Udayavni Special

ನೆನಪಿನ ಹಣತೆಗಳು

ಮನದ ಆಲ್ಬಂನಲ್ಲಿ ಬೇಕಾದುದನ್ನು ಉಳಿಸಿ ಬೇಡವಾದರೆ ಅಳಿಸಿ!

Team Udayavani, Nov 6, 2019, 4:11 AM IST

nenpina

ಬೇಕೆಂದರೂ ಸಿಗದ, ದೂರದಲ್ಲಿ ಬದುಕುತ್ತಿರುವ ಅಕ್ಕ-ತಂಗಿ-ತಮ್ಮಂದಿರು, ಬಾಲ್ಯ ಸ್ನೇಹಿತೆಯರು. ಸತ್ತು ಸ್ವರ್ಗ ಸೇರಿದ ಅಪ್ಪ-ಅಮ್ಮ- ಮಾಮ-ಅಣ್ಣ, ನನ್ನ ಪ್ರೀತಿಪಾತ್ರವಾಗಿ ಅಪಾರ ಸಂತೋಷ ಕೊಟ್ಟ ಈಗಿಲ್ಲದ ಬೆಕ್ಕುಗಳು, ಹುಟ್ಟೂರು, ನನ್ನ ಹವ್ಯಾಸಗಳು ಕೂಡ ಈಗ ನೆನಪು ಮಾತ್ರ. ಎಷ್ಟೋ ಚಟುವಟಿಕೆಗಳಲ್ಲಿ ನಾನು ಹೆಸರು ಪಡೆದಿದ್ದರೂ ಈಗ ಅವು ಬರೇ ನೆನಪು. ಎಷ್ಟೇ ರೂಪವತಿಯಾಗಿದ್ದರೂ ವಯಸ್ಸಾದಂತೆ ರೂಪ ಕೂಡ ನೆನಪೇ.

ಅಂದಮೇಲೆ, ನೀವು ಕೂಡ ನನ್ನ ನೆನಪಿನಲ್ಲಿ ಇರುವುದರಲ್ಲಿ ಏನು ವಿಶೇಷ? ಜಂಭ ಪಡಬೇಡಿ. ಬೇಡದ ನೆನಪುಗಳನ್ನು ಅಳಿಸುವುದು, ಅಮೂಲ್ಯ ವಾದವುಗಳನ್ನು ನೆನಪಿನ ಆಲ್ಬಮ್‌ಗಳಲ್ಲಿ ಭದ್ರವಾಗಿ ಜೋಪಾನ ಮಾಡುವುದು, ಪ್ರತಿ ದಿನ ಹೊಸ ನೆನಪುಗಳ ಖಜಾನೆಗೆ ಸ್ವಲ್ಪ ಸ್ವಲ್ಪವೇ ಭರ್ತಿ ಮಾಡುತ್ತಾ ಹೋಗುವುದೇ ಜೀವನವಲ್ಲವೆ? ನನ್ನ ಜೀವನದ ಅವಿಭಾಜ್ಯ ಅಂಗವಾಗಿ ಮನಸ್ಸಿಗೆ ಮುದ ನೀಡಿ ಈಗಿಲ್ಲದವರೂ, ಜೀವಂತವಿದ್ದೂ ನಮ್ಮೊಂದಿಗೆ ಇಲ್ಲದವರೂ ನನ್ನ ನೆನಪುಗಳಲ್ಲಿದ್ದಾರೆ.

ಮನಸ್ಸಿನ ಫೋಟೋ ಆಲ್ಬಮ್‌ಗಳಲ್ಲಿ. ನಕ್ಷತ್ರಗಳು ತುಂಬಿದ ಆಕಾಶ, ಬೆಳದಿಂಗಳು, ತಂಗಾಳಿ, ಹುಟ್ಟೂರು, ಸೂರ್ಯಚಂದ್ರರನ್ನು ನನ್ನದು ಎನ್ನಬಹುದಾದರೆ ನೀವು ನನ್ನೊಟ್ಟಿಗಿಲ್ಲ ಎಂದು ಏಕೆ ಭಾವಿಸಬೇಕು? ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೊಡನೆ ಬದುಕುವ ಅದೃಷ್ಟವಿಲ್ಲ. ಅವರು ನಮ್ಮೊಡನೆ ಇಲ್ಲ ಎಂದೇನೂ ನಾವು ಭಾವಿಸುವುದಿಲ್ಲ. ಗಂಡನ ಮನೆಯಲ್ಲಿದ್ದಾರೆ ಎಂದು ಸಂತೋಷಪಡುತ್ತೇವೆ. ನೀವೂ ಹಾಗೇ, ಸದಾಕಾಲ, ಪ್ರತಿಕ್ಷಣವೂ ನನ್ನೊಂದಿಗೆ ಇದ್ದೀರಿ.

ದೇವರು ಸದಾ ನನ್ನೊಂದಿಗೆ ಇದ್ದಾನೆ ಎನ್ನುವುದಿಲ್ಲವೆ ನಾವು? ಯಾವ ಕಷ್ಟಕ್ಕೆ ತಾನೇ ಆಗಿದ್ದಾನೆ? ಕೂಗಿದಾಗ ಎಂದಾದರೂ ಬಂದಿದ್ದಾನೆಯೇ? ಹಾಗೆ… ನನ್ನ ಬಳಿ ಈಗ ಎಲ್ಲವೂ ಇದೆ. ಎಲ್ಲರೂ ಇದ್ದಾರೆ. ಸವಿನೆನಪುಗಳಲ್ಲಿ. ಪ್ರತಿದಿನ ಹೊಸ ಹೊಸ ನೆನಪುಗಳನ್ನು ಸೃಷ್ಟಿಸುವುದೇ ಬದುಕು. ಕೆಟ್ಟ ನೆನಪುಗಳನ್ನು ನಾನು ಆಗಿಂದಾಗ ಅಳಿಸಿ ಬಿಡುತ್ತೇನೆ. ಮೆಮೊರಿ ಫ‌ುಲ್‌ ಆದರೆ ಜೀವನವೆಂಬ ಫೋನೂ ಸ್ಲೋ ಆಗುತ್ತದೆ. ಹ್ಯಾಂಗ್‌ ಆಗುತ್ತದೆ. ಬೇಡದವುಗಳನ್ನು ಅಳಿಸುತ್ತಿರುತ್ತೇನೆ.

ಕಾಲವೆಂಬ ಕ್ಲೀನರ್‌ ಅಳಿಸಲಾಗದೆ ಇರುವಂಥದ್ದು ಯಾವುದೂ ಇಲ್ಲ. ಅದೇ ನಾವು ನಮ್ಮ ಭವಿಷ್ಯದ ಬಗ್ಗೆ ಕನಸು ಕಂಡರೆ ಆಹಾ ಓಹೋ… dream big ಎನ್ನುತ್ತಾರೆ. ಭೂತಕಾಲದ ನೆನಪುಗಳ ಮೇಲೆ ಕಬ್ಬಿಣದ ಪರದೆ ಎಳೆಯ ಬೇಕಂತೆ. ಯಾಕೋ? ಭೂತಕಾಲದ ನೆನಪುಗಳು ನನ್ನ ಆಸ್ತಿಯಲ್ಲವೆ? ಸಂಪತ್ತಿನ ಖಜಾನೆ. ನಾನು ಹೋರಾಡಿ ಗಳಿಸಿದ್ದು. ಸ್ವಯಾರ್ಜಿತ. ಸಾಯುವಾಗಲೂ ನನ್ನೊಂದಿಗೆ ಬರುತ್ತವೆ.

ನನ್ನ ಜೀನುಗಳಲ್ಲಿರುತ್ತವೆ. ಭೂತಕಾಲದಲ್ಲಿ ಎಲ್ಲವೂ ಕೆಟ್ಟದ್ದೇ ಆಗಿರುವುದೇನು? ಅಪಾರ ಅನುಭವ, ಸಂತೋಷ, ಆನಂದಗಳ ಭಂಡಾರವೇ ಇದೆಯಲ್ಲ, ಮುಂದಿನ ಜನ್ಮಗಳಿಗೂ ಸಾಲುವಷ್ಟು. ನನ್ನ ನೂರಾ ಒಂದು ನೆನಪುಗಳ ಹಣತೆಗಳಲ್ಲಿ ನಿಮ್ಮ ಹೆಸರಿನದೂ ಒಂದಿದೆ. ಸಾಲದೆ?

* ಸಂಗೀತಾ ಶೆಣೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ppe-kit

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಕ್ವಾರಂಟೈನ್ ಮುಗಿಸಿ ಬಂದ ಬೆಳಪು ಗ್ರಾಮದ ವ್ಯಕ್ತಿಗೆ ಸೋಂಕು: ಕಂಟೈನ್ಮೆಂಟ್ ವಲಯ ಘೋಷಣೆ

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ಮಿಡತೆಗಳನ್ನು ಓಡಿಸಲು ಡ್ರಮ್‌, ಡ್ರೋನ್‌, ಡಿಜೆ ಸೌಂಡ್‌!

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ನಿರಾಣಿ ಮನೆಯಲ್ಲಿ ರಾಮದಾಸ್, ಉಮೇಶ್ ಕತ್ತಿ ಮೀಟಿಂಗ್? ಸ್ಪಷ್ಟನೆ ನೀಡಿದ ಮುರುಗೇಶ್ ನಿರಾಣಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಇದೊಂದು ದೀರ್ಘ ಹೋರಾಟ, ಲಾಕ್ ಡೌನ್ ಸಡಿಲಗೊಂಡರೂ ಎಚ್ಚರಿಕೆ ಅಗತ್ಯ: ಮೋದಿ

ಈವರೆಗೆ ದೇಶದಲ್ಲಿ 89,983 ಮಂದಿ ಕೋವಿಡ್ 19 ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.

ಭಾರತದಲ್ಲಿ ಕೋವಿಡ್ ಅಟ್ಟಹಾಸ; ಒಂದೇ ದಿನ 8ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pathagalu

ಕೋವಿಡ್‌ 19 ಕಲಿಸಿದ ಪಾಠಗಳು

ammana-dasa

ಅಮ್ಮನ‌ ದಶಾವತಾರ!

agbekku

ಐ ಲವ್‌ ಬೆಂಗಳೂರು

ashcgartya

ಇಂಥದ್ದೆಲ್ಲ ನಡೆಯುತ್ತೆ ಅಂದುಕೊಂಡಿರಲಿಲ್ಲ!

navella pg

ನಾನು ಆಮ್‌ ಆದ್ಮಿ ಪಾರ್ಟಿ

MUST WATCH

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

ಹೊಸ ಸೇರ್ಪಡೆ

31-May-18

ಬೆಂಬಲ ಬೆಲೆಯಂತೆ ಭತ್ತ ಖರೀದಿಸಿ

ಟೂರ್‌ ಸರ್ಕಲ್‌ : ಹಿಮದ ಹೆಜ್ಜೆ ಹಿಮಾಲಯದತ್ತ ; ನೆನಪಿನ ಶಿಖರ ಕಟ್ಟುವ ಹಿಮಾಲಯ ಯಾತ್ರೆ

ಟೂರ್‌ ಸರ್ಕಲ್‌ : ಹಿಮದ ಹೆಜ್ಜೆ ಹಿಮಾಲಯದತ್ತ ; ನೆನಪಿನ ಶಿಖರ ಕಟ್ಟುವ ಹಿಮಾಲಯ ಯಾತ್ರೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ದೇವಸ್ಥಾನಗಳ ತೆರೆಯುವಿಕೆ ಜೂನ್ 8 ಕ್ಕೆ ಮುಂದೂಡಿಕೆ: ಸಚಿವ ಕೋಟ ಹೇಳಿಕೆ

ಕುಂದಾಪುರ: ಗುಣಮುಖರಾಗಿ 14 ಮಂದಿ ಬಿಡುಗಡೆ

ಕುಂದಾಪುರ: ಗುಣಮುಖರಾಗಿ 14 ಮಂದಿ ಬಿಡುಗಡೆ

31-May-16

ಶಾಸಕ ಗಣೇಶ ಆರೋಪದಲ್ಲಿ ಹುರುಳಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.