ಗಿಡ ನೆಡಲು ಎಂಥ ಚೈತನ್ಯ


Team Udayavani, Apr 15, 2017, 12:26 PM IST

8.jpg

ಚಿಂತಾಮಣಿಯ ಕಾಡು ಮಲ್ಲೇಶ್ವರ ಬೆಟ್ಟಕ್ಕೆ ಹೋಗಿದ್ದೀರಾ? ಹೋಗಿ ನೋಡಿ. ಅಲ್ಲಿ ಹಸಿರುವ ನಗುತ್ತಿದ್ದರೆ ಅದಕ್ಕೆ ಕಾರಣ ಈ ವಯೋ ವೃದ್ಧರು.  ವೈಯುಕ್ತಿಕ ಹಿತಾಸಕ್ತಿಗಾಗಿ ಮರ ಗಿಡಗಳನ್ನು ನಾಶಪಡಿಸಲು ಮುಂದಾಗುತ್ತಿರುವ ಈ ದಿನಗಳಲ್ಲಿ ಜೀವನದ ಸಂಧ್ಯಾ ಕಾಲದಲ್ಲಿ ಬೆಟ್ಟಕ್ಕೆ ಹಸಿರು ಹೊದಿಸುತ್ತಿದ್ದಾರೆ.  ನೂರಾರು ಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಿಸುತ್ತಾ ಪರಿಸರ ಪ್ರೇಮವನ್ನು ಮೆರೆಯುತ್ತಿರುವ ಅಪರೂಪದ ವ್ಯಕ್ತಿ ಎಲೆಮರಿ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ.

ಹೆಸರು ಬ್ರಹ್ಮಚೈತನ್ಯ. ಇವರ ವಯಸ್ಸೇನು ಕಡಿಮೆ ಇಲ್ಲ. 73. ಬದುಕಿನ ಮುಸ್ಸಂಜೆ ಇದು. ಸರ್ಕಾರಿ ಸೇವೆಯಿಂದ ನಿವೃತ್ತಿ. ಮಕ್ಕಳೆಲ್ಲರೂ ಸರ್ಕಾರಿ ನೌಕರರಾಗಿದ್ದರೂ ತನ್ನ ಎಲ್ಲಾ ಐಶಾರಾಮಿ ಬದುಕನ್ನು ಬದಿಗಿಟ್ಟು, ನಗರದ ಹೊರವಲಯದಲ್ಲಿರುವ ಕಾಡು ಮಲ್ಲೇಶ್ವರ ಬೆಟ್ಟದಲ್ಲಿ  ಗಿಡ-ಮರಗಳನ್ನು ನೆಟ್ಟು ಪೋಷಿಸುತ್ತಿರುವುದನ್ನು ಕಂಡಾಗ ಅವರ ಹೆಸರಿನಂತೆ ಅವರಲ್ಲಿ ಚೈತನ್ಯ ತುಂಬಿ ಹರಿಯುತ್ತಿರುವುದರ ದ್ಯೋತಕದಂತಿದೆ.

ಬಾಟಲ್‌ಗ‌ಳಲ್ಲಿ ನೀರು

ಕಾಡು ಮಲ್ಲೇಶ್ವರ ಬೆಟ್ಟ ನಗರದಿಂದ ಸುಮಾರು 3-4 ಕಿಮೀ ದೂರವಿದೆ.  ಬ್ರಹ್ಮಚೈತನ್ಯರು ಉರಿ ಬಿಸಿಲನ್ನು ಲೆಕ್ಕಿಸದೇ ಹತ್ತಾರು ನೀರಿನ ಬಾಟಲ್‌ಗ‌ಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಗಿಡಗಳಿ ಆರೈಕೆ ಮಾಡುತ್ತಾರೆ. ಪ್ರತಿ ದಿನ ನೀರು, ರಸಗೊಬ್ಬರ ಮತ್ತು ಗುಣಿ ಅಗೆಯಲು ಬೇಕಾದ ಸಲಕರಣೆಗಳನ್ನು ದಾನಿಗಳು ನೀಡಿರುವ  ಸೈಕಲ್‌ ಮೇಲೆ ತೆಗೆದು ಕೊಂಡು ಹೋಗುತ್ತಾರೆ. 
  ತಪ್ಪುಗಳನ್ನು ತೊಳೆದು ಹಾಕಲು ಗುಡಿ ಗೋಪುರಗಳಿಗೆ ತೆರಳಿ ಪೂಜೆ ಪುನಸ್ಕಾರಗಳನ್ನು ಮಾಡಿಸುತ್ತಾರೆ.  ಆದರೆ ಯಾವೊಬ್ಬ ವ್ಯಕ್ತಿಯು ಒಳ್ಳೆಯ ಕಾರ್ಯಗಳನ್ನು ಮಾಡಿ ತಮ್ಮ ಜೀವನವನ್ನು ಸ್ಪೂರ್ತಿ ಮಯಗೊಳಿಸಲು ಮುಂದಾಗುವುದಿಲ್ಲ. ಆದ್ದರಿಂದಲ್ಲೆ ನಾನ್ನುಗಿಡ ಮರಗಳ ಪೋಷಣೆಗಿಂತ ಬೆರೊಂದು ಉತ್ತಮ ಕಾರ್ಯವಿಲ್ಲ ಎಂದು ಭಾವಿಸಿದ್ದೇನೆ ಎನ್ನುತ್ತಾರೆ ಬ್ರಹ್ಮಚೈತನ್ಯ.

ತೇವಾಂಶ ತಡೆಯಲು ಹೊಸ ವಿಧಾನ 

ಬಿಸಿಲಿನ ಬೇಗೆಗೆ ಭೂಮಿಯ ತೇವಾಂಶ ಕಡಿಮೆಯಾಗುತ್ತದೆ. ಅದಕ್ಕೆ ಬ್ರಹ್ಮಚೈತನ್ಯ ಹೊಸ ಐಡಿಯಾ ಹುಡುಕಿದ್ದಾರೆ. ಗಿಡಿದ ಬುಡದಿಂದ ಆರ್ಧ ಅಡಿ ದೂರದಲ್ಲಿ ರಂಧ್ರಗಳನ್ನು ಕೊರೆದ  ಪ್ಲಾಸ್ಟಿಕ್‌ ಡಬ್ಬವನು ಹೂತಿಟ್ಟಿದ್ದಾರೆ. ಒಂದೊಂದೆ ಹನಿಯಾಗಿ ಸೋರುವುದರಿಂದ ಪ್ರತಿ ದಿನ ಗಿಡದ ಬೇರುಗಳಿಗೆ ತೇವಾಂಶ ಸಿಗುವುದರಿಂದ ಗಿಡವು ಬೆಳವಣಿಗೆ ಉತ್ತಮವಾಗುತ್ತದೆ ಎನ್ನುವುದು ತಂತ್ರ.  ಏನೇ ಆಗಲೀ ರಾಮಾ ಕೃಷ್ಣ ಅನ್ನೋ ವಯಸ್ಸಲ್ಲಿ ಮರೆಯದ ಸೇವೆ. 

ಕೆ. ಶ್ರೀನಿವಾಸ

ಟಾಪ್ ನ್ಯೂಸ್

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.