Redmi Note-9 ಸರಣಿಯ 3 ಹೊಸ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ, ವಿಶೇಷತೆಗಳ ಮಾಹಿತಿ ಇಲ್ಲಿದೆ


Team Udayavani, Nov 27, 2020, 8:25 PM IST

redmi note 9

ನವದೆಹಲಿ:  ಕೊನೆಗೂ ಶಿಯೋಮಿ ಸಂಸ್ಥೆ ರೆಡ್ಮಿ ನೋಟ್ 9 ಸರಣಿಯ ಸ್ಮಾರ್ಟ್ ಫೋನ್ ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೀಗ ಚೀನಾದಲ್ಲಿ ಮಾತ್ರ ಬಿಡುಗಡೆಗೊಂಡಿದ್ದು ನಂತರದ ದಿನಗಳಲ್ಲಿ ವಿವಿಧ ದೇಶಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ನ. 27ರಂದು ರೆಡ್ಮಿಯ ಪ್ರಮುಖ 3 ಸ್ಮಾರ್ಟ್ ಫೋನ್ ಗಳು ಲೋಕಾರ್ಪಣೆಗೊಂಡಿದ್ದು, ಇದರಲ್ಲಿ ರೆಡ್ಮಿ ನೋಟ್-9 4G, ರೆಡ್ಮಿ ನೋಟ್-9 5G,  ಮತ್ತು ರೆಡ್ಮಿ ನೋಟ್-9 5G  ಪ್ರೋ  ಫೋನ್ ಗಳು ಸೇರಿವೆ. ಈ ವರ್ಷಾರಂಭದಲ್ಲಿ ಭಾರತದಲ್ಲಿ ರೆಡ್ಮಿ ನೋಟ್-9 ಸರಣಿಯ, ಪ್ರೋ ಮ್ಯಾಕ್ಸ್, ಪ್ರೋ, ಮತ್ತು ನೋಟ್-9 ಸ್ಮಾರ್ಟ್ ಪೋನ್ ಗಳು ಬಿಡುಗಡೆಯಾಗಿ ಜನಪ್ರಿಯತೆ ಪಡೆದಿದ್ದವು.

ರೆಡ್ಮಿ ನೋಟ್-9 ಪ್ರೋ 5ಜಿ ವಿಶೇಷತೆಗಳು:

ಈ ಆವೃತ್ತಿಯ ಇತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೇ ಪ್ರೋ 5ಜಿ ಮೊಬೈಲ್ ಅತೀ ಹೆಚ್ಚು ಫೀಚರ್ ಗಳನ್ನು ಒಳಗೊಂಡು ಆಕರ್ಷಕವಾಗಿದೆ. 1080 ರೆಸಲ್ಯೂಷನ್ ಮತ್ತು 120 Hz  ರೀಫ್ರೆಶ್ ರೇಟ್ ಹೊಂದಿರುವ  6.67 ಇಂಚಿನ ಡಿಸ್ ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 750ಜಿ ಚಿಪ್ ಸೆಟ್ ಹಾಗೂ ಸ್ಮಾರ್ಟ್ ಪೋನ್ ನ ಹಿಂಭಾಗ ಮತ್ತು ಮುಂಭಾಗಕ್ಕೆ ಗೊರಿಲ್ಲಾ ಗ್ಲಾಸ್-5 ಅಳವಡಿಸಲಾಗಿದೆ. 256 ಜಿಬಿ ಸ್ಟೋರೇಜ್ ಸಾಮಾರ್ಥ್ಯವಿದ್ದು, 512 ಜಿಬಿಯವರೆಗೂ ವಿಸ್ತರಿಸಬಹುದು.

ಇದನ್ನೂ ಓದಿಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಈ ಸ್ಮಾರ್ಟ್ ಪೋನ್  ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದ್ದು,  108 ಮೆಗಾಫಿಕ್ಸೆಲ್ ಹಿಂಬದಿ ಕ್ಯಾಮಾರಾವಿದ್ದು, ಇದು  8 ಎಂಪಿ ಅಲ್ಟ್ರಾವೈಡ್, ಮ್ಯಾಕ್ರೋ ಶೂಟರ್ ಮತ್ತು ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ.  ಮುಂಭಾಗದಲ್ಲಿ ಸೆಲ್ಫಿಗಾಗಿ 16 ಎಂಪಿ ಕ್ಯಾಮಾರವನ್ನು ನೀಡಲಾಗಿದೆ.

4,820 mAh ಬ್ಯಾಟರಿ ಸಾಮರ್ಥ್ಯ ಹಾಗೂ 33W ಫಾಸ್ಟ್ ಚಾರ್ಜರ್ ವ್ಯವಸ್ಥೆಯಿದ್ದು 58 ನಿಮಿಷದಲ್ಲಿ 100% ಚಾರ್ಜ್ ಆಗುವುದು.

ರೆಡ್ಮಿ ನೋಟ್ 9 5ಜಿ: 6.53 ಇಂಚಿನ ಎಲ್ ಸಿಡಿ ಪ್ಯಾನಲ್ ನೊಂದಿಗೆ  ಫುಲ್ ಹೆಚ್ ಡಿ ಪ್ಲಸ್ ಡಿಸ್ ಪ್ಲೇ ಈ ಸ್ಮಾರ್ಟ್ ಫೋನ್ ಹೊಂದಿದ್ದು, 48 ಎಂಪಿ ಹಿಂಬದಿ ಕ್ಯಾಮಾರವನ್ನು ಹೊಂದಿದೆ. ಇದರಲ್ಲಿ 8 ಎಂಪಿ ಅಲ್ಟ್ರಾವೈಡ್ ಮತ್ತು 2 ಎಂಪಿ ಮ್ಯಾಕ್ರೋ  ಕ್ಯಾಮಾರ  ವ್ಯವಸ್ಥೆಯಿದೆ. ಸೆಲ್ಫಿ ಗಾಗಿ 13 ಎಂಪಿ ಲೆನ್ಸ್ ನೀಡಲಾಗಿದೆ.  ಈ ಮೊಬೈಲ್ 5,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ

ಇದನ್ನೂ ಓದಿ: QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ರೆಡ್ಮಿ ನೋಟ್ 9 4ಜಿ: ಸ್ನ್ಯಾಪ್ ಡ್ರಾಗನ್ 662 ಚಿಪ್ ಸೆಟ್ ನೊಂದಿಗೆ 128 ಜಿಬಿ ಸ್ಟೋರೇಜ್  ಸಾಮಾರ್ಥ್ಯವಿರುವ ಈ ಸ್ಮಾರ್ಟ್ ಫೋನ್, 4ಜಿಬಿ RAM ಒಳಗೊಂಡಿದೆ. ಮಾತ್ರವಲ್ಲದೆ 6.53 ಇಂಚಿನ ಎಲ್ ಸಿಡಿ ಡಿಸ್ ಪ್ಲೇ ಯೊಂದಿಗೆ 6,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. 48 ಎಂಪಿ ಹಿಂಬದಿ ಕ್ಯಾಮಾರ ಹಾಗೂ 8 ಎಂಪಿ ಸೆಲ್ಫಿ ಕ್ಯಾಮರಾ ಇದರ ಪ್ರಮುಖ ಫೀಚರ್ ಗಳಲ್ಲಿ ಒಂದು.

ಬೆಲೆ:  

ರೆಡ್ಮಿ ನೋಟ್ 9 ಪ್ರೋ 5ಜಿ: 17,000-22,000ರೂ.

ರೆಡ್ಮಿ ನೋಟ್ 9 5ಜಿ: 14,600-19,100 ರೂ.

ರೆಡ್ಮಿ ನೋಟ್ 9 4ಜಿ: 11,200- 16,800 ರೂ.

ಇದನ್ನೂ ಓದಿ:  ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಟಾಪ್ ನ್ಯೂಸ್

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fusion

UV Fusion: ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿಲಿ ಕೊಡೆ ಹಿಡಿದ

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

6-uv-fusion

UV Fusion: ಮಿತಿಯೊಳಗಿನ ಬದುಕು ನೆನಪಾದಾಗ

5-vitla

Vitla Palace: ಶತಮಾನಗಳ ಇತಿಹಾಸದ ವಿಟ್ಲ ಅರಮನೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.