ಇಂಧನ ಬಳಕೆ ಗುಣಮಟ್ಟಕ್ಕೆ ವಾಹನಗಳು ಬದ್ಧವಾಗಿರಬೇಕು : ಹೆದ್ದಾರಿ ಸಚಿವಾಲಯದಿಂದ ಬಿಗಿ ನಿರ್ಬಂಧ
Team Udayavani, Jul 7, 2022, 10:30 AM IST
ನವದೆಹಲಿ: ರಾಷ್ಟ್ರೀಯ ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ಬಿಗಿ ನಿರ್ಬಂಧ ವನ್ನು ವಾಹನಗಳ ಮೇಲೆ ಹೇರಿದೆ. ಇಂಧನ ಬಳಕೆ ಕಡಿಮೆ ಮಾಡಲು, ಎಲ್ಲ ಮಾದರಿ ವಾಹನಗಳು ಮುಂದಿನ ಏಪ್ರಿಲ್‌ನಿಂದ ಇಂಧನ ಬಳಕೆ ಗುಣಮಟ್ಟಕ್ಕೆ ಬದ್ಧರಾಗುವಂತೆ ಸೂಚಿಸಿದೆ.
ವಾಹನಗಳ ತೈಲ ಬಳಕೆಯ ಗುಣಮಟ್ಟವನ್ನು, ವಾಹನೋದ್ಯಮ ಗುಣಮಟ್ಟ 149 ವಿಧಿಯ ಪ್ರಕಾರ ಪರಿಶೀಲಿಸಲಾಗುವುದು ಎಂದು ತಿಳಿಸಿದೆ.
ಜು.1ರಂದೇ ಅಧಿಸೂಚನೆ ಹೊರಡಿಸಿರುವ ಸಚಿವಾಲಯ, ವಿವಿಧ ವರ್ಗಕ್ಕೆ ಸೇರಿದ ಹಗುರ, ಮಧ್ಯಮ ಮತ್ತು ಭಾರೀ ತೂಕದ ವಾಹನಗಳು ತೈಲ ಬಳಕೆ ಗುಣಮಟ್ಟಕ್ಕೆ ಬದ್ಧವಾಗಿರಬೇಕು. ಅವು ಭಾರತದಲ್ಲೇ ತಯಾರಾಗಿರಲಿ, ವಿದೇಶ ದಲ್ಲೇ ತಯಾರಾಗಿರಲಿ ನಿಯಮಗಳಿಗೆ ಬದ್ಧವಾಗಿರುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಈ ಅಧಿಸೂಚನೆಗೂ ಮುನ್ನ ಸಚಿವಾಲಯ ಬಿಡುಗಡೆ ಮಾಡಿದ್ದ ಒಂದು ಹೇಳಿಕೆಯಲ್ಲಿ ಎಂ1 ವರ್ಗಕ್ಕೆ ಸೇರಿದ ವಾಹನಗಳಿಗೆ ಮಾತ್ರ ಈ ನಿಯಮ ಅನ್ವಯಿಸಲಾಗಿತ್ತು. ಇದೀಗ ಎಲ್ಲ ವಾಹನಗಳಿಗೂ ಕಡ್ಡಾಯ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾಳೆ ಮೊಟೊ ಜಿ62 ಬಿಡುಗಡೆ; 5000ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್
ಬಂದಿದೆ ಹೊಸ ಫೀಚರ್ಸ್;ಯಾರಿಗೂ ತಿಳಿಯದಂತೆ ವಾಟ್ಸಪ್ ಗ್ರೂಪ್ ನಿಂದ ಲೆಫ್ಟ್ ಆಗಬಹುದು!
ಆ.15ರಂದು “ಓಲಾ ಎಸ್1 ಪ್ರೋ’ ಅನಾವರಣ; ಗರಿಷ್ಠ ವೇಗ ಮಿತಿ 115 ಕಿ.ಮೀ.,10 ಬಣ್ಣಗಳಲ್ಲಿ ಲಭ್ಯ
ವಾಟ್ಸ್ಆ್ಯಪ್ನ ಗ್ರೂಪ್ ಚಾಟ್ಗೆ ಹೊಸ ಫೀಚರ್ಸ್
ಎಲ್ಎಸಿ ಕಣ್ಗಾವಲಿಗೆ ಸುಧಾರಿತ ಡ್ರೋನ್ ಅಸ್ತ್ರ; ಬೆಂಗಳೂರಿನ ಎಚ್ಎಎಲ್ನಲ್ಲಿ ಅಭಿವೃದ್ಧಿ