ಮಿಸ್‌ ಯೂ ಫ್ರೆಂಡ್‌

Team Udayavani, May 10, 2019, 5:50 AM IST

22

ಅದು ಪದವಿ ಜೀವನದ ಮುಕ್ತಾಯ. ಮುಕ್ತಾಯವೇ ಮುಂದಿನ ಹೊಸತನದ ಆರಂಭ. ಅಂದು 2017 ಮೇ ನನ್ನ ಪದವಿ ಜೀವನ ಮುಗಿದು ಗುರುಗಳ ಸಲಹೆಯಂತೆ ನನ್ನ ಇಷ್ಟದ ವಿಷಯವಾದ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನಕ್ಕೆಂದು ಮಡಿಕೇರಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ ಮಂಗಳಗಂಗೋತ್ರಿಗೆ ತೆರಳಿದೆ.

ಅದೇನೋ ಹೊಸತನ, ಹೊಸಜನ. ನನ್ನವರೂ ಯಾರೂ ಇಲ್ಲದ ಭಾವ, ಏಕಾಂಗಿಯಾಗಿ ನಾನು ಅಲ್ಲಿಗೆ ಬಂದರೆ ಮನದಲ್ಲಿ ಏನೋ ಭಯ, ಆದರೂ ಕಲಿಯಬೇಕೆಂಬ ಹಂಬಲ ನನ್ನನ್ನು ಅಲ್ಲಿ ಸ್ಥಿರವಾಗಿ ನಿಲ್ಲಿಸಿತ್ತು.

ನಾನು ಮೂಲತಃ ಕನ್ನಡ ಮಾಧ್ಯಮದ ಪುಟ್ಟ ಗ್ರಾಮದ ಹುಡುಗನಾಗಿದ್ದೆ. ಮೊದಲನೆ ಭಾರಿ ಮನೆಬಿಟ್ಟು ಬಹುದೂರದ ಹಾಸ್ಟೆಲ್‌ನಲ್ಲಿ ಇನ್ನು ಜೀವನ, ಇದನ್ನೂ ಊಹಿಸಿಯೇ ಇರಲಿಲ್ಲ ಬಿಡಿ. ಹಾಗೋ ಹೀಗೋ ಮೊದಲ ತರಗತಿ ಪ್ರಾರಂಭವಾಯಿತು. ಅಕ್ಕಪಕ್ಕದ ಜಿಲ್ಲೆಯವರೂ, ರಾಜ್ಯದವರು ಪರಿಚಿತರಾದರು.

ನಮ್ಮ ತರಗತಿಯಲ್ಲಿ ಒಬ್ಬ ವಿದೇಶಿ ವಿದ್ಯಾರ್ಥಿ! ಆತನನ್ನು ಕಂಡು ಅಚ್ಚರಿ, ಮಾತನಾಡಿಸಬೇಕೆಂಬ ಹಂಬಲ. ಆದರೆ ಹೇಗೆ ? ನನಗೆ ಇಂಗ್ಲಿಶ್‌ ಜ್ಞಾನ ಅಷ್ಟಕ್ಕಷ್ಟೆ ಆಗಿತ್ತು. ಕೊನೆಗೆ ಹೇಗೋ ಮಾತನಾಡಲು ಪ್ರಾರಂಭಿಸಿದೆ, ಆತನ ಹೆಸರು ಡೇನಿಸ್‌ ಮ್ಯಾಥ್ಯೂ ಸಿಲಾಯೊ. ದೇಶ ಆಫ್ರಿಕಾದ ತಾಂಜಾನಿಯಾ.

ದಿನಗಳು, ವಾರಗಳು ಕಳೆದವು. ನಮ್ಮಲ್ಲಿ ಸ್ನೇಹ ಬೆಳೆಯಿತು. ಅದೆಷ್ಟೋ ವಿಷಯಗಳನ್ನು ವಿನಿಮಯ ಮಾಡಿಕೊಂಡೆವು. ನಮ್ಮಿಬ್ಬರ ಊರಿನ, ದೇಶದ ಬಗ್ಗೆ ತಿಳಿದುಕೊಳ್ಳುತ್ತ ಸಾಗಿದೆವು. ನನಗೆ ಖುಷಿಯೋ ಖುಷಿ. ವಿದೇಶಿ ಪ್ರಜೆಯೊಬ್ಬ ಸ್ನೇಹಿತನಾಗಿ ಅದರಲ್ಲೂ ತರಗತಿಯ ಸಹಪಾಠಿಯಾಗಿದ್ದಾನೆಂದು. ನಾವಿಬ್ಬರು ಮುಂದಿನ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಿದ್ದೆವು. ಆತ ನನ್ನ ಜೀವನಕ್ಕೆ ಬೇಕಾದ ಅದೆಷ್ಟೋ ವಿಷಯಗಳನ್ನು ಕಲಿಸಿದ.

ಇಂಗ್ಲಿಷ್‌ ಕಲಿಯಲು ಕಷ್ಟಪಡುತ್ತಿದ್ದ ನನಗೆ ಆತ ಹೇಳಿದ್ದು ಇಷ್ಟೇ Don’t Worry ಎಂದು. ಆತ ದಿನಂಪ್ರತಿ ನನ್ನೊಡನೆ ಮಾತನಾಡುತ್ತಿದ್ದ. ನಾನು ಅವನಿಗೆ ಪ್ರೊಫೆಸರ್‌ ಮತ್ತು ತರಗತಿಯ ಇತರ ಸಹಪಾಠಿಗಳ ಕನ್ನಡದ ಮಾತನ್ನು ಅವನಿಗೆ ಇಂಗ್ಲಿಷ್‌ಗೆ ಅನುವಾದ ಮಾಡಿ ಹೇಳುತ್ತಿದ್ದೆ.

ನನಗೆ ಅರ್ಥಶಾಸ್ತ್ರದ ಬಗ್ಗೆ ಅನೇಕ ವಿಷಯ ಕಲಿಸಿದ. ಅವರ ಭಾಷೆ, ಆಚಾರ, ಆಹಾರದ ಬಗ್ಗೆ ತಿಳಿಸಿದ. ಅವನ ಮಾತೃಭಾಷೆ “ಸ್ವಹಿಲಿ’ಯ ಕೆಲವು ಪದಗಳನ್ನು ಹೇಳಿಕೊಟ್ಟ. ನಾನು ಅವನಿಗೆ ಕನ್ನಡದ ಕೆಲವು ಪದಗಳು ಹೇಳಿಕೊಟ್ಟಿದ್ದೆ. ಆತನ ಸ್ನೇಹ ಹೃದಯಕ್ಕೆ ಬಹಳ ಹತ್ತಿರವಾಗ ತೊಡಗಿತ್ತು. ನಾವಿಬ್ಬರು ಸಿಟಿ ಸೆಂಟರ್‌, ಮಾಲ್, ಬೀಚ್‌, ದೇವಾಲಯಗಳನ್ನು ಸುತ್ತಿದೆವು.

ಮತ್ತೂಂದು ಅಚ್ಚರಿಯ ಸಂಗತಿಯೆಂದರೆ ಆತನ ವಯಸ್ಸು 32. ಮದುವೆಯಾಗಿ ಒಂದು ಮಗುವಿನ ತಂದೆ ಆತ, ಮೂರು ವಾರದ ಮಗುವನ್ನು ಬಿಟ್ಟು ಕಲಿಕೆಯ ಉದ್ದೇಶದಿಂದ ಭಾರತಕ್ಕೆ ಬಂದಿದ್ದ. ಆತನ ಹಂಬಲ, ಶಿಕ್ಷಣ ಪಡೆಯುವ ತವಕ ನಮ್ಮ ತರಗತಿಯ ಎಲ್ಲರಿಗೂ ಸ್ಫೂರ್ತಿದಾಯಕ ವಿಷಯವಾಗಿತ್ತು. ದೇಶ-ಭಾಷೆ ಬೇರೆಯಾದರೂ ಆತನ ಮುಗ್ಧತೆ, ಒಳ್ಳೆಯ ಮನಸ್ಸು, ಸಮಾನತೆಯ ಭಾವ ಅವನಿಗಿಂತ 10 ವರ್ಷ ಚಿಕ್ಕವಯಸ್ಸಿನ ನನ್ನನ್ನು ಆತನ ಸ್ನೇಹಿತನಾಗುವಂತೆ ಮಾಡಿತ್ತು.

ಈಗ ನಮ್ಮ ಎರಡು ವರ್ಷದ ಸ್ನಾತಕೋತ್ತರ ತರಗತಿ ಈ ತಿಂಗಳಲ್ಲಿ ಮುಗಿಯುತ್ತಿದೆ. ಆತ ಆತನ ದೇಶಕ್ಕೆ ತೆರಳುತ್ತಿದ್ದಾನೆ. ನಾನು ನನ್ನೂರಿಗೆ ಪ್ರಯಾಣ ಬೆಳೆಸಬೇಕಾಗಿದೆ. ಮುಂದೆ ನಾನು-ಅವನು ಭೇಟಿಯಾಗಲು ಅದೆಷ್ಟು ಸಮಯ ಕಾಯಬೇಕಾಗಿದೆಯೋ ಗೊತ್ತಿಲ್ಲ. ಅವನನ್ನು ಮಿಸ್‌ ಮಾಡಿಕೋಳ್ಳುತ್ತಿದ್ದೇನೆ. ಹೃದಯ ಭಾರವಾಗುತ್ತಿದೆ. ಸಾವಿರಾರು ಕಿಲೋಮೀಟರ್‌ ಅಂತರದಲ್ಲಿ ನನ್ನ ಅವನ ಜೀವನ. ಭಾವಪೂರ್ಣ ವಿದಾಯದೊಂದಿಗೆ ಆತನನ್ನು ಬೀಳ್ಕೊಡಬೇಕಾಗಿದೆ. ಆತನ ಸ್ನೇಹ ನೆನಪು ಸದಾ ನನ್ನ ಹೃದಯದಲ್ಲಿದೆ.

ತಿಮ್ಮಯ್ಯ ಮೋನಿ, ಅರ್ಥಶಾಸ್ತ್ರ- ದ್ವಿತೀಯ ಎಂ. ಎ. ಮಂಗಳೂರು ವಿ. ವಿ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.