CONNECT WITH US  

ಪಚ್ಚ: ಪಾಕೆಟ್‌ ಮನಿ ಅಂತ ನಿಂಗೆ 2 ಸಾವಿರ ನೋಟು ಕೊಟ್ರೆ ಏನ್ಮಾಡ್ತೀಯಾ?

ಮರಿಪಚ್ಚ: ನಿನ್ನ ನಂಬಕ್ಕಾಗಲ್ಲ. ಮೊದ್ಲು ಅಸಲಿ ನೋಟಾ ಅಂತ ಪರೀಕ್ಷೆ ಮಾಡ್ತೀನಿ!

ಮರಿಪಚ್ಚ: ಸರ್‌, ಸ್ಟೆಪ್ಸ್‌ಗೆ ಮಾರ್ಕ್ಸ್ ಸಿಗುತ್ತಾ..?

ಮೇಷ್ಟ್ರು: ಇದು ಗಣಿತ ಪರೀಕ್ಷೆ, ಡ್ಯಾನ್ಸ್‌ ಅಲ್ಲ!

ಮರಿಪಚ್ಚ: ಅಪ್ಪಾ ಕಾಗೆ ಕೂಗಿದ್ರೆ, ಮನೆಗೆ ನೆಂಟ್ರಾ ಬರ್ತಾರೆ ಅಂತೆ.. ಹೌದಾ?

ಪಚ್ಚ: ಹೌದು.. 

ಮರಿಪಚ್ಚ: ಮತ್ತೆ ನೆಂಟ್ರಾ...

ಮೇಷ್ಟ್ರು: ಆಕಾಶದಲ್ಲಿ ಹಾರುವ, ಭೂಮಿ ಮೇಲೆ ಜನ್ಮ ನೀಡುವ ಸಸ್ತನಿ ಯಾವುದು?
ಮರಿಪಚ್ಚ: ಗಗನಸಖಿ!

ಗುಂಡ: ಕಾಲೇಜು ಕಲಿಕೆ ಎಲ್ಲ ಮುಗೀತಲ್ಲ.. ಏನ್‌ ಮಾಡ್ಕೊಂಡಿದ್ದೀಯಾ ಈಗ..?

ಮರಿಪಚ್ಚ: ಎಸ್‌.ಐ. ಅಂಕಲ್‌..

ಗುಂಡ: ಭಲೇ.. ಸಬ್‌ಇನ್ಸ್‌...

ಪಚ್ಚ: ಈ ಸಲವೂ ನಪಾಸಾದ್ರೆ ನನ್ನನ್ನ ಅಪ್ಪ ಅಂತ ಕರೀಬೇಡ...

ಮರಿಪಚ್ಚ: ಸರಿ ಅಪ್ಪಾ...

ಪಚ್ಚ (ಫ‌ಲಿತಾಂಶದ ನಂತರ):ರಿಸಲ್ಟ್ ಏನಾಯ್ತು...

ಪಚ್ಚ: ರಿಸಲ್ಟ್ ಏನಾಯ್ತೋ? 

ಮರಿಪಚ್ಚ: 80 ಪರ್ಸೆಂಟ್‌ ಬಂದಿದೆ ಅಪ್ಪಾ...

ಪಚ್ಚ: ಮಾರ್ಕ್ಸ್ ಕಾರ್ಡ್‌ನಲ್ಲಿ ಬರೀ 40 ಪರ್ಸೆಂಟ್‌...

ಮೇಷ್ಟ್ರು: ನಿನ್ನ ಗೆಳೆಯನ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆ...
ಮರಿಪಚ್ಚ: "ಸನ್‌ ಲೈಟ್‌'
ಮೇಷ್ಟ್ರು: ಏನೋ ಇದು?
ಮರಿಪಚ್ಚ: ಅವನ ಹೆಸರು "ಸೂರ್ಯ ಪ್ರಕಾಶ' ಸರ್‌!

ಪಚ್ಚ: ವಿಸ್ಕಿಗಿಂತ ಚಹಾ ಹೆಚ್ಚು ಕಿಕ್‌ ಕೊಡುತ್ತೆ...

ಗುಂಡ: ಅದ್ಹೆಂಗೋ? 

ಪಚ್ಚ: ನಿನ್ನೆ ರಾತ್ರಿ ನಾನು 8 ಪೆಗ್‌ ವಿಸ್ಕಿ ಏರಿಸಿ...

ಮರಿಪಚ್ಚ: ಅಪ್ಪ ನಿಂಗೆ ಕತ್ತಲೆ ಇದ್ರೂ ಸೈನ್‌ ಹಾಕೋಕೆ ಬರುತ್ತಾ..?
ಪಚ್ಚ: ಹಾಂ.. ಅದೇನ್‌ ಮಹಾ.. 
ಮರಿಪಚ್ಚ: ಹಂಗಾದ್ರೆ ಎಲ್ಲಿ ನೋಡೋಣ, ನನ್ನ ಪ್ರೋಗ್ರೆಸ್‌ ಕಾರ್ಡ್‌ ಮೇಲೆ ಒಂದು ಸೈನ್‌
...

ಮೇಷ್ಟ್ರು: ಕರಡಿಗ್ಯಾಕೆ ಮೈತುಂಬಾ ಕೂದಲಿರುತ್ತೆ?

ಮರಿಪಚ್ಚ: ಕಾಡಲ್ಲಿ ಕಟಿಂಗ್‌ ಶಾಪ್‌ ಇರಲ್ವಲ್ಲ, ಅದಕ್ಕೆ!

ಮೇಷ್ಟ್ರು: ಯಾಕೋ ಲೇಟು?

ಮರಿಪಚ್ಚ: ಬೆಳಗಿನ ಜಾವ ಕನಸಲ್ಲಿ ಫ‌ುಟ್ಬಾಲ್‌ ಆಡ್ತಿದ್ದೆ.

ಮೇಷ್ಟ್ರು (ವ್ಯಂಗ್ಯವಾಗಿ): ಆಟ ಸ್ವಲ್ಪ ಬೇಗ...

ಪಚ್ಚ ವೈದ್ಯನಾದ ಹೊಸತರಲ್ಲಿ..

ರೋಗಿಯ ಸಂಬಂಧಿಕರು: ಡಾಕ್ಟ್ರೇ..ಆಪರೇಷನ್‌ ಎಲ್ಲಾ ಚೆನ್ನಾಗಿ ಆಯ್ತಾ.. ಹುಷಾರಾಗ್ತಾರೆ ಅಲ್ವಾ..?

ಪಚ್ಚ: ಏನು ಆಪರೇಷನ್ನಾ...

ಟೀಚರ್‌: ಯಾಕೋ ದಿನ ಹೋದಂಗೆ ನಿನ್ನ ಕೈಬರಹ ಕೆಟ್ಟದಾಗ್ತಾ ಇದೆ..?
ಮರಿಪಚ್ಚ: ನಾನು ಡಾಕ್ಟ್ರಾಗಬೇಕು..ಅನ್ನೋದು ನಮ್ಮಪ್ಪಂದು ಆಸೆ ಟೀಚರ್‌!

ತರಗತಿಯಲ್ಲಿ..
ಮೇಷ್ಟ್ರು: ನೀರನ್ನು ಕುದಿಸಿ ಕುಡಿವುದು ಸುರಕ್ಷಿತ. ಇದರಿಂದ ನೀರಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ..

ಮರಿಪಚ್ಚ:...

ಗುಂಡ: ದೊಡ್ಡವನಾದ್ಮೇಲೆ ಏನಾಗ್ಬೇಕು ಅಂತಿದ್ದೀಯಾ..?

ಮರಿಪಚ್ಚ: ಏನಾದ್ರೂ ತೊಂದ್ರೆ ಇಲ್ಲಾ ಅಂಕಲ್‌.. ವಾರದ ಕೊನೆಯ 2 ದಿನ ರಜೆ ಸಿಕ್ಕಿದ್ರೆ ಸಾಕು!

ಮರಿಪಚ್ಚ: ಅಪ್ಪಾ, 12+12 ಎಷ್ಟಪ್ಪಾ..?
ಪಚ್ಚ: ಅಷ್ಟೂ ಗೊತ್ತಾಗಲ್ವೇನೋ ನಿಂಗೆ.. ಎಲ್ಲಿ... ಆ ಕ್ಯಾಲ್ಕುಲೇಟರ್‌ ...

ಪಚ್ಚ: ಮೊದಲನೇ ದಿನ ಸ್ಕೂಲು ಹೇಗಿತ್ತೋ..?

ಮರಿಪಚ್ಚ: ಅಂದ್ರೆ.. ನೀವು ದಿನಾ ಸ್ಕೂಲಿಗೆ ಹೋಗ್ಬೇಕು ಅಂತೀರಾ..?

ಮರಿಪಚ್ಚ: ನಮ್ಮಪ್ಪ 20 ರೂಪಾಯಿ ಉಳಿಸೋಕೆ 20 ನಿಮಿಷ ನಡೀತಾ ಇದ್ರು...

ಗುಂಡ: ನೀನು?

ಮರಿಪಚ್ಚ: 20 ನಿಮಿಷ ಉಳಿಸೋಕೆ 20 ರೂಪಾಯಿ...

ಪಚ್ಚ, ಮರಿಪಚ್ಚ ನದಿಗೆ ಮೀನು ಹಿಡಿಯಲು ಹೋದರು.. ಸ್ವಲ್ಪ ಹೊತ್ತಿಗೆ..

ಪಚ್ಚ: ಲೋ.. ದೋಣಿ ಯಾಕೋ ತೂತು ಮಾಡ್ತಾ ಇದ್ದೀಯಾ..?

ಮರಿಪಚ್ಚ: ಆ ಕಡೆಯಿಂದ ನೀರು...

Back to Top