ಟ್ರಂಪ್ರ 6 ಅಡಿ ಎತ್ತರದ ಮೂರ್ತಿ ರಚಿಸಿದ ತೆಲಂಗಾಣದ ಅಭಿಮಾನಿ
Team Udayavani, Jun 20, 2019, 12:07 PM IST
ಅಮೆರಿಕ ಅಧ್ಯಕ್ಷರ ಪೈಕಿ ಅತಿ ಹೆಚ್ಚು ವಿರೋಧಿಗಳನ್ನು ಮತ್ತು ಟೀಕಾಕಾರರನ್ನು ಹೊಂದಿರುವ ಅಧ್ಯಕ್ಷ ಎಂದರೆ ಡೊನಾಲ್ಡ್ ಟ್ರಂಪ್. ಡೊನಾಲ್ಡ್ ಟ್ರಂಪ್ಗೆ ಅಮೆರಿಕದಲ್ಲಿ ಕಟ್ಟಾ ಅಭಿಮಾನಿಗಳು ಇದ್ದಾರೋ ಇಲ್ಲವೋ? ಆದರೆ ಭಾರತದಲ್ಲಂತೂ ಅವರ ಖಟ್ಟರ್ ಅಭಿಮಾನಿಯೊಬ್ಬರು ಇದ್ದಾರೆ. ತೆಲಂಗಾಣದ ಜಂಗಾಂವ್ ಜಿಲ್ಲೆಯ ಕೊನ್ನೆ ಗ್ರಾಮದ ಬುಸ್ಸ ಕೃಷ್ಟ (32) ಎಂಬವರು ಟ್ರಂಪ್ರ ಅಭಿಮಾನಿ. ಟ್ರಂಪ್ರ ಫೋಟೋಗೆ ಪ್ರತಿನಿತ್ಯ ಪೂಜೆ ಮಾಡುವ ಮೂಲಕ ಅವರು ಈ ಹಿಂದೆ ಸುದ್ದಿಯಾಗಿದ್ದರು. ಈಗ ಈ ಅಭಿಮಾನಿ 6 ಅಡಿ ಎತ್ತರದ ಟ್ರಂಪ್ ಮೂರ್ತಿಯನ್ನು ನಿರ್ಮಿಸಿದ್ದಾರೆ. ಈ ಮೂರ್ತಿಗೆ ಇನ್ನು ಮುಂದೆ ಪೂಜೆ ನೆರವೇರಲಿದೆಯಂತೆ. ಟ್ರಂಪ್ರ ಪ್ರಬಲ ನಾಯಕತ್ವ, ಅವರ ದಿಟ್ಟ ನಿಲುವು ಕೃಷ್ಣರನ್ನು ಇನ್ನಿಲ್ಲದಂತೆ ಸೆಳೆದಿದೆಯಂತೆ. ಕಳೆದ ಜು. 14ರಂದು ಟ್ರಂಪ್ರ ಹುಟ್ಟುಹಬ್ಬಕ್ಕೆ ತಮ್ಮ ಮನೆ ಮುಂದೆ ಟ್ರಂಪ್ರ ದೊಡ್ಡ ಪೋಸ್ಟರ್ ಹಾಕಿ ಶುಭಾಶಯ ಕೋರಿದ್ದರು. ಕೃಷ್ಣರಿಗೆ ಜೀವಮಾನದಲ್ಲಿ ಒಮ್ಮೆಯಾದರೂ ಟ್ರಂಪ್ರನ್ನು ಭೇಟಿಯಾಗಬೇಕು ಎಂಬ ಬೃಹತ್ ಆಸೆ ಬಿಟ್ಟರೆ, ಬೇರೇನೂ ಬಯಕೆಯೇ ಇಲ್ಲವಂತೆ!