ಐಪೋನ್-12 ಸೇರಿದಂತೆ ಹಲವು ಸ್ಮಾರ್ಟ್ ಪೋನ್ ಗಳಿಗೆ ಭರ್ಜರಿ ಡಿಸ್ಕೌಂಟ್: ಇಲ್ಲಿದೆ ಮಾಹಿತಿ
Team Udayavani, Jan 24, 2021, 9:50 PM IST
ನವದೆಹಲಿ: ಹಿಂದೆಂದೂ ಕಂಡು ಕೇಳರಿಯದ ಮಾದರಿಯಲ್ಲಿ ಆ್ಯಪಲ್ ಐಫೋನ್ 12 ಗೆ Maple ಆನ್ ಲೈನ್ ಮತ್ತು ಆಫ್ ಲೈನ್ ಸ್ಟೋರ್ ಗಳಲ್ಲಿ ಭರ್ಜರಿ ಡಿಸ್ಕೌಂಟ್ ದೊರಕುತ್ತಿದೆ.
ಹೌದು ! ಮ್ಯಾಪಲ್ (Maple) ಸ್ಟೋರ್ ಗಳಲ್ಲಿ 16,000 ರೂ. ವರೆಗೂ ಡಿಸ್ಕೌಂಟ್ ನಲ್ಲಿ ಆ್ಯಪಲ್ ಐಫೋನ್ ಗಳು ದೊರಕುತ್ತಿದೆ. ಖರೀದಿದಾರರು 8000 ರೂ.ಗಳ ಮ್ಯಾಪಲ್ ಎಕ್ಸ್‌ಕ್ಲೂಸಿವ್ ರಿಯಾಯಿತಿ ಮತ್ತು ಎಚ್ ಡಿಎಫ್ ಸಿ ಕ್ಯಾಶ್‌ಬ್ಯಾಕ್ ಆಫರ್ 9000 ರೂ.ಗಳವರೆಗೆ ಪಡೆಯಬಹುದು. ಕೇವಲ ಐಫೋನ್ 12 ಮಾತ್ರವಲ್ಲದೆ ಐಫೋನ್ 11 ಸರಣಿ ಸೇರಿದಂತೆ ಇತರ ಐಫೋನ್ ಮಾದರಿಗಳಿಗೂ ಈ ಆಫರ್ ಲಭ್ಯವಿದೆ.
ಮ್ಯಾಪಲ್ ಸ್ಟೋರ್ ಅಧಿಕೃತ ಆ್ಯಪಲ್ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಮಳಿಗೆಯಾಗಿದ್ದು, ಐಫೋನ್ ಗಳಿಗೆ ಹಿಂದೆಂದೂ ಕಂಡರಿಯದ ಮಾದರಿಯಲ್ಲಿ ಡಿಸ್ಕೌಂಟ್ ನೀಡುತ್ತಿದೆ. ಮ್ಯಾಪಲ್ ವೆಬ್ ಸೈಟ್ ಮಾಹಿತಿ ಪ್ರಕಾರ, ಗ್ರಾಹಕರಿಗೆ ಬ್ಯಾಂಕ್ ಆಫರ್ ಸಹಿತ 16 ಸಾವಿರದವರೆಗೂ ಡಿಸ್ಕೌಂಟ್ ನೀಡಲಾಗುವುದು. ಮಾತ್ರವಲ್ಲದೆ ಗ್ರಾಹಕರಿಗೆ ತಮ್ಮ ಹಳೆ ಡಿವೈಸ್ ಗಳನ್ನು ಬದಲಾಯಿಸಿ ಹೊಸ ಸ್ಮಾರ್ಟ್ ಪೋನ್ ಕೊಳ್ಳಲು ಕೂಡ ಅವಕಾಶ ಕಲ್ಪಿಸಿದೆ. ಆದರೆ ಎಕ್ಸ್ ಚೆಂಜ್ ಆಫರ್ ಮ್ಯಾಪಲ್ ಆನ್ ಲೈನ್ ಸ್ಟೋರ್ ಗಳಲ್ಲಿ ಮಾತ್ರ ಲಭ್ಯವಿದೆ.
ಇದನ್ನೂ ಓದಿ: ಬಿಜೆಪಿ ಇನ್ನೂ 5 ವರ್ಷ ಅಧಿಕಾರಕ್ಕೆ ಬಂದರೇ, ಅಸ್ಸಾಂ ಭದ್ರವಾಗುತ್ತದೆ : ಶಾ
ಐಫೋನ್-12 76,900 ರೂ. ಮೂಲಬೆಲೆಯನ್ನು ಹೊಂದಿದ್ದು, ಮ್ಯಾಪಲ್ ಡಿಸ್ಕೌಂಟ್ 3000 ರೂ. ಹಾಗೂ ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಡಿಸ್ಕೌಂಟ್ 6 ಸಾವಿರ ರೂ. ಗಳಿವೆ. ಇದೇ ಮಾದರಿಯಲ್ಲಿ 64,490 ರೂ. ಮೂಲ ಬೆಲೆ ಹೊಂದಿರುವ ಐಫೋನ್ 12 ಮಿನಿ ಮೊಬೈಲ್ ಗೆ ಮ್ಯಾಪಲ್ ಎಕ್ಸ್ ಕ್ಲೂಸಿವ್ ಡಿಸ್ಕೌಂಟ್ 3000 ರೂ. ಜೊತೆಗೆ HDFC ಡೆಬಿಟ್ ಕಾರ್ಡ್ ಮೂಲಕ 4500 ರೂ. ಹಾಗೂ HDFC ಕ್ರೆಡಿಟ್ ಕಾರ್ಡ್ ಮೂಲಕ 9000 ರೂ. ಕ್ಯಾಶ್ ಬ್ಯಾಕ್ ದೊರಕುತ್ತಿದೆ.
ಈ ಆಫರ್ ಗಳು ಐಫೋನ್ -12 ಪ್ರೋ ಸೇರಿದಂತೆ ಇತರ ಆ್ಯಪಲ್ ಮೊಬೈಲ್ ಗೂ ಲಭ್ಯವಿದೆ. 1,27,900 ಮೂಲ ಬೆಲೆ ಹೊಂದಿರುವ ಪ್ರೋ ಮ್ಯಾಕ್ಸ್ 128 ಜಿಬಿ ಮಾದರಿಗೆ 8000 ರೂ. ಡಿಸ್ಕೌಂಟ್ ಲಭ್ಯವಿದೆ. HDFC ಕಾರ್ಡ್ ಮೂಲಕ 5000 ಕ್ಯಾಶ್ ಬ್ಯಾಕ್ ದೊರಕುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಮ್ಯಾಪಲ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಇದನ್ನೂ ಓದಿ: ಫೇಸ್ ಬುಕ್, ವಾಟ್ಸಾಪ್ ಬದಲಿಗೆ ಹೊಸ ಅಪ್ಲಿಕೇಶನ್ ಬಳಸಲು ಆರಂಭಿಸಿದ ಪಾಕ್ ಉಗ್ರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಾಸನದ ಮಗುವನ್ನು 5 ಲಕ್ಷ ರೂ. ಗೆ ಕಾರ್ಕಳದಲ್ಲಿ ಮಾರಾಟ: ಇಬ್ಬರು ಮಹಿಳೆಯರು ಸೇರಿ ಮೂವರ ಬಂಧನ
ಇಬ್ಬರು ಒಪ್ಪಿದ್ದಾರೆ, ಅದು ಅತ್ಯಾಚಾರವಾಗಲ್ಲ: ಜಾರಕಿಹೊಳಿ ಬೆಂಬಲಕ್ಕೆ ರೇಣುಕಾಚಾರ್ಯ
ಟೆಸ್ಲಾ ಕಂಪೆನಿಗೆ ಪ್ರೋತ್ಸಾಹ ಧನ ನೀಡಲು ಭಾರತ ಸಿದ್ಧ : ಗಡ್ಕರಿ
ತಮಿಳುನಾಡು: ನೀತಿ ಸಂಹಿತೆ ಉಲ್ಲಂಘನೆ, ರಾಹುಲ್ ವಿರುದ್ಧ ಬಿಜೆಪಿ ಕಿಡಿ
ಬಾಂಡ್ v/s ಈಕ್ವಿಟಿ: ಮುಂಬಯಿ ಷೇರುಮಾರುಕಟ್ಟೆ ಸೆನ್ಸೆಕ್ಸ್ ಸೂಚ್ಯಂಕ 440 ಅಂಕ ಕುಸಿತ