Udayavni Special

ಇಲ್ಲಿದೆ ಪ್ರಾರಬ್ಧಗಳನ್ನು ಸರಳವಾಗಿ ನಿವಾರಿಸಿಕೊಳ್ಳುವ ದಾರಿಗಳು…


Team Udayavani, Aug 12, 2017, 12:26 PM IST

11.jpg

ಹೋಮ ಹವನಾದಿಗಳು ಅನುಷ್ಠಾನಗಳು, ಉತ್ತಮ ಫ‌ಲಿತಾಂಶಗಳ ಬಗ್ಗೆ ಶಕ್ತಿದಾಯಕ ಉತ್ಸಾಹ ತುಂಬಲು ಮಂತ್ರ ಪಠಣಗಳು, ಧ್ಯಾನ, ಸ್ತುತಿ, ಪೂಜೆ ಇತ್ಯಾದಿಗಳು ಅನುಕೂಲಕರವಾಗಿದೆ. ಬೆಂಬಲ ಕೊಡುವ ವಿಚಾರ ಸರಿ. ಜಾತಕದಲ್ಲಿನ ದೋಷ ನಿವಾರಣೆಗೆ ಇವೆಲ್ಲಾ ಇದೆ ಎಂಬುದು ನಿಜ. ಆದರೆ ಕೆಲವು ಸರಳ ಉಪಾಯಗಳು ನಿಮ್ಮಲ್ಲಿ ದೋಷಗಳ ವಿರುದ್ಧ ಒಂದು ಪ್ರಭಾವಿ ನಿಯಂತ್ರಣವನ್ನು ಸಾಧಿಸಬಲ್ಲವು. ದೇವರು ಹೇಗಿದ್ದಾನೆ? ಎಲ್ಲಿದ್ದಾನೆ ಎಂಬುದರ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಳ್ಳದಿರಿ. ದೈವಶಕ್ತಿ ಇದೆ ಎಂಬುದನ್ನು ನಂಬಿ ಹೆಜ್ಜೆ ಇಡಿ. ನಿಮ್ಮ ನಂಬಿಕೆ ದೇವರಲ್ಲಿ ಸರ್ವಸ್ವ ಸಮರ್ಪಣಾ ಮನೋಭಾವದಿಂದ ಪ್ರಾರ್ಥಿಸಿ. ಮನಸ್ಸಿಗೆ ಶಾಂತಿ ಸಮಾಧಾನ ನೀಡುವಂತೆ ಆತ್ಮ ಪ್ರಾಮಾಣ್ಯದಿಂದ ನಮಸ್ಕರಿಸಿ.  ಶಾಂತ ಸ್ಥಳ ಮತ್ತು ಆವರಣದಲ್ಲಿ ದೇವರೊಂದಿಗೆ ನಡೆಸುವ ಸಂಭಾಷಣೆ, ಮಾಡುವ ಪ್ರಾರ್ಥನೆ ಅಸಾಧ್ಯವಾದುದನ್ನು ಸಾಧಿಸಿಕೊಡುವ ಶಕ್ತಿ ವಲಯವನ್ನು ನಿರ್ಮಿಸುತ್ತದೆ.  ಇದನ್ನು ನಂಬಿ.  ಜಪಕ್ಕೆ, ಧ್ಯಾನಕ್ಕೆ ಈ ಶಕ್ತಿ ಇದೆ.

ನಿಮ್ಮ ವ್ಯಕ್ತಿತ್ವ ಶುದ್ಧವಾಗಿರಲಿ
ಸಾಮಾಜಿಕ ಜೀವನದಲ್ಲಿ ನಾಗರೀಕತೆ ಶಾಪವಾಗುವ ಭೀತಿ ಇದ್ದರೂ ಅನಾಗರೀಕತೆ ದೈವವನ್ನು ಸ್ಪಂದಿಸಲಾರದು. ನೀವು ಉತ್ತಮ ನಾಗರಿಕರಾಗಬೇಕು. ಯಾವುದೇ ಕುರೂಪಗಳಿದ್ದರೂ ಮುಖದ ಸೌಂದರ್ಯ ಒಂದೇ ವರ್ಚಸ್ಸು, ತೂಕವನ್ನು ಹೆಚ್ಚಿಸದು. ನಿಮ್ಮ ತಾಳ್ಮೆ ಸಂಯಮ ವಿನಯ ನಯ ವ್ಯವಧಾನಗಳು ನಿಮ್ಮನ್ನು ಇತರರ ನಡುವೆ ಶೋಭೆಗೆ ಕಾರಣವಾಗುವ ಶಕ್ತಿ ನೀಡಿ ಮಿಂಚಿಸುತ್ತವೆ. ಅಬ್ದುಲ್‌ ಕಲಾಂ, ಬರ್ನಾಡ್‌ ಷಾ, ಅಬ್ರಹಾಂ ಲಿಂಕನ್‌, ಇವರೆಲ್ಲ  ಸೌಂದರ್ಯದಿಂದ ಮಿಂಚಿದ್ದಲ್ಲ, ಅನನ್ಯವಾದ ಜಾnನ, ನಯವಿನಯ ಕರ್ತವ್ಯ ತತ್ಪರತೆಯಿಂದ ಕೋಟಿಗಟ್ಟಲೆ ಜನರನ್ನು ಸ್ಪಂದಿಸಿದ್ದಾರೆ. ಇವರುಗಳ ಉತ್ಸಾಹ ಚೈತನ್ಯಗಳೇ ಇವರನ್ನು ತುಂಬಿದ ಕೊಡಗಳನ್ನಾಗಿಸಿದೆ. ಇದರ ಅರ್ಥ ಸೌಂದರ್ಯ ಮೋಹಕ ರೂಪ ಪಡೆದವರೆಲ್ಲ ಶುದ್ಧ ವ್ಯಕ್ತಿತ್ವದವರಲ್ಲ. ಒಟ್ಟಿನಲ್ಲಿ ವ್ಯಕ್ತಿತ್ವಕ್ಕೆ ಒಂದು ಘನತೆ ಇದ್ದರೆ ಎತ್ತರಕ್ಕೆ ಏರಬಹುದು. ಪಡಿಪಾಟಲುಗಳನ್ನು ದಾಟಿ ಆದರ್ಶ ಜೀವಿಗಳಾಗಬಹುದು.

ಮಾತು ವಾಕ್‌ ಚಾತುರ್ಯ ಸಂವಹನಾ ಕಲೆ
ಎಲ್ಲಾ ಪ್ರತಿಭೆಗಳಿದ್ದೂ ಮಾತಿನ ನೈಪುಣ್ಯ ಸಂವೇದನೆಗಳನ್ನು ತೆರೆದಿಡುವ ಸಂವಹನ ಕಲೆ. ಇತರರು ನಿಮ್ಮ ಬಗೆಗೆ ನಂಬಿಕೆ ತಾಳುವಂತೆ ಮಾತನಾಡುವ ಕಲೆಗಾರಿಕೆಯಿಂದ ನೀವು ಮೇಲೇರಬಲ್ಲಿರಿ. ಬರೀ ಬಂಡವಾಳವಿರದ ಬಡಾಯಿಗಳಿಂದ ಫ‌ಲವಿಲ್ಲ. ತೋಳಬಂತು ತೋಳ ಕಥೆ ನಿಮಗೆಲ್ಲಾ ತಿಳಿದಿದೆ. ಇಂದಿನ ಜಗತ್ತು ಮಾತನ್ನು ನಂಬುತ್ತದೆ. ನಂಬುವಂತೆ ಮಾತನಾಡಿ ಸುಳ್ಳಾಡಿದವರನ್ನು ಕಸದ ಬುಟ್ಟಿಗೆ ಎಸೆಯುತ್ತದೆ. ಭಾರತದ ರಾಜಕೀಯ ಒಂದು ಅಪವಾದವಾಗಿದೆ. ಇಲ್ಲಿ ಜಾತಿ, ಧರ್ಮದ ಬಗೆಗಿನ ವಿಚಾರಗಳು ನಮ್ಮೆಲ್ಲರ ಆತ್ಮಗಳಲ್ಲಿ  ಭೂತಗಳು ಸಂಚರಿಸುವ ಹೆದ್ದಾರಿಗಳ ನಿರ್ಮಾಣವಾಗುವ ಸಂದರ್ಭಗಳನ್ನು ನಿರ್ಮಿಸಿವೆ.

ಧೈರ್ಯ ಸರ್ವತ್ರ ಸಾಧನಂ
ಧೈರ್ಯ ಬೇಕು. ಆದರೆ ಭಂಡ ಧೈರ್ಯ ಬೇಡ. ಧೈರ್ಯ ಸಾಹಸಗಳಿಂದ ಸ್ಥೈರ್ಯ ಏಕಾಗ್ರತೆಗಳಿಂದ ಗ್ರಹಗಳ ವೈಪರೀತ್ಯಗಳನ್ನು ನಿಯಂತ್ರಿಸಬಹುದು. ಆತ್ಮವಿಶ್ವಾಸ  ಹಾಗೂ ಅತಿಯಾದ ಆತ್ಮವಿಶ್ವಾಸಗಳ ನಡುವೆ ಕೂದಲೆಳೆ ಅಂತರ ಅಷ್ಟೆ. ಸ್ವಾಭಿಮಾನ, ದುರಭಿಮಾನಗಳ ನಡುವೆಯೂ ಅಷ್ಟೆ. ವ್ಯಕ್ತಿತ್ವ ಶುದ್ಧಿ ಮಾತಿನ ಚಾತುರ್ಯ ಸಂವಹನಾ ಶಕ್ತಿಯ ಬಲದಿಂದ ಸಮತೋಲನ ಪೂರ್ಣ ಧೈರ್ಯ ಸಂಪಾದಿಸಬಹುದು. 

ವಿದ್ಯೆ, ಜ್ಞಾನ ಪರರಿಂದ ಕೇಳಿ ತಿಳಿಯುವ ಶ್ರದ್ಧೆ ಇರಲಿ
ವಿದ್ಯೆ ವಿಜಾnನಗಳು, ವ್ಯವಹಾರಿಕ ಕೌಶಲಗಳು, ತನ್ನ ಒಳಿತಿಗಾಗಿ ಇನ್ನೊಬ್ಬರನ್ನು ತುಳಿಯದ ಧರ್ಮಾಧರ್ಮ ವಿವೇಚನೆಗಳಿದ್ದೆರೆ, ಪರರಿಂದ ಉತ್ತಮವಾದುದನ್ನು ತಿಳಿಯುವ ಉತ್ಸಾಹ ಒಳ್ಳೆಯ ಮನಸ್ಸು ಇದ್ದರೆ, ನಮ್ಮ ಸಂಬಂಧವಾದ ಜಾತಕ ದೋಷಗಳು ನಿವಾರಣೆ ಆಗುತ್ತದೆ. ಹರಿಹರರೇ ನಮ್ಮ ವಿರುದ್ಧವಾಗಿ ನಿಂತರೂ ನಮಗೆ ಜಾnನ ಒದಗಿಸುವ ಗುರು ನಮ್ಮನ್ನು ಕಾಪಾಡುತ್ತಾನೆ. ಗಾಡ್‌ ಫಾದರ್‌ ಎಂಬ ಶಬ್ಧವನ್ನು ಈ ಅರ್ಥದ ಬೆಳಕಿನಲ್ಲಿ ನೋಡುವಂತಾಗಲಿ. ತಾಯಿಯೂ ನಮ್ಮ ಗುರು. 

ಮಾನಸಿಕ ದಾರಿದ್ರ್ಯದಿಂದ ಹೊರಬನ್ನಿ
ಮಾನಸಿಕ ದಾರಿದ್ರ್ಯದಿಂದ ಹೊರ ಬರಲು ಸಾಧ್ಯವಿದೆ. ಧರ್ಮ, ಅರ್ಥ, ಕಾಮ, ಮೋಕ್ಷಗಳಿಂದ ನಾವು ದಾರಿದ್ರ್ಯ ಅನುಭವಿಸಲು ಸಾಧ್ಯವಿಲ್ಲ. ಧರ್ಮ ಸರಿಯಾದ ಸೂಕ್ತ ಶ್ರಮ ಇವರಿಂದ ಬರುವ ದ್ರವ್ಯ ನಿರಾಯಾಸವಾದ ಬಿಡುಗಡೆಗೆ ದಾರಿ ಒದಗಿಸುತ್ತದೆ. ಪೊಲೀಸ್‌, ಕೋರ್ಟ್‌ ಇತ್ಯಾದಿ ನಮಗೆ ಬೇಕಾಗಿಯೇ ಇಲ್ಲ. ನಾವು ಮನುಷ್ಯರಾದರೆ ರೌಡಿಗಳು, ವಂಚಕರು, ಕೇಡಿಗಳು, ಕೊಲೆ, ದರೋಡೆಕಾರರು ಇರಲಾರರು. ಅಪರಾಧಮುಕ್ತ ಸಮಾಜವಾಗಿದ್ದರೆ ಜಾತಕದ ಯಾವ ಬಾಧೆಗಳೂ ನಮ್ಮನ್ನು ಸಂತೋಷದಿಂದ ವಿಮುಖ ಗೊಳಿಸಲಾರವು.

ಮದುವೆ ಎಂಬ ಮೃದು ಬಂಧನ ತಕ್ಕೆ ದಾರಿಯಾಗಲಿ
ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ. ಬಾಳ ಸಂಗಾತಿಯಿಂದ ಎಲ್ಲವೂ ನಿರಾಳ. ಬಾಳ ಸಂಗಾತಿಯ ಜತೆಗೆ ಕದನ, ಮುನಿಸು, ತರ್ಕ, ಜಾಟಾಪಟಿ ಇದ್ದರೆ ಬಾಳು ಹಾಳು. ಮನೆಯೊಳಗಿನ ಶಾಂತಿ ಧನಲಾಭವನ್ನು, ಆರೋಗ್ಯ ಸಂವರ್ಧನೆಯನ್ನು ಸಂಸ್ಕಾರ ಪೂರ್ಣವಾಗಿ ರಸಮಯ ಸಂಧಾನದ  ದಾರಿಯನ್ನು ಎತ್ತರಕ್ಕೇರಿಸಿ ಜೀವನವನ್ನು ಗೆಲ್ಲಿಸಬಲ್ಲದು. ಇವೇ ಇಲ್ಲದಿದ್ದರೆ ಎಲ್ಲವೂ ಶೂನ್ಯ. ಧರ್ಮಾರ್ಥಕಾಮ ಮೋಕ್ಷಗಳ ಮುಖ್ಯ ಬಿಂದುವೇ ಕಾಮ. ಆದರೆ ಕೃತವಾಗಬಾರದು. ಹೆಣ್ಣು ಗಂಡು ಪಾರ್ವತಿ ಪರಮೇಶ್ವರರ ಚಿಕ್ಕ ಸ್ವರೂಪ. ಪ್ರಕೃತಿ ಪುರುಷರ ಸಂಯೋಜಕ ಸ್ವರೂಪ. ಆದರೆ ಹೆಚ್ಚು ತಿಂದರೆ ಅಜೀರ್ಣ.  ತಿನ್ನದಿದ್ದರೆ ಬಸವಳಿಕೆ.  ಜೀವನಕ್ಕೆ ಅರ್ಥವಿಲ್ಲ. ಪಾಲಿಗೆ ಬಂದದ್ದು ಪಂಚಾಮೃತ. ಬಾಲ ಸಂಗಾತಿಯೊಡನೆ ಅರಿತು ನಡೆಯಿರಿ. ಜಾಗತಿಕ ಹಿಂಸೆಗೆ ಮೂಲ ಕಾರಣ ಮನೆಯೊಳಗಿನ ಅಶಾಂತಿ. ಈ ಅಶಾಂತಿ ಹೊರಗೆ ಬಂದು ಬವಣೆ ನಿರ್ಮಾಣ. 

ಮನೆಯ ಹೊರಗಿನ ಒತ್ತಡ ಮನೆಯ ಒಳಗಡೆ ತರಬೇಡಿ. ಇದರಿಂದ ಅಶಾಂತಿಗೆ ದಾರಿ. ಪ್ರತಿಮನೆಯೂ ನಂದನವಾಗಲಿ. ಜಗತ್ತೇ ಒಂದು ಕುಟುಂಬ ಎಂಬ ಮಾತು ನಮ್ಮ ಆಷೇìಯ ಪ್ರತಿಪಾದನೆ ನೆನಪಿಸಿಕೊಳ್ಳಿ.  ಮುಂದಿನ ವಾರ ಬಹು ಮುಖ್ಯವಾದ ಮರಣ ಆಯಸ್ಸು, ಕ್ಲೇಶ ಯಾಚನೆ ಭಾಗ್ಯ, ಉದ್ಯೋಗ ಸಂತೃಪ್ತಿ ಲಾಭ, ಆಸ್ತಿಪಾಸ್ತಿ ಪ್ರಾಪ್ತಿ, ನಷ್ಟ ಬವಣೆ, ಬಡತನ ಮುಕ್ತಿ, ವೈರಾಗ್ಯ, ಸಾವಿನ ನಂತರದ ಸ್ಥಿತಿ ಇತ್ಯಾದಿಗಳ ಬಗ್ಗೆ ವಿವರಿಸುತ್ತೇನೆ. 

ಈ ಅಂಕಣದಲ್ಲಿನ ಈ ಎಲ್ಲಾ ವಿಚಾರಗಳನ್ನು ಗಮನಿಸಿ ಹೆಜ್ಜೆ ಇರಿಸಿ. ಆಗ ನಿಮ್ಮ ಜಾತಕದ ಬವಣೆಗಳನ್ನು ಸರಳವಾಗಿ ಎದುರಿಸಬಹುದು. ಭಾಗ್ಯವೂ ದೈವಕೃಪೆಯಿಂದಲೇ ಒದಗಬೇಕು. ಮೋಕ್ಷವೂ ದೈವಕೃಪೆಯಿಂದಲೇ ಸಿಗಬೇಕು. ಹೀಗಾಗಿ ಪರಮಾತ್ಮನಿಗೆ ಶರಣಾಗಿ. ನಿನಗೆ ಶರಣಾಗುವುದರ ನಾ ಬೇರೆ ಮಾರ್ಗಲ್ಲ. ಶರಣಾಗಿದ್ದೇನೆ ಎಂಬ ನಿಮ್ಮ ಮಾತು ಆ ದೈವ ಶಕ್ತಿಗೆ ಕೇಳಿಸುವಂತಾದರೆ ಆಗ ಎಲ್ಲವೂ ಚಿನ್ನ. ನಿಮ್ಮನ್ನು ನೀವು ಗೌರವಿಸಿ. ಆದರೆ ಸ್ವಾರ್ಥಿಯಾಗುತ್ತ ಸಾಧಿಸಬೇಡಿ. ಸ್ವಾರ್ಥದಿಂದ ನಿನ್ನನ್ನು ನೀವೇ ಗೌರವಿಸಲಾಗದು.

ಪೂರ್ವಪುಣ್ಯ ನಮ್ಮನ್ನು ರಕ್ಷಿಸುತ್ತದೆ
ನಾವು ಹಿಂದಿನ ಜನ್ಮದಲ್ಲಿ ಮಾಡಿದ ಸುಧರ್ಮ ನಮ್ಮ ಈ ಜನ್ಮದಲ್ಲಿ ನಮ್ಮನ್ನು ಕಾಯುವ ವಜ್ರಾಯುಧವಾಗುತ್ತದೆ. ನಮ್ಮ ಸಂಸ್ಕಾರವು ಒಳ್ಳೆಯ ಹೊಳೆಯುವ ಚಿನ್ನದ ಅದಿರುಗಳಾಗಿ ನಮ್ಮ ವ್ಯಕ್ತಿತ್ವವನ್ನು ಕಾಪಾಡುತ್ತದೆ. ಜಾnನ ದಾಹಿ, ಆತ್ಮ ಪರಮಾತ್ಮರ ಸಂಬಂಧಗಳ ಬಗೆಗಿನ ನಮ್ಮ ಮಂಥನ ಒಳಿತಿಗೆ ಕೊಂಡೊಯ್ಯುತ್ತದೆ. ಮನುಷ್ಯನೂ ಒಂದು ಪ್ರಾಣಿ ಆದರೆ ಬೇರೆಯಾಗಿ ನಿಂತು ನಾವು ಶ್ರೇಷ್ಠರಾಗುವುದೇ ದೈವಸಿದ್ಧಿ ಸಂಕಲ್ಪ. ನಮಗೆ ನ್ಯಾಯಾನ್ಯಾಯಗಳ ಬಗ್ಗೆ ವಿವೇಚನೆ ನೀಡಿರುವುದರಿಂದ. ವಿದ್ವಾನ್‌ ಸರ್ವತ್ರ ಪೂಜ್ಯತೆ ಎಂಬ ಮಾತು ನೆನಪಿಸಿಕೊಳ್ಳಿ. ಎದುಬದುರಾದ ಕನ್ನಡಿಗಳು ಸತ್ಯ.  ಆದರೆ ಅವುಗಳ ಒಳಗಿನ ಅನಂತಾನಂತ ಪ್ರತಿಫ‌ಲನಗಳು ನಮಗೆ ಸತ್ಯವಾಗುವುದು ನಮ್ಮ ನಂಬಿಕೆಯಿಂದ ಮಾತ್ರ. ದೇವರೂ ಹಾಗೆಯೇ ಅವನ ಬಗೆಗಿನ ನಮ್ಮ ನಂಬಿಕೆ ನಮ್ಮನ್ನು ಕಾಪಾಡುತ್ತದೆ. ಕಾಣದಿದ್ದರೂ ಆ ಶಕ್ತಿ ಇದ್ದೇ ಇದೆ. ನಮ್ಮ ಮಕ್ಕಳನ್ನು ಸಂಸ್ಕಾರಪೂರ್ಣರನ್ನಾಗಿಸಿದರೆ ಇಳಿವಯಸ್ಸಿನಲ್ಲಿ ನಮ್ಮನ್ನವರು ಕಾಪಾಡುತ್ತಾರೆ.

 ಅನಂತಶಾಸ್ತ್ರಿ 

ಟಾಪ್ ನ್ಯೂಸ್

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

ಶತಕೋಟಿ  ಡೋಸ್‌ ದಾಖಲೆ

ಶತಕೋಟಿ ಡೋಸ್‌ ದಾಖಲೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಜನರ ಒಗ್ಗಟ್ಟಿನಿಂದಲೇ ಶತಕೋಟಿ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಲಸಿಕೆ ನೀಡಿಕೆಯಲ್ಲಿ ದೇಶದ ಚರಿತ್ರಾರ್ಹ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ದಶಾ ಸಂಧಿ ಕಾಲ ಎಂದರೇನು? ಮೂರು ದಶಾ ಸಂಧಿಗೆ ಹೆಚ್ಚು ಪ್ರಾಮುಖ್ಯತೆ

ಕುಜ ಕ್ರೂರ ಗ್ರಹ: ಜಾತಕದ ಯಾವ ಸ್ಥಾನದಲ್ಲಿ ಕುಜ ಗ್ರಹ ಇದ್ದರೆ ದೋಷ ಬರುತ್ತದೆ?

ಕುಜ ಕ್ರೂರ ಗ್ರಹ: ಜಾತಕದ ಯಾವ ಸ್ಥಾನದಲ್ಲಿ ಕುಜ ಗ್ರಹ ಇದ್ದರೆ ದೋಷ ಬರುತ್ತದೆ?

ಸೂರ್ಯನಿಗೆ ಒಂದೊಂದು ರಾಶಿ ಕ್ರಮಿಸಲು ಒಂದು ತಿಂಗಳು ಬೇಕು…ಸಂಕ್ರಮಣ ಕಾಲ ಎಂದರೇನು?

ಸೂರ್ಯನಿಗೆ ಒಂದೊಂದು ರಾಶಿ ಕ್ರಮಿಸಲು ಒಂದು ತಿಂಗಳು ಬೇಕು…ಸಂಕ್ರಮಣ ಕಾಲ ಎಂದರೇನು?

ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?

ಶನಿ ದೋಷದ ಬಗ್ಗೆ ಜನರಲ್ಲಿ ಅಪನಂಬಿಕೆಗಳೇ ಹೆಚ್ಚು…ಶುಭ, ಅಶುಭ ಫಲಗಳಿಗೆ ಕಾರಣವೇನು?

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ನಾಲಗೆ ಬಿಗಿ ಹಿಡಿಯಿರಿ: ನೇತಾರರಿಗೆ ಚುನಾವಣ ಆಯೋಗ ಸೂಚನೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ವಿಜ್ಞಾನಿಗಳ ಮಹತ್ವದ ಸಂಶೋಧನೆ: ಬಸವನಹುಳು ಹೊಸ ಪ್ರಭೇದ ಪತ್ತೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

ಭಾರತ, ತಾಲಿಬಾನ್‌ ಪ್ರತಿನಿಧಿಗಳ ಚರ್ಚೆ

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

12 ವರ್ಷದ ಬಾಲಕಿಯಿಂದ ಸ್ಕಾಟ್ಲೆಂಡ್‌ ಜೆರ್ಸಿ ವಿನ್ಯಾಸ!

Untitled-1

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.