ಹೋರಾಟದ ಗೆಲುವು ಮತ್ತು ಮಿಲನಾ ನಗು

ಕೈ ಹಿಡಿದ ಲವ್‌

Team Udayavani, Mar 20, 2020, 10:44 AM IST

ಹೋರಾಟದ ಗೆಲುವು ಮತ್ತು ಮಿಲನಾ ನಗು

“ಇದೊಂಥರ ಹೋರಾಟದ ಗೆಲುವು …’
– ಹೀಗೆ ಹೇಳಿ ನಕ್ಕರು ಮಿಲನಾ ನಾಗರಾಜ್‌. ಯಾವ ಮಿಲನಾ ಎಂದರೆ “ಲವ್‌ ಮಾಕ್ಟೇಲ್‌’ ಚಿತ್ರದ ಬಗ್ಗೆ ಹೇಳಬೇಕು. ಇನ್ನೂ ಅರ್ಥವಾಗದಿದ್ದರೆ “ನಿಧಿ’, “ನಿಧಿಮಾ’ ಎಂದರೆ ಸಿನಿಪ್ರಿಯರಿಗೆ ಬೇಗನೇ ಅರ್ಥವಾಗಬಹುದು. ಹೌದು, ಈ ವರ್ಷದಲ್ಲಿ ಬಿಡುಗಡೆಯಾಗಿ ದೊಡ್ಡ ಹೆಸರು ಮಾಡಿರುವ ಹಾಗೂ ಪ್ರೇಕ್ಷಕ ವಲಯದಲ್ಲಿ ಹೆಚ್ಚು ಚರ್ಚೆಯಾದ ಚಿತ್ರವೆಂದರೆ ಅದು “ಲವ್‌ ಮಾಕ್ಟೇಲ್‌’. ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ವಿಮರ್ಶಕರಿಂದ ಆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಆದರೆ, ಸಿನಿಮಾಕ್ಕೆ ಮಾತ್ರ ಜನ ಬರಲಿಲ್ಲ. ಆದರೆ, ಸಿನಿಮಾ ನೋಡಿದವರಿಂದ ಒಳ್ಳೆಯ ಮಾತುಗಳು ಕೇಳಿಬಂದು, ಆ ಸಿನಿಮಾಕ್ಕೆ ಸಿಕ್ಕ ಬಾಯಿಮಾತಿನ ಪ್ರಚಾರ ದೊಡ್ಡ ವರದಾನವಾಗಿದ್ದು ಸುಳ್ಳಲ್ಲ. ಅಂದಿನಿಂದ “ಲವ್‌ ಮಾಕ್ಟೇಲ್‌’ ಚಿತ್ರ ತಿರುಗಿ ನೋಡಲೇ ಇಲ್ಲ. ಸತತ ಹೌಸ್‌ಫ‌ುಲ್‌ ಶೋ ಮೂಲಕ ಹಿಟ್‌ಲಿಸ್ಟ್‌ ಸೇರಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ, ನಿಧಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಪಡೆದವರು ಮಿಲನಾ ನಾಗರಾಜ್‌. ನಟನೆಯ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದ ಮಿಲನಾ ಈಗ ಖುಷಿಯಾಗಿದ್ದಾರೆ.

“ನಾನು ತುಂಬಾ ಖುಷಿಯಾಗಿದ್ದೇನೆ. ಮೊನ್ನೆವರೆಗೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಖುಷಿಪಟ್ಟ ಜನ ಈಗ ಅಮೆಜಾನ್‌ನಲ್ಲಿ ಸಿನಿಮಾ ನೋಡುತ್ತಿದ್ದಾರೆ. ಅನೇಕರು ನನ್ನ ಹೆಸರು ಮಿಲನಾ ಎಂಬುದನ್ನು ಮರೆತೇಬಿಟ್ಟಿದ್ದಾರೆ. ನಿಧಿ, ನಿಧಿಮಾ ಎಂದು ಕರೆಯುವ ಜೊತೆಗೆ ಕೆಲವರು ನಿಧಿ ಎಂದು ಟ್ಯಾಟೋ ಕೂಡಾ ಹಾಕಿಸಿಕೊಂಡಿದ್ದಾರೆ’ ಎನ್ನುತ್ತಾರೆ ಮಿಲನಾ. ಆರಂಭದಲ್ಲಿ ಈ ಸಿನಿಮಾ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬುದು ಮಿಲನಾ ಸೇರಿದಂತೆ ಚಿತ್ರತಂಡಕ್ಕೆ ಚೆನ್ನಾಗಿ ಗೊತ್ತಿತ್ತಂತೆ. ಅದೇ ಕಾರಣದಿಂದ ಎದೆಗುಂದದೇ ಸಿನಿಮಾ ಪ್ರಚಾರ ಮಾಡುತ್ತಾ ಬಂದಿದ್ದಾಗಿ ಹೇಳುವ ಮಿಲನಾ, “ಆರಂಭದಲ್ಲಿ ಸ್ಲೋ ಪಿಕ್‌ಆಪ್‌ ತಗೊಂಡರೂ ಆ ನಂತರ ಆರು ವಾರಗಳಲ್ಲಿ ನಮಗೆ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿತು. ಬಹುತೇಕ ಶೋಗಳು ಹೌಸ್‌ಫ‌ುಲ್‌ ಪ್ರದರ್ಶನ ಕಂಡವು. ನಾವಂತು ಖುಷಿಯಾಗಿದ್ದೇವೆ. ಹಾಕಿದ ಬಂಡವಾಳದ ಜೊತೆಗೆ ಒಳ್ಳೆಯ ಲಾಭ ಕೂಡಾ ಬಂತು’ ಎನ್ನುತ್ತಾರೆ ಮಿಲನಾ.

ಸದ್ಯ ಮಿಲನಾ ನಾಗರಾಜ್‌ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಆದರೆ. ಯಾವುದನ್ನೂ ಮಿಲನಾ ಒಪ್ಪಿಲ್ಲವಂತೆ. “ಸಾಕಷ್ಟು ಕಥೆಗಳು ಬರುತ್ತಿವೆ. ಯಾವುದೂ ಇನ್ನೂ ಅಂತಿಮವಾಗಿಲ್ಲ. ಸದ್ಯ ಚಿತ್ರದ ಗೆಲುವಿನ ಖುಷಿ­ಯಲ್ಲಿದ್ದೇನೆ’ ಎನ್ನು­ತ್ತಾರೆ.

ರವಿ ರೈ

ಟಾಪ್ ನ್ಯೂಸ್

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

love li kannada movie

Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

kotee movie

Kotee movie: ನೈಜತೆಯೇ ಕೋಟಿಯ ಜೀವಾಳ

ಮುಂದಿನ ವಾರದಿಂದ ಚಿತ್ರೋತ್ಸವ; ಅರ್ಧ ವರ್ಷ ಸಿನಿಟ್ರಾಫಿಕ್‌ ಜೋರು

Sandalwood: ಮುಂದಿನ ವಾರದಿಂದ ಚಿತ್ರೋತ್ಸವ; ಅರ್ಧ ವರ್ಷ ಸಿನಿಟ್ರಾಫಿಕ್‌ ಜೋರು

kotee

Dhananjaya: ಸ್ಯಾಂಡಲ್ ವುಡ್ ಗೆ ಹೊಸ ನಿರೀಕ್ಷೆ ಹುಟ್ಟಿಸಿದ ಪರಮ್ ‘ಕೋಟಿ’

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ಕೋಳಿಯಂತೆ ರೇಣುಕಾಸ್ವಾಮಿಯನ್ನು ಎಸೆದ ದರ್ಶನ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ನಿಗಮ-ಮಂಡಳಿ ಅಧ್ಯಕ್ಷರಿಗೆ ಡಿಸಿಎಂ ಶಿವಕುಮಾರ್‌ ಕ್ಲಾಸ್‌

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.