ಮಧುರಿಮಾ ಮಿಂಚಿಂಗ್‌


Team Udayavani, Nov 2, 2018, 6:00 AM IST

s-20.jpg

ಮಧುರಿಮಾ ಟುಲಿ ಎಂಬ ಹೆಸರು ಹಿಂದಿ ಧಾರಾವಾಹಿಗಳನ್ನು ವೀಕ್ಷಿಸುವವರಿಗೆ ಚಿರಪರಿಚಿತ ಹೆಸರು. ಚಂದ್ರಕಾಂತಾ ಸೀರಿಯಲ್‌ನ ಯುವರಾಣಿ ಚಂದ್ರಕಾಂತಾಳೇ ಮಧುರಿಮಾ ಟುಲಿ. ಹತ್ತು ವರ್ಷದ ಹಿಂದೆಯೇ ಬಾಲಿವುಡ್‌ಗೆ ಬಂದಿದ್ದರೂ ಇನ್ನೂ ಎಲೆಮರೆಯ ಕಾಯಿಯಂತೆಯೇ ಇರುವ ಮಧುರಿಮಾ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಆಗಾಗ ಮಿಂಚುವುದನ್ನು ಅಭ್ಯಾಸ ಮಾಡಿಕೊಂಡಿದ್ದಾಳೆ.

2015ರಲ್ಲಿ ಬಂದ ಅಕ್ಷಯ್‌ ಕುಮಾರ್‌ ಹೀರೊ ಆಗಿದ್ದ ಬೇಬಿ ಚಿತ್ರವೇ ಮಧುರಿಮಾ ಬಣ್ಣದ ಬದುಕಿನ ದೊಡ್ಡ ಬ್ಯಾನರ್‌ನ ಚಿತ್ರ. ಅತ್ತ ತಮಿಳು, ತೆಲುಗು , ಕನ್ನಡಕ್ಕೂ ಹೋಗಿ ಬಂದಿರುವ ಮಧುರಿಮಾ ಈಗ ಇನ್ನೊಂದು ಉಗ್ರಗಾಮಿ ಕತೆಯ ವೆಬ್‌ಸೀರಿಯಲ್‌ನಲ್ಲಿ ನಟಿಸಲು ಆಯ್ಕೆಯಾಗುವ ಮೂಲಕ ಸುದ್ದಿ ಮಾಡಿದ್ದಾಳೆ. ಇದು ಉರಿ ಸೇನಾ ನೆಲೆಯ ಮೇಲೆ ನಡೆದ ಉಗ್ರರ ದಾಳಿಯ ಕುರಿತಾದ ವೆಬ್‌ ಸೀರಿಯಲ್‌. ಮಧುರಿಮಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಬಚ್ನಾ ಯೇ ಹಸಿನೊ, ಟಾಸ್‌, ಸಿಗರೇಟ್‌ ಕೀ ತರಹ್‌, ವಾರ್ನಿಂಗ್‌, ಬೇಬಿ, ಹಮಾರಿ ಅಧೂರಿ ಕಹಾನಿ, ನಾಮ್‌ ಶಬನಾ ಮಧುರಿಮಾ ಇಷ್ಟರ ತನಕ ನಟಿಸಿರುವ ಹಿಂದಿ ಚಿತ್ರಗಳು. ಪಾತ್ರಗಳು ಒಂದಕ್ಕಿಂತ ಒಂದು ವೈವಿಧ್ಯವಾಗಿದ್ದರೂ ಯಾಕೋ ಮಧುರಿಮಾ ಎಂಬ ಈ ನಟಿ ಬೆಳಕಿಗೆ ಬರಲೇ ಇಲ್ಲ. 

ಉತ್ತರ ಭಾರತದ ನಟಿಯರಿಗೆ ರತ್ನಗಂಬಳಿ ಹಾಸಿ ಸ್ವಾಗತ ನೀಡುವ ತೆಲುಗು ಮತ್ತು ತಮಿಳು ಚಿತ್ರರಂಗ ಕೂಡ ಮಧುರಿಮಾ ಪಾಲಿಗೆ ಪಕ್ಷಪಾತ ಮಾಡಿತು. ಅಲ್ಲೂ ಅವಳಿಗೆ ಹೇಳಿಕೊಳ್ಳುವಂಥ ಅವಕಾಶ ಸಿಗಲಿಲ್ಲ. ಇದೀಗ ಉರಿ ದಾಳಿಯನ್ನು ಆಧರಿಸಿ ತಯಾರಾಗುತ್ತಿರುವ ಇಂಡಿಯಾ ಸ್ಟ್ರೈಕ್ಸ್‌-10 ಡೇಸ್‌ ಎಂಬ ವೆಬ್‌ಸಿರೀಸ್‌ ಮೇಲೆ ಮಧುರಿಮಾ ಭಾರೀ ಭರವಸೆ ಇಟ್ಟುಕೊಂಡಿದ್ದಾಳೆ. ಪತ್ರಕರ್ತೆಯ ಪಾತ್ರವಾದರೂ ಇದು ಬಹಳ ಸವಾಲಿನ ಕೆಲಸ, ನೈಜ ಘಟನೆಯ ಹಿನ್ನೆಲೆಯಲ್ಲಿ ತಯಾರಾಗುತ್ತಿರುವುದರಿಂದ ವಾಸ್ತವಕ್ಕೆ ಚ್ಯುತಿಯಾಗದಂತೆ ಪಾತ್ರ ಪೋಷಣೆ ಅಗತ್ಯವಿದೆ ಎಂದೆನ್ನುತ್ತಾಳೆ ಮಧುರಿಮಾ. 

ಟಾಪ್ ನ್ಯೂಸ್

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.