ಕಡ್ಲೇಪುರಿ ಕೊಂಡು ಪುಸ್ತಕ ಓದ್ಕೊಳಿ…ಪುಸ್ತಕ ಪ್ರಭಾಕರ


Team Udayavani, Apr 15, 2017, 12:34 PM IST

10.jpg

“ಮೈಸೂರು ಪುರಿನಾ, ಬೆಂಗಳೂರ ಪುರಿನಾ?’
“ಮೈಸೂರು ಪುರಿ ಇರಲಿ’
“ಮೈಸೂರು ಪುರಿ ತಗೊಂಡ್ರೆ – ಇನ್ನೊಂದು ವಿಚಾರ ತಿಳೀಬೇಕು.
ಮೈಸೂರನವರೇ ಆದ ಭೈರಪ್ಪನೋರು ಗೊತ್ತಲ್ಲ?
ಗೊತ್ತಿಲ್ಲ ಅಂದ್ರೆ ಈ ಪುಸ್ತಕ ನೋಡಿ. ತಗೊಳ್ಳಿ. ದುಡ್ಡಿನ ಮಾತು ಆಮೇಲೆ ಇರಲಿ’
“ನಿಮಗೆ – ಓದಕ್ಕೆ ಬರೋಲ್ವಾ?’
“ಇಲ್ಲ, ಇಲ್ಲ ಓದುತ್ತೀನಿ’
“ಶುರುಮಾಡಿದ ಮೇಲೆ ಬರೋದು. ತಗೊಳ್ಳಿ.. ಮಿಕ್ಕದ್ದು ಆಮೇಲೆ..’ಅಂಗಡಿಗೆ ಬಂದವರೊಂದಿಗೆ  ಹೀಗೆ ಕಳ್ಳೇಪುರಿ ಜೊತೆ ಸಂಭಾಷಣೆ ಬೆರೆಸುತ್ತಾ ಓದಿನ ರುಚಿ ಹತ್ತಿಸೋದು ಈ ಪ್ರಭಾಕರರ ತಂತ್ರಗಾರಿಕೆ. ಹೆಚ್ಚಾ ಕಮ್ಮಿ 10-15 ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದಾರೆ. 

ಇವರದು ಮೈಸೂರ್‌ ಬ್ಯಾಂಕ್‌ ಕಾಲೋನಿ, ಶ್ರೀನಗರ, ರಾಜರಾಜೇಶ್ವರಿ ನಗರ – ಹೀಗೆ ಮೂರು ಕಡೆ ರಮ್ಯ ಕಡ್ಲೆàಪುರಿ ಅಂಗಡಿ ಇದೆ.  ಇದರಲ್ಲಿ ಎರಡು ಕಡೆ ಭೈರಪ್ಪ, ಕುವೆಂಪು, ತೇಜಸ್ವಿ ಹೀಗೆ ಅನೇಕರ ಪುಸ್ತಕ ಇಟ್ಟಿದ್ದಾರೆ. ಹೊಸ ಕೃತಿ, ರೀ ಪ್ರಿಂಟ್‌ ಆದ ತಕ್ಷಣ ತಂದು ಓದುತ್ತಾರೆ, ಅದನ್ನು ಅಂಗಡಿಯಲ್ಲಿ ಇಡುತ್ತಾರೆ.   ಗ್ರಾಹಕರ ಮುಖದಲ್ಲಿ ಓದಿನ ಗೆರೆಗಳನ್ನು ಹುಡುಕಿ, ಅಂದಾಜು ಮಾಡಿ- “ನೀವು ಏನಾದರೂ ಓದುತ್ತೀರಾ… ನೋಡಿ… ಅಲ್ಲಿ…’ ಅಂತ ಭೈರಪ್ಪನವರ ಉತ್ತರಕಾಂಡ ತೋರಿಸುತ್ತಾರೆ.  ತರಾಸು ಅವರ ರಕ್ತರಾತ್ರಿ, ತಿರುಗುಬಾಣದ ಕಥೆ ಹೇಳುತ್ತಾರೆ.  “ಟಿ.ವಿ ಮೊಬೈಲ್‌ ಬಿಟ್ಟು ಚೆನ್ನಾಗಿ ಪುಸ್ತಕ ಓದಬೇಕು..’ ಹೀಗೆ  ತಿಳುವಳಿಕೆ ಹೇಳುತ್ತಾರೆ.
ಅವರ ಸ್ವಲ್ಪ ಹಿಂದು ಮುಂದು ನೋಡಿದರೆ- ನೀವು ನನ್ನ ಸ್ನೇಹಿತರು ದುಡ್ಡು ಬೇಡ. ಓದಿದ ನಂತರ ಪುಸ್ತಕವನ್ನು ಮರೆಯದೆ ವಾಪಸ್ಸು ತಂದು ಕೊಡಬೇಕು ಅಂತ ಪ್ರೀತಿಯಿಂದ ಬೆನ್ನು ನೇವರಿಸುತ್ತಾರೆ.

ಪ್ರಭಾಕರರ ಇಂಥ ಹವ್ಯಾಸ ದಿಂದಲೇ ಇವರ ಮಂಡಕ್ಕಿ ಅಂಗಡಿ ಲೈಬ್ರರಿಯಾಗಿದೆ. ಅಪರಿಚಿತ ಓದುಗರಿಗೆ ಪುಸ್ತಕದ ಮೊತ್ತ ಪಡೆದು, ಓದಲು ಕೊಡುತ್ತಾರೆ. ತಂದು ಕೊಟ್ಟ ಮೇಲೆ ಹಣ ವಾಪಸ್ಸು ಕೊಡುತ್ತಾರೆ.
ಪ್ರಭಾಕರರು ಓದಿದ ನಂತರವೇ ಪುಸ್ತಕವನ್ನು ಅಂಗಡಿಯಲ್ಲಿ ಇಡೋದು. ಅವರಿಗೆ ಉತ್ತರಕಾಂಡದಲ್ಲಿ ಭೈರಪ್ಪನವರು ಸೀತೆಯನ್ನು ಹೇಗೆ ತೋರಿಸಿದ್ದಾರೆ ಕೇಳಿ?  ಹಾಗೇ ಜಲಪಾತದಲ್ಲಿ ಪ್ರಮುಖ ಪಾತ್ರದ ಬಗ್ಗೆ  ಕೇಳಿ ನೋಡಿ. ಪಟಾರ್‌ ಅಂತ ಉತ್ತರ ಕೊಡುತ್ತಾರೆ.

ಕುವೆಂಪು ಅಂದರೆ ಇವರಿಗೆ ಇಷ್ಟ. ಅದಕ್ಕೇ ಅವರ ಅಷ್ಟೂ ಪುಸ್ತಕಗಳನ್ನು ಇಟ್ಟುಕೊಂಡಿದ್ದಾರೆ. ಒಟ್ಟಾರೆ ಇವರ ಬಳಿ 200-300 ಪುಸ್ತಕಗಳಿವೆ.  ಖಾಲಿಯಾದಂತೆ ಅಂಗಡಿಗಳ ಶೋ ಕೇಸ್‌ನಲ್ಲಿ ತಂದು ತಂದು ಇಡುತ್ತಾರೆ. 
ಪ್ರಭಾಕರ್‌ ಮೂಲತಃ ತಮಿಳುನಾಡಿನವರು. ಮನೆಭಾಷೆ ತಮಿಳು. ಆದರೆ ನಾಲಿಗೆಗೆ ಕನ್ನಡ ಕಲಾಯಿಯಾಗಿದೆ.  ಕನ್ನಡ ಓದುವ ಹುಚ್ಚು ಕಾಲೇಜು ದಿನಗಳಿಂದಲೇ ಇದೆ. 

ಹೊಟ್ಟೆ ಪಾಡಿಗೆ ಮಂಡಕ್ಕಿ ಅಂಗಡಿ ಇಟ್ಟರೂ ಪ್ರವೃತ್ತಿ ಬಿಡಲಿಲ್ಲ.  ಪ್ರಭಾಕರರಿಗೆ ಓದಿನ ರುಚಿ ಹತ್ತಿಸಿದ್ದು ತಾಯಿ ಸುಬ್ಬಲಕ್ಷಿ$¾à. ಅವರು ಕನ್ನಡದ ಪತ್ತೇದಾರಿ ಕಾದಂಬರಿ, ಉಷಾನವರತ್ನರಾಂ, ಸಾಯಿಸುತೆ, ತೆಲುಗಿನ ಯಂಡಮೂರಿ ವೀರೇಂದ್ರನಾಥ್‌ ಅವರ ಪುಸ್ತಕಗಳನ್ನು ಓದುತ್ತಿದ್ದರು.  ಆಚಾರ್ಯ ಪಾಠಶಾಲೆಯಲ್ಲಿ ಓದುತ್ತಿದ್ದಾಗ ಪ್ರಭಾಕರರು ಯಂಡಮೂರಿ, ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ ಓದಲು ಶುರುಮಾಡಿದ್ದರು.   ಮಾವನ ಗಾಂಧಿಬಜಾರ್‌ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ,  ಅಲ್ಲಿಗೆ ಆಗಾಗ ಬರುತ್ತಿದ್ದ ಮಾವನ ಸ್ನೇಹಿತರು ಇವರಿಗೆ ಓದಿಗೆ ಸಾಥ್‌ ಕೊಡುತ್ತಿದ್ದರು.  ಒಂದು ಸಲ ಪುಸ್ತಕ ತಗೊಂಡು ಹೋದವರು ಆ ಕಡೆಗೆ ಬರಲೇ ಇಲ್ಲ. ಮಾವ “ನಿನ್ನ ಪುಸ್ತಕದಿಂದ ಬ್ಯೂಸಿನೆಸ್‌ ಹೋಯ್ತು’ ಅಂತ ಬೈದರು. ಆಗ ಪುಸ್ತಕದ ಜೊತೆ ಒಂದು ಪತ್ರ ಕೂಡ ಬರೆಯುವುದನ್ನು ಶುರುಮಾಡಿದರು. ಸ್ವಂತ ಅಂಗಡಿ ತೆರೆದ ಮೇಲೆ ತಾವು ಓದಿದ ಪುಸ್ತಕ ಕೇಳಿದವರಿಗೆ ಕೊಡಲು ಶುರುಮಾಡಿದರು. ಹೆಚ್ಚಾ ಕಮ್ಮಿ 15 ವರ್ಷದಿಂದ ಇದೇ ಕೆಲಸ ಮಾಡುತ್ತಿದ್ದಾರೆ.  
“ಬೆಳಗ್ಗೆ ಎಲ್ಲಾ ಮೈ ಮುರಿಯೋಷ್ಟು ಕೆಲ್ಸ . ಅದಕ್ಕೆ, ರಾತ್ರಿ ಹೊತ್ತು ಓದೋಕೆ ಕೂರ್ತೀನಿ. 11.30ಕ್ಕೆ ಕೂತರೆ 1.30ರ ತನಕ ಓದೋದೇ.  ಓದಬೇಕು ಸಾರ್‌. ಮನಸ್ಸಿದ್ದರೆ ಮಾರ್ಗ. ಜೀವನ ಪೂರ್ತಿ ಬರೀ ಕಷ್ಟ ಕಷ್ಟ ಅಂತ ಹೇಳ್ಕೊಂಡಿದ್ದರೆ ಕಾಲಹರಣವಾಗುತ್ತೆ ಅಷ್ಟೇ’ ಅಂತ ಹೇಳುತ್ತಲೇ…  ಕುವೆಂಪು ರಾಮಾಯಣ ದರ್ಶನಂ ಓದ್ರೀ. ಈಗಿನ ಜನರೇಷನ್‌ನ ಹುಡುಗ, ಹುಡುಗಿಯರಿಗೆ ಇಂಥ ಪುಸ್ತಕ ಓದಬೇಕು’ ರಾಮಾಯಣ ದರ್ಶನಂ ಪುಸ್ತಕ ತೋರಿಸಿ ಬೆಂಗ್ಳೂರು ಕಡ್ಲೆàಪುರಿ ಕೊಟ್ಟರು. 

ಪ್ರಭಾಕರ್‌ ಸುಮ್ಮನೆ ಪುಸ್ತಕ ಕೊಡೋ ಆಸಾಮಿಯಲ್ಲ. ಅದರೊಂದಿಗೆ  “ಪ್ರಿಯ ಓದುಗರೇ,’ ಅಂತ ಪತ್ರ ಕೂಡ ಬರೆಯುತ್ತಾರೆ. ಪುಸ್ತಕ ಕಳೆದರೆ ಬೇಗ ತಿಳಿಸಿ. ಕಳೆದು ಹೋಯ್ತು ಅಂತ ಸ್ನೇಹ ಕಳೆದು ಕೊಳ್ಳಬೇಡಿ. ಅಂಗಡಿ ವ್ಯವಹಾರ ಬೇರೆ, ಪುಸ್ತಕದ ಓದು ಬೇರೆ. ಎರಡಕ್ಕೂ ಸಂಬಂಧವಿಲ್ಲ. ಕಳೆದರೆ ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ. ಬೇರೊಂದು ಪುಸ್ತಕ ಕೊಡಿಸಿ. ಆಗಲಿಲ್ಲವೇ, ಹೇಳಿ. ಆದರೆ ಗೆಳೆತನದಿಂದ ದೂರವಾಗುವುದು ಬೇಡ ಹೀಗಂತ- ಬರೆದಿಡುತ್ತಾರೆ. 
ಪ್ರಭಾಕರ್‌ ಲಾಗೆಗೆ ಕಡ್ಲೆàಪುರಿ ರುಚಿ ಹತ್ತಿಸುವುದು ಮಾತ್ರವಲ್ಲ, ಮನಸ್ಸಿಗೆ ಪುಸ್ತಕದ ಅಭಿರುಚಿಯನ್ನು ಮೂಡಿಸುತ್ತಾರೆ.

ನಾದಸ್ವರಾ

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.