ಸೋಲಾರಿ ಹಕ್ಕಿ

Team Udayavani, Jan 21, 2017, 3:55 AM IST

2.jpg

ಇದನ್ನು ಮಿಶ್ರಾಹಾರಿ ಎಂದು ಕರೆದರೂ ತಪ್ಪಿಲ್ಲ. ಭಾಗಶಃ ವಲಸೆ ಹಕ್ಕಿ ಎಂದು ಗುರುತಿಸಿಕೊಂಡಿದೆ.Common Teal (AnasCreccaLinnacus) RM  Village hen ++  ಏಕೆಂದರೆ ಇದು ಮೊಟ್ಟೆ ಇಡುತ್ತದೆ.  ಮರಿ ಮಾಡುವುದು ಉತ್ತರ ಯುರೋಪು ಸೈಬೇರಿಯಾಗಳಲ್ಲಿ. ಆದರೆ ವರ್ಷದಲ್ಲಿ ಅರ್ಧದಷ್ಟು ಸಮಯ ಸಮಶೀತೋಷ್ಣ ವಲಯಗಳಾದ ಭಾರತದ ವಿವಿಧ ಭಾಗಗಳಲ್ಲಿ ಇರುತ್ತದೆ. ಹೀಗೆ ಇದರ ಜೀತಾವಧಿಯ ಅರ್ಧಭಾಗಕಡಿಮೆ ನೀರಿರುವ ಕೊಳ, ಮಳೆಗಾಲದ ನೀರು ತುಂಬಿ ನಿರ್ಮಾಣವಾದ ನೀರಿನ ಹೊಂಡಗಳು, ಭತ್ತದ ಪೈರು, ಬಯಲು ಸೀಮೆಯ ಕೃಷಿ ಜಮೀನಿನ ಸಮೀಪ ಇರುವ ನೀರಿನ ಕೊಳಗಳು, ಸಮುದ್ರತಟ, ಗಜನೀ ಪ್ರದೇಶ, ಹರಿವ ನೀರಿನ ನದಿಯ ಮುಖಜ ಪ್ರದೇಶದಲ್ಲಿ ಕಾಲ ಕಳೆಯುತ್ತವೆ. 

ಸೋಲಾರಿ ಹಕ್ಕಿ. ಹಸಿರುಕೆನ್ನೆ ಬಾತು, ಸಾಮಾನ್ಯ ಬಾತುಕೋಳಿ ಎಂದು ಕನ್ನಡದಲ್ಲಿ ಕರೆಯುವರು.  ಇದೊಂದು ವಲಸೆ ಬಾತುಕೋಳಿ. ಗೂಸ್‌, ಡಕ್‌, ಟೇಲ್‌ಎಂದು ಮೂರು ಶಬ್ದಗಳಿಂದ ಬಾತುಗಳನ್ನು ಕರೆಯುತ್ತಾರೆ. ಇವೆಲ್ಲವುಗಳಿಗೂ ಜಾಲಪಾದ ಇದೆ. ಹಾರುವುದರಲ್ಲೂ ಸಾಮ್ಯತೆ ಇದೆ. ನೀರಿನ ಸಮೀಪವೇ ಇವೆಲ್ಲ ಇರುತ್ತವೆ. ಆಕಾರ ಗಾತ್ರದಲ್ಲಿ ವ್ಯತ್ಯಾಸ ಇದ್ದರೂ ಇವೆಲ್ಲ ಸಾಮಾನ್ಯವಾಗಿ ಹಸಿರು ಹುಲ್ಲು ಚಿಗುರೆಲೆ ನೀರಿನ ಸಸ್ಯಗಳಾದ ಕವಳೆ, ಕಮಲ, ಲಿಲಿ ಗಿಡಗಳ ಹಸಿರು ಚಿಗುರು ಕೆಲವೊಮ್ಮೆ ಅದರದಂಟನ್ನು ಸೀಳಿ ಅದರ ತಿರುಳುಗಳನ್ನೂ ತಿನ್ನುತ್ತವೆ. ಹೀಗೆ ಇದು ಸಾಮಾನ್ಯವಾಗಿ ಸಸ್ಯಾಹಾರಿಯಾಗಿದ್ದರೂ ಸಹ ಕೀಟ, ಜಲಕೀಟ, ಮೃದ್ವಂಗಿಗಳನ್ನೂ ಸಹ ತಿನ್ನುವುದಿದೆ. 

  ಈ ದೃಷ್ಟಿಯಿಂದ ನೋಡಿದರೆ ಇದನ್ನು ಮಿಶ್ರಾಹಾರಿ ಎಂದು ಕರೆದರೂ ತಪ್ಪಿಲ್ಲ. ಭಾಗಶಃ ವಲಸೆ ಹಕ್ಕಿ ಎಂದು ಗುರುತಿಸಿಕೊಂಡಿದೆ. ಏಕೆಂದರೆ ಇದು ಮೊಟ್ಟೆ ಇಡುತ್ತದೆ.  ಮರಿ ಮಾಡುವುದು ಉತ್ತರ ಯುರೋಪು ಸೈಬೇರಿಯಾಗಳಲ್ಲಿ. ಆದರೆ ವರ್ಷದಲ್ಲಿ ಅರ್ಧದಷ್ಟು ಸಮಯ ಸಮಶೀತೋಷ್ಣ ವಲಯಗಳಾದ ಭಾರತದ ವಿವಿಧ ಭಾಗಗಳಲ್ಲಿ ಇರುತ್ತದೆ. ಹೀಗೆ ಇದರ ಜೀತಾವಧಿಯ ಅರ್ಧ ಭಾಗ ಕಡಿಮೆ ನೀರಿರುವ ಕೊಳ, ಮಳೆಗಾಲದ ನೀರು ತುಂಬಿ ನಿರ್ಮಾಣವಾದ ನೀರಿನ ಹೊಂಡಗಳು, ಭತ್ತದ ಪೈರು, ಬಯಲು ಸೀಮೆಯ ಕೃಷಿ ಜಮೀನಿನ ಸಮೀಪ ಇರುವ ನೀರಿನ ಕೊಳಗಳು, ಸಮುದ್ರತಟ, ಗಜನೀ ಪ್ರದೇಶ, ಹರಿವ ನೀರಿನ ನದಿಯ ಮುಖಜ ಪ್ರದೇಶದಲ್ಲಿ ಕಾಲ ಕಳೆಯುತ್ತವೆ. ಇದರ ಹಾರುವ ಪರಿ ವಿಶಿಷ್ಟ ಅಂದರೆ ಆಕಾಶ ಗುಬ್ಬಿಯ ಹಾರಿಕೆಯನ್ನು ನೆನಪಿಗೆ ತರುತ್ತದೆ. ಆಹಾರ, ಆಶ್ರಯ ಸುರಕ್ಷತೆ ಸಿಕ್ಕರೆ ಸಾಕು ಪ್ರಾಣಿಯಂತೆ ಸಹ ಮನುಷ್ಯರ ಸಮೀಪ ಕೋಳಿಗಳಂತೆ ಇದು ಬದುಕುತ್ತವೆ. 

ಪ್ರೌಢಾವಸ್ಥೆಗೆ ಬಂದ ಮೇಲೆ ಇವು ತಿಂಗಳಿಗೆ ಒಮ್ಮೆ ಮೊಟ್ಟೆ ಇಡುತ್ತವೆ. ಬೇಟೆ, ಇರುನೆಲೆಗಳು ಕಡಿಮೆಯಾಗುವುದು ಇದರ ಸಂತತಿ ಕಡಿಮೆಯಾಗಲು ಕಾರಣವಾಗಿದೆ.  ಭತ್ತದ ಪೈರು, ಜೋಳ, ರಾಗಿ ಪೈರಿನ ಬೆಳೆಗಳನ್ನು ತಿಂದು ಹಾನಿಮಾಡುತ್ತವೆ ಎಂಬ ಭಾವನೆ ಇದೆ. ಆದರೂ ಈ ಬೆಳೆಗಳಿಗೆ ಹಾನಿ ಮಾಡುವ ರೋಗತರುವ ಇತರ ಕ್ರಿಮಿಗಳ ನಿಯಂತ್ರಣ ಮಾಡುವುದರಿಂದ ತಾನು ಮಾಡಿದ ಸಹಾಯಕ್ಕೆ ಸ್ವಲ್ಪಚಿಗುರು, ಚಿಗುರೆಲೆ, ಭತ್ತದ ಪೈರುಗಳನ್ನು ತಿನ್ನುವುದು ಅಷ್ಟೇನು ದೊಡ್ಡ ಹಾನಿಯ ವಿಷಯವಲ್ಲ. 

ಬಂಗಾಲ, ಬಿಹಾರ, ಕೇರಳ, ಕರ್ನಾಟಕ, ಮೈನಾವರಗಳಲ್ಲೂ ಕಾಣುವುವು. ಇದು ಸುಮಾರು 38 ಸೆಂ.ಮೀ. ಚಿಕ್ಕ ಬಾತು. ಕಣ್ಣಿನ ಮುಂಭಾಗದಿಂದ ಆರಂಭಿಸಿ, ನೆತ್ತಿಯ ಹಿಂಭಾಗ ಅಂದರೆ ನೇಪ ವರೆಗೆ ಹೊಳೆವ ಹಸಿರಿನ ಪಟ್ಟೆ ಇದೆ. 

 ಇತರ ಬಾತುಗಳಂತೆ ಚಿಕ್ಕದಪ್ಪ ಸ್ವಲ್ಪ ಮೇಲ್ಮುಖವಾಗಿರುವಾಗೇ ಬಣ್ಣದ ಚುಂಚು ಇದೆ. ಮೇಲುcಂಚು ತುದಿಯಲ್ಲಿ ಕೆಳಮುಖ ಬಾಗಿದ್ದು ಚೂಪಾದ ಕೊಕ್ಕೆಯಂತಿದೆ. ಇದರ ರೆಕ್ಕೆಕಪ್ಪು ಹೊಳೆವ ಹಸಿರು ಮತ್ತು ಬೂದು ಬಣ್ಣಗಳಿಂದ ಕೂಡಿದೆ. ಗಜನೀ, ಕೆಸರು ನೀರಿರುವ ಪ್ರದೇಶ ಹಾಗೂ ಹಸಿರು ನೀರು ಸಸ್ಯ ತುಂಬಿರುವ ಸ್ಥಳ ಇದಕ್ಕೆ ಪ್ರಿಯ. ಅಂಡಮಾನ್‌ ನಿಕೋಬಾರ್‌ ದ್ವೀಪ, ಶ್ರೀಲಂಕಾ, ಮಾಲ್ಡೀವ್ಸಗಳಲ್ಲು ವಲಸೆ ಬಂದ ದಾಖಲೆ ಇದೆ. ಇದು ನಿಶ್ಚಿತವಾಗಿ ಚಳಿಗಾಲದಲ್ಲಿ ಭಾರತಕ್ಕೆ ಬರುತ್ತವೆ. ಧಾರವಾಡದ ಸುತ್ತಮುತ್ತ, ಬಯಲು ಸೀಮೆ ಮತ್ತು ಪಶ್ಚಿಮ ಘಟ್ಟದ ಕೂಡುವ ಭಾಗ ಅಪರೂಪಕ್ಕೆ ಕರಾವಳಿ ಪ್ರದೇಶಗಳಲ್ಲೂ ಕಂಡ ನಿದರ್ಶನ ಇದೆ. ಉತ್ತರಕರ್ನಾಟಕದ ಭಾಗದಲ್ಲಿ ಚಳಿಗಾಲ ಬಂದಕೂಡಲೆ ಗುಂಪಾಗಿ ಕಾಣುತ್ತಿದ್ದವು. ಇತರ ಬಾತುಗಳ ಜೊತೆ ಇವು ವಾಸಿಸುತ್ತವೆ.

ಉತ್ತರ ಯುರೋಪಖಂಡದಿಂದ ಹಿಡಿದು ಪೂರ್ವ ಸೈಬೇರಿಯಾಗಳಲ್ಲಿ ಬೇಸಿಗೆಯಲ್ಲಿ ಮರಿಮಾಡಿ ಮರಿಗಳು ಹಾರುವ ಸಾಮರ್ಥ್ಯ ಬಂದಾಗ ಅಲ್ಲಿಯ ವಿಪರೀತ ಚಳಿಯಿಂದ ರಕ್ಷಣೆ ಪಡೆಯಲು ದಕ್ಷಿಣ ಮುಖವಾಗಿ ಸಾಗಿ ಆಫ್ರಿಕಾ, ಸೌದಿ ಅರೇಬಿಯಾ,  ಚೀನಾ, ಜಪಾನ ಮತ್ತು ಮಧ್ಯ ಏಷ್ಯಾಕ್ಕೆ ವಲಸೆ ಬರುತ್ತದೆ.  ಈ ಹಕ್ಕಿಯ ಮೈಬಣ್ಣ ಬೂದು. ಗಂಡು ಹಕ್ಕಿ ಸ್ವಲ್ಪ ಮಸಕು ಬಣ್ಣ ಇದ್ದು ಮೈಮೇಲೆ ಬೂದು ಬಣ್ಣದ ರೇಖೆ ಇದೆ. ತಲೆಯ ಎರಡೂ ಪಕ್ಕದಲ್ಲಿ ಬಿಳಿ ಬಣ್ಣದ ಗೋಟ ಇರುವ ಹೊಳೆವ ಹಸಿರು ಬಣ್ಣ ಇದೆ. ಮುಂಭಾಗದಎದೆಯಲ್ಲಿ ಚುಕ್ಕಿಗಳಿವೆ. ಹೆಣ್ಣು ಬಾತುವಿನ ಮೈಬಣ್ಣ ಬೂದು ಮತ್ತು ಎದೆಯಲ್ಲಿ ಚುಕ್ಕೆಗಳಿವೆ. ರೆಕ್ಕೆ ಕಂದು, 

ಹಸಿರು ,ಕಪ್ಪು ಮಿಶ್ರ ಬಣ್ಣದಿಂದಕೂಡಿದೆ. ಹೊಟ್ಟೆ ಭಾಗ ಮಾಸಲು ಬಣ್ಣದಿಂದ ಕೂಡಿದೆ. ಜೊಂಡು ಹುಲ್ಲು ಉಪಯೋಗಿಸಿ ಗೂಡು ಮಾಡುವುದು. ಅದರ ಮೇಲೆ ಗರಿಗಳ ಮೆತ್ತನೆ ಹಾಸು ಹಾಕಿ ಆ ತಗ್ಗಿನಲ್ಲಿ 7-10 ಹೊಳೆವ ಬಿಳಿ ಬಣ್ಣದ 
ಮೊಟ್ಟೆ ಇಡುತ್ತದೆ. ಭತ್ತದ ಎಳೆ ಚಿಗುರು, ತೆನೆ, ಕಾಳು, ಹುಲ್ಲುಬೀಜ ತಿನ್ನುತ್ತಾ 
ಬೆಳೆದು ಚಳಿಗಾಲ ಬರುವ ಹೊತ್ತಿಗೆ ರೆಕ್ಕೆ ಬಲಿತು ವಲಸೆ ಹೋಗಲು ಸಿದ್ಧ ವಾಗುತ್ತದೆ.  

ಇದು ವಲಸೆಗೆ ಏನು ಸಿದ್ಧತೆ ಮಾಡುವುದು? ಸೈಬೇರಿಯಾಯುರೋಪಿನಿಂದ ಭಾರತಕ್ಕೆ ಬರಲು ಸಮಯ ಎಷ್ಟು ಬೇಕು? ಪ್ರತಿದಿನ ಎಷ್ಟುದೂರ ಹಾರುವುದು? ಎಷ್ಟು ವೇಗದಲ್ಲಿ ಬರುತ್ತವೆ? ‌ಇವೆಲ್ಲಾ ಸಂಶೋಧನೆ ಮಾಡಲು ಒಳ್ಳೆಯ ಸಂಗತಿ. ಇದು ತಿಳಿದರೆ ಈ ಹಕ್ಕಿಗಳ ಜೀವನಕ್ರಮದ ಮೇಲೆ ಹೆಚ್ಚು ವಿಷಯ ತಿಳಿದೀತು. 

ಪಿ.ವಿ.ಭಟ್‌ ಮೂರೂರು 

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.