ಧರೆಗಿಳಿದ ಗ್ರೀಕ್‌ ದೇವತೆ


Team Udayavani, Jan 17, 2018, 2:16 PM IST

17-38.jpg

“ಲಂಬೂ’ಮಣಿಗಳಿಗೆ ಹೇಳಿ ಮಾಡಿಸಿದ ದಿರಿಸು, ಈ ಮ್ಯಾಕ್ಸಿ ಟ್ಯೂನಿಕ್‌. ಉದ್ದನೆಯ ಲಂಗದ ಜೊತೆ ಉದ್ದನೆಯ ಅಂಗಿ ಇದರ ಹೈಲೈಟ್‌. ಸಡಿಲವಾಗಿರುವ ಈ ಉಡುಪು, ಪ್ರಾಚೀನ ಗ್ರೀಸ್‌, ರೋಮ್‌ನಲ್ಲಿ ಬಳಕೆಯಲ್ಲಿತ್ತು. ಆ ಹಳೇ ಫಾಶನ್ನಿಗೆ, ಈಗ ಸ್ಲಿàವ್‌ ಜೋಡಣೆಯಾಗಿ ಮ್ಯಾಕ್ಸಿ ಟ್ಯೂನಿಕ್‌ ಆಗಿದೆ…

ಹಿಂದೆಲ್ಲ ಉದ್ದ ಲಂಗದ ಜೊತೆಗೆ ರವಿಕೆ ಅಥವಾ ಜಾಕೆಟ್‌ನಂಥ ಟಾಪ್‌ ತೊಡಲಾಗುತಿತ್ತು. ಆದರೀಗ ಉದ್ದನೆಯ ಲಂಗದ ಜೊತೆ ಉದ್ದನೆಯ ಅಂಗಿ ಧರಿಸುವುದೇ ಫ್ಯಾಷನ್‌. ಇಂಥ ಟಾಪ್‌ಗ್ಳಿಗೆ “ಮ್ಯಾಕ್ಸಿ ಟ್ಯೂನಿಕ್‌’ ಎಂದು ಕರೆಯಲಾಗುತ್ತದೆ. 

ಟ್ಯೂನಿಕ್‌ ಮ್ಯಾಜಿಕ್‌
ಈ ಟ್ಯೂನಿಕ್‌ ಜೊತೆ ಉದ್ದ ಲಂಗವಷ್ಟೇ ಅಲ್ಲ, ಲೆಗ್ಗಿಂಗ್ಸ್, ಪಲಾಝೊ, ಹ್ಯಾರೆಮ್‌ ಅಥವಾ ಜೀನ್ಸ್ ಪ್ಯಾಂಟ್‌ ಜೊತೆಗೂ ಧರಿಸಬಹುದಾಗಿದೆ. ಆದರೆ, ಸದ್ಯಕ್ಕೆ ಫ್ಯಾಷನ್‌ಪ್ರಿಯರ ಹಾಟ್‌ ಫೇವರಿಟ್‌ ಅಂದರೆ ಮ್ಯಾಕ್ಸಿ ಟ್ಯೂನಿಕ್‌ ಮತ್ತು ಉದ್ದ ಲಂಗ. ಸೀರೆಯ ಲಂಗದ (ಪೆಟಿಕೋಟ್‌) ಮೇಲೆ ಚೂಡಿದಾರದ ಟಾಪ್‌ ತೊಟ್ಟಂತೆ ಕಾಣುವ ಈ ದಿರಿಸು ವಿಭಿನ್ನವಾಗಿದ್ದರೂ ವಿಶಿಷ್ಟವಾಗಿದೆ.  

ಇತಿಹಾಸದಲ್ಲೂ ಟ್ಯೂನಿಕ್‌
ಸಡಿಲವಾಗಿರುವ ಈ ಉಡುಪು ಪ್ರಾಚೀನ ಗ್ರೀಸ್‌, ರೋಮ್‌ನಲ್ಲಿ ಬಳಕೆಯಲ್ಲಿತ್ತು. ಗ್ರೀಸ್‌ ದೇವತೆ ಅಥೆನ್ನಾಳ ವಿಗ್ರಹ ಇಲ್ಲವೇ ಕಲಾಕೃತಿ ನೋಡಿದರೆ, ಟ್ಯೂನಿಕ್‌ ಇನ್ನಷ್ಟು ಆಪ್ತವಾಗಿ ತೋರುತ್ತದೆ. ಆ ಕಾಲದಲ್ಲಿ ಈ ಉಡುಪಿಗೆ ತೋಳುಗಳು ಇರುತ್ತಿರಲಿಲ್ಲ (ಸ್ಲಿವ್‌ಲೆಸ್‌). ಮೊಣಕಾಲಿನವರೆಗೆ ಬರುತ್ತಿದ್ದ ಈ ಟ್ಯೂನಿಕ್‌ ಜೊತೆಗೆ ಆಗ ಪ್ಯಾಂಟ್‌ ಅಥವಾ ಲಂಗವನ್ನು ಯಾರೂ ಧರಿಸುತ್ತಿರಲಿಲ್ಲ. ಹೆಚ್ಚಾಗಿ ಉಣ್ಣೆ ಅಥವಾ ಲಿನಿನ್‌ನಿಂದ ಈ ಉಡುಪನ್ನು ಮಾಡಲಾಗುತ್ತಿತ್ತು. ಒಂದು ವೇಳೆ ತೋಳುಗಳು ಇರುತ್ತಿದ್ದರೂ, ಅವು ಸಡಿಲವಾಗಿದ್ದು, ಮೊಣಕೈ ಉದ್ದವಾಗಿರುತ್ತಿದ್ದವು. ಈ ಟ್ಯೂನಿಕ್‌ಗಳಲ್ಲಿ ಸೊಂಟದವರೆಗೆ ಸೈಡ್‌ ಸ್ಲಿಟ್‌ಗಳೂ ಇರುತ್ತಿದ್ದವು. ಗಾಳಿ ಓಡಾಡಲು ಮತ್ತು ನಡೆದಾಡುವಾಗ ಕೈ ಕಾಲಿಗೆ ಆರಾಮವಾಗಲು ಈ ಟ್ಯೂನಿಕ್‌ಗಳು ಸಡಿಲವಾಗಿ ರೂಪಿಸಲಾಗುತ್ತಿತ್ತು.

ಟು ಇನ್‌ ಒನ್‌
ಈ ಮ್ಯಾಕ್ಸಿ ಟ್ಯೂನಿಕ್‌ ಅದೆಷ್ಟು ವರ್ಸಟೈಲ್ ಎಂದರೆ ಇದನ್ನು ವೆಸ್ಟರ್ನ್ (ಪಾಶ್ಚಾತ್ಯ) ಉಡುಪಿನಂತೆಯೂ ತೊಡಬಹುದು. ಇಲ್ಲವೇ ಸಾಂಪ್ರದಾಯಿಕ (ಇಂಡಿಯನ್‌) ದಿರಿಸಿನಂತೆಯೂ ಧರಿಸಬಹುದು. ಹಾಗಾಗಿ, ಈ ಉಡುಗೆ, ಪಾರ್ಟಿಗೂ ಸೈ, ಪೂಜೆಗೂ ಜೈ! ಕ್ಯಾಶುವಲ… ಉಡುಪಿನಂತೆ ಶಾಪಿಂಗ್‌, ಔಟಿಂಗ್‌, ಸಿನಿಮಾ, ಕಾಲೇಜು ಅಥವಾ ಆಫೀಸ್‌ಗೆ ಹೋಗುವಾಗಲೂ ಧರಿಸಬಹುದು. ಇಲ್ಲವೇ ಚೂಡಿದಾರ ಅಥವಾ ಕುರ್ತಾದಂತೆಯೂ ಉಟ್ಟುಕೊಂಡು ಹಬ್ಬ, ಹರಿದಿನ, ಮದುವೆಯಂಥ ಕಾರ್ಯಕ್ರಮಗಳಿಗೆ ಹೋಗಬಹುದು.

ಸರಳ, ಸುಂದರ ದಿರಿಸು
ಈ ದಿರಿಸಿನ ಜೊತೆ ದುಪ್ಪಟ್ಟಾ, ಶಾಲು, ಬೆಲ್ಟ್, ಜಾಕೆಟ್‌, ಸ್ಕಾಫ್ì ಅಥವಾ ಇನ್ಯಾವುದೋ ಮೇಲುಡುಪು ಹಾಕಿಕೊಳ್ಳಬೇಕಾಗಿಲ್ಲ. ಟ್ಯೂನಿಕ್‌ಗೆ ಒಳ್ಳೆ ಫಿಟ್ಟಿಂಗ್‌ ಇದ್ದರೂ, ನೋಡಲು ಸಡಿಲ ಇರುವಂತೆ ಕಾಣುತ್ತದೆ. ಮೊಣಕಾಲಿಗಿಂತಲೂ ಉದ್ದ ಇರುವುದೇ ಇದಕ್ಕೆ ಕಾರಣ. ಮ್ಯಾಕ್ಸಿ ಟ್ಯೂನಿಕ್‌ನಲ್ಲಿ ಫ್ರಂಟ್‌ ಮತ್ತು ಸೈಡ್‌ ಸ್ಲಿಟ್‌ (ಸೀಳಿಕೆ) ಗಳಿದ್ದರೆ ಬಟ್ಟೆಗೆ ಹಲವು ಆಯಾಮ ಇದ್ದಂತೆ ಕಾಣುತ್ತದೆ! ಇನ್ನು ಟ್ಯೂನಿಕ್‌ ಕೂಡ ಸಡಿಲ, ಲಂಗವೂ ಸಡಿಲ. ಆದ್ದರಿಂದ ಓಡಾಡಲು ಆರಾಮದಾಯಕ. ಸ್ಲಿಟ್‌ ಮೂಲಕ ಕೆಳಗಿನ ಲಂಗದ ಬಣ್ಣ ಎದ್ದು ಕಾಣುವ ಕಾರಣ, ಟ್ಯೂನಿಕ್‌ ಮೇಲೆ ಅದೂ ಒಂದು ವಿಭಿನ್ನ ಪ್ರಕಾರದ ವಿನ್ಯಾಸದಂತೆ ಕಾಣುತ್ತದೆ. ಅತ್ಯಂತ ಆರಾಮದಾಯಕ ಮತ್ತು ಸರಳ ಶೈಲಿಯ ಉಡುಪು ಇದಾಗಿರುವುದರಿಂದ ಬಹಳಷ್ಟು ಮಹಿಳೆಯರು ಇದನ್ನು ಇಷ್ಟಪಡುತ್ತಿ¨ªಾರೆ.

ಕಲರ್‌, ಕಾಲರ್‌ ಗ್ರ್ಯಾಂಡಾಗಿರಲಿ…
ಟ್ಯೂನಿಕ್‌ ಮತ್ತು ಲಂಗ ಒಂದೇ ಬಣ್ಣದ್ದಾಗಿದ್ದರೆ (ಸಾಲಿಡ್‌ ಕಲರ್‌) ಕೇವಲ ತೋಳುಗಳಲ್ಲಿ ಕಸೂತಿ ಕೆಲಸ ಮಾಡಿಸಬಹುದು. ಆಗ ಡ್ರೆಸ್‌ ಇನ್ನಷ್ಟು ಅದ್ಧೂರಿಯಾಗಿ ಕಾಣುತ್ತದೆ. ಈ ದಿರಿಸಿನ ಕಾಲರ್‌ ಅಥವಾ ನೆಕ್‌ಲೈನ್‌ ವಿಶಿಷ್ಟವಾಗಿದ್ದರೆ, ಬೇರೊಂದು ಮೆರುಗು ನೀಡುತ್ತದೆ. ಚೈನೀಸ್‌ ಕಾಲರ್‌, ಬೋಟ್‌ ಶೇಪ್‌, ಕಿಮೋನೋ ಶೈಲಿ, ಸೈಡ್‌ ಕಾಲರ್‌, ರೆಟ್ರೋ ಶೈಲಿ, ಡೀಪ್‌ ನೆಕ್‌- ಹೀಗೆ ಅನೇಕ ಪ್ರಕಾರದ ನೆಕ್‌ ಡಿಸೈನ್‌ಗಳಲ್ಲಿ ಬೇಕಾದುದನ್ನು ಆಯ್ದು ಪ್ರಯೋಗ ಮಾಡಿ ನೋಡಿ, ಮ್ಯಾಕ್ಸಿ ಟ್ಯೂನಿಕ್‌ನಲ್ಲಿ ಮಿಂಚಿ!

ಅದಿತಿಮಾನಸ ಟಿ.ಎಸ್‌

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.