Sex ವೇಳೆ ಕಾಂಡೋಮ್ ತೆಗೆದು ವಂಚನೆ:ವ್ಯಕ್ತಿಯ ವಿರುದ್ಧ ರೇಪ್ ಕೇಸ್!
Team Udayavani, Jan 12, 2017, 11:37 AM IST
ಲಾಸನ್ನೇ: ಲೈಂಗಿಕ ಕ್ರಿಯೆ ವೇಳೆ ಜೊತೆಗಾರ್ತಿಗೆ ತಿಳಿಯದಂತೆ ಕಾಂಡೋಮ್ ತೆಗದ ಕಾರಣಕ್ಕೆ ವ್ಯಕ್ತಿಯೊಬ್ಬನ ವಿರುದ್ಧ ರೇಪ್ ಕೇಸ್ ದಾಖಲಿಸಿದ ಅತ್ಯಪರೂಪದ ಪ್ರಕರಣ ಸ್ವಿಟ್ಜರ್ಲ್ಯಾಂಡ್ನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ತೀರ್ಪು ನೀಡಿದ ಲಾಸನ್ನೇಯ ಕ್ರಿಮಿನಲ್ ಕೋರ್ಟ್ ಲೈಂಗಿಕ ಕ್ರಿಯೆಯ ವೇಳೆ ಜೊತೆಗಾರ್ತಿ ಕಾಂಡೋಮ್ ಬಳಕೆ ನಿರೀಕ್ಷಿಸಿ ಅದನ್ನು ಬಳಸದೆ ಇರುವುದು ಅತ್ಯಾಚಾರಕ್ಕೆ ಸಮ ಎಂದಿದೆ. 47 ರ ಹರೆಯದ ಫ್ರಾನ್ಸ್ ಮೂಲದ ವ್ಯಕ್ತಿಗೆ 12 ತಿಂಗಳಕಾಲ ಅಮಾನತಿಲ್ಲಿಡಲಾದ ಶಿಕ್ಷೆಯನ್ನೂ ಕೋರ್ಟ್ ವಿಧಿಸಿದೆ.
ಈತನಿಗೆ ಮಹಿಳೆಯೊಂದಿಗೆ ಡೇಟಿಂಗ್ ಆ್ಯಪ್ ಟಿಂಡರ್ನಲ್ಲಿ 2015ರಲ್ಲಿ ಪರಿಚಯವಾಗಿದ್ದು, ಪ್ರೀತಿ ಮುಂದುವರಿದು ಹಲವು ಬಾರಿ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡಸಿದ್ದರು. ಆದರೆ ಈ ಬಾರಿ ಮಾತ್ರ ಆತ ನೈಜ ಲೈಂಗಿಕ ತೃಪ್ತಿ ಪಡೆಯುಲು ಮುಂದಾಗಿ ಸಿಕ್ಕಿ ಬಿದ್ದಿದ್ದ. ಪರಿಣಾಮವಾಗಿ ರೇಪ್ ಆರೋಪಿಯಾಗಬೇಕಾದ ದುಸ್ಥಿತಿ ಬಂದಿದೆ.
ಕೋರ್ಟ್ ನೀಡಿರುವ ಈ ತೀರ್ಪು ಸ್ವಿಟ್ಜರ್ಲ್ಯಾಂಡ್ ಇತಿಹಾಸದಲ್ಲೇ ಮೊದಲ ಬಾರಿ ಎಂದು ಸಂತ್ರಸ್ತೆಯ ಪರ ವಕೀಲರು ತಿಳಿಸಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ