ಚಲ್‌ ಮೇರಿ ಸ್ಕೂಟಿ

ಸ್ಕೂಟರ್‌ ಕೊಟ್ಟ ಸ್ವಾತಂತ್ರ್ಯ

Team Udayavani, Sep 4, 2019, 5:38 AM IST

ಗತ್ತಿನಲ್ಲಿ ಒಂದು ದಿನ ಮುಖ್ಯರಸ್ತೆಯಲ್ಲಿ ಯು ಟರ್ನ್ ತೆಗೆದು ಆಚೆ ಬದಿಗೆ ಹೋದೆ. ಅಲ್ಲಿ ಸ್ವಲ್ಪ ಇಳಿಜಾರಿತ್ತು. ನನಗರಿವಿಲ್ಲದೇ ವೇಗ ಜಾಸ್ತಿಯಾಗಿತ್ತು. ಭಯದಿಂದ ಒಮ್ಮೆಲೇ ಬ್ರೇಕ್‌ ಹಿಡಿದೆ. ಬ್ಯಾಲೆನ್ಸ್ ತಪ್ಪಿದಂತಾಗಿ ಸ್ಕೂಟರ್‌ ಅತ್ತಿತ್ತ ಓಲಾಡುತ್ತ ಮುಂದೆ ಚಲಿಸಿ ಪಲ್ಟಿ ಹೊಡೆಯಿತು.

“ಶಾಪಿಂಗ್‌ಗೆ ಹೋಗ್ಬೇಕು. ಒಮ್ಮೆ ಕರೆದುಕೊಂಡು ಹೋಗಿ, ಸ್ಕೂಲ್‌ಗೆ ಲೇಟಾಯ್ತು, ಮಗಳನ್ನು ಬಸ್‌ಸ್ಟಾಪ್‌ ತನಕ ಬಿಟ್ಟು ಬನ್ನಿ, ಡ್ಯಾನ್ಸ್ ಕ್ಲಾಸಿಗೆ ಬಿಟ್ಟು ಬನ್ನಿ…’ ಹೆಂಡತಿಯ ಈ ರೀತಿಯ ಕೋರಿಕೆಗಳನ್ನು ಈಡೇರಿಸಲು ಗಂಡನಿಗೆ ಸಮಯಾಭಾವ. ತನ್ನ ಕೆಲಸಗಳನ್ನು ಬದಿಗಿಟ್ಟು ಹೆಂಡತಿ ಹೇಳಿದ ಕಡೆಗೆಲ್ಲ ಹೋಗಿ ಬರಲು ಆತನಿಗೆ ಇಷ್ಟವೂ ಇಲ್ಲ. ಅದರಲ್ಲೂ ಹೆಂಡತಿಯನ್ನು ಶಾಪಿಂಗ್‌ಗೆ ಕರೆದುಕೊಂಡು ಹೋಗುವುದಿದೆಯಲ್ಲ, ಅದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿಲ್ಲ ಎಂಬ ಭಾವನೆ ಅವನಿಗೆ. ಅಗತ್ಯ ಕೆಲಸಗಳಿಗೆ ಹೊರಗೆ ಹೋಗಲು ಆಕೆ ತನ್ನನ್ನು ಅವಲಂಬಿಸದಿರಲಿ ಎಂದು ಲೆಕ್ಕ ಹಾಕಿಯೇ ಹೆಂಡತಿಗೊಂದು ಸ್ಕೂಟರ್‌ ಕೊಡಿಸುತ್ತಾನೆ. ಬೈಕಿನ ಹಿಂದೆ ಗಂಡನಿಗೆ ಅಂಟಿ ಕುಳಿತು ಜುಮ್ಮಂತ ಹೋಗುವ ಅವಕಾಶ ನಷ್ಟವಾಯಿತಲ್ಲ ಅಂತ ಮರುಗುತ್ತಲೇ, ಮನಸ್ಸಿಲ್ಲದ ಮನಸ್ಸಿಂದ ಆಕೆ ಸ್ಕೂಟರ್‌ ಕಲಿಯುತ್ತಾಳೆ. ಆದರೆ, ದಿನಗಳೆದಂತೆ ಸ್ಕೂಟರ್‌ ಅವಳ ಅಚ್ಚುಮೆಚ್ಚಿನ ಸಂಗಾತಿಯಾಗಿ ಬಿಡುತ್ತದೆ.

ಇದು ನನ್ನನ್ನೂ ಸೇರಿದಂತೆ ಅನೇಕ ಮಹಿಳೆಯರ ಕಥೆ ಅನ್ನಬಹುದು. ನನಗೆ ಅನಿವಾರ್ಯವಾಗಿ ಸ್ಕೂಟರ್‌ ಕಲಿಯಲೇಬೇಕಾದದ್ದು, ನಾನು ಹೆರಿಗೆ ರಜೆಯಲ್ಲಿರುವ ಸಂದರ್ಭದಲ್ಲಿ. ಆಗ ನನಗೆ ಹೆಚ್ಚುವರಿ ಶಿಕ್ಷಕಿ ಎಂಬ ನೆಲೆಯಲ್ಲಿ ಬೇರೆ ಶಾಲೆಗೆ ವರ್ಗಾವಣೆಯಾಯ್ತು. ಮೊದಲಿದ್ದ ಶಾಲೆ ಕಡೆಗೆ ಐದು ನಿಮಿಷಕ್ಕೊಂದರಂತೆ ಬಸ್ಸುಗಳಿದ್ದವು. ಸ್ಕೂಟರ್‌ನ ಬಗ್ಗೆ ಚಿಂತಿಸುವ ಅಗತ್ಯವೂ ನನಗಿರಲಿಲ್ಲ. ಆದರೆ, ಹೊಸ ಶಾಲೆಗೆ ಹೋಗಲು ಅರ್ಧಗಂಟೆಗೊಂದು ಬಸ್ಸು. ಸಣ್ಣ ಮಗುವನ್ನು ಸಂಭಾಳಿಸಿ, ಮನೆಕೆಲಸ ಮುಗಿಸಿ ಹೊರಡುವಾಗ ಬಸ್ಸು ತಪ್ಪುತ್ತಿತ್ತು. ಮುಖ್ಯ ಶಿಕ್ಷಕರು, “ಸ್ವಲ್ಪ ಬೇಗ ಬರಲು ಪ್ರಯತ್ನಿಸಿ’ ಎಂದು ಆಗಾಗ ಹೇಳುತ್ತಿದ್ದರು. ಶಾಲೆಗೆ ತಡವಾಗಿ ಹೋಗುವುದು ನನಗೂ ಕಿರಿಕಿರಿಯೆನಿಸುತ್ತಿತ್ತು. ಬಸ್ಸು ತಪ್ಪಿದ ಮೇಲೆ ಮುಂದಿನ ಬಸ್‌ಗಾಗಿ ಕಾಯುವಾಗ ಮುಳ್ಳು ಚುಚ್ಚಿದಂತಾಗುತ್ತಿತ್ತು. ಒಮ್ಮೊಮ್ಮೆ ಟ್ಯಾಕ್ಸಿ ಸರ್ವಿಸ್‌ ಕಾರು ಸಿಗುತ್ತಿತ್ತು. ನನ್ನ ಶಾಲೆಯಿರುವ ಊರು ಕೊನೆಯ ಸ್ಟಾಪ್‌ ಆದ ಕಾರಣ ನಾನು ಅಥವಾ ಅಲ್ಲಿ ಇಳಿಯುವ ಯಾರನ್ನೇ ಆಗಲಿ ಡ್ರೈವರ್‌ನ ಪಕ್ಕ ಕೂರಿಸುತ್ತಿದ್ದರು. ಡ್ರೈವರ್‌ ಗೇರ್‌ ಬದಲಿಸುವಾಗ ನಮಗೆ ಇರಿಸುಮುರಿಸಾಗುತ್ತಿತ್ತು. ಕೆಲವೊಮ್ಮೆ ಹಿಂದಿನ ಸೀಟೇನೋ ಸಿಗುತ್ತಿತ್ತು. ಆದರೆ, ಹೆಚ್ಚು ಜನರಿರುವ ಕಾರಣ ನಮ್ಮ ತೊಡೆಯ ಮೇಲೆ ಇನ್ನೊಬ್ಬ ಮಹಿಳೆ ಅಥವಾ ಇನ್ನೊಬ್ಬರ ತೊಡೆಯ ಮೇಲೆ ನಾವು ಕೂರುವುದು ಅನಿವಾರ್ಯ. ಟ್ಯಾಕ್ಸಿಯಿಂದ ಇಳಿವಾಗ ಕಾಲು ಮರಗಟ್ಟಿ, ನಡೆಯಲು ಕಷ್ಟವಾಗುತ್ತಿತ್ತು.

ಇನ್ನು ಮನೆಯಿಂದ ಅಗತ್ಯ ಕೆಲಸಗಳಿಗೆಂದು ಪೇಟೆಗೆ ಹೋಗಬೇಕಾದರೆ ಆಟೋನೇ ಗತಿ. ಕಾಯುವಿಕೆಯ ಅನಿವಾರ್ಯ ಕಾಯಕದಿಂದ ಮನಸ್ಸು ರೋಸಿ ಹೋಗಿತ್ತು. ನನಗೆ ಮೂವರು ಮಕ್ಕಳು. ಅವರ ಜೊತೆ ನಿಂತು ಸರ್ವಿಸ್‌ ಆಟೋಕ್ಕೆ ಕೈ ತೋರಿಸಿದರೆ ಕೆಲವರು ನಿಲ್ಲಿಸದೇ ಹೋಗುತ್ತಿದ್ದರು. ಮಕ್ಕಳು ಕುಳಿತರೆ ಅವರಿಗೆ ಸೀಟು ವೇÓr… ಆಗುತ್ತದೆಂಬುದೇ ಅದಕ್ಕೆ ಕಾರಣ. ತಡವಾಗಿ ಶಾಲೆಗೆ ಹೊರಟಾಗ ಸುಲಭವಾಗಿ ದೊರೆಯದ ಆಟೋದಿಂದಾಗಿ ಮತ್ತಷ್ಟು ತಡವಾಗುತ್ತಿತ್ತು.

ಹೀಗಿರಲು ನಾನು ಸ್ಕೂಟರ್‌ ಕಲಿಕೆಯ ಪ್ರಸ್ತಾಪ ಎತ್ತಿದೆ. ಗಂಡನ ಕಡೆಯಿಂದ ಗ್ರೀನ್‌ ಸಿಗ್ನಲ್‌ ದೊರೆತದ್ದೇ, ಸ್ಕೂಟರ್‌ ರೈಡಿಂಗ್‌ ಕ್ಲಾಸ್‌ ಸೇರಿದೆ. ಸ್ವಂತ ಸ್ಕೂಟರ್‌ ಖರೀದಿಸಿಯೂ ಆಯ್ತು. ಕಲಿತೂ ಆಯ್ತು. ಕೆಲವು ದಿನ ನಮ್ಮ ಮನೆ ಸಮೀಪದ ಮೈದಾನದಲ್ಲಿ ಸ್ಕೂಟರಾಭ್ಯಾಸ ಮಾಡುತ್ತಿದ್ದೆ. ಕಲಿಕೆ ಮುಗಿಯಿತೆಂಬ ಗತ್ತಿನಲ್ಲಿ ಒಂದು ದಿನ ಮುಖ್ಯರಸ್ತೆಯಲ್ಲಿ ಯು ಟರ್ನ್ ತೆಗೆದು ಆಚೆ ಬದಿಗೆ ಹೋದೆ. ಅಲ್ಲಿ ಸ್ವಲ್ಪ ಇಳಿಜಾರಿತ್ತು. ನನಗರಿವಿಲ್ಲದೇ ವೇಗ ಜಾಸ್ತಿಯಾಗಿತ್ತು. ಭಯದಿಂದ ಒಮ್ಮೆಲೇ ಬ್ರೇಕ್‌ ಹಿಡಿದೆ. ಬ್ಯಾಲೆನ್ಸ್ ತಪ್ಪಿದಂತಾಗಿ ಸ್ಕೂಟರ್‌ ಅತ್ತಿತ್ತ ಓಲಾಡುತ್ತ ಮುಂದೆ ಚಲಿಸಿ ಪಲ್ಟಿ ಹೊಡೆಯಿತು. ನನ್ನ ಕೈಗೆ ಸ್ಕೂಟರ್‌ ಕೊಟ್ಟು, ಸರ್ಕಲ್‌ ಕಡೆ ನಡೆದು ಹೋಗಿದ್ದ ಯಜಮಾನರಿಗೆ ಯಾರೋ ಫೋನ್‌ ಮಾಡಿ ವಿಷಯ ತಿಳಿಸಿದರಂತೆ. ಅವರು ಬರುವಾಗ, ನನ್ನ ಕೈಕಾಲುಗಳಲ್ಲಿ ಅಲ್ಲಲ್ಲಿ ಚರ್ಮ ಕಿತ್ತು ಹೋಗಿ ರಕ್ತ ಸೋರುತ್ತಿತ್ತು. ದೇವರ ದಯದಿಂದ ಹೆಚ್ಚೇನೂ ಪೆಟ್ಟಾಗದೆ ಬೇಗ ಗುಣಮುಖಳಾದೆ. ಮತ್ತೆ ಸ್ಕೂಟರಲ್ಲಿ ಶಾಲೆಗೆ ಹೋಗತೊಡಗಿದೆ.

ಸ್ಕೂಟರ್‌ ಬಂದ ನಂತರ ನನಗೆ ಹೊಸ ರೆಕ್ಕೆಗಳು ಮೂಡಿದಂತಾಗಿದೆ. ವಾಹನಕ್ಕಾಗಿ ಕಾಯಬೇಕಿಲ್ಲ. ಇಕ್ಕಟ್ಟಿನಲ್ಲಿ ಕುಳಿತು ಪ್ರಯಾಣಿಸಬೇಕಾಗಿಲ್ಲ. ಅಸಭ್ಯ ವರ್ತನೆ ತೋರುವ ಸಹಪ್ರಯಾಣಿಕರ ಬಗ್ಗೆ ಭಯವಿಲ್ಲ. ನನ್ನದೇ ಸ್ವಾತಂತ್ರ್ಯದ ಸ್ವರ್ಗದಲ್ಲಿ ವಿಹರಿಸುವ ಖುಷಿ ನನ್ನದಾಯಿತು. ಒಂದು ನಿಮಿಷ ಅಥವಾ ಸೆಕೆಂಡಿನ ವ್ಯತ್ಯಾಸದಲ್ಲಿ ಬಸ್ಸು ತಪ್ಪುವಾಗ ಆಗುವ ಯಾತನೆಯನ್ನೂ ಅನುಭವಿಸಬೇಕಿಲ್ಲ. ಚಿಲ್ಲರೆ ಹಣವನ್ನು ಪರ್ಸ್‌ನಲ್ಲಿಟ್ಟುಕೊಳ್ಳಬೇಕಿಲ್ಲ. ನಾನು ಹೊರಗೆ ಹೊರಡುವ ಸಮಯವನ್ನು ಸಾರ್ವಜನಿಕ ವಾಹನ ನಿರ್ಧರಿಸದೇ ನಾನೇ ನಿರ್ಧರಿಸುವ ಸುಖವೇನು ಸಾಮಾನ್ಯದ್ದೆ? ಸುತ್ತಮುತ್ತಲಿನ ಸುಂದರ ಪರಿಸರ ವೀಕ್ಷಿಸುತ್ತ, ಸ್ವತ್ಛ ಗಾಳಿ ಸೇವಿಸುತ್ತ ಹಳ್ಳಿಶಾಲೆಯತ್ತ ಪ್ರಯಾಣಿಸುವಾಗ ನನ್ನ ಸ್ವಾತಂತ್ರ್ಯಕ್ಕೂ ಸಂತೋಷಕ್ಕೂ ಆಕಾಶವೊಂದೇ ಎಲ್ಲೆ ಎನಿಸುತ್ತದೆ. ಮಕ್ಕಳನ್ನು ಡ್ರಾಯಿಂಗ್‌, ಸಂಗೀತ, ನೃತ್ಯ ಮುಂತಾದ ತರಗತಿಗಳಿಗೆ ಸೇರಿಸಲು ನನ್ನ ವಾಹನದ ಸಹಕಾರದಿಂದಲೇ ಸಾಧ್ಯವಾಯಿತೆನ್ನಬಹುದು. ನೃತ್ಯ, ಸಂಗೀತ ಮುಂತಾದ ತರಗತಿಗಳಿಗೆ ಮಕ್ಕಳನ್ನು ಕರೆ ತರುವವರು ಹೆಚ್ಚಾಗಿ ಅಮ್ಮಂದಿರೇ. ಅದೂ ಸ್ಕೂಟರಿನಲ್ಲಿಯೇ ಅನ್ನೋದನ್ನು ಗಮನಿಸಿದ್ದೇನೆ.

ವಾಹನ ಸೌಕರ್ಯದ ಕೊರತೆಯಿರುವ ಕಡೆಗಳಲ್ಲಂತೂ ಮಹಿಳೆಯರಿಗೆ ಸ್ಕೂಟರ್‌ ಅನಿವಾರ್ಯ ಎನಿಸಿಬಿಟ್ಟಿದೆ. ಆದರೆ, ಕೆಲವರು ಗಂಡಸರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಮೊಬೈಲ್‌ನಲ್ಲಿ ಮಾತನಾಡುತ್ತ, ರಸ್ತೆ ನಿಯಮಗಳನ್ನು ಉಲ್ಲಂ ಸುತ್ತಾ ಸ್ಕೂಟರ್‌ ಚಲಾಯಿಸುತ್ತಾರೆ. ಹೆಲ್ಮೆಟ್‌ ಧರಿಸದೇ ಹೋಗುತ್ತಾರೆ. ಹಾಗೆಲ್ಲಾ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸುರಕ್ಷತೆಯ ನಿಯಮಗಳನ್ನು ಕಡೆಗಣಿಸುವುದು ಸಾಹಸವಲ್ಲ, ಅಪರಾಧ. ಹಿತಮಿತವಾದ ವೇಗದಲ್ಲಿ ರಸ್ತೆ ನಿಯಮಗಳನ್ನು ಪಾಲಿಸಿ ಚಾಲನೆ ಮಾಡುವುದು ಅತ್ಯಗತ್ಯ. ಇನ್ನು ಸೀರೆ ಅಥವಾ ಚೂಡಿದಾರ್‌ ಧರಿಸಿ ಸ್ಕೂಟರ್‌ ಓಡಿಸುವವರು ಸೀರೆಯ ಸೆರಗು ಅಥವಾ ಚೂಡಿದಾರದ ಶಾಲನ್ನು ಗಾಳಿಯಲ್ಲಿ ಹಾರದಂತೆ ಕಟ್ಟಿಕೊಳ್ಳುವುದು ಅಗತ್ಯ. ಹಾಗೆಯೇ ಸೀರೆ ಕಾಲಿಗೆ ತೊಡರಿ ತೊಂದರೆಯಾಗದಂತೆ ಎತ್ತಿ ಕಟ್ಟುವುದೂ ಅಗತ್ಯ. ಇಲ್ಲದಿದ್ದರೆ ಗಾಡಿಯ ಚಕ್ರಕ್ಕೆ ಬಟ್ಟೆ ಸಿಲುಕಿ ನೆಲಕ್ಕೆಸೆಯಲ್ಪಡುವ ಅಥವಾ ಶಾಲು ಕುತ್ತಿಗೆಗೆ ಬಿಗಿಯಲ್ಪಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ವಾಹನ ಚಾಲನೆಯಲ್ಲಿ ಮಹಿಳೆಯರು ಅಗತ್ಯ ಸುರಕ್ಷಾ ಕ್ರಮಗಳನ್ನು ವಹಿಸಬೇಕು. ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಜಾಕೆಟ್‌ ಧರಿಸುವುದೂ ಉತ್ತಮ.

ಎಲ್ಲಿಗಾದರೂ ಹೋಗಬೇಕಾದರೆ ಗಂಡನ ಬಳಿ ಗೋಗರೆಯುವ ಕಷ್ಟವಾಗಲಿ, ಜನರು ತುಂಬಿ ತುಳುಕುವ ವಾಹನದಲ್ಲಿ ಉಸಿರುಗಟ್ಟಿ ಪ್ರಯಾಣಿಸುವ ಕಷ್ಟವಾಗಲೀ ಇಲ್ಲದಂತೆ ನನ್ನಂಥ ಮಹಿಳೆಯರನ್ನು ಕಾಪಾಡುವ ಸ್ಕೂಟರ್‌ ನಮಗೆ ಕೊಟ್ಟ ಸ್ವಾತಂತ್ರ್ಯ ಎಲ್ಲಕ್ಕಿಂತ ದೊಡ್ಡದು!

ಜೆಸ್ಸಿ ಪಿ. ವಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮನೆಯಲ್ಲಿ ಕಡು ಬಡತನ. ಐದು ಜನ ಹೆಣ್ಣು ಮಕ್ಕಳನ್ನು ಸಾಕಲು ಹೆತ್ತವರು ಪರದಾಡಬೇಕಾದ ಪರಿಸ್ಥಿತಿ. ಚೆನ್ನಾಗಿ ಓದಿ, ಜಿಲ್ಲಾಧಿಕಾರಿ ಆಗುವ ಕನಸು ಕಂಡಿದ್ದ ಹಿರಿಯ...

  • ಯಥೇಚ್ಛ ಬೆಳೆಯನ್ನು ಕೊಟ್ಟ ಭೂಮಿತಾಯಿಗೆ, ಬೆಳೆ ತೆಗೆಯಲು ಸಹಕರಿಸಿದ ಜಾನುವಾರುಗಳಿಗೆ ಕೃತಜ್ಞತೆ ಹೇಳಲೆಂದು ಆಚರಿಸುವ ಹಬ್ಬ-ಸಂಕ್ರಾಂತಿ. "ಎಳ್ಳು-ಬೆಲ್ಲ ತಿಂದು...

  • ಅವರು ಎಲ್ಲರ ಮುಂದೆ ಅವಮಾನ ಮಾಡಲು ಬಂದಾಗ, ಅಮ್ಮ -"ನಿಮ್ಮ ವಸ್ತುವನ್ನು ನಾವು ಕದ್ದಿಲ್ಲ. ಅನುಮಾನವಿದ್ದರೆ ನೀವೇ ಮನೆಯೊಳಗೆ ಬಂದು ಹುಡುಕಿ' ಅಂತಷ್ಟೇ ಹೇಳಿ, ಬಾಗಿಲಿನಿಂದ...

  • "ಗಂಡಿನವರು ಕುಳಿತಿದ್ದಾರೆ ಬಾರೇ...'ಎಂದು ಎಷ್ಟು ಹೇಳಿದರೂ ಕೇಳದೆ, ಸೊಂಟದ ಮೇಲೊಂದು, ತಲೆಯ ಮೇಲೊಂದು ಹಿತ್ತಾಳೆ ಬಿಂದಿಗೆಗಳನ್ನು ಇಟ್ಟುಕೊಂಡು ಅಕ್ಕ, ನೀರು ತರಲು...

  • ಸೀರಿಯಲ್‌ಗ‌ಳಿಗೂ ಹೆಣ್ಣುಮಕ್ಕಳಿಗೂ ಬಿಡದ ನಂಟು. ಅದೆಷ್ಟೋ ಮಂದಿ, ಸೀರಿಯಲ್‌ನ ಪಾತ್ರಗಳಲ್ಲಿ ತಮ್ಮನ್ನೇ ಕಾಣುವುದುಂಟು! ಒಂದು ಧಾರಾವಾಹಿ ಮುಗಿದರೆ, "ಅಯ್ಯೋ, ಮುಗಿದೇ...

ಹೊಸ ಸೇರ್ಪಡೆ