ಸೂಪ್‌ ವೈವಿಧ್ಯ


Team Udayavani, Jan 3, 2020, 4:38 AM IST

4

ಚಳಿಗಾಲದಲ್ಲಿ ಬಿಸಿಬಿಸಿಯಾದ ಸೂಪ್‌ ಕುಡಿಯಲು ಹಿತವಾಗಿರುತ್ತದೆ. ಆರೋಗ್ಯಕರ ಹಾಗೂ ರುಚಿಕರವಾದ ಸೂಪ್‌ಗ್ಳನ್ನು ಮಾಡುವ ವಿಧಾನಗಳು ಇಲ್ಲಿವೆ.

ಕ್ಯಾರೆಟ್‌ ಸೂಪ್‌
ಬೇಕಾಗುವ ಸಾಮಗ್ರಿ: ಕ್ಯಾರೆಟ್‌ ತುಂಡುಗಳು- 2 ಕಪ್‌, ನೀರುಳ್ಳಿ- 1, ಹಸಿಶುಂಠಿ- ಅರ್ಧ ಇಂಚು, ಬೆಣ್ಣೆ- 2 ಚಮಚ, ಜೀರಿಗೆ ಪುಡಿ- ಅರ್ಧ ಚಮಚ, ಕಾಳುಮೆಣಸಿನ ಪುಡಿ- 1 ಚಮಚ, ಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ನೀರುಳ್ಳಿ ಮತ್ತು ಶುಂಠಿಯನ್ನು ಹೆಚ್ಚಿಟ್ಟುಕೊಳ್ಳಿ. ಕುಕ್ಕರ್‌ ಗೆ ಒಂದು ಚಮಚ ಬೆಣ್ಣೆ ಹಾಕಿ, ಅದು ಕರಗುತ್ತಿರುವಾಗ ಹೆಚ್ಚಿದ ನೀರುಳ್ಳಿ ಹಾಕಿ ಸ್ವಲ್ಪ ಕೆಂಪಗಾಗುವಂತೆ ಹುರಿಯಿರಿ. ಇದಕ್ಕೆ ಕ್ಯಾರೆಟ್‌, ಶುಂಠಿ, ಮೆಣಸಿನಪುಡಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ. ನಂತರ ಮುಚ್ಚಳ ಮುಚ್ಚಿ ಎರಡು ವಿಷಲ್‌ ಕೂಗಿಸಿ. ಇದು ಆರಿದ ಮೇಲೆ ನುಣ್ಣಗೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಜೀರಿಗೆ ಪುಡಿ, ಬೇಕಾದಷ್ಟು ನೀರು ಸೇರಿಸಿ ಕುದಿಸಿ. ಈಗ ಕ್ಯಾರೆಟ್‌ ಸೂಪ್‌ ಸವಿಯಲು ಸಿದ್ಧ. ಸರ್ವ್‌ ಮಾಡುವಾಗ ಕಾಳುಮಣಸಿನ ಪುಡಿಯುದುರಿಸಿ ಕ್ರೀಮ್‌ ಹಾಕಿ.

ಬಾರ್ಲಿ ಸೂಪ್‌
ಬೇಕಾಗುವ ಸಾಮಗ್ರಿ: ಬಾರ್ಲಿ- ಅರ್ಧ ಕಪ್‌, ಹೆಚ್ಚಿದ ನೀರುಳ್ಳಿ- 1/4 ಕಪ್‌, ಹೆಚ್ಚಿದ ಕ್ಯಾರೆಟ್‌- 1/4 ಕಪ್‌, ಹೆಚ್ಚಿದ ಬೀನ್ಸ್‌ – 1/4 ಕಪ್‌, ಬೆಳ್ಳುಳ್ಳಿ- 2 ಎಸಳು, ಶುಂಠಿ- 1/2 ಇಂಚು, ಬೆಣ್ಣೆ- 2 ಚಮಚ, ಕಾಳುಮೆಣಸಿನ ಪುಡಿ- 1/2 ಚಮಚ, ಉಪ್ಪು ಸ್ವಲ್ಪ, ಎಣ್ಣೆ- 2 ಚಮಚ.

ತಯಾರಿಸುವ ವಿಧಾನ: ಬಾರ್ಲಿಯನ್ನು 4 ಗಂಟೆ ನೀರಿನಲ್ಲಿ ನೆನೆ ಹಾಕಿಟ್ಟು ನಂತರ ಕುಕ್ಕರ್‌ನಲ್ಲಿ 4 ವಿಷಲ್‌ ಕೂಗಿಸಿ ಬೇಯಿಸಿಟ್ಟುಕೊಳ್ಳಿ. ಶುಂಠಿ-ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಒಂದು ಪಾತ್ರೆಗೆ ಎಣ್ಣೆ ಹಾಕಿ ಶುಂಠಿ-ಬೆಳ್ಳುಳ್ಳಿಯನ್ನು ಸೇರಿಸಿ ಬಾಡಿಸಿ. ನಂತರ ನೀರುಳ್ಳಿ ಸೇರಿಸಿ ಕೆಂಪಗಾಗುವಂತೆ ಹುರಿದು ಬೀನ್ಸ್, ಕ್ಯಾರೆಟ್‌ ಹಾಕಿ ಸ್ವಲ್ಪ ಬಾಡಿದ ಮೇಲೆ ಬೇಯಿಸಿಟ್ಟುಕೊಂಡ ಬಾರ್ಲಿ, ಸೂಪ್‌ಗೆ ಬೇಕಾದಷ್ಟು ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಕಾಳುಮೆಣಸಿನ ಪುಡಿ ಸೇರಿಸಿ. ಆರೋಗ್ಯಕರವಾದ ಬಾರ್ಲಿ ಸೂಪ್‌ ರೆಡಿ.

ಮಿಕ್ಸೆಡ್‌ ವೆಜಿಟೆಬಲ್‌ ಸೂಪ್‌
ಬೇಕಾಗುವ ಸಾಮಗ್ರಿ: ತರಕಾರಿ(ಕ್ಯಾರೆಟ್‌, ಬೀನ್ಸ್, ಎಲೆಕೋಸು, ದೊಣ್ಣೆಮೆಣಸು, ಬಟಾಣಿ)- ಒಂದೂವರೆ ಕಪ್‌, ನೀರುಳ್ಳಿ- 1, ಬೆಣ್ಣೆ- 1 ಚಮಚ, ಶುಂಠಿ ತುರಿ- 2 ಚಮಚ, ಬೆಳ್ಳುಳ್ಳಿ- 2 ಎಸಳು, ಕೋರ್ನ್ಫ್ಲೋರ್‌- 2 ಚಮಚ, ಕಾಳುಮೆಣಸಿನ ಪುಡಿ-ನಿಂಬೆರಸ- 1/2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ: ತರಕಾರಿಗೆ ಒಂದೂವರೆ ಕಪ್‌ ನೀರು, ಉಪ್ಪು ಸೇರಿಸಿ ಕುಕ್ಕರ್‌ನಲ್ಲಿ ಬೇಯಿಸಿಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ, ಶುಂಠಿ-ಬೆಳ್ಳುಳ್ಳಿ, ನೀರುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಬೇಯಿಸಿಟ್ಟುಕೊಂಡ ತರಕಾರಿ ಹಾಕಿ ಕುದಿಸಿ. ಕಾರ್ನ್ಫ್ಲೋರ್‌ಗೆ ಒಂದು ಕಪ್‌ ನೀರು ಹಾಕಿ ಕರಗಿಸಿ ಕುದಿಯುತ್ತಿರುವ ಸೂಪ್‌ಗೆ ಸೇರಿಸಿ ಗಂಟಾಗದಂತೆ ಕದಡುತ್ತಿರಿ. ಸಕ್ಕರೆ, ಕಾಳುಮೆಣಸಿನಪುಡಿ ಸೇರಿಸಿ ಕುದಿಸಿ. ನಂತರ ನಿಂಬೆರಸ, ಕೊತ್ತಂಬರಿ ಸೊಪ್ಪು ಸೇರಿಸಿ.

ಪಾಲಕ್‌ ಸೂಪ್‌
ಬೇಕಾಗುವ ಸಾಮಾಗ್ರಿ: ಹೆಚ್ಚಿದ ಪಾಲಕ್‌ ಸೊಪ್ಪು- 2 ಕಪ್‌, ಹೆಚ್ಚಿದ ನೀರುಳ್ಳಿ- 3/4 ಕಪ್‌, ಬೆಳ್ಳುಳ್ಳಿ ಎಸಳು -2, ಜೋಳದಹಿಟ್ಟು (ಕಾರ್ನ್ಫ್ಲೋರ್‌)- 2 ಚಮಚ, ಹಾಲು- 1 ಕಪ್‌, ಬೆಣ್ಣೆ- 2 ಚಮಚ, ಕ್ರೀಮ…- 2 ಚಮಚ, ಕರಿಮೆಣಸಿನ ಪುಡಿ- ಅರ್ಧ ಚಮಚ, ಉಪ್ಪು ಸ್ವಲ್ಪ, ಬೆಳ್ಳುಳ್ಳಿ.

ತಯಾರಿಸುವ ವಿಧಾನ: ಹಾಲಿಗೆ ಜೋಳದ ಹುಡಿ ಸೇರಿಸಿ ಚೆನ್ನಾಗಿ ಕದಡಿಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಹಾಕಿ ಬಿಸಿಯಾದ ನಂತರ ಹೆಚ್ಚಿದ ನೀರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಪಾಲಕ್‌ ಸೊಪ್ಪು ಹಾಕಿ ಸ್ವಲ್ಪ ಬಾಡಿಸಿ ಉಪ್ಪು, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಆರಿದ ಮೇಲೆ ರುಬ್ಬಿ ಒಂದು ಪಾತ್ರೆಗೆ ಹಾಕಿ ಜೀರಿಗೆ ಪುಡಿ, ಹಾಲಿನಲ್ಲಿ ಕಲಸಿಟ್ಟುಕೊಂಡ ಜೋಳದ ಹುಡಿ ಮಿಶ್ರಣವನ್ನು ಸೇರಿಸಿ. ಸೂಪ್‌ನ ಹದಕ್ಕೆ ಸ್ವಲ್ಪ ನೀರು ಸೇರಿಸಿ ಸಣ್ಣ ಉರಿಯಲ್ಲಿ ಕುದಿಸಿ. ರುಚಿಯಾದ ಪಾಲಕ್‌ ಸೂಪ್‌ ಸಿದ್ಧ. ಸರ್ವ್‌ ಮಾಡುವಾಗ ಮೆಣಸಿನ ಕಾಳಿನ ಪುಡಿಯುದುರಿಸಿ ಕ್ರೀಮ್‌ ಹಾಕಿ.

ಪ್ರೇಮಾ ಎಸ್‌. ಭಟ್‌

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.