Udayavni Special

ಶಿವಾಜಿಯ ಗೂಢಚಾರಿಗಳ ಜಾಡು ಹಿಡಿದು…


Team Udayavani, Mar 7, 2020, 6:11 AM IST

shivaaajiya

ಮನುಷ್ಯನ ಬಹುದೊಡ್ಡ ಉದ್ದೇಶ, ತನ್ನ ಜೀವನದಲ್ಲಿ ಉತ್ತಮ ಕಾಯಕವನ್ನು ಹಿಡಿಯುವುದು. ಆದರೆ, ಮತ್ತೆ ಕೆಲವರ ಹಾದಿಯೇ ಬೇರೆ. ಅವರು, ವಂಶಪಾರಂಪರ್ಯವಾಗಿ ಬಂದ ಕುಲಕಸುಬನ್ನೇ ಉಸಿರಾಡುವ ಮನೋಭಾವದವರು. ಹೀಗೆ, ಕುಲಕಸುಬಿನ ಸಾಂಸ್ಕೃತಿಕ ದೋಣಿಯಲ್ಲಿ ಪಯಣಿಸುತ್ತಿರುವ ಒಂದು ಸಮುದಾಯವೇ “ಗೊಂದಲಿಗರು’. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಜಾಪುರದಲ್ಲಿ ಗೊಂದಲಿಗರ ಬದುಕು ಹಬ್ಬಿಕೊಂಡಿದೆ.

ಆಧುನಿಕ ಮಾಯಾಲೋಕದಲ್ಲಿ ಮುಳುಗಿರುವ ಜನರಿಗೆ, ಇತಿಹಾಸ ಹಾಗೂ ಜಾನಪದ ಕತೆಗಳನ್ನು ಉಣಬಡಿಸುತ್ತಿರುವ ಗೊಂದಲಿಗರು ಮೂಲತಃ ಮಹಾರಾಷ್ಟ್ರದವರು. ಶಿವಾಜಿ ಆಸ್ಥಾನದಲ್ಲಿ ಗುಪ್ತಚರದಳದಂಥ ಕಾರ್ಯಗಳಲ್ಲಿ ತಲ್ಲೀನರಾಗಿದ್ದರು. ಉತ್ತಮವಾದ ಮಾತಿನ ಶೈಲಿಯಲ್ಲಿ ಕರಗತವಾಗಿರುವ ಇವರು ಆ ದಿನಗಳಲ್ಲಿ ಕತೆಗಳನ್ನು ಹೇಳುತ್ತಾ ಗೂಢಚರ್ಯೆ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಶಿವಾಜಿ ಸಾಮ್ರಾಜ್ಯ ಪತನವಾದ ನಂತರ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡು, ಇವರು ಕರ್ನಾಟಕಕ್ಕೆ ಬಂದರು ಎನ್ನುವುದು ಇತಿಹಾಸ ತಜ್ಞರ ಅಭಿಪ್ರಾಯ.

ಈಗಲೂ ಇವರ ಮನೆಮಾತು ಮರಾಠಿ. ತುಳುಜಾಭವಾನಿ, ಅಂಬಾಭವಾನಿಯ ದೇವತೆಗಳ ಆರಾಧಕರು. ದೇವರ ಮುಂದೆ ಗೊಂದಲ ಮಾಡುವುದು ಇಷ್ಟದ ಕಾಯಕ. “ಗೊಂದಲ’ವೆಂದರೆ ದೇವರನ್ನು ಆರಾಧಿಸುವುದು ಎಂದರ್ಥ. ಇದೊಂದು ರೀತಿಯ ಪೂಜಾ ವಿಧಾನವಾಗಿದ್ದು, ಇದಕ್ಕೆ “ಗೊಂದಲ ಹಾಕುವುದು’ ಎಂದೇ ಕರೆಯುತ್ತಾರೆ. ಇದೇ ಇವರ ಕುಲಕಸುಬಾಗಿ ಮಾರ್ಪಟ್ಟಿದೆ. ಹಳ್ಳಿ ಹಳ್ಳಿಗಳಿಗೂ ತೆರಳಿ ಕರ್ಚಿ, ದೋತ್ರದೊಂದಿಗೆ ತಲೆಗೊಂದು ರುಮಾಲು ಧರಿಸಿ, ಪುಟ್ಟ ತಬಲ, ಕಂಚಿನತಾಳ ಹಾಗೂ ಚೌಟಿಯನ್ನು (ತುಂತುನಿ) ಬಳಸಿ, ಜನರ ಮುಂದೆ ಗೊಂದಲ ಪ್ರಸ್ತುತಪಡಿಸುತ್ತಾರೆ.

ಇವರ ಬಾಯಿಯಲ್ಲಿ ಇತಿಹಾಸ ಹಾಡಾಗುತ್ತದೆ, ಕಥೆಯಾಗುತ್ತದೆ. ಇವರ ವರ್ಣನೆಯ ಇತಿಹಾಸದಲ್ಲಿ ವೀರರಸ ಮೈದುಂಬಿರುತ್ತದೆ. ಸಂದಭೋಚಿತ ಹಾಡುಗಳನ್ನು ಹಾಡುತ್ತಾರೆ. ರಾಜರ ಕತೆಗಳನ್ನು ಪುಂಖಾನುಪುಂಖವಾಗಿ ಹೇಳುವ ಇವರು, ಬನ್ನಿ ಮಹಾಕಾಳಿ, ವೀರ ಪರಾಕ್ರಮಿ ಮಹಾರಾಜ, ಬಾಳ ಭಿಕ್ಷುಕ ಮಹಾರಾಜ, ಶೀಲಾವತಿ ಮಹಾರಾಣಿ, ಅರಣ್ಯಕುಮಾರನ ಕತೆಗಳನ್ನು ಹೇಳುವುದರಲ್ಲಿ ನಿಸ್ಸೀಮರು. ಬಂಜೆಯರ ಕತೆಗಳು, ಮಲತಾಯಿಯ ಮತ್ಸರ, ಸವತಿಯರ ಕಾಟದಂಥ ಉಪಕತೆಗಳನ್ನು ಹೇಳಿ ಸಹೋದರ ಭಾವನೆ, ಸಂಬಂಧಗಳ ಮೌಲ್ಯವನ್ನು ಅರಿಯುವಂತೆ ತಿಳಿ ಹೇಳುತ್ತಾರೆ.

ಲೋಕದ ಅಂಕುಡೊಂಕುಗಳನ್ನು ತಮ್ಮ ಕಥನ ಶೈಲಿಯ ಮುಖಾಂತರ ತಿದ್ದಲು ಯತ್ನಿಸುತ್ತಾರೆ. ಇದಲ್ಲದೆ, ಮಳೆಗಾಲದಲ್ಲಿ ಸರಿಯಾಗಿ ಮಳೆ ಬಾರದೆ ಕ್ಷಾಮ ತಲೆದೋರಿದಾಗ, ಗ್ರಾಮಗಳಲ್ಲಿ ರಾತ್ರಿಯಿಡೀ ಗೊಂದಲಿಗರ ಮೇಳವನ್ನು ಏರ್ಪಡಿಸಿ, ಮಳೆ ಕರೆಯುವ ಸಂಪ್ರದಾಯ ಇಂದಿಗೂ ಇದೆ. ಗೊಂದಲಿಗರು ಹೆಚ್ಚೇನೂ ಓದಿದವರಲ್ಲ. ಆದರೆ, ಇವರ ಶಬ್ದಸಂಪತ್ತು ಅಪಾರ. “ಹೆಚ್ಚು ಓದಬೇಕು ಎನ್ನುವ ಹಂಬಲವಿತ್ತು. ಆದರೆ, ಬಡತನ ಅದಕ್ಕೆ ಅವಕಾಶ ಕೊಡಲಿಲ್ಲ. ಕುಲಕಸುಬು ನಮ್ಮ ಹೊಟ್ಟೆ ತುಂಬಿಸುತ್ತಿದೆ’ ಎಂದು ಆಕಾಶವಾಣಿ ಕಲಾವಿದರಾದ, ಇದೇ ಸಮುದಾಯದ ಕುಬೇರಪ್ಪ, ದುರುಗಪ್ಪ ಹೇಳಿದರು.

ಗೊಂದಲಿಗರ ಈ ದಿನಗಳ ಚಿತ್ರ: ಅಲೆಮಾರಿ ಜೀವನ ನಡೆಸುತ್ತಾ ಸಾಗುವ ಇವರಲ್ಲಿ ಅನೇಕರು ವೃತ್ತಿಯಿಂದ ವಿಮುಖರಾಗಿ, ಮೀನು ಹಿಡಿಯುವುದು, ಜಾತ್ರೆಗಳಲ್ಲಿ ಆಟದ ಸಾಮಾನು, ಪಾತ್ರೆಗಳನ್ನು ಮಾರುವ ಕಾರ್ಯಗಳಲ್ಲಿ ತೊಡಗುತ್ತಿದ್ದಾರೆ. ಇವರ ಜಾನಪದ ಶ್ರೀಮಂತಿಕೆಯನ್ನು ಸಮಾಜ ಅರಿಯದೇ, ಗೊಂದಲಿಗರ ಬದುಕು ಗೊಂದಲಕ್ಕೆ ತುತ್ತಾಗುತ್ತಿದೆ.

* ಪ್ರದೀಪ ಎಂ.ಬಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

ಅಂದು ಇಂದಿರಾ;ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

ಕಸ್ಟಡಿಯಲ್ಲಿ ತಂದೆ, ಮಗನ ಸಾವು ಪ್ರಕರಣ: ಎಸ್ ಐ ಸೇರಿದಂತೆ ನಾಲ್ವರ ಬಂಧನ

ಕಸ್ಟಡಿಯಲ್ಲಿ ತಂದೆ, ಮಗನ ಸಾವು ಪ್ರಕರಣ: ಎಸ್ ಐ ಸೇರಿದಂತೆ ನಾಲ್ವರ ಬಂಧನ

2036ರವರೆಗೂ ಪುಟಿನ್ ಗೆ ರಷ್ಯಾ ಅಧ್ಯಕ್ಷಗಾದಿ: ಏನಿದು ಸಂವಿಧಾನ ತಿದ್ದುಪಡಿ, ಚುನಾವಣೆ?

2036ರವರೆಗೂ ಪುಟಿನ್ ಗೆ ರಷ್ಯಾ ಅಧ್ಯಕ್ಷಗಾದಿ: ಏನಿದು ಸಂವಿಧಾನ ತಿದ್ದುಪಡಿ, ಚುನಾವಣೆ?

hd-kumaraswmay

ವೈರಸ್ ಸೋಂಕಿತರು ಚಿಕಿತ್ಸೆಯಿಲ್ಲದೆ ನರಳುತ್ತಿದ್ದಾರೆ, ಸಚಿವರಲ್ಲಿ ಸಮನ್ವಯವಿಲ್ಲ: HDK ಕಿಡಿ

Twitter

ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ ಚಿತ್ರವನ್ನು ತೆಗೆದುಹಾಕಿದ ಟ್ವಿಟ್ಟರ್:ಕಾರಣವೇನು ಗೊತ್ತಾ?

ಶ್ವಾಸಕೋಶಕ್ಕಲ್ಲ, ದೇಹಕ್ಕೇ ಕುತ್ತು ; ಸೋಂಕಿನಿಂದ ಸೃಷ್ಟಿಯಾಗು­ತ್ತಿವೆ ಹೊಸ ಸಮಸ್ಯೆಗಳು

ಶ್ವಾಸಕೋಶಕ್ಕಲ್ಲ, ದೇಹಕ್ಕೇ ಕುತ್ತು ; ಸೋಂಕಿನಿಂದ ಸೃಷ್ಟಿಯಾಗು­ತ್ತಿವೆ ಹೊಸ ಸಮಸ್ಯೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cycle-yatri

ಸೈಕಲ್‌ ಯಾತ್ರಿಕನ ಕನಸು

bili-saheb

ಬಿಳಿ ಸಾಹೇಬನ ಬೇಂದ್ರೆ

sagarotttara

ಸಾಗರೋತ್ತರ ದೇಶಗಳಲ್ಲಿ ರಾಮಾಯಣ

ondu-kote

ಒಂದು ಕೋಟೆ ಯಾನ

koodali

ಕೂಡಲಿ ಊಟದ ಸೊಗಸು

MUST WATCH

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya

udayavani youtube

LIC ಅಧಿಕಾರಿಯ ‘Part Time’ ಕೃಷಿ ‘ಪಾಲಿಸಿ’! | LIC Officer Excels in Agriculture

udayavani youtube

SSLC ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ Medical Education Minister Dr Sudhakar

udayavani youtube

Let locals put first priority in government’s new sand policy


ಹೊಸ ಸೇರ್ಪಡೆ

02-July-06

ನರೇಗಾದಡಿ ಕೆಲಸ ಮಾಡಿ

ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

ಅಂದು ಇಂದಿರಾ;ಈಗ ದೆಹಲಿ ತೊರೆಯಲಿರುವ ಪ್ರಿಯಾಂಕಾ ಲಕ್ನೋ ಬಂಗಲೆಯಲ್ಲಿ ವಾಸ್ತವ್ಯಕ್ಕೆ ಸಿದ್ಧತೆ

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

12 ದಿನಗಳಲ್ಲಿ 2 ಲಕ್ಷ ಪ್ರಕರಣ: ರಷ್ಯಾ ಹಿಂದಿಕ್ಕಿ ಮೂರನೇ ಸ್ಥಾನ ಪಡೆಯಲಿದೆಯೇ ಭಾರತ?

02-July-05

ನಿವೃತ್ತ ಪಿಎಸ್‌ಐ ಸೇರಿ ಇಬ್ಬರ ಬಲಿ

ಅಭಿವೃದ್ಧಿ ಕಾರ್ಯ ತ್ವರಿತ ಮುಗಿಸಲುಸಚಿವ ಸುರೇಶ ಅಂಗಡಿ ಸೂಚನೆ

ಅಭಿವೃದ್ಧಿ ಕಾರ್ಯ ತ್ವರಿತ ಮುಗಿಸಲುಸಚಿವ ಸುರೇಶ ಅಂಗಡಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.