ಕೃತಿ ಕರಬಂಧ ವಿವಾಹ ಅನುಬಂಧ

Team Udayavani, Sep 29, 2019, 4:23 AM IST

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಗೂಗ್ಲಿ ಚಿತ್ರದ ನಾಯಕನಟಿ ಕೃತಿ ಕರಬಂದ ಕನ್ನಡ, ತೆಲುಗು, ತಮಿಳು ಮತ್ತು ಬಾಲಿವುಡ್‌ನ‌ಲ್ಲೂ ತನ್ನದೇ ಆದ ತಮ್ಮ ಛಾಪು ಮೂಡಿಸಿರುವ ನಟಿ. ಚಿರು ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಕೃತಿ ತಮ್ಮ ಕ್ಯೂಟ್‌ ಸ್ಮೈಲ್‌ ಮೂಲಕವೇ ಕನ್ನಡಿಗರ ಹೃದಯ ಕದ್ದಿದ್ದ ಚೆಲುವೆ. ಪ್ರೇಮ್‌ ಅಡ್ಡ, ಗಲಾಟೆ, ಸೂಪರ್‌ ರಂಗ, ಬೆಳ್ಳಿ, ಮಾಸ್ತಿಗುಡಿ ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿಪ್ರಿಯರಿಗೆ ಹತ್ತಿರವಾಗಿದ್ದ ಕೃತಿ, ಇತ್ತೀಚೆಗೆ ಮುಂಬೈನತ್ತ ಹೆಚ್ಚಾಗಿ ಮುಖ ಮಾಡಿದ್ದರಿಂದ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪವೆಂಬಂತಾಗಿದೆ. ನಟ ನೆನಪಿರಲಿ ಪ್ರೇಮ್‌ ಅಭಿನಯದ ದಳಪತಿ ಚಿತ್ರದ ನಂತರ ಕನ್ನಡ ಚಿತ್ರಗಳಲ್ಲಿ ಕೃತಿ ಹೆಸರು ಕೇಳಿ ಬಂದಿದ್ದು ಕೂಡ ಕಡಿಮೆ. ಈ ನಡುವೆ ಬಾಲಿವುಡ್‌ನ‌ಲ್ಲಿ ಸಕ್ರಿಯವಾಗುತ್ತಿರುವ ಕೃತಿ ಕರಬಂಧ ಬಗ್ಗೆ ಇತ್ತೀಚೆಗೆ ಸಾಕಷ್ಟು ಅಂತೆ-ಕಂತೆ ಸುದ್ದಿಗಳು ಹರಿದಾಡುತ್ತಿವೆ.

2018ರಲ್ಲಿ ಬಿಡುಗಡೆಯಾಗಿದ್ದ ಬಾಲಿವುಡ್‌ನ‌ ವೀರೇ ಕೀ ವೆಡ್ಡಿಂಗ್‌ ಚಿತ್ರದಲ್ಲಿ ಕೃತಿಗೆ ಹೀರೋ ಆಗಿ ಅಭಿನಯಿಸಿದ್ದ ನಟ ಪುಲ್ಕಿಟ್‌ ಸಾಮ್ರಾಟ್‌ ಜೊತೆ ಕೃತಿ ಕಳೆದ ಆರು ತಿಂಗಳಿನಿಂದ ಡೇಟಿಂಗ್‌ನಲ್ಲಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿ ಗುಸುಗುಸು ಮಾತು ಕೇಳಿಬರುತ್ತಿದೆ.

ಇನ್ನು ಇದೇ ಜೋಡಿ ಪಾಗಲ್‌ಪಂತಿ ಚಿತ್ರದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದು, ಚಿತ್ರದ ಶೂಟಿಂಗ್‌ ವೇಳೆ ಇಬ್ಬರು ಹತ್ತಿರವಾಗಿದ್ದಾರೆ. ಶೂಟಿಂಗ್‌ ಸಮಯದಲ್ಲಿಯೂ ಇಬ್ಬರು ಹೆಚ್ಚು ಸಮಯವನ್ನು ಜೊತೆಯಾಗಿ ಕಳೆಯುತ್ತಿದ್ದಾರೆ. ಅಲ್ಲದೆ ಸಾಮ್ರಾಟ್‌ ಪ್ರತಿದಿನ ಶೂಟಿಂಗ್‌ ಮುನ್ನ ಕೃತಿ ಮೇಕಪ್‌ ಕೋಣೆಗೆ ಚಾಕೋಲೇಟ್‌ ಮತ್ತು ಹೂಗುಚ್ಛ ಕಳುಹಿಸುತ್ತಿದ್ದರು ಎನ್ನಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸುದ್ದಿಗಳು ಪ್ರಕಟಗೊಂಡರೂ, ಕೃತಿ ಕರಬಂಧ ಮಾತ್ರ ಇದ್ಯಾವುದರ ಬಗ್ಗೆಯೂ ತುಟಿ ಬಿಚ್ಚಿಲ್ಲ. ಒಟ್ಟಾರೆ ಸೌಥ್‌ ಸಿನಿ ದುನಿಯಾದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತನ್ನದೇ ಆದ ಒಂದಷ್ಟು ಅಭಿಮಾನಿಗಳನ್ನು ಹೊಂದಿರುವ ಕೃತಿ, ಪ್ರೇಮಕಥೆ ನಿಜವಾಗುತ್ತಾ? ಅಥವಾ ಗಾಸಿಪ್‌ ಸುದ್ದಿಗಳ ಪಟ್ಟಿಯಲ್ಲಿ ಇದೂ ಒಂದಾಗುತ್ತಾ? ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಇರುವುದಂತೂ ಸುಳ್ಳಲ್ಲ. ಸದ್ಯಕ್ಕಂತೂ ಈ ಎಲ್ಲಾ ಪ್ರಶ್ನೆಗಳಿಗೆ ಕೃತಿ ಬಾಯಿಬಿಟ್ಟ ಮೇಲಷ್ಟೇ ಉತ್ತರ ಸಿಗಬೇಕು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ "ಸತ್ತ ಹೆಗ್ಗಣ'ವನ್ನು ಹುಡುಕಿಕೊಂಡು ಬಂದಿರಬಹುದೆಂದು...

  • ನೀಲಿ ಆಗಸದ ನೀರವತೆಯಲ್ಲಿ ನನ್ನನ್ನೇ ನಾನು ಮರೆತು ತೇಲುವ ಸೋಜಿಗದ ಸಡಗರದ ದಿನಗಳನ್ನು ಲೆಕ್ಕ ಹಾಕುತ್ತ, ವಿಮಾನದ ವಿಶಲ್‌ ಸದ್ದು ಕೇಳಿದಾಗೆಲ್ಲ ಮನದೊಳಗೆ ಅಡಗಿದ್ದ...

  • ಕನ್ನಡನಾಡಿನ ಮಟ್ಟಿಗೆ ಗಂಭೀರವಾದ ಸಂಸ್ಕೃತಿ ಸಂವಾದ ನಡೆಯುವುದು ಶಿವಮೊಗ್ಗ ಜಿಲ್ಲೆಯ ಹೆಗ್ಗೋಡಿನ ನೀನಾಸಂನಲ್ಲಿ. ರಂಗಭೂಮಿ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ...

  • ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ ಅರಮನೆ...

  • ಸುಮಾರು ಇನ್ನೂರೈವತ್ತು ನಾಟಿಕಲ್‌ ಮೈಲಿ ದೂರ ಕಡಲಲ್ಲಿ ಚಲಿಸಿ ತಲುಪಬಹುದಾದ ಮಾಮೂಲಿ ಹಡಗನ್ನು ಬಿಟ್ಟು ನಾನೂರೈವತ್ತು ಮೈಲು ಕಡಲಲ್ಲಿ ಸುತ್ತಿ ಬಳಸಿ ಎರಡು ದ್ವೀಪಗಳನ್ನು...

ಹೊಸ ಸೇರ್ಪಡೆ