ಗೃಹಮಂತ್ರಿಗಳ ಉಳಿತಾಯ ಖಾತೆ!


Team Udayavani, Jul 13, 2018, 6:00 AM IST

b-26.jpg

ದೇಶದ ಹಣಕಾಸಿನ ಲೆಕ್ಕಾಚಾರ ಹೇಗೆ ಹಣಕಾಸು ಸಚಿವರ ತಲೆಯಲ್ಲಿರುತ್ತದೋ, ಹಾಗೆಯೇ ಒಂದು ಮನೆಯ ಆಯ-ವ್ಯಯದ ಲೆಕ್ಕ ಗೃಹಿಣಿಗೆ ಗೊತ್ತಿರುತ್ತದೆ. ಅದಕ್ಕೇ ಆಕೆಯನ್ನು ಗೃಹಲಕ್ಷ್ಮಿ, ಮನೆಯೊಡತಿ ಎನ್ನುವುದು. ಪ್ರತಿ ತಿಂಗಳು ಎಷ್ಟು ಹಣ ಕೈಗೆ ಬರುತ್ತದೆ, ತಿಂಗಳಾಂತ್ಯದಲ್ಲಿ  ಎಷ್ಟು ಉಳಿಯುತ್ತದೆ, ಮುಂಬರುವ ದಿನಗಳಲ್ಲಿ ಯಾವ್ಯಾವ ಖರ್ಚುಗಳು ಹೆಚ್ಚಲಿವೆ, ದುಂದುವೆಚ್ಚವನ್ನು ಹತೋಟಿಗೆ ತರೋದು ಹೇಗೆ… ಇತ್ಯಾದಿಗಳ ಬಗ್ಗೆ ಆಕೆ ಯೋಚಿಸಿದರೆ, ಹಣಕಾಸಿನ ಮುಗ್ಗಟ್ಟಿಲ್ಲದೆ ಸಂಸಾರದ ಬಂಡಿ ಮುಂದಕ್ಕೋಡಬಲ್ಲದು. 

ನಿಮಗೆ ನೆನಪಿದೆಯೆ? ಬಾಲ್ಯದ ಆ ದಿನಗಳು. ನಿಮ್ಮ ಅಜ್ಜಿಯೋ, ಅಮ್ಮನೋ ವರ್ಷಗಟ್ಟಲೆ ಅಡುಗೆ ಮನೆಯ ಪುಟ್ಟ ಡಬ್ಬಿಯಲ್ಲಿ ಪುಡಿಗಾಸು ಹಾಕಿಡುತ್ತಿದ್ದುದು, ಕಾಸಿಗೆ ಕಾಸು ಸೇರಿಸಿ ಮನೆಗೆ ಅಗತ್ಯದ ವಸ್ತುಗಳನ್ನು ಖರೀದಿಸುತ್ತಿದ್ದುದು, ಇಲ್ಲವೇ ತುರ್ತು ಸಂದರ್ಭಗಳಲ್ಲಿ ಅದೇ ಹಣವನ್ನು ಬಳಸುತ್ತಿದ್ದುದು. ಎಷ್ಟೋ ಸಂದರ್ಭಗಳಲ್ಲಿ ನಿಮ್ಮ ವಿದ್ಯಾಭ್ಯಾಸಕ್ಕೆ, ಸ್ಕೂಲ್‌ ಟೂರ್‌ಗೂ ಅದೇ ಹಣ ನೆರವಾಗುತ್ತಿರಲಿಲ್ಲವೆ?

ಹೌದು. ಅನಾದಿ ಕಾಲದಿಂದಲೂ ಮಹಿಳೆಗೂ ಉಳಿತಾಯಕ್ಕೂ ಅದೇನೋ ನಂಟು. ಅದು ಅನಿವಾರ್ಯ ಕೂಡ! ಅದ್ಯಾವುದೋ ಕಾರಣದಿಂದ ಪತಿ ಕೆಲಸ ಕಳೆದುಕೊಂಡಾಗಲೋ, ಮನೆಮಂದಿಯಲ್ಲೊಬ್ಬರಿಗೆ ಗಂಭೀರವಾಗಿ ಆರೋಗ್ಯ ಕೈಕೊಟ್ಟಾಗಲೋ, ಮಕ್ಕಳ ಓದು, ಮಗಳ ಮದುವೆ, ಸ್ವಂತ ಮನೆ ಕಟ್ಟುವಾಗ ಜೊತೆಯಾಗುವ ತಾಪತ್ರಯದ ಸಂದರ್ಭದಲ್ಲಿ ನೆರವಿಗೆ ಬರುವುದು ಇಂಥ ಉಳಿತಾಯದ ಹಣವೇ ಅಲ್ಲವೇ?

ನೀವು ಕೆಲಸಕ್ಕೆ ಹೋಗುವವರಿರಬಹುದು, ಮನೆಯಲ್ಲಿಯೇ ಇರುವ ಗೃಹಿಣಿಯೂ ಆಗಿರಬಹುದು. ನಿಮ್ಮ ಮೇಲೆ ಮನೆಮಂದಿಯ, ಮನೆಯ ಕಾರ್ಯಭಾರದ ಜವಾಬ್ದಾರಿ ಇದ್ದೇ ಇರುತ್ತದೆ. ಗೃಹಿಣಿಯಾಗಿದ್ದರೆ, “ನಾನು ಹೇಗೂ ಕೆಲ್ಸಕ್ಕೆ ಹೋಗ್ತಿಲ್ಲವಲ್ಲ, ಬರೀ ಹೋಂ ಮೇಕರ್‌ ನಾನು…’ ಎಂದುಕೊಂಡು ಸುಮ್ಮನಿರಬೇಡಿ. ನಿಮ್ಮಲ್ಲಿಯೂ ಉಳಿತಾಯದ ಮನೋಭಾವ ಇರಲೇಬೇಕು. ಬ್ಯಾಂಕ್‌ ಅಕೌಂಟ್‌, ಕ್ರೆಡಿಟ್‌ ಕಾರ್ಡ್‌ ಮುಂತಾದ ಹಣಕಾಸು ವಿಚಾರಗಳ ಬಗ್ಗೆ ಜ್ಞಾನ ಗಳಿಸಿಕೊಳ್ಳಿ. ಬೇಕೆಂದರೆ ಸಂಗಾತಿಯ ಸಹಾಯ ಪಡೆದುಕೊಳ್ಳಿ. ಆಗ ಮನೆಯ ಬಜೆಟ್‌ ತಯಾರಿಸಲು ಸುಲಭವಾಗುತ್ತದೆ. ಯೋಜನೆಗೆ ಸರಿಯಾದ ರೂಪುರೇಷೆ ಸಿಗುತ್ತದೆ.

ಹಿರಿಯ ಸಾಹಿತಿ, ಉದ್ಯಮಿ ಸುಧಾಮೂರ್ತಿ ಅವರು ಕೂಡ ಮನೆಖರ್ಚಿಗಾಗಿ ತಾವು ಪುಡಿಗಾಸು ಕೂಡಿಡುತ್ತಿದ್ದುದಾಗಿ ಹೇಳಿಕೊಂಡಿದ್ದುಂಟು. ಮನೆಯ ಬಜೆಟ್‌ ಹೇಗಿರಬೇಕು, ಮನೆಯ ಆರ್ಥಿಕ ಪರಿಸ್ಥಿತಿ, ಮಕ್ಕಳ ಭವಿಷ್ಯ ನೋಡಿಕೊಂಡು ಹೇಗೆ ಮತ್ತು ಎಷ್ಟು ಉಳಿತಾಯ ಮಾಡಬೇಕು ಎಂಬುದನ್ನು ಪತಿ-ಪತ್ನಿ ಇಬ್ಬರೂ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬಂದರೆ ಬಹಳ ಒಳ್ಳೆಯದು.

ಮೊದಲಿಗೆ ಒಂದು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ರೂಪಿಸಿಕೊಳ್ಳಿ. ಜೊತೆಗೇ ನಿಮ್ಮ ಗುರಿಗಳನ್ನು ನಿಗದಿಮಾಡಿ ಕೊಳ್ಳಿ. ಆ ಗುರಿಗಳು ಆದ್ಯತೆಗೆ ಅನುಸಾರ ವಾಗಿರಲಿ. ಉದಾಹರಣೆಗೆ ಮಕ್ಕಳ ವಿದ್ಯಾಭ್ಯಾಸ, ಸೈಟ್‌ ಖರೀದಿ, ಆಭರಣ ಖರೀದಿ, ಮನೆ ನಿರ್ಮಾಣ ಇತ್ಯಾದಿ. ರಿಕರಿಂಗ್‌ ಸೇವಿಂಗ್‌ ಅಕೌಂಟ್‌ನಲ್ಲಿ ಹಣ ಹೂಡಿಕೆ ಮಾಡಿ. ಹಾಗೆಯೇ ಸಾಮಾನ್ಯ ಸೇವಿಂಗ್‌ ಅಕೌಂಟ್‌ ತೆರೆದರೆ ಇನ್ನೂ ಒಳ್ಳೆಯದು. ರಿಕರಿಂಗ್‌ ಡಿಪಾಸಿಟ್‌ ಅಥವಾ ಆರ್‌ಡಿ ಮೆಚೂರ್‌ ಆದಾಗ ಪುನಃ ಹೂಡಿಕೆ ಮಾಡಬಹುದು. ಮದುವೆಯೋ, ಸಮಾರಂಭವೋ, ತುರ್ತು ಅಗತ್ಯವೋ ಇದ್ದಾಗ ಅದನ್ನು ಉಪಯೋಗಿಸಿಕೊಳ್ಳಲೂಬಹುದು. ತಿಂಗಳು ತಿಂಗಳು ನೀವೇ ಉಳಿಸಿದ ಅಷ್ಟೋ ಇಷ್ಟೋ ಹಣವನ್ನು ಹೀಗೆ ಸದುಪಯೋಗಪಡಿಸಿಕೊಳ್ಳಬಹುದು. ಸಾಮಾನ್ಯ ಬ್ಯಾಂಕ್‌ ಅಕೌಂಟ್‌ ಇರಲಿ, ಆರ್‌ಡಿ ಇರಲಿ, ಹಾಗೆಯೇ ಪೋಸ್ಟ್‌ ಆಫೀಸ್‌, ಇತರ ಯೋಜನೆಗಳೇ ಇರಲಿ- ನಿಮ್ಮದೇ ಆದ ಈ ಉಳಿತಾಯದ ಹಣಕ್ಕೆ ಒಂದಷ್ಟು ಬಡ್ಡಿಯೂ ಸಿಗುತ್ತದೆ. ಹಾಗಾಗಿಯೇ ಸಾಕಷ್ಟು ಮನೆ ಒಡತಿಯರು ಇಂಥ ಉಳಿತಾಯ ಮಾರ್ಗ ಕಂಡುಕೊಂಡಿದ್ದಾರೆ. ನಿಜ. ಇಂದಿನ ದಿನಗಳಲ್ಲಿ ಹಣದಿಂದಲೇ ಹಣ ಹುಟ್ಟುತ್ತದೆ. ಹಣದಿಂದಲೇ ಹಣ ಗಳಿಕೆ ಸಾಧ್ಯ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒದಗಿಸುವ ಸವಲತ್ತುಗಳನ್ನು, ಯೋಜನೆಗಳ ಲಾಭವನ್ನು ಧಾರಾಳವಾಗಿ ಬಳಸಿಕೊಳ್ಳಿ. ಪ್ರಧಾನಮಂತ್ರಿ ಜನಧನ್‌ ಯೋಜನೆ, ಸುರಕ್ಷಾ  ಬಿಮಾ ಯೋಜನೆ, ಗ್ಯಾಸ್‌ ಸಬ್ಸಿಡಿಯ ಪಹಲ್‌ ಯೋಜನೆ, ಜೀವನಜ್ಯೋತಿ ಬಿಮಾ ಯೋಜನೆ, ಮಗಳ ವಿದ್ಯಾಭ್ಯಾಸ, ಮದುವೆ ಇತ್ಯಾದಿಗಳಿಗಿರುವ ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗಳ ಬಗ್ಗೆ ತಿಳಿದುಕೊಂಡು ಅವುಗಳ ಪ್ರಯೋಜನ ಪಡೆಯಿರಿ. ಹಲವು ಯೋಜನೆಗಳಲ್ಲಿ ಹೂಡಿಕೆ ಹಣದ ಮೇಲೆ ತೆರಿಗೆ ವಿನಾಯಿತಿಯೂ ಇದೆ ಎಂಬುದನ್ನು ಮರೆಯಬೇಡಿ.

ಇನ್ನು “ಬೇಟಿ ಬಜಾವೋ, ಬೇಟಿ ಪಢಾವೋ’ದಂಥ ಹಲವಾರು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅವುಗಳ ಬಗ್ಗೆ ತಿಳಿದುಕೊಂಡ ಮಹಿಳೆಯರು ಆ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ಉಳಿದವರೂ ಇಂಥ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು. ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ “ಸ್ತ್ರೀ ಶಕ್ತಿ’ ತಂಡಗಳ ರಚನೆಗೆ ಅನುವು ಮಾಡಿಕೊಟ್ಟಿದೆ. ಅವುಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಗ್ರಾಮಾಂತರ ಪ್ರದೇಶಗಳಲ್ಲಿರುವ ಬಹಳಷ್ಟು ಸ್ತ್ರೀಯರು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ತಿಂಗಳಿಗೆ ಕೇವಲ ಐನೂರು ರೂಪಾಯಿ ತೊಡಗಿಸಿ ಗೋಲ್ಡ್‌ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಿದರೂ ಸಾಕು, ಎಲೆಕ್ಟ್ರಾನಿಕ್‌ ರೂಪದ ಚಿನ್ನವನ್ನು ಹೂಡಿದರೂ  ಸಾಕು, ಅದರ ಲಾಭವನ್ನು ಪಡೆದೇ ಪಡೆಯುತ್ತೀರಿ. ನಗರಗಳಲ್ಲಿರುವ ಎಷ್ಟೋ ಮಹಿಳೆಯರು ಈ ಗುಟ್ಟನ್ನು ಅರಿತುಕೊಂಡಿದ್ದಾರೆ. ಹಾಗಾಗಿ ಇಂಥ ಗೋಲ್ಡ್‌ಫ‌ಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಕೂಡ. ಇದಲ್ಲದೆ ಆರೋಗ್ಯ ವಿಮೆ ಯೋಜನೆ, ಮ್ಯೂಚುವಲ್‌ ಫ‌ಂಡ್‌ ಇನ್ವೆಸ್ಟ್‌ಮೆಂಟ್‌, ಡೆಟ್‌ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವವರಿಗೇನೂ ಕಮ್ಮಿ ಇಲ್ಲ.

ಆದರೆ, ನಾಯಿಕೊಡೆಗಳಂತೆ ಹುಟ್ಟುತ್ತಿರುವ ಚಿಟ್‌ಫ‌ಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವಾಗ ಬಹಳ ಎಚ್ಚರ ಅತ್ಯಗತ್ಯ. ವಿಶ್ವಾಸಾರ್ಹರು ಎಂದು ಸರಿಯಾಗಿ ತಿಳಿದುಕೊಂಡ ಮೇಲಷ್ಟೇ ಚಿಟ್‌ಫ‌ಂಡ್‌ಲ್ಲಿ ಹಣ ತೊಡಗಿಸಬೇಕು. ಇಲ್ಲದಿದ್ದರೆ ಟೋಪಿ ಖಚಿತ!

ಖರ್ಚಿಗೆ ಹಾಕಿ ಕಡಿವಾಣ
ಜಾಣ ಗೃಹಿಣಿಯರಿಗೆ ಖರ್ಚಿನ ಮೇಲೆ ಹಿಡಿತ ಸಾಧಿಸುವುದೂ ಗೊತ್ತು; ಎಲ್ಲೆಲ್ಲ ಹಣ ವೇಸ್ಟ್‌ ಆಗಿದೆಯೋ ಅಲ್ಲೆಲ್ಲ ಕಡಿವಾಣ ಹಾಕುವುದೂ ಗೊತ್ತು. ದಿನಾಲೂ ವಾಶಿಂಗ್‌ ಮೆಶಿನ್‌ಗೆ ಬಟ್ಟೆ ಹಾಕುವ ಬದಲು, ವಾರಕ್ಕೆ ಒಂದೋ ಎರಡು ಬಾರಿಯೋ ಒಟ್ಟಿಗೇ ಹಾಕಿದರೆ ಒಳ್ಳೆಯದಲ್ಲವೇ? ಪ್ರತಿ ವಾರ ಹೊಟೇಲ್‌, ಮಾಲ್‌, ಶಾಪಿಂಗ್‌, ಸಿನೆಮಾ ಅಂತ ಸುತ್ತುವುದರ ಬದಲು ತಿಂಗಳಿಗೊಮ್ಮೆ ಹೋದರೆ ಸಾಕಲ್ಲವೇ? ಅನಗತ್ಯ ಕಿಟ್ಟಿà ಪಾರ್ಟಿಗಳು ಬೇಕೇ? ಇದನ್ನೆಲ್ಲ ಬಹುತೇಕ ಗೃಹಿಣಿಯರು ಯೋಚಿಸುತ್ತಾರೆ. ಮನೆಯ ಇಂಥದ್ದೇ ಹತ್ತುಹಲವು ಆಗುಹೋಗುಗಳಲ್ಲಿ ಅವರು ಹಿಡಿತ ಸಾಧಿಸುತ್ತಾರೆ.

ಕೌಶಲದಂದ ಹಣ
ಗ್ರಾಫಿಕ್‌ ಡಿಸೈನಿಂಗ್‌, ಪೇಂಟಿಂಗ್‌, ಭಾಷಾಂತರ ಮುಂತಾದ ವಿಶೇಷ ಕೌಶಲಗಳನ್ನೇ ಬಳಸಿಕೊಂಡು ಹೋಂ ಜಾಬ್‌ ಮಾಡಿ ಮನೆಯಲ್ಲಿಯೇ ಹಣ ಗಳಿಸುವವರೂ ಸಾಕಷ್ಟು ಮಂದಿ. ಇನ್ನು ಕಂಪ್ಯೂಟರ್‌, ಇಂಟರ್‌ನೆಟ್‌ ಕೌಶಲ್ಯ ಇದ್ದರೆ ಆನ್‌ಲೈನ್‌ ತರಬೇತಿ ಕೂಡ ನೀಡುವವರಿದ್ದಾರೆ.
ಹಣ ಉಳಿತಾಯಕ್ಕೆ ಇನ್ನೊಂದು ಮಾರ್ಗ-ಒಂದೇ ಬಾರಿಗೆ ವಸ್ತುಗಳ ಖರೀದಿ. ದೊಡ್ಡ ದೊಡ್ಡ ಸಾಧನಗಳನ್ನು ಖರೀದಿಸುವಾಗ ಜಾಗರೂಕರಾಗಿರಬೇಕು. ಜಾಣ ಮಹಿಳೆಯರು ತಾವು ಹಾಕಿಕೊಂಡ ಯೋಜನೆಗಳ ಪ್ರಕಾರವೇ ವಸ್ತುಗಳನ್ನು ಖರೀದಿಸುತ್ತಾರೆ. ನಾಜೂಕಾಗಿ ಉಳಿತಾಯ ಮಾಡಿ ಯಶಸ್ವಿಯಾಗಿ ಸಂಸಾರ ನಡೆಸುತ್ತಾರೆ.

ರಾಜೇಶ್ವರಿ ಜಯಕೃಷ್ಣ

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.