ಡೋಂಟ್‌ ಶೇರ್‌ ಇಟ್‌

ಶ್ಯ್, ಮತ್ತೂ ಬ್ಬರ ವಸ್ತು ಮುಟ್ಬೆಡಿ..!

Team Udayavani, Jul 10, 2019, 11:00 AM IST

ಬೇರೆಯವರ ವಸ್ತುವನ್ನು ಬಳ ಸಬಾರದು ಎಂದು ಹೇಳಿಕೊಡುವ ನೀತಿಪಾಠ ಒಳ್ಳೆಯದೇ. ಆರೋಗ್ಯ, ಸ್ವಚ್ಛತೆಯ ವಿಷಯದಲ್ಲಿ ಇದು ಅಗತ್ಯ ಕೂಡಾ. ಆದರೆ, ಕುಟುಂಬದಲ್ಲಿ, ಮನೆಯೊಳಗೆ ಈ ರೀತಿಯ ಪ್ರತ್ಯೇಕತೆ ಎಷ್ಟು ಸರಿ?

ಶಿಶುವಿಹಾರದಿಂದ ಬಂದ ಮೂರೂವರೆ ವರ್ಷದ ಮಗುವಿನ ಕೈಕಾಲು ತೊಳೆಸಿ, ಅಜ್ಜನ ಬಳಿ ಹೋಗಿ ಒರೆಸಲು ಹೇಳು ಅಂತ ಕಳುಹಿಸಿದೆ. ಕಾಲು ಒರೆಸಲು ಬಂದ ಅಜ್ಜನ ಟವೆಲ್‌ ಅನ್ನು ದೂಡಿ ಒಳಗೋಡಿದ ಅವಳು ತನ್ನ ಟವೆಲನ್ನು ಹಿಡಿದು ಬಂದು, “ಅಜ್ಜಾ, ಇದರಲ್ಲಿ ಒರೆಸಿ’ ಅಂತ ಹೇಳಿದಳು. ಅವಳ ಮಾತುಗಳಿಂದ ಗಲಿಬಿಲಿಯಾದರೂ, ಪುಟ್ಟಮಗು ತಾನೇ ಅಂತ ಸುಮ್ಮನಾದೆವು.

ಕೆಲವಾರು ದಿನಗಳಲ್ಲೇ ಮತ್ತೂಂದು ಘಟನೆ ನಡೆಯಿತು. ಎಲ್ಲರೂ ಬಳಸುವ ಬಾತ್‌ರೂಮ್‌ನ ರಿಪೇರಿ ನಡೆಯುತ್ತಿತ್ತು. ಗಾರೆ ಕೆಲಸದವನು, “ನಾಳೆ ಬೆಳಗಿನವರೆಗೆ ನೀರು ಸುರಿಯಬೇಡಿ’ ಎಂದು ಹೇಳಿ ಹೋದ. ನಾವು ಇನ್ನೊಂದು ರೂಮಿನ ಬಾತ್‌ರೂಮನ್ನು ಬಳಸಲು ಹೋದಾಗ ಮೊಮ್ಮಗಳು ಅಡ್ಡ ನಿಂತು, “ಅಜ್ಜಿ, ಇದಕ್ಕೆ ನೀವು ಬರಬೇಡಿ. ಅವರವರದನ್ನು ಅವರೇ ಬಳಸಬೇಕು’ ಎಂದಾಗ ನಾವು ದಿಗ್ಭ್ರಾಂತರಾದೆವು.

ನಂತರವೂ ಇದೇ ರೀತಿಯ ಹಲವಾರು ಘಟನೆಗಳು ನಡೆದವು. ಅವಳ ಹಾಸಿಗೆ, ಹೊದಿಕೆ, ದಿಂಬುಗಳನ್ನು ಯಾರೂ ಮುಟ್ಟಬಾರದು. ಬಾಚಣಿಗೆಯನ್ನು ತೆಗೆದುಕೊಳ್ಳಬಾರದು. ಆಟಿಕೆಗಳನ್ನಂತೂ ಮುಟ್ಟಲೇ ಬಿಡುತ್ತಿರಲಿಲ್ಲ. ಇಷ್ಟೆಲ್ಲಾ ಯಾಕೆ, ಅವಳು ಕುಳಿತುಕೊಳ್ಳುವ ಕುರ್ಚಿಯಲ್ಲೂ ಬೇರೆಯವರಿಗೆ ಕೂರಲು ಬಿಡುತ್ತಿರಲಿಲ್ಲ. ಅವಳ ಸ್ವಭಾವದಲ್ಲಿ ಸ್ವಾರ್ಥ ಹುಟ್ಟಿದೆಯಾ ಎಂದು ಅನುಮಾನ ಬಂತು. ಇಷ್ಟು ಪುಟ್ಟ ವಯಸ್ಸಿನಲ್ಲೇ ಹೀಗಾದರೆ ಮುಂದೆ ಏನು ಕಥೆ ಅಂತ ಚಿಂತೆಯಾಯ್ತು.

ನಾವ್ಯಾಕೆ ಹಾಗಿರಲಿಲ್ಲ?
ನಾವೆಲ್ಲಾ ಸಣ್ಣವರಿದ್ದಾಗ ಹೀಗೆ ವರ್ತಿಸಲು ಅವಕಾಶವೇ ಇರಲಿಲ್ಲ. ನಮ್ಮ ತಂದೆ-ತಾಯಿಗೆ ನಾವು ಏಳು ಜನ ಮಕ್ಕಳು. ಹೊಟ್ಟೆ ಬಟ್ಟೆಗೇ ಕಷ್ಟವಿದ್ದಾಗ ಐಷಾರಾಮಿ ಸೌಲಭ್ಯವೆಲ್ಲಿಂದ ಬಂತು? ನಮ್ಮ ಮನೆ ಅಂದ್ರೆ ಒಂದು ಹಾಲ್‌, ಒಂದು ರೂಮು, ಅಡುಗೆಮನೆ, ಬಚ್ಚಲುಮನೆ ಅಷ್ಟೇ… ಹಾಲ್‌ನಲ್ಲೇ ನಮ್ಮೆಲ್ಲಾ ಕೆಲಸಗಳೂ ಆಗಬೇಕಿತ್ತು. ರಾತ್ರಿ ಉದ್ದಕ್ಕೆ ಹಾಸಿಗೆ ಹಾಸಿಕೊಂಡು ಎಲ್ಲ ಮಕ್ಕಳೂ ಮಲಗುತ್ತಿದ್ದೆವು. ಓದುವ ಕೋಣೆಯೂ ಅದೇ. ಯಾರಾದರೂ ಜೋರಾಗಿ ಓದುತ್ತಿದ್ದರೆ, “ಏಯ್‌ ಮನಸ್ಸಿನಲ್ಲಿ ಓದಿಕೊಳ್ಳೋ’ ಎಂಬ ಸಣ್ಣ ಪುಟ್ಟ ಜಗಳಗಳು ನಡೆಯುತ್ತಿದ್ದವು.

ಒಂದೇ ರೂಮು, ಒಂದೇ ಬಚ್ಚಲು
ಆಗೆಲ್ಲಾ ಮಕ್ಕಳಿಗೆ ಪ್ರತ್ಯೇಕ ಕೋಣೆಗಳ ವ್ಯವಸ್ಥೆಯನ್ನು ಊಹಿಸುವುದೂ ಅಸಾಧ್ಯ. ಹೆಣ್ಣುಮಕ್ಕಳು ಮಾತ್ರ ಕೋಣೆಗೆ ಹೋಗಿ ಬಟ್ಟೆ ಬದಲಾಯಿಸುತ್ತಿದ್ದೆವು. ಅಲ್ಲೇ ಹಾಲ್‌ನಲ್ಲಿ ಕಿಟಕಿಯ ಹತ್ತಿರ ಒಂದು ಪೌಡರ್‌ ಡಬ್ಬಿ, ಒಂದು ಬಾಚಣಿಗೆ. ಎಲ್ಲರೂ ಹೋಗಿ ಅದರಲ್ಲೇ ಬಾಚಿಕೊಳ್ಳುತ್ತಿದ್ದೆವು. ಎಲ್ಲರಿಗೂ ಒಂದೇ ಪೌಡರ್‌. ಬಚ್ಚಲು ಮನೆಯ ಡಬ್ಬಿಯೊಂದರಲ್ಲಿ ಇದ್ದಿಲನ್ನು ಪುಡಿಮಾಡಿ ಉಪ್ಪು ಸೇರಿಸಿ ಇಟ್ಟಿರುತ್ತಿದ್ದರು. ಅದೇ ನಮ್ಮ ಟೂತ್‌ಪೌಡರ್‌. ಟೂತ್‌ ಪೇಸ್ಟ್‌, ಸೋಪುಗಳು ಬಂದ ಮೇಲೆ ಎಲ್ಲರಿಗೂ ಒಂದೇ ಸೋಪು, ಒಂದೇ ಪೇಸ್ಟ್‌. ಯಾರಿಗಾದರೂ ಅಲರ್ಜಿಯಾದರೆ ಕಡಲೆಹಿಟ್ಟು, ಹೆಸರು ಹಿಟ್ಟಿನಲ್ಲಿ ಸ್ನಾನ. ಈಗಿನಂತೆ ವಿಧವಿಧದ ಸೋಪು, ಎಣ್ಣೆ, ಕ್ರೀಮ್‌ಗಳನ್ನು ನಾವು ಕಂಡಿರಲೇಇಲ್ಲ.

ಎಲ್ಲರಿಗೂ ಸೇರಿ ಎರಡು ಮೂರು ಟವೆಲ್‌ಗ‌ಳು. ಈಗಿನ ಮಕ್ಕಳಿಗಿರುವಂತೆ ತಲಾ ಒಂದೊಂದು ಟವೆಲ್‌ ಅನ್ನು ಪೂರೈಸಲು ಸಾಧ್ಯವಾಗುತ್ತಿತ್ತೇ? ಒಗೆಯಲು ವಾಷಿಂಗ್‌ಮಷಿನ್‌ಗಳಿದ್ದವೆ? ಹೀಗಾಗಿ, ನಮ್ಮಲ್ಲಿ ಬೇರೂರಿದ್ದ ಮುಖ್ಯ ಸಂಸ್ಕಾರವೆಂದರೆ ಹಂಚಿಕೊಳ್ಳುವುದು. ಏನೇ ಇದ್ದರೂ ಅದರಲ್ಲಿ ಎಲ್ಲರಿಗೂ ಸಮಪಾಲಿರುತಿತ್ತು. ಹಬ್ಬ-ಹರಿದಿನಗಳಲ್ಲಿ ಬೇರೆಯವರ ಮನೆಗೆ ಅರಿಶಿನ ಕುಂಕುಮಕ್ಕೆ ಹೋದಾಗ ಸಿಗುತ್ತಿದ್ದ ಕೋಸಂಬರಿ ಉಸಲಿಯನ್ನೂ ನಾವು ಹಂಚಿಕೊಳ್ಳುತ್ತಿದ್ದೆವು. ಅದನ್ನು ಸರಿಯಾಗಿ ತಿಂದರೆ ಒಬ್ಬರಿಗೂ ಸಾಕಾಗುತ್ತಿರಲಿಲ್ಲ. ಆದರೆ, ಅದನ್ನೇ ಎಲ್ಲರಿಗೂ ಸಮನಾಗಿ ಹಂಚಿ, ಉಳಿದುದನ್ನು ತಿನ್ನುತ್ತಿದ್ದೆವು. ಹೊರಗಡೆ ಹೋಗಿರುತ್ತಿದ್ದ ಅಣ್ಣ ಬರುವವರೆಗೂ ಅವನ ಪಾಲು ಅವನಿಗಾಗಿ ಕಾದಿರುತ್ತಿತ್ತು.

ಮನೆಗೊಂದೇ ಮಗು
ನಮ್ಮ ಬಾಲ್ಯಕ್ಕೂ, ಈಗಿನ ಮಕ್ಕಳಿಗೂ ಸ್ವಭಾವದಲ್ಲಿ ಅಜಗಜಾಂತರ. ಏಕೆ ಎಂಬುದಕ್ಕೆ ಕಾರಣ ಕಣ್ಮುಂದೆಯೇ ಇದೆ. ಅಂದು ನಾವು ಏಳು ಮಕ್ಕಳು ಒಟ್ಟಾಗಿ ಬೆಳೆದದ್ದು. ಇಂದು ಮನೆಗೆ ಒಂದೇ ಮಗು. ಮನೆಗೆ ಏನೇ ತಂದರೂ ಅವರೊಬ್ಬರಿಗೆ ಮಾತ್ರ. ಯಾರಿಗೂ ಹಂಚುವ ಗೋಜೇ ಇಲ್ಲ. ಹೀಗಿರುವಾಗ ಅವರಲ್ಲಿ ಸ್ವಾರ್ಥ, ಕೊಳ್ಳುಬಾಕತನ ಹುಟ್ಟದಿರುತ್ತದೆಯೇ? ಕೇಳಿದ್ದೆಲ್ಲ ಕ್ಷಣ ಮಾತ್ರದಲ್ಲಿ ಕೈಗೆಟಕುತ್ತದೆ. ಸಿಗದಿದ್ದರೆ ಅತ್ತು ಕರೆದಾದರೂ ಪಡೆದುಕೊಳ್ಳುವ ಉಪಾಯವೂ ಗೊತ್ತು. ಹೀಗಾಗಿ, ಅವರಲ್ಲಿ ಹಠಮಾರಿತನವೂ ಬೆಳೆದಿರುತ್ತದೆ. ಅದಕ್ಕಾಗಿಯೇ ಹಿರಿಯರು- “ಒಂದು ಮಗು ಮಗುವಲ್ಲ, ಒಂದು ಕಣ್ಣು ಕಣ್ಣಲ್ಲ’ ಎಂದು ಹೇಳುತ್ತಿದ್ದರು. ಒಬ್ಬಂಟಿಯಾಗಿ ಬೆಳೆದ ಮಗುವಿಗೂ, ಎರಡುಮೂರು ಮಕ್ಕಳ ಜೊತೆ ಬೆಳೆದ ಮಗುವಿನ ಸ್ವಭಾವಕ್ಕೂ ಅಪಾರ ವ್ಯತ್ಯಾಸವಿದೆ.

ಮಕ್ಕಳಿಗೆ ಸಂಸ್ಕಾರ ಪಾಠ
ಬೇರೆಯವರ ವಸ್ತುವನ್ನು ಬಳಸಬಾರದು ಎಂದು ಹೇಳಿಕೊಡುವ ನೀತಿಪಾಠ ಒಳ್ಳೆಯದೇ. ಆರೋಗ್ಯ, ಸ್ವತ್ಛತೆಯ ವಿಷಯದಲ್ಲಿ ಇದು ಅಗತ್ಯ ಕೂಡಾ. ಆದರೆ, ಕುಟುಂಬದಲ್ಲಿ, ಮನೆಯೊಳಗೆ ಈ ರೀತಿಯ ಪ್ರತ್ಯೇಕತೆ ಎಷ್ಟು ಸರಿ? ಈ ಬಗ್ಗೆ ಅಮ್ಮಂದಿರು ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮುಂದೆ ಮಕ್ಕಳಿಗೆ ಎಲ್ಲರೊಂದಿಗೆ ಬೆರೆಯಲು ಕಷ್ಟವಾಗಬಹುದು.

ಇಂಥ ಸ್ವಭಾವದ ಮಕ್ಕಳು ದೊಡ್ಡವರಾದ ಮೇಲೆ ಮನೆಯಿಂದ ಹೊರಗೆ ಎಲ್ಲಿಗೇ ಹೋದರೂ, ಹೊಂದಿಕೊಳ್ಳಲು ಸಮಸ್ಯೆಯಾಗಬಹುದು. ಒಂದುವೇಳೆ, ಯಾವುದಾದರೂ ವಸ್ತುವನ್ನು ಮರೆತುಹೋಗಿದ್ದರೆ ಬೇರೆಯವರದ್ದನ್ನು ಉಪಯೋಗಿಸಲು ಇಷ್ಟವಿಲ್ಲದೆ ಒದ್ದಾಡುತ್ತಾರೆ, ಪರದಾಡುತ್ತಾರೆ. ಯಾವುದೇ ವಿಷಯವಾದರೂ ಸರಿ ಎಷ್ಟು ಅನುಕೂಲವಿರುತ್ತದೋ ಅಷ್ಟೇ ಅನನುಕೂಲವೂ ಇರುತ್ತದೆ. ಅತಿಯಾದರೆ ಅಮೃತವೂ ವಿಷವೇ. ಆದ ಕಾರಣ ಮಕ್ಕಳಿಗೆ ತಿಳಿಹೇಳುವಾಗ, ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವ ಸ್ವಭಾವವನ್ನೂ, ಸಂಸ್ಕಾರವನ್ನೂ ಕಲಿಸಿಕೊಡಬೇಕಾದದ್ದು ತಾಯಂದಿರ ಆದ್ಯ ಕರ್ತವ್ಯ.

– ಪುಷ್ಪ ಎನ್‌. ಕೆ. ರಾವ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ನೆಲ್ಲಿಕಾಯಿಯ ರುಚಿಗೆ ಮಾರು ಹೋಗದವರಿಲ್ಲ. ವಿಟಮಿನ್‌ ಸಿ ಅನ್ನು ಹೇರಳವಾಗಿ ಹೊಂದಿರುವ, ಹುಳಿ, ಕಹಿ ರುಚಿಯ ನೆಲ್ಲಿಕಾಯಿಯನ್ನು ಯಾವ ರೂಪದಲ್ಲಿ ಸೇವಿಸಿದರೂ ಆರೋಗ್ಯಕ್ಕೆ...

  • ಹೆದರಿಕೆಗೆ ಕಾರಣಗಳೇ ಇರುವುದಿಲ್ಲ. ಹಾಗಿದ್ದರೂ,ಹೆಣ್ಣುಮಕ್ಕಳಿಗೆ ಕೆಲವೊಮ್ಮೆ ಭಯವಾಗುತ್ತದೆ. ಗಂಡನಿಗೆ ಆ್ಯಕ್ಸಿಡೆಂಟ್‌ ಆಗಿಬಿಟ್ಟರೆ, ಮಕ್ಕಳಿಗೆ ಆರೋಗ್ಯ...

  • "ಅವನು ಬಿಡ್ರೀ,ಕಲ್ಲು ಬಂಡೆಯಂಥ ಆಸಾಮಿ. ಯುದ್ಧ ಬೇಕಾದ್ರೂ ಗೆದ್ಕೊಂಡು ಬರ್ತಾನೆ. ಅವನ ಬಗ್ಗೆ ಯಾವುದೇ ಯೋಚನೆ ಇಲ್ಲ. ಮಗಳ ಕಥೆ ಹೇಳಿ, ಇವಳದೇ ಚಿಂತೆ ನನಗೆ...' ಮಕ್ಕಳನ್ನು...

  • ಕೈಯಲ್ಲೊಂದು ಕೆಲಸ, ಕೈ ತುಂಬಾ ಸಂಬಳ ಪಡೆವ ಜನ ಪಾರ್ಟ್‌ ಟೈಮ್‌ ಜಾಬ್‌ ಮಾಡುವುದು ಅಪರೂಪ. ಹೇಗೂ ವಾರವಿಡೀ ದುಡಿದಿರುತ್ತೇವೆ. ರಜೆ ಸಿಕ್ಕಾಗ ಆರಾಮಾಗಿರಬೇಕು ಅಂತ...

ಹೊಸ ಸೇರ್ಪಡೆ

  • ಅಷ್ಟೂ ಬುದ್ಧಿ ಬೇಡ್ವೇನ್ರಿ ನಿಮ್ಗೆ? ಅವನು ಬೇಡ ಬೇಡ ಅಂದ್ರೂ ಒತ್ತಾಯ ಮಾಡಿ ತಿನ್ನಿಸಿದ್ರಂತಲ್ಲ; ಈಗ ಅವನಿಗೆ ಹೊಟ್ಟೆ ಅಪ್‌ಸೆಟ್‌ ಆದ್ರೆ ಏನ್ರೀ ಮಾಡೋದು? ಇವತ್ತು...

  • ಶಿಕಾರಿ ಎಂದೊಡನೆ ನೆನಪಾಗುವುದು ಯಾವುದೋ ಪ್ರಾಣಿ ಪಕ್ಷಿಯ ಬೇಟೆ. ಆದರೆ ಈ ಪುಸ್ತಕದಲ್ಲಿ ಇದು ಒಂದು ಪ್ರಾಣಿ ಪಕ್ಷಿಯ ಬೇಟೆಯಾಗಿರದೇ ಮನುಷ್ಯನಿಂದ ಮನುಷ್ಯನ ಬೇಟೆಯನ್ನು...

  • ಬೆಂಗಳೂರು: ದೇಶದ ಅತಿ ದೊಡ್ಡ ತಂತ್ರಜ್ಞಾನ ಮೇಳ "ಬೆಂಗಳೂರು ಟೆಕ್‌ ಸಮಿಟ್‌'ಗೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 18ರಿಂದ 20ರವರೆಗೆ ಅರಮನೆ ಆವರಣದಲ್ಲಿ ನಡೆಯಲಿರುವ...

  • ಬೆಂಗಳೂರು/ಟಿ.ದಾಸರಹಳ್ಳಿ: ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಶುದ್ಧ ಕುಡಿವ ನೀರು ಪೂರೈಕೆ ಘಟಕ ಮಾಲೀಕನ ಪುತ್ರನ ಅಪಹರಣಕ್ಕೆ ವಿಫ‌ಲ ಯತ್ನ ನಡೆಸಿ, ಅವರ ಮನೆ ಮುಂದೆ ನಿಂತಿದ್ದ...

  • ಬೆಂಗಳೂರು: ಶಬರಿಮಲೆ ಯಾತ್ರೆ ಸಂಬಂಧ ರಾಜ್ಯದ ಭಕ್ತರು ಸಜ್ಜಾಗುತ್ತಿದ್ದು, ಕಳೆದ ವರ್ಷ ಇದ್ದ ಆತಂಕ ನಿವಾರಿಸಿ ರಾಜ್ಯದ ಯಾತ್ರಾರ್ಥಿಗಳಿಗೆ ಎಲ್ಲ ಸೌಕರ್ಯ ನೀಡಲು...