ನಾವೂ ಟೂರ್‌ ಹೋಗಿದ್ದೆವು


Team Udayavani, Jun 8, 2018, 6:00 AM IST

c-20.jpg

ದೇಶ ಸುತ್ತು ಕೋಶ ಓದು’ ಎಂಬುದು ನಮ್ಮ ನಿಮ್ಮೆಲ್ಲರ ಬದುಕಿನುದ್ದಕ್ಕೂ ಬೆಳೆದುಬಂದ ಪ್ರಚಲಿತ ನಾಣ್ನುಡಿ ಆಗಿದೆ. ನಿಜ ! ಹಗಲಿನಲ್ಲಿ ದಿನಕರನು ಬೆಳಗಿ ಸಂಜೆ ಪಡುವಣದಲ್ಲಿ ಮುಳುಗಿ ನಂತರ ಬರುವ ರಾತ್ರಿಯ ಕತ್ತಲಿನಲ್ಲಿ ಚಂದ್ರ ತನ್ನ ತಾರಾಮಂಡಲದೊಂದಿಗೆ ಪ್ರಜ್ವಲಿಸಿ ಹೇಗೆ ಮಿಂಚುತ್ತಾನೆ ಎಂಬ ವಿಷಯವು ಎಷ್ಟು ವಾಸ್ತವವೋ ಅಷ್ಟೇ ಸತ್ಯ ಮತ್ತು ನಿತ್ಯನೂತನವಾಗಿದೆ. ಈ ಮಾತಿನ ರೂಪದ ನಾಣ್ನುಡಿ ನಾವು ತಟಸ್ಥವಾಗಿದ್ದುಕೊಂಡೇ ಎಲ್ಲವನ್ನು ತಿಳಿಯಬಯಸಿದರೆ ಹೇಗೆ ತಾನೆ ತಿಳಿದೀತು ಹೇಳಿ? ನಾವು ನಮ್ಮ ನಿತ್ಯ ಬದುಕಿನಲ್ಲಿ ಕಾರ್ಯೋನ್ಮುಖರಾದಾಗಲೇ ನಮ್ಮ ಅರಿವು ಬೆಳೆಯುತ್ತದೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದ ಬಗೆಗೆ ತಿಳುವಳಿಕೆಯೂ ಮೂಡುತ್ತದೆ. ಇಂಥ ಅರಿವಿನ ಜತೆಗೆ ಮನಕೆ ಮುದವನ್ನು ಎರೆಯುವ ಮಾರ್ಗ ಎಂದರೆ ಅದು ಪ್ರವಾಸ ಅಥವಾ ಫ್ಯಾಮಿಲಿ ಪಿಕ್‌ನಿಕ್‌. ನಾನೀಗ ನಿಮ್ಮ ಜತೆಗೆ ನಮ್ಮ ಕಾಲೇಜಿನ ಏಕದಿನದ ಪ್ರವಾಸದ ಬಗ್ಗೆ ಮಾತನಾಡುತ್ತೇನೆ. 

ಅದು ಕೇವಲ ಪ್ರವಾಸ ಅಲ್ಲ. ಅದಕ್ಕೆ ಬಹುಶಃ ಶೈಕ್ಷಣಿಕ ಪ್ರವಾಸ ಎಂಬ ಪದ ಸೂಕ್ತವಾಗಿ ಒಪ್ಪಬಹುದು ಎಂದೇ ತೋರುತ್ತದೆ. ಇರಲಿ. ಪ್ರವಾಸ ಹೋದದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬೇಕಲ್ಲವೇ? ಹಾಗೆ ಮೂಡುವುದೇ ಹೌದಾದಲ್ಲಿ ಇಲ್ಲಿದೆ ಉತ್ತರ. ನಾವು ಹೋದದ್ದು ಅಂತಿಂಥ ನಾಡಿಗಲ್ಲ. ಅದು ಕಲಿಗಳ ನಾಡು. ವೀರ-ಪುರುಷರ ಬೀಡು. ಹಸಿರು ವನಸಿರಿಯಿಂದ ನಳನಳಿಸುವ ಸುಂದರ ನಾಡು. ಏಲಕ್ಕಿ, ಕಾಫಿ. ಬೆಣ್ಣೆಹಣ್ಣು ಹಾಗೆಯೇ ಬಾಯಲ್ಲಿ ನೀರೂರಿಸುವ ಕಿತ್ತಲೆಯನ್ನು ಹಂಚುವ ನಾಡು. ಮುಖ್ಯವಾಗಿ ಕನ್ನಡದ ಜೀವನದಿಯಾದ ಬೆಡಗಿ “ಕಾವೇರಿ’ ನದಿಯು ಉಗಮಿಸುವ ಪವಿತ್ರ ಕ್ಷೇತ್ರ ಅಲ್ಲದೇ ನಮ್ಮ ಭಾರತದ ಸೇನೆಗೆ ಮೊದಲ ದಂಡನಾಯಕನಾಗಿ ಭಾರತಾಂಬೆಯ ಸೇವೆಯನ್ನು ಮಾಡಿದ “ಫೀಲ್ಡ್‌ ಮಾರ್ಷಲ್‌ ಜನರಲ್‌ ಕಾರ್ಯಪ್ಪ’ನವರು ಜನಿಸಿದ ವೀರಭೂಮಿಯಾದ ಮತ್ತು “ಕರ್ನಾಟಕದ ಕಾಶ್ಮೀರ’ ಎಂದೇ ಕರೆಯಲ್ಪಡುವ ನೈಸರ್ಗಿಕವಾದ ತಾಣ “ಕೊಡಗು’ ಮತ್ತು ಅಲ್ಲಿನ ಆಸುಪಾಸಿನ ಸ್ಥಳಗಳಿಗೆ. ಅಂದ ಹಾಗೆ, ಪೀಠಿಕೆ ನಿಮ್ಮ ಮನಕ್ಕೆ ಅತಿ ಹೆಚ್ಚಾಗಿ ಕಂಡರೆ ಕ್ಷಮೆ ಇರಲಿ. ಏಕೆಂದರೆ, ಕೊಡಗು ಇರುವುದೇ ಹಾಗಲ್ಲವೇ?

ಇರಲಿ, ನಾನು ನನ್ನ ಅನುಭವದ ಅನಿಸಿಕೆಯನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ. ನಾವು ಮೊದಲಿಗೆ ಹೋದದ್ದು ಕುಶಾಲನಗರದ ಗೋಲ್ಡನ್‌ ಟೆಂಪಲಿಗೆ. ಅಲ್ಲಿನ ಬುದ್ಧನ ಬೃಹತ್‌ ವಿಗ್ರಹ ನಿಜಕ್ಕೂ ಟಿಬೆಟಿಯನ್ನರ ಕಲಾವೈಖರಿಗೆ ಉತ್ತಮ ಉದಾಹರಣೆಯಾಗಿದೆ. ಇನ್ನೊಂದು ಅಚ್ಚರಿ ಎಂದರೆ ಅಲ್ಲಿ ನಿವಾಸಿಗರಾದ ಟಿಬೆಟಿಯನ್ನರ ಬದುಕು. ನಮ್ಮ ಊರಿನ ಮೂಲ ನಿವಾಸಿಗರಲ್ಲದೇ ಹೋದರೂ ಅವರ ಜೀವನ ಇಲ್ಲಿಯ ಜನರಿಗಿಂತ ಕಮ್ಮಿಯಿಲ್ಲ. ಹಾಗೆ ನೋಡಿದರೆ ನಮ್ಮವರು ಅಭಿವೃದ್ಧಿ ಹೊಂದಿರುವುದು ಅವರ ಮಟ್ಟಿಗೆ ಆಗುವಾಗ ಕಡಿಮೆ ಎಂದೇ ಹೇಳಬಹುದು ತಾನೆ? ವಿಶಾಲವಾದ ಭೂಮಿಯಲ್ಲಿ ಭೌತಿಕವಾದ ಕಲೆಗಳ ಮೂಲಕ ಬೆಳೆಯುತ್ತಿರುವ ಅವರು ಆರ್ಥಿಕವಾಗಿಯೂ ಸಾಮಾಜಿಕವಾಗಿಯೂ ಸದೃಢವಂತರಾಗಲು ಹವಣಿಸುತ್ತಿದ್ದಾರೆ ಎಂಬುದು ನಾವು ನಂಬಲೇಬೇಕಾದ ಸತ್ಯ. ಅಲ್ಲದೇ ಅಚ್ಚರಿಕರವಾದ  ವಿಷಯ ಎಂದರೆ ಅವರು ಕೈಯಾರೆ ಹೊಲಿದು ಬಟ್ಟೆ-ಬರೆಗಳನ್ನು ಮಾರುವ ವ್ಯವಸ್ಥೆಯನ್ನು ಗಮನಿಸಿದರೆ ನಮ್ಮ ನಾಡಲ್ಲಿ ಗುಡಿ ಕೈಗಾರಿಕೆಗಳ ಸಂತಾನ ಇಷ್ಟಾದರೂ ಇದೆ ಅಲ್ಲ ಎಂದು ನೆಮ್ಮದಿಯೂ ಆಗುತ್ತದೆ. ನಂತರ ನಮ್ಮ ಪಯಣ ಸಾಗಿದ್ದು “ಕಾವೇರಿ ನಿಸರ್ಗಧಾಮ’ಕ್ಕೆ. ಹೇಳಿಕೊಳ್ಳುವುದಕ್ಕೆ ಬೇಸರವಾಗುವ ವಿಷಯವೆಂದರೆ ಈ ನಿಸರ್ಗಧಾಮದಲ್ಲಿ ನಿಸರ್ಗಕ್ಕೆ ಉಸಿರಾಗುವ ಲಕ್ಷಣಗಳೇ ಕಾಣಸಿಗುವುದಿಲ್ಲ. ಅಲ್ಲಲ್ಲಿ ನೆಟ್ಟ ಬಿದಿರುಪೊದೆಗಳು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲಾರಂಭಿಸಿದೆ. ಇಲ್ಲಿ ಹೆಸರಿಗಾದರೂ ಹೇಳಲು ಪಕ್ಷಿಗಳಾಗಲಿ ಪ್ರಾಣಿಗಳ ಸಂತತಿಯು  ಕಾಣುವುದಿಲ್ಲ. ಆದರೂ ನಿಸರ್ಗಧಾಮದ ಹೆಸರನ್ನು ಉಳಿಸಿಕೊಳ್ಳಲೋ ಎಂಬಂತೆ ಪರಿಮಿತ ಸಂಖ್ಯೆಯಲ್ಲಿ ಒಂದಿಷ್ಟು ಜಿಂಕೆಗಳ ಹಿಂಡಾದರೂ ನಮ್ಮನ್ನು ಸೆಳೆಯುತ್ತದೆ.

“ಪ್ರಾಚ್ಯವಸ್ತು ಸಂಗ್ರಹಾಲಯ’ ನಾಮಾಂಕಿತವೇ ಸೂಚಿಸುತ್ತದೆ ಪುರಾತನ ಕಾಲದ ವಸ್ತುಗಳ ಅವಶೇಷಗಳ ಸಂಗ್ರಹವಿರುವ ತಾಣ ಇದೆಂದು. ಇದಾದರೂ ನನ್ನ ಮನಕ್ಕೆ ಹಿತವನ್ನು ನೀಡಿದ ಸ್ಥಳ ಎನ್ನಬಹುದು. ಇಲ್ಲಿ ಇದ್ದ ವಸ್ತುಗಳು ಕೇವಲ ಮನರಂಜನೆಗಲ್ಲ. ಇಲ್ಲಿನ ಎಲ್ಲಾ ವಸ್ತುಗಳಲ್ಲಿ ಇಂದಿಗೂ ಜೀವ ಇದೆ. ಚೈತನ್ಯವಿದೆ. ಇನ್ನೂ ಆಳವಾಗಿ ಶ್ರವಣ ಮಾಡಿದರೆ ಇಲ್ಲಿನ ಪ್ರತಿಯೊಂದು ವಸ್ತುಗಳು ತಮ್ಮದೇ ಆದ ಯಶೋಗಾಥೆಯನ್ನು ಹೇಳುತ್ತವೆ. ಇದು ನನ್ನ ಅನುಭವವೇ ಹೊರತು ಇತರರಿಗೂ ಹೀಗೇ ಅನಿಸಬೇಕೆಂದು ನಾನು ಹೇಳಲು ಇಚ್ಛಿಸಲಾರೆ. ಇಲ್ಲಿ ಸಂಗ್ರಹಿಸಿದ ದುರಸ್ತಿಗೊಳಪಟ್ಟ ಫಿರಂಗಿಗಳ ಬಿಡಿಭಾಗಗಳು, ಮದ್ದು ಗುಂಡುಗಳು, ಶಿವಾಜಿ ಬಳಸಿದ ಕತ್ತಿ ಅಥವಾ ವ್ಯಾಘ್ರನಖ ಆಯುಧಗಳೇನಿದೆಯೋ ಅವು ಖಂಡಿತಾ ಇತಿಹಾಸಪ್ರಿಯರನ್ನೂ ಶತಮಾನಗಳ ಪೂರ್ವಕ್ಕೆ ಕರೆದೊಯ್ಯದೇ ಇರುವುದಿಲ್ಲ. ಅಲ್ಲದೇ ಅಲ್ಲಿರುವ ಖಜಾನೆ, ರಾಜರ ಪೋಷಾಕುಗಳು, ಬುದ್ಧದೇವರ ವಿಗ್ರಹಗಳು, ರಾಜರ ಮನೋರಂಜನಾತ್ಮಕ ಆಟಿಕೆಗಳ ಅವಶೇಷಗಳು ಒಂದು ಕ್ಷಣ ನಮ್ಮನ್ನು ನಿಂತಲ್ಲೇ ಸ್ತಬ್ಧರಾಗುವಂತೆ ಮಾಡಿಬಿಡುತ್ತದೆ. ಹಾಗೆಯೇ ಅಲ್ಲಿ ನಮಗೆ ಕಾಣಸಿಗುವ ಪ್ರಶಸ್ತಿ ಪತ್ರಗಳಾಗಿರಬಹುದು ಅಥವಾ ಕೆಲವು ಸಾಹಸದ ವಿಜಯದ ದ್ಯೋತಕವಾದ ಇನಾಮುಗಳನ್ನು ಅಥವಾ ಪದಕಗಳು ಸೂಕ್ಷ್ಮವಾಗಿ ನೋಡಿದರೆ ನಮಗೆ ನಮ್ಮ ನಾಡಿನ ಪೌರುಷದ ಬಗೆಗೆ ಹೆಮ್ಮೆಯಾಗದೇ ಇರಲು ಸಾಧ್ಯವೇ? ಆದರೆ ಇಲ್ಲಿನ ಸುತ್ತಲೂ ನಿಲ್ಲಿಸಿರುವ ಮಾಸ್ತಿ ಕಲ್ಲನ್ನು ನೋಡಿದರೆ ಬೇಸರವಾದರೂ ವೀರಗಲ್ಲು ನಮ್ಮ ಮನಕೆ ವೀರತೆಯ ಸವಿಯನ್ನು ಸವಿಯುವಂತೆ ಮಾಡಿಬಿಡುತ್ತದೆ. ಆದರೆ ಅಂದಿನ ರಾಜರಾದ ಚಿಕ್ಕವೀರರಾಜರ ಅರಮನೆ ಇಂದು ಜಿಲ್ಲಾ ಕಚೇರಿಯಾಗಿ ಬದಲಾಗಿದೆ. ಆದರೂ ಒಂದು ಕ್ಷಣ ವಿಚಲಿತಗೊಂಡ ಈ ಮನ ಅಂದಿನ ರಾಜ ದರ್ಬಾರು ಈಗಲೂ ಇದ್ದಿದ್ದರೆ ಆಗಿನ ರಾಜವೈಭವವನ್ನು ಇಂದಿಗೂ ಜೀವಂತವಾಗಿರಿಸುತ್ತಿತ್ತೋ ಎಂದು ಅತ್ತ ಕಡೆಗೆ ವಾಲುತ್ತದೆ !

ಇನ್ನು ನಾವು ಸಾಗಿದ್ದು “ಗದ್ದುಗೆ’ಯನ್ನು ನೋಡಲು. ಇದು ಚಿಕ್ಕವೀರರಾಜ ಮತ್ತು ಅವರ ದಂಡನಾಯಕರ ಸಮಾಧಿಯಾಗಿದೆ. ಇದು ಇಂಡೋ-ಸಾರ್ಸೆನಿಕ್‌ ಶೈಲಿಯಲ್ಲಿದ್ದು  ಮುಸ್ಲಿಂ ವಾಸ್ತುಶಿಲ್ಪದ ಮೆರುಗನ್ನು ಒಳಗೊಂಡಿರುತ್ತದೆ. ಇದು ಗದ್ದುಗೆಯಾದರೂ ಇದರ ಸುತ್ತಲೂ ಉದ್ಯಾನವನಗಳಿದ್ದು ಹಚ್ಚಹಸಿರಾಗಿ ಕಾಣಸಿಗುತ್ತದೆ. ಇಲ್ಲಿ ಒಂದೆಡೆ ಮಕ್ಕಳಿಗೆ ಆಟವಾಡಲು ಸೂಕ್ತ ಉಯ್ನಾಲೆ, ಜಾರುಬಂಡಿಯಂತಹ ಸಾಮಗ್ರಿಗಳಿದ್ದರೆ, ಇನ್ನೊಂದೆಡೆ ಪ್ರಕೃತಿಪ್ರಿಯರಿಗೆ ಆಸ್ವಾದಿಸುವ ಹಾಗೆ ವಾಕಿಂಗ್‌ ಮಾಡುವ ಸ್ಥಳವೂ ಆಗಿದೆ. ಆಗ್ರಾದ ತಾಜ್‌ಮಹಲನ್ನು ನೋಡದವರು ಇದನ್ನು ನೋಡಿಯೇ ಅದರ ಕಲ್ಪನೆಯನ್ನು ಮಾಡಬಹುದೋ ಏನೋ ಎಂದು ನನಗೆ ಅನ್ನಿಸುತ್ತದೆ. ಕೊನೆಯ ನಮ್ಮ ಪಯಣದ ತಾಣ ಎಂದರೆ ಅದು ರಾಜಾ-ಸೀಟ್‌ಗೆ. ಇದರ ಬಗ್ಗೆ ಹೇಳಬೇಕಾದದ್ದು ಇಲ್ಲ ಎಂದೇ ಅನ್ನಿಸಿಬಿಡುತ್ತದೆ. ಹೆಸರೇ ಸೂಚಿಸುವಂತೆ ಇಲ್ಲಿನ ಅರಸರು ವಿಶ್ರಾಂತಿಗಾಗಿ ಮತ್ತು ವಾಯುವಿಹಾರಕ್ಕೆಂದೇ ಇದನ್ನು ನಿರ್ಮಿಸಿದ್ದರಂತೆ. “ಮಾನವ ಎಷ್ಟೇ ಸಿರಿವಂತನಾಗಲಿ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿರಲಿ ಆತನಿಗೆ ಮನಃಶಾಂತಿ ಹಾಗೂ ನೆಮ್ಮದಿ ಅತಿ ಅಗತ್ಯವೆಂದು ತೋರುತ್ತದೆ’ ಎಂದು ನಮ್ಮ ಪ್ರಾಧ್ಯಾಪಕರಾದ ಡಾ. ಲೋಕೇಶ್‌ರವರು ಹೇಳಿದ ಮಾತು ನಿಜಕ್ಕೂ ದಿಟವೆಂದೇ ನನಗೆ ಕಾಣುತ್ತದೆ. ಇಲ್ಲಿನ ಸೌಂದರ್ಯವನ್ನು ಆಸ್ವಾದಿಸಿ ನನ್ನ ಸೆಲ್ಫಿಪ್ರಿಯ ಸಹಪಾಠಿಗಳು ಒಂದಿಷ್ಟು ತಮಗೆ ಬೇಕಾದಂತೆಲ್ಲ ನಾನಾ ಭಂಗಿಯ ಫೋಟೋಗಳನ್ನು ಕ್ಲಿಕ್‌ ಮಾಡಿಕೊಂಡರು. ನಂತರ ನಮ್ಮ ಬಾಲ್ಯವನ್ನು ಮತ್ತೂಮ್ಮೆ ನೆನಪಿಸುವ ಅಲ್ಲೇ ಇದ್ದ ಪುಟ್ಟದಾದ ಟ್ರೈನಲ್ಲಿ ಒಂದು ಸುತ್ತು ಹಾಕಿ ರಾಜಾಸೀಟ್‌ಗೆ ವಿದಾಯ ಹೇಳಿ ನಮ್ಮ ಮರುಪಯಣವನ್ನು ಆರಂಭಿಸಿದೆವು. ಕ್ಷೇಮವಾಗಿ ನಮ್ಮ ಮನೆಗಳನ್ನು ತಲುಪಿ ನಮ್ಮವರಿಗೂ ನಮ್ಮಿà ಕನ್ನಡದ ವೀರನೆಲದ ವೈಭವವನ್ನು ನಮ್ಮ ಕೈಲಾದ ಮಟ್ಟಿಗೆ ಕಟ್ಟಿಕೊಟ್ಟೆವು. ಭಾರತದ ಕಾಶ್ಮೀರದ ಪ್ರವಾಸ ಮಾಡದೇ ಹೋದರೂ ಕನ್ನಡನಾಡಿನ ಕಾಶ್ಮೀರದ ಈ ಪ್ರವಾಸ ಅದಕ್ಕಿಂತ ಕಮ್ಮಿಯೇನೂ ಇಲ್ಲ !

ನಯನಾ ಜಿ.ಎಸ್‌.
ತೃತೀಯ ಬಿ.ಎ. ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.