ಪ್ರಿಯಾ ಪಾಠ ಕನ್ನಡ್‌ ಗೊತ್ತಿಲ್ಲದವರಿಗಾಗಿ…

Team Udayavani, Nov 22, 2019, 5:50 AM IST

ಒಂದು ಕಡೆ ರೆಟ್ರೋ ಶೈಲಿಯ ಸಿನಿಮಾಗೂ ಸೈ ಎನ್ನುತ್ತಾರೆ. ಮತ್ತೆಲ್ಲೋ, ಮಿಡ್ಲಕ್ಲಾಸ್‌ ಮೆಚ್ಯುರ್ಡ್ ವುಮೆನ್‌ ಪಾತ್ರದಲ್ಲೂ ಇಷ್ಟವಾಗುತ್ತಾರೆ. ಇನ್ನೆಲ್ಲೋ, ತನಿಖಾಧಿಕಾರಿಯಾಗಿ ಗಮನ ಸೆಳೆಯುತ್ತಾರೆ. ಅಲ್ಲೆಲ್ಲೋ, ಪೌರಾಣಿಕ ಚಿತ್ರದಲ್ಲೂ ಬಹುಪರಾಕ್‌ ಎನ್ನುತ್ತಾರೆ. ಅದರೊಂದಿಗೆ ರೊಮ್ಯಾಂಟಿಕ್‌ ಪಾತ್ರ ಮಾಡಿಯೂ ಪಡ್ಡೆಗಳಿಗೆ ಹುಚ್ಚೆಬ್ಬಿಸುತ್ತಾರೆ. ಇವೆಲ್ಲದರ ನಡುವೆ ಅಪ್ಪಟ ಕನ್ನಡ ಪ್ರೇಮಿ ಅಂತಾನೂ ಸಾರುತ್ತಾರೆ. ಇಷ್ಟೊಂದು ಬಗೆಯ ಪಾತ್ರಗಳಲ್ಲಿ ಮಿಂಚಿರೋದು ಬೇರಾರೂ ಅಲ್ಲ, ಹರಿಪ್ರಿಯಾ.

ಹೌದು, ಇತ್ತೀಚಿನ ವರ್ಷಗಳಲ್ಲಿ ತರಹೇವಾರಿ ಪಾತ್ರ ಮಾಡುವ ಮೂಲಕ ಈಗಲೂ ಬಿಝಿ ನಟಿ ಅಂದರೆ ಅದು ಹರಿಪ್ರಿಯಾ. ಅವರ ಮತ್ತೂಂದು ಹೈಲೈಟ್‌ ಅಂದರೆ, ಈ ವರ್ಷ ಅವರು ನಟಿಸಿರುವ ಆರು ಚಿತ್ರಗಳು ಬಿಡುಗಡೆಯಾಗಿವೆ! ಕನ್ನಡದ ನಟಿಯ ಮಟ್ಟಿಗೆ ಇದು ನಿಜಕ್ಕೂ ಖುಷಿಯ ವಿಷಯ. ಹರಿಪ್ರಿಯಾ ಎಲ್ಲಾ ರೀತಿಯ ಪಾತ್ರಕ್ಕೂ ಸೈ ಅಂದವರು. ಆ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡವರು. ಒಬ್ಬ ನಟಿಯ ಆರು ಚಿತ್ರಗಳು ವರ್ಷದಲ್ಲಿ ತೆರೆಗೆ ಬರುತ್ತವೆ ಅಂದರೆ, ಅದು ಸಂಭ್ರಮವಲ್ಲದೆ ಮತ್ತೇನು? ಅಪ್ಪಟ ಕನ್ನಡದ ಹುಡುಗಿಯಾಗಿರುವ ಹರಿಪ್ರಿಯಾ, ಈಗ “ಕನ್ನಡ್‌ ಗೊತ್ತಿಲ್ಲ’ ಮೂಲಕ ಮತ್ತೂಮ್ಮೆ ನಟನೆ ಸಾಬೀತುಪಡಿಸಲು ತಯಾರಿ ನಡೆಸಿದ್ದಾರೆ. ಚಿತ್ರದ ಶೀರ್ಷಿಕೆ ಹೇಳುವಂತೆ, ಇದೊಂದು ಅಪ್ಪಟ ಕನ್ನಡತನ ಇರುವ ಚಿತ್ರ. ಅದರಲ್ಲೂ ಹರಿಪ್ರಿಯಾ ಅವರಿಗೆ ಕನ್ನಡ ಅಂದರೆ ಪ್ರಾಣ. ಕನ್ನಡ ಪ್ರೀತಿಯಿಂದಲೇ ಚಿತ್ರದಲ್ಲಿ ತೊಡಗಿಸಿಕೊಂಡ ಬಗ್ಗೆ ಸ್ವತಃ ಹರಿಪ್ರಿಯಾ ಹೇಳುವುದಿಷ್ಟು.

“ನಾನು “ಕನ್ನಡ್‌ ಗೊತ್ತಿಲ್ಲ’ ಚಿತ್ರ ಒಪ್ಪೋಕೆ ಕಾರಣ. ಮೊದಲು ಶೀರ್ಷಿಕೆ. ಅದೇ ಅಷ್ಟೊಂದು ಪ್ರಭಾವ ಬೀರಿತು ಅಂದಮೇಲೆ, ಕಥೆ ಇನ್ನೆಷ್ಟು ಪ್ರಭಾವ ಬೀರಬಾರದು ಅಂತ, ಕಥೆ ಕೇಳ್ಳೋಕೆ ಮುಂದಾದೆ. ಕಥೆಯೊಳಗಿನ ಹೂರಣ, ಹೆಣೆದಿರುವ ಪಾತ್ರ ಇನ್ನಷ್ಟು ಕುತೂಹಲ ಕೆರಳಿಸಿತು. ಹಾಗಾಗಿ, ಹಿಂದೆ ಮುಂದೆ ನೋಡದೆ ನಾನು “ಕನ್ನಡ್‌ ಗೊತ್ತಿಲ್ಲ’ ಚಿತ್ರ ಮಾಡಿದೆ. ಇನ್ನು, ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದಾಗ, ನಿರ್ದೇಶಕ ಮಯೂರ್‌, “ಹೊಸಬರ ಕಥೆ ಕೇಳ್ತೀರಾ, ಇಷ್ಟವಾದರೆ ಸಿನಿಮಾ ಮಾಡ್ತೀರಾ’ ಅಂದರು. ಅವರ ಮಾತಿಗೆ, ಕಥೆ ಮತ್ತು ಪಾತ್ರ ಚೆನ್ನಾಗಿದ್ದರೆ ಹೊಸಬರು, ಹಳಬರು ಅಂತೇನಿಲ್ಲ ಅಂದೆ.

ಸರಿ, ಕಥೆ ಹೇಳಾÉ ಅಂದ್ರು, ಹೇಳಿ ಅಂದೆ, ಕೇಳಿದಾಗ ಬಿಡಬಾರದು ಅನಿಸಿತು. ಸಿನಿಮಾ ಮಾಡಿದೆ. ಸಾಮಾನ್ಯವಾಗಿ ಲವ್‌ಸ್ಟೋರಿ, ಆ್ಯಕ್ಷನ್‌, ಕಾಮಿಡಿ, ಎಮೋಷನಲ್‌, ಸೆಂಟಿಮೆಂಟ್‌ ಹೀಗೆ ಹಲವು ಜಾನರ್‌ ಕಥೆಗಳಲ್ಲಿ ಹೊಸದೇನೂ ಇರೋದಿಲ್ಲ. ಅಲ್ಲಿ ಕಮರ್ಷಿಯಲ್‌ ವಿಷಯ ಹೈಲೈಟ್‌ ಆಗಿರುತ್ತೆ. ಮಯೂರ್‌ ಹೇಳಿದ “ಕನ್ನಡ್‌ ಗೊತ್ತಿಲ್ಲ’ ಕಥೆಯಲ್ಲಿ ಹೊಸ ವಿಷಯವಿತ್ತು. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲದರಲ್ಲೂ ವಿಶೇಷ ಎನಿಸಿತು.

ಅದರಲ್ಲೂ ಸಂಪೂರ್ಣ ಹೊಸ ತಂಡ ಆಗಿದ್ದರಿಂದ ಅವರೊಳಗಿನ ಉತ್ಸಾಹ ಎದ್ದು ಕಾಣುತ್ತಿತ್ತು. ನಾನು ಅವೆಲ್ಲವನ್ನೂ ಗಮನಿಸಿ, ಆರಂಭದಿಂದ ಅಂತ್ಯದವರೆಗೂ ಟೀಮ್‌ ಜೊತೆ ಇನ್ವಾಲ್‌ ಆದೆ. ಹೊಸಬರಾದರೂ, ಎಫ‌ರ್ಟ್‌ ಹಾಕಿ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ, “ಕನ್ನಡ್‌ ಗೊತ್ತಿಲ್ಲ’ ಚೆನ್ನಾಗಿ
ಮೂಡಿಬಂದಿದೆ’ ಎನ್ನುತ್ತಾರೆ ಹರಿಪ್ರಿಯಾ.

ಎಲ್ಲಾ ಭಾಷಿಗರೂ ನೋಡ್ಬೇಕು ಹರಿಪ್ರಿಯಾ ಅವರು “ಕನ್ನಡ್‌ ಗೊತ್ತಿಲ್ಲ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಕಥೆ ಮತ್ತು ಅವರು ನಿರ್ವಹಿಸಿರುವ ಪಾತ್ರವಂತೆ. ಆ ಬಗ್ಗೆ ಹೇಳುವ ಹರಿಪ್ರಿಯಾ, “ನಾನು ಡಬ್ಬಿಂಗ್‌ ಮಾಡುವಾಗಲೇ ಸಿನಿಮಾ ಯಾವ ರೇಂಜ್‌ನಲ್ಲಿದೆ ಅನ್ನೋದು ಗೊತ್ತಾಯ್ತು. ಇದೊಂದು ಕನ್ನಡಕ್ಕಾಗಿಯೇ ಮಾಡಿರುವ ಕಥೆ. ಕನ್ನಡಿಗರಿಗೆ ಇಷ್ಟವಾಗುವ ಕಥೆ. ಇಲ್ಲಿ ನಾನು ಅಧಿಕಾರಿ ಪಾತ್ರ ಮಾಡುತ್ತಿದ್ದೇನೆ. “ಕನ್ನಡ್‌ ಗೊತ್ತಿಲ್ಲ’ ಶೀರ್ಷಿಕೆಗೆ ನ್ಯಾಯ ಒದಗಿಸೋ ಪಾತ್ರವದು. ಇಲ್ಲಿ ನಾನು ಅಧಿಕಾರಿಯಾಗಿ, ಯಾಕೆ ಕನ್ನಡ ಪ್ರೀತಿ ಹೊಂದಿರುತ್ತೇನೆ, ಆ ಲಿಂಕ್‌ ಹೇಗೆ
ಸಿಂಕ್‌ ಆಗುತ್ತೆ ಅನ್ನೋಕೆ ಸಿನಿಮಾ ನೋಡಬೇಕು’ ಎನ್ನುವ ಅವರು, “ಪ್ರಸ್ತುತ ಬೆಂಗಳೂರಲ್ಲಿ ಕನ್ನಡ್‌ ಗೊತ್ತಿಲ್ಲ ಎಂಬ ಪದಬಳಕೆಯೇ ಜಾಸ್ತಿಯಾಗುತ್ತಿದೆ. ಇಲ್ಲಿ ನಮ್ಮವರಿಗಿಂತ ಹೊರಗಿನವರೇ ಹೆಚ್ಚು ಇದ್ದಾರೆ. ಬಿಜಿನೆಸ್‌, ಸ್ಟಡಿ, ಕೆಲಸ ಹೀಗೆ ನಾನಾ ವಿಷಯಗಳಲ್ಲಿ ಪರಭಾಷಿಗರ ಸಂಖ್ಯೆಯೇ ಹೆಚ್ಚಿದೆ.

ಪ್ರತಿ ನಿತ್ಯ “ಕನ್ನಡ್‌ ಗೊತ್ತಿಲ್ಲ’ ಎಂಬ ಪದ ಕೇಳ್ಳೋದು ಇಲ್ಲಿ ಕಾಮನ್‌ ಆಗಿದೆ. ಇಲ್ಲಿ ಎಷ್ಟೋ ಜನ ಹೊರಗಿನವರು ನಮ್ಮ ಭಾಷೆ ಕಲಿತಿದ್ದಾರೆ, ಭಾಷೆ ಗೊತ್ತಿದ್ದೂ, ಮಾತನಾಡದೆಯೂ ಇದ್ದಾರೆ, ನಾವು ಯಾತಕ್ಕೆ ನಿಮ್ಮ ಭಾಷೆ ಕಲಿಯಬೇಕು ಎನ್ನುವವರೂ ಇದ್ದಾರೆ. ಒಟ್ಟಾರೆ ಈ ಎಲ್ಲಾ ಕೆಟಗರಿ ಮಂದಿ ಈ ಚಿತ್ರ ನೋಡಬೇಕು. ಹಾಗಂತ, ಇಲ್ಲಿ ಯಾರನ್ನೂ ದೂರುವಂತಹ ಕೆಲಸ ಮಾಡಿಲ್ಲ. ಆದರೆ, ಕನ್ನಡ ಭಾಷೆ ಕುರಿತ ಸಿನಿಮಾದಲ್ಲಿ ಒಂದು ಥ್ರಿಲ್ಲಿಂಗ್‌ ಜರ್ನಿ ಇದೆ. ಅದೇ ಚಿತ್ರದ ಸಸ್ಪೆನ್ಸ್‌’ ಎನ್ನುತ್ತಾರೆ ಅವರು.
ಕನ್ನಡ ಪ್ರೀತಿಗೆ ಒಳ್ಳೇ ವೇದಿಕೆ “ಕನ್ನಡ್‌ ಗೊತ್ತಿಲ್ಲ’ ಮೂಲಕ ಯಾರಿಗಾದರೂ ಟಾಂಗ್‌ ಕೊಡುವ ಪ್ರಯತ್ನ ಮಾಡಲಾಗಿದೆಯಾ? ಈ ಪ್ರಶ್ನೆಗೆ ಉತ್ತರಿಸುವ ಹರಿಪ್ರಿಯಾ, “ಇದು ಯಾರ ವಿರುದಟಛಿದ ಚಿತ್ರವೂ ಅಲ್ಲ. ಕನ್ನಡ ಪ್ರೀತಿಯನ್ನು ವ್ಯಕ್ತಪಡಿಸುವ ಸಿನಿಮಾ. ಕನ್ನಡ ಮಾತಾಡಲ್ಲ, ಕನ್ನಡ ಬರೋದೇ ಇಲ್ಲ. ಕನ್ನಡವನ್ನು ಅವಮಾನಿಸಿದವರಿಗೆ ಇಲ್ಲಿ ಏನೆಲ್ಲಾ ಆಗುತ್ತೆ ಅನ್ನುವ ಲೈನ್‌ ಇದೆ. ಹಾಗಂತ, ವಿನಾಕಾರಣ, ಅನ್ಯ ಭಾಷಿಗರ ವಿರುದ್ಧವಂತೂ ಇಲ್ಲ. ಮೊದಲ ಸಲ ನನಗೆ ಕನ್ನಡ ಪ್ರೇಮವನ್ನು ವ್ಯಕ್ತಪಡಿಸಲು ಒಂದೊಳ್ಳೆಯ ಫ್ಲಾಟ್‌ ಫಾರ್ಮ್ ಕೊಟ್ಟಿರುವ ಚಿತ್ರವಿದು. ಇನ್ನು, “ಕನ್ನಡ್‌ ಗೊತ್ತಿಲ್ಲ’ ಸಿನಿಮಾ ನೋಡಿದ ಅನ್ಯ ಭಾಷಿಗರು ಒಂದಷ್ಟು ಬದಲಾಗಬಹುದಾ? ಇದಕ್ಕೆ ಅವರ ಉತ್ತರ, ಇಲ್ಲಿ ಯಾರನ್ನೂ ಫೋರ್ಸ್‌ ಮಾಡೋಕೆ ಆಗಲ್ಲ. ತಿದ್ದುವುದಕ್ಕೂ ಆಗೋದಿಲ್ಲ.

ನಮ್ಮತನದ ಚಿತ್ರ ಮಾಡಿದ್ದೇವೆ. ಅದನ್ನು ಇಲ್ಲಿರುವ ಪ್ರತಿಯೊಬ್ಬರೂ ಪ್ರೀತಿಯಿಂದ ಅಪ್ಪಿಕೊಳ್ಳಬೇಕಷ್ಟೇ.
ಒಂದು ಯೋಚನೆಯಂತೂ ಇಲ್ಲಿದೆ. ಅದನ್ನು ಎಲ್ಲರೂ ಅಳವಡಿಸಿಕೊಂಡರೆ, “ಕನ್ನಡ್‌ ಗೊತ್ತಿಲ್ಲ’ ಎಂಬ ಪದ ಮುಂದೆ ಕೇಳುವುದು ಕಡಿಮೆಯಾಗುತ್ತದೆ’ ಎನ್ನುತ್ತಾರೆ ಹರಿಪ್ರಿಯಾ.

ವಿಜಯ್‌ ಭರಮಸಾಗರ


ಈ ವಿಭಾಗದಿಂದ ಇನ್ನಷ್ಟು

  • ಅಂತೂ ಇಂತೂ ಇನ್ನು ಎರಡು ವಾರ ಕಳೆದರೆ 2019 ಪೂರ್ಣಗೊಳ್ಳಲಿದೆ. ಚಿತ್ರರಂಗ ಕೂಡ ಎಂದಿಗಿಂತ ಗರಿಗೆದರಿ ನಿಂತಿದೆ. ಈ ವರ್ಷ ಇಟ್ಟುಕೊಂಡ ಕೆಲವು ನಿರೀಕ್ಷೆ ಸುಳ್ಳಾದರೆ,...

  • "ನಾನು ಇಲ್ಲಿಯವರೆಗೆ ಹೀರೋ ಆಗಿ ಅನೇಕ ಸಿನಿಮಾಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ದೀನಿ. ಆದ್ರೆ, ಇಲ್ಲಿಯವರೆಗೂ ಯಾವ ಸಿನಿಮಾಗಳಲ್ಲೂ, ರಿಲೀಸ್‌ ಆದ ನಂತರ ಸಿನಿಮಾ ಸಕ್ಸಸ್‌...

  • ಕೆಂಪಾಗಿ ಕಂಗೊಳಿಸುತ್ತಿದ್ದ ಸೂರ್ಯ. ಜೋರಾಗಿ ಬೀಸುತ್ತಿದ್ದ ಗಾಳಿ. ಜೊತೆಗೆ ಒಂದಷ್ಟು ಚಳಿ. ಆಗಾಗ ಇಣುಕಿ ಮರೆಯಾಗುತ್ತಿದ್ದ ಬಿಸಿಲು, ಸುತ್ತಲ ಹಸಿರು .... ರಸ್ತೆ...

  • ಇತ್ತೀಚೆಗಷ್ಟೇ ದಿನೇಶ್‌ ಬಾಬು ನಿರ್ದೇಶನದ "ಹಗಲು ಕನಸು' ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ತಮ್ಮ ನಿರ್ದೇಶನದ ಇನ್ನೊಂದು ಸಿನಿಮಾ ಮಾಡಿ ಪ್ರೇಕ್ಷಕರ ಮುಂದೆ ತರಲು...

  • ಸಾಮಾನ್ಯವಾಗಿ ನಮ್ಮಲ್ಲಿ ರಾಜಕಾರಣಿಯ ಮಕ್ಕಳು ರಾಜಕಾರಣಿ, ಕಲಾವಿದರ ಮಕ್ಕಳು ಕಲಾವಿದರು, ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ತಂದೆಯ ಹೆಸರಿನಲ್ಲಿ, ತಮ್ಮ...

ಹೊಸ ಸೇರ್ಪಡೆ