ಚಳಿಗಾಲದಲ್ಲಿ ಕಾಡುವ ಒಣ ತ್ವಚೆ ಸಮಸ್ಯೆ; ಈ ಸಿಂಪಲ್ ಟಿಪ್ಸ್ ಬಳಸಿ…

ಟೊಮೆಟೊ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಕೈ ಕಾಲು ಕುತ್ತಿಗೆಗೆ ಹಚ್ಚಿ.

Team Udayavani, Nov 22, 2022, 5:40 PM IST

web exclusive kavya

ಚಳಿಗಾಲದಲ್ಲಿ ಚರ್ಮವೆಲ್ಲವೂ ಒಣಗಿ ಹೋಗಿ ಹಲವಾರು ರೀತಿಯ ಸಮಸ್ಯೆ ಉಂಟಾಗುತ್ತದೆ. ದೇಹದ ಆರೋಗ್ಯ ಮತ್ತು ಚರ್ಮದ ಆರೋಗ್ಯ ಕಾಪಾಡಲು ಜಲಸಂಚಯನ(ಹೈಡ್ರೀಕರಿಸುವುದು) ತುಂಬಾ ಮುಖ್ಯ.

ಚಳಿಗಾಲದಲ್ಲಿ ತಂಪು ವಾತಾವರಣ. ಹೆಚ್ಚಾಗಿ ಬಾಯಾರಿಕೆ ಆಗುವುದಿಲ್ಲ. ಆದ್ದರಿಂದ ತುಂಬಾ ಜನರು ಸಾಕಷ್ಟು ನೀರು ಕುಡಿಯುವುದನ್ನು ತಪ್ಪಿಸುತ್ತಾರೆ. ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ ಎಂದು ಎಷ್ಟೋ ಜನರು ಚಳಿಗಾಲದಲ್ಲಿ ಸಾಕಷ್ಟು ನೀರು ಕುಡಿಯುವುದಿಲ್ಲ. ದ್ರವ ಪದಾರ್ಥ ಸೇವನೆ ಮಾಡಲ್ಲ. ಇದು ಬದಲಾಗುವ ಋತುಮಾನದಲ್ಲಿ ಹಲವು ಸಮಸ್ಯೆ ತಂದೊಡ್ಡುತ್ತದೆ.

ಚಳಿಗಾಲದಲ್ಲಿ ಕಡಿಮೆ ನೀರು ಕುಡಿದರೆ ಒಣ ಚರ್ಮ ಸಮಸ್ಯೆ ಕಾಡುತ್ತದೆ. ಇದು ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಚರ್ಮವು ಚಳಿಗಾಲದಲ್ಲಿ ಹೆಚ್ಚು ಒಣಗುತ್ತದೆ. ಚಳಿಗಾಲದಲ್ಲಿ ಉಂಟಾಗುವ ಒಣ ಚರ್ಮ ಸಮಸ್ಯೆ ತುರಿಕೆಗೂ ಕಾರಣವಾಗುತ್ತದೆ.

ಚರ್ಮದ ಹೊರ ಪದರ ಸಮರ್ಪಕವಾಗಿ ತೇವವಾದ್ರೆ ವಿಷಕಾರಿ ಅಂಶಗಳು ಹೊರ ಹೋಗುತ್ತವೆ ಮತ್ತು ಪೋಷಕಾಂಶಗಳು ಚರ್ಮದ ಕೋಶಗಳನ್ನು ತಲುಪುತ್ತವೆ. ಚರ್ಮವು ಚೆನ್ನಾಗಿ ಹೈಡ್ರೀಕರಿಸಿದರೆ ಕಿರಿಕಿರಿ ಕಡಿಮೆ ಆಗುತ್ತದೆ.

ತೈಲ ಮಸಾಜ್: ಮುಖದ ಮೇಲೆ ನೈಸರ್ಗಿಕ ತೈಲ ಬಳಸುವುದು ಪ್ರಯೋಜನಕಾರಿ. ಇದು ನಿಮ್ಮ ಚರ್ಮದಲ್ಲಿ ತೇವಾಂಶ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ಯಾವಾಗಲೂ ರಾತ್ರಿಯಲ್ಲಿ ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಮಸಾಜ್ ಮಾಡಿ.

ಕಠಿಣ ಕ್ಲೆನ್ಸರ್‌ ಬಳಕೆ ಬೇಡ: ಕಠಿಣವಾದ ಕ್ಲೆನ್ಸರ್‌ಗಳು, ಫೇಸ್ ವಾಶ್‌ಗಳು ತ್ವಚೆಯ ನೈಸರ್ಗಿಕ ತೇವಾಂಶ ತೆಗೆದು ಹಾಕುತ್ತದೆ. ಇದರ ಪರಿಣಾಮವಾಗಿ ಚರ್ಮದ ಮೇಲಿನ ಪದರದಲ್ಲಿ ಬಿರುಕು ಉಂಟಾಗುತ್ತವೆ. ಚರ್ಮವು ಶುಷ್ಕ, ಬಿರುಕು, ಕೆಂಪು ಕಾಣಿಸಿಕೊಳ್ಳಬಹುದು. ಮುಖ ತೊಳೆಯಲು ಉತ್ತಮ ಗುಣಮಟ್ಟದ ಫೇಸ್​ ವಾಶ್​ಗಳನ್ನು ಬಳಸಿ.

ಹೆಚ್ಚು ನೀರು ಕುಡಿಯಿರಿ: ಚಳಿಗಾಲದಲ್ಲಿ ಹೆಚ್ಚು ನೀರು ಕುಡಿಯಿರಿ. ನೀರು ದೈಹಿಕ ಆರೋಗ್ಯ ಮತ್ತು ತ್ವಚೆಯ ಆರೋಗ್ಯಕ್ಕೆ ಅತ್ಯಂತ ಮುಖ್ಯ. ನೀರು ರಕ್ತನಾಳಕ್ಕೆ ಪ್ರವೇಶಿಸಿದ ನಂತರ, ಅದು ಜೀವಕೋಶಗಳನ್ನು ಹೈಡ್ರೇಟ್ ಮಾಡುತ್ತದೆ. ನೈಸರ್ಗಿಕವಾಗಿ ಚರ್ಮವನ್ನು ಹೈಡ್ರೇಟ್ ಮಾಡಲು ಇದು ಅತ್ಯುತ್ತಮ ಮಾರ್ಗ.

ಕೆಫೀನ್, ಆಲ್ಕೋಹಾಲ್ ಬದಲು ನೈಸರ್ಗಿಕ ಪಾನೀಯ: ಕೆಫೀನ್ ಮತ್ತು ಆಲ್ಕೋಹಾಲ್ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅದರ ಬದಲು ಹರ್ಬಲ್ ಟೀ, ನಿಂಬೆ ಪಾನಕ, ತೆಂಗಿನ ನೀರು ಇತ್ಯಾದಿ ಸೇವಿಸಿ.

ನೀರಿನಂಶವಿರುವ ಆಹಾರ ಸೇವಿಸಿ: ನೀರಿನಂಶ ಹೊಂದಿರುವ ಸಮೃದ್ಧ ಆಹಾರ ಸೇವಿಸಿ. ದೇಹ ಮತ್ತು ಚರ್ಮದ ನೀರಿನ ಪ್ರಮಾಣವು ಆಹಾರ ಸೇವನೆ ಮೇಲೆ ಪರಿಣಾಮ ಬೀರುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡಲು ನೀರು ಭರಿತ ಆಹಾರ ಉತ್ತಮ. ಸ್ಟ್ರಾಬೆರಿ, ಕಿತ್ತಳೆ, ಬಾಟಲ್ ಸೋರೆಕಾಯಿ, ಚೀನೀಕಾಯಿ, ಕಲ್ಲಂಗಡಿ ಹಣ್ಣು, ಜ್ಯೂಸ್‌ಗಳನ್ನು ಸೇವಿಸುತ್ತಿರುವುದು ಒಳ್ಳೆಯದು.

ಚಳಿಗಾಲದಲ್ಲಿ ತ್ವಚೆಯು ಹೆಚ್ಚು ಶುಷ್ಕವಾಗಿ ಇರುತ್ತದೆ. ಇಂತಹ ಸಮಯದಲ್ಲಿ ಮಾಯಿಶ್ವರೈಸರ್‌ಗಳನ್ನು ಹೆಚ್ಚಾಗಿ ಬಳಸಬೇಕು. ಇದು ಒಣ ತ್ವಚೆಗೆ ಉತ್ತಮ. ಎಣ್ಣೆ ತ್ವಚೆ ಹೊಂದಿದ್ದವರು ಆಯಿಲ್​ ಬೇಸ್ಡ್​​ ಮಾಯಿಶ್ಚುರೈಸರ್ ಉತ್ತಮವಲ್ಲ. ಅದರ ಬದಲು ವಾಟರ್​ ಬೇಸ್ಡ್​​ ಮಾಯಿಶ್ಚುರೈಸರ್​ ಆಯ್ಕೆ ಮಾಡಿಕೊಳ್ಳಿ.

ಚಳಿಗಾಲದಲ್ಲಿ ತ್ವಚೆ ಒಣಗುವುದರಿಂದ ವಿಪರೀತ ತುರಿಕೆ ಹಾಗೂ ಕಡಿತ ಸಾಮಾನ್ಯ. ಈ ಸಮಸ್ಯೆಗೆ ಲೋಳೆಸರವನ್ನು ಬಳಸಿ. ಅಲೋವೆರಾದ ಸಿಪ್ಪೆ ಹಾಗೂ ಮುಳ್ಳನ್ನು ಪ್ರತ್ಯೇಕಿಸಿ. ತುರಿಕೆ ಇರುವ ಅಥವಾ ಒಣ ಚರ್ಮಕ್ಕೆ ಹಚ್ಚಿ, ಅರ್ಧ ಗಂಟೆ ಬಳಿಕ ಮುಖ ತೊಳೆಯಿರಿ.

ಟೊಮೆಟೊ ಪೇಸ್ಟ್ ಗೆ ರೋಸ್ ವಾಟರ್ ಬೆರೆಸಿ ಕೈ ಕಾಲು ಕುತ್ತಿಗೆಗೆ ಹಚ್ಚಿ. ಇದರಿಂದ ತ್ವಚೆ ಒಡೆಯುವುದಿಲ್ಲ. ಜೇನುತುಪ್ಪಕ್ಕೆ ಗುಲಾಬಿ ನೀರನ್ನು ಬೆರೆಸಿ ಪೇಸ್ಟ್ ತಯಾರಿಸಿ ಹಚ್ಚಿದರೆ ತ್ವಚೆ ಒಣಗುವುದಿಲ್ಲ. ಸ್ನಾನ ಮಾಡುವ ಅರ್ಧ ಗಂಟೆ ಮೊದಲು ಎಳ್ಳೆಣ್ಣೆ ಹಚ್ಚಿ ಮಸಾಜ್ ಮಾಡಿ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರಿಂದ ಮುಖ ಹೊಳೆಯುವುದರೊಂದಿಗೆ ಒಣ ತ್ವಚೆ ಸಮಸ್ಯೆಯೂ ದೂರವಾಗುತ್ತದೆ.

ಚಳಿಗಾಲದಲ್ಲಿ ಬಿಸಿನೀರಿನ ಸ್ನಾನ ಅಪಾಯ. ಕೆಲವಾರು ಅನೈಚ್ಛಿಕ ತೊಂದರೆಗಳೂ ಎದುರಾಗುತ್ತವೆ. ಚರ್ಮದ ಹೊರಪದರ ಪಕಳೆ ಏಳುವುದು, ತಲೆಹೊಟ್ಟು ಹಾಗೂ ವೃದ್ದಾಪ್ಯದ ಚಿಹ್ನೆಗಳು ಆವರಿಸುವುದನ್ನು ಶೀಘ್ರವಾಗಿಸಬಹುದು. ಆದ್ದರಿಂದ ಸ್ನಾನಕ್ಕೆ ಉಗುರುಬೆಚ್ಚನೆಯ ನೀರನ್ನು ಬಳಸುವುದು ಉತ್ತಮ. ಸಾಧ್ಯವಾದರೆ ತಣ್ಣೀರನ್ನು ಬಳಸಬೇಕು. ಒಣತ್ವಚೆಯವರಿಗೆ ತಣ್ಣೀರು ಅತ್ಯುತ್ತಮ.

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.