿದ್ದರು. ಕಚೇರಿಯ ಗೇಟಿಗೆ ಮಕ್ಕಳ ಕೈಬರಹದಲ್ಲಿದ್ದ ಘೋಷಣಾ ಭಿತ್ತಿ ಪತ್ರಗಳು ನೇತಾಡುತ್ತಿದ್ದವು. ಎಲೆಕ್ಟ್ರಿಕ್‌ ದೀಪ ಕಂಬದ ಮೇಲೆ ಇನ್ನೂ ದೀಪ ಉರಿಯುತ್ತಿತ್ತು. ಮಕ್ಕಳು ಕುಳಿತ ಪಕ್ಕದಲ್ಲೆ ಇದ್ದ ಕಾರ್ಪೊರೇಷನ್‌ ನಲ್ಲಿ ಸೋರುತ್ತಿತ್ತು.

ಮಕ್ಕಳು ಒಂದೇ ಕಂಠದಿಂದ ಘೋಷಣೆಗಳನ್ನು ಕೂಗುತ್ತಿದ್ದರು. ದೀಪಿಕಾ ಸ್ವೀಟಿ, ಸ್ಮಿತಾ ನೇತೃತ್ವ ವಹಿಸಿದ್ದಂತೆ ಎಲ್ಲರ ಮುಂದೆ ನಿಂತಿದ್ದರು. 
“ಉಳಿಸಿ ಉಳಿಸಿ…..ದ್ಯುತ್‌ ಶಕ್ತಿ ಉಳಿಸಿ’ 
“ಉಳಿಸಿ ಉಳಿಸಿ…..ಹನಿ ಹನಿ ನೀರು ಉಳಿಸಿ’ 
“ನೀರೇ ಜೀವ ಜಲ…… ಅದನ್ನು ಉಳಿಸಿ’
“ಇಂದಿನ ಉಳಿತಾಯ ಭಷ್ಯದ ಬುನಾದಿ’
“ಬೇಕು ಬೇಕು…….. ನಮಗೆ ನ್ಯಾಯ ಬೇಕು.’
ದೀಪಿಕಾಳ ತಾಯಿ ಆ ಗುಂಪಿನಲ್ಲಿ ತಮ್ಮ ಮಗಳನ್ನು ಗುರುತಿಸಿದರು. ಹಾಗೇ ಸ್ಮಿತಾ, ಸ್ವೀಟಿ ಕೂಡ ಗುರುತಿಸಲ್ಪಟ್ಟಿದ್ದರು. ಆ ಬಡಾವಣೆಯ ಎರಡು ಮೂರು ಬೀದಿಗಳಿಂದ ಇತರ ಮಕ್ಕಳೂ ಸೇರಿದ್ದರು. ಮಕ್ಕಳ ಹಿಂದೆ ಅವರ ಶಿಕ್ಷಕಿ ಮಾನಸ ನಿಂತಿದ್ದರು.

ಮರು ಕ್ಷಣದಲ್ಲಿ ಮಕ್ಕಳೊಂದಿಗೆ ಅವರ ತಾಯಂದಿರು ದನಿ ಸೇರಿಸಿದರು. ಎಲ್ಲರೂ ಉತ್ಸಾಹದಿಂದ “ಬೇಕೇ ಬೇಕು… ನ್ಯಾಯ ಬೇಕು’ ಎಂದು ಒಕ್ಕೊರಳಿನಿಂದ ಆಕಾಶದೆತ್ತರಕ್ಕೆ ಘೋಷಣೆ ಕೂಗಿದರು.

ಮತ್ತೂರು ಸುಬ್ಬಣ್ಣ 

ಟಾಪ್ ನ್ಯೂಸ್

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.