ಶೀರ್ಷಿಕೆಗಳು ಕಥೆಯಾದ ಕಥೆ!

ಏಕ್‌ ಚಿತ್ರ ಕಥಾ

Team Udayavani, Mar 20, 2020, 10:42 AM IST

ಶೀರ್ಷಿಕೆಗಳು ಕಥೆಯಾದ ಕಥೆ!

ಯಾವುದೇ ಚಿತ್ರವಿರಲಿ ಅದಕ್ಕೊಂದು ಕಥೆ ಇರುತ್ತದೆ. ಆ ಕಥೆ ಮತ್ತು ಚಿತ್ರಕ್ಕೆ ಹೊಂದುವಂಥ ಹೆಸರನ್ನು ಕೊನೆಗೆ ಚಿತ್ರದ ಶೀರ್ಷಿಕೆ ಆಗಿ ಇಡಲಾಗುತ್ತದೆ. ಆದರೆ ಕನ್ನಡದಲ್ಲಿ ಕೆಲವೊಂದು ಚಿತ್ರಗಳ ಶೀರ್ಷಿಕೆಯಲ್ಲೇ “ಕಥೆ’ ಸೇರಿಕೊಂಡಿರುತ್ತದೆ. ಹೌದು, ಕನ್ನಡದಲ್ಲಿ ಚಿತ್ರದ ಟೈಟಲ್‌ನಲ್ಲಿ “ಕಥೆ’ ಎಂದು ಸೇರಿಕೊಂಡ ಚಿತ್ರಗಳ ದೊಡ್ಡ ಸಂಖ್ಯೆಯೇ ಸಿಗುತ್ತದೆ. ಇನ್ನು ತಮ್ಮ ಚಿತ್ರದ ಟೈಟಲ್‌ನಲ್ಲಿ “ಕಥೆ’ ಎಂದು ಹೆಸರು ಸೇರಿಸಿಕೊಂಡು ಬರುತ್ತಿರುವುದಕ್ಕೂ ಕೂಡ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವೇ ಇದೆ.

ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತೆರೆಯುತ್ತ ಹೋದರೆ, ಇಂಥ ಶೀರ್ಷಿಕೆಗಳ ಸಾಲಿನಲ್ಲಿ “ಒಂದು ಹೆಣ್ಣಿನ ಕಥೆ’ ಚಿತ್ರ ಮೊದಲಿಗೆ ಸಿಗುತ್ತದೆ. 1972ರಲ್ಲಿ ಬಿ.ಆರ್‌ ಪಂತುಲು ನಿರ್ದೇಶನದಲ್ಲಿ “ಒಂದು ಹೆಣ್ಣಿನ ಕಥೆ’ ಚಿತ್ರದಲ್ಲಿ ಎಂ.ವಿ ರಾಜಾ ರಾಮಣ್ಣ, ಜಯಂತಿ, ಬಿ.ವಿ ರಾಧಾ, ರಾಜೇಶ್‌, ಸುದರ್ಶನ್‌, ನರಸಿಂಹರಾಜು, ಪದ್ಮಾ, ಇಂದ್ರಾಣಿ ಮೊದಲಾದ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಆನಂತರ ವಿಷ್ಣುವರ್ಧನ್‌, ದ್ವಾರಕೀಶ್‌ ಕಾಂಬಿನೇಶನ್‌ನ “ಮನೆ ಮನೆ ಕಥೆ’, ಶಂಕರ್‌ ನಾಗ್‌ ನಿರ್ದೇಶನದ “ಒಂದು ಮುತ್ತಿನ ಕಥೆ’, ಗಿರೀಶ್‌ ಕಾಸರವಳ್ಳಿ ನಿರ್ದೇಶನದ “ತಬರನ ಕಥೆ’ ಚಿತ್ರಗಳು 80ರ ದಶಕದಲ್ಲಿ ಇಂಥ ಶೀರ್ಷಿಕೆ ಚಿತ್ರಗಳ ಪೈಕಿ ಸಾಕಷ್ಟು ಜನಪ್ರಿಯತೆ ಪಡೆದಿದ್ದವು.

80ರ ದಶಕದ ನಂತರವೂ ತಮ್ಮ ಚಿತ್ರದ ಶೀರ್ಷಿಕೆಯಲ್ಲಿ “ಕಥೆ’ ಎಂಬ ಪದವನ್ನು ಇಟ್ಟುಕೊಂಡು ತೆರೆಗೆ ಬಂದ ಚಿತ್ರಗಳ ಸಂಖ್ಯೆಯಲ್ಲಿ ಏನೂ ಕಡಿಮೆ ಇಲ್ಲ. “ಒಂದು ಸಿನಿಮಾ ಕಥೆ’, “ಒಂದು ಪ್ರೀತಿಯ ಕಥೆ’, “ಕಟ್ಟುಕಥೆ’, “ಕಥೆ, ಚಿತ್ರಕಥೆ, ನಿರ್ದೇಶನ ಪುಟ್ಟಣ್ಣ’, “ಒಂದು ಮೊಟ್ಟೆಯ ಕಥೆ’, “ಕಥೆಯೊಂದು ಶುರುವಾಗಿದೆ’, “ಅದೇ ಹಳೇ ಕಥೆ’, “ಒಂದ್‌ ಕಥೆ ಹೇಳಾÉ’, “ಕಥಾ ಸಂಗಮ’, “ಗಿಣಿ ಹೇಳಿದ ಕಥೆ’, “ಮಾತುಕಥೆ’, “ನಮ್‌ ಕಥೆ ನಿಮ್‌ ಜೊತೆ’, “ಒಂದು ರೊಮ್ಯಾಂಟಿಕ್‌ ಕ್ರೈಂ ಕಥೆ’, “ನನ್ನ ನಿನ್ನ ಪ್ರೇಮಕಥೆ’, “ಸ್ಟೋರಿ-ಕಥೆ’, “ನಮ್‌ ಹುಡುಗ್ರು ಕಥೆ’, “ಒಂದು ಶಿಕಾರಿಯ ಕಥೆ’ ಸದ್ಯ ಬಿಡುಗಡೆಗೆ ರೆಡಿಯಾಗಿರುವ “ಓಬಿರಾಯನ ಕಥೆ’, “ಒಂದು ಗಂಟೆಯ ಕಥೆ’ ಚಿತ್ರದವರೆಗೆ ಹೀಗೆ ಇಂಥ ಶೀರ್ಷಿಕೆ ಹೊತ್ತು ಹೊರಬಂದ ಚಿತ್ರಗಳ ಸಂಖ್ಯೆ ನೂರಾರು ಸಂಖ್ಯೆಯಲ್ಲಿ ಸಿಗುತ್ತವೆ. ಇಷ್ಟೇ ಅಲ್ಲದೆ ವಾಣಿಜ್ಯ ಮಂಡಳಿಯಲ್ಲಿ ತಮ್ಮ ಶೀರ್ಷಿಕೆ ನೊಂದಾಯಿಸಿರುವ ಆದರೆ ಇನ್ನೂ ತೆರೆಗೆ ಬರದ ಚಿತ್ರಗಳನ್ನು ತೆಗೆದುಕೊಂಡರೆ, ಈ ಸಂಖ್ಯೆ ಕೂಡ ಸಾಕಷ್ಟು ದೊಡ್ಡದಿದೆ. ಇಷ್ಟೇ ಅಲ್ಲದೆ “ಕಥೆ’ ಎಂಬ ಪದದ ಇಂಗ್ಲಿಷ್‌ ಶೀರ್ಷಿಕೆ ಇಟ್ಟುಕೊಂಡು ಬಂದ ಸಾಕಷ್ಟು ಚಿತ್ರಗಳ ಉದಾಹರಣೆಗಳು ಸಿಗುತ್ತವೆ. “ಪೊಲೀಸ್‌ ಸ್ಟೋರಿ’, “ಪೊಲೀಸ್‌ ಸ್ಟೋರಿ-2′, “ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ’, “ಕೃಷ್ಣನ್‌ ಲವ್‌ ಸ್ಟೋರಿ’, “ಸಿಂಪಲ್ಲಾಗ್‌ ಇನ್ನೊಂದು ಲವ್‌ಸ್ಟೋರಿ’, “ಒನ್‌ ಲವ್‌ ಟೂ ಸ್ಟೋರಿ’, “ಕಿರಿಕ್‌ ಲವ್‌ಸ್ಟೋರಿ’ ಹೀಗೆ ಹುಡುಕುತ್ತ ಹೋದರೆ ಇವುಗಳ ಪಟ್ಟಿ ಕೂಡ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಸಿಗುತ್ತದೆ.

ಈ ತರಹ ಶೀರ್ಷಿಕೆ ಇಡುವುದರಿಂದ ಸಿನಿಮಾಕ್ಕೇನಾದರೂ ಲಾಭವಿದೆಯೇ ಎಂದರೆ ಖಂಡಿತಾ ಇಲ್ಲ. ಸಿನಿಮಾದ ಕಥೆ ಚೆನ್ನಾಗಿದ್ದರಷ್ಟೇ ಟೈಟಲ್‌ನಲ್ಲಿರುವ ಕಥೆ ವಕೌìಟ್‌ ಆಗುತ್ತದೆಯಷ್ಟೇ.

ಟಾಪ್ ನ್ಯೂಸ್

ಹಾಸಿಗೆಗಾಗಿ ಆನೆಯ ಕಿತ್ತಾಟ-ವಿಡಿಯೋ ವೈರಲ್‌

ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್‌

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

ಶ್ರೀಲಂಕಾಕ್ಕೆ ಭಾರತೀಯ ಸೇನೆ ಕಳುಹಿಸುವುದು ಬೇಡ 

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯ

ಹಣದುಬ್ಬರದ ನಾಗಾಲೋಟಕ್ಕೆ ಕಡಿವಾಣ ಅನಿವಾರ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ

‘ಸಕುಟುಂಬ ಸಮೇತ’ ಸಿನಿಮಾಗೆ ಬನ್ನಿ! ರಿಲೀಸ್ ಗೆ ಮುನ್ನವೇ ಡಬಲ್ ಲಾಭದ ಖುಷಿ

critical keerthanegalu

ಬೆಟ್ಟಿಂಗ್‌ ಸುತ್ತ ‘ಕ್ರಿಟಿಕಲ್ ಕೀರ್ತನೆಗಳು’ ಇಂದು ತೆರೆಗೆ

Kannada movie Kasthuri Mahal releasing today

‘ಕಸ್ತೂರಿ ಮಹಲ್’; ಭಯಪಡಿಸಲು ಶಾನ್ವಿ ರೆಡಿ

ಇದು ಆ ‘ಕಟ್ಟಿಂಗ್‌ ಶಾಪ್‌’ ಅಲ್ಲ!

ಇದು ಆ ‘ಕಟ್ಟಿಂಗ್‌ ಶಾಪ್‌’ ಅಲ್ಲ!

shivaraj kumar bairagi song

ಸೌಂಡು ಮಾಡುತ್ತಿದೆ ‘ಬೈರಾಗಿ’ ಸಾಂಗ್‌

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

ಹಾಸಿಗೆಗಾಗಿ ಆನೆಯ ಕಿತ್ತಾಟ-ವಿಡಿಯೋ ವೈರಲ್‌

ಹಾಸಿಗೆಗಾಗಿ ಆನೆಯ ಕಿತ್ತಾಟ -ವಿಡಿಯೋ ವೈರಲ್‌

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

“ಇಸ್ಲಾಮಿಕ್‌ ಆಕ್ರಮಿತ ದೇಗುಲಗಳನ್ನು ತೆರವುಗೊಳಿಸುವುದೇ ನಮ್ಮ ಗುರಿ’

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಪಿಯು ಕಾಲೇಜು ಸಮವಸ್ತ್ರ: ಇಲಾಖೆ ಮಾರ್ಗಸೂಚಿ

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಐಪಿಎಲ್‌ 2022: ಕೋಲ್ಕತಾ ನೈಟ್‌ರೈಡರ್ ಗೆ ಬೇಕು ದೊಡ್ಡ ಗೆಲುವು

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.