Udayavni Special

ಮಹಾರಾಷ್ಟ್ರ ಆಟೋ ಚಾಲಕರ ಕೋವಿಡ್ ವಾರಿಯರ್ಸ್ ಸೇವೆಗೆ ಸಲಾಂ


ಸುಹಾನ್ ಶೇಕ್, May 13, 2020, 6:13 PM IST

ಮಹಾರಾಷ್ಟ್ರ ಆಟೋ ಚಾಲಕರ ಕೋವಿಡ್ ವಾರಿಯರ್ಸ್ ಸೇವೆಗೆ ಸಲಾಂ

ಕೋವಿಡ್ 19 ಭೀತಿ, ಅವಾಂತರದ ನಡುವೆ ಒಂದಿಷ್ಟು ಜನ ನಮ್ಮ ಪಾಲಿಗೆ, ಈ ಸಮಾಜದ ದೃಷ್ಟಿಗೆ ಶಹಬ್ಬಾಸ್ ಎನ್ನುವ ಹೊಗಳಿಕೆ ಹಾಗೂ ಶ್ರೇಷ್ಠವಾದ ಗೌರವವನ್ನು ಪಡೆದಿದ್ದಾರೆ ಅಂಥವರ ಸಾಲಿನಲ್ಲಿ ವೈದ್ಯ ಲೋಕ ಮೊದಲಾಗಿ ನಿಲ್ಲುತ್ತದೆ. ಅದರೊಂದಿಗೆ ಕೋವಿಡ್ ವಾರಿಯರ್ಸ್ ಎಂದು ಕರೆಯಲ್ಪಡುವ ಪೊಲೀಸ್ ಇಲಾಖಾ ಸಿಬ್ಬಂದಿಗಳು ಇದ್ದಾರೆ.

ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ. ಜನ ಹೇಗೂ ತಮ್ಮ ಜೀವ ಉಳಿದು ಬಿಡಲಿ ಎಂದು ಜೀವದ ಆಸೆಯನ್ನು ಮಾಸ್ಕ್ ನ ಅಡಿಯಲ್ಲಿ ಬಚ್ಚಿಕೊಂಡು ದಿನ ದೂಡುತ್ತಿದ್ದಾರೆ. ಎಷ್ಟೇ ಜಾಗ್ರತೆವಹಿಸಿದರು ಕಾಣದ ವೈರಸ್ ಮಾನವ ದೇಹದೊಳಗೆ ಹೊಕ್ಕು ನೆಮ್ಮದಿಯ ದಿನಗಳನ್ನು ಪ್ರಪಂಚದಿಂದಲೇ ದೂರ ಮಾಡಿ ಬಿಟ್ಟಿದೆ.ಸಾರಿಗೆ ಸೌಲಭ್ಯ ಅಂಗಡಿ ವಹಿವಾಟು ಎಲ್ಲವೂ ಮುಚ್ಚಿರುವ ಈ ಸಮಯದಲ್ಲಿ ಇಲ್ಲೊಂದಿಷ್ಟು ಮಾನವೀಯತೆಯ ಹೃದಯಗಳು ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಅದು ದೇಹದ ಹಂಗು ಬಿಟ್ಟು ಬಡವ ನಿರ್ಗತಿಕರ ಸಹಾಯಕ್ಕೆ ನಿಂತ ಕೆಲಸ.

ಪ್ರತಿ ನಿತ್ಯ ದುಡಿದು, ಸಂಸಾರದ ನೌಕೆಯನ್ನು ನಾವಿಕನಾಗಿ ಸಾಗಿಸಬೇಕಾದ ವೃತ್ತಿಯಲ್ಲಿ ಆಟೋ ಚಾಲಕರು ಸೇರುತ್ತಾರೆ. ಅಂಥ ಆಟೋ ಚಾಲಕರು ಸದ್ಯ ಕೆಲಸವೇ ಇಲ್ಲದೆ ಮನೆಯಲ್ಲಿ ಕೂತು ದಿನ ದೂಡುವ, ನಾಳೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಭರವಸೆ ಬೆಳಕಿನ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಇಲ್ಲೊಂದಿಷ್ಟು ಆಟೋ ಚಾಲಕರು ಇಂಥ ಕಷ್ಟದ ಸಮಯದಲ್ಲೂ ಇನ್ನೊಬ್ಬರಿಗೆ ಸಹಾಯ ಮಾಡುವ ಮಹಾನ್ ಕಾರ್ಯದಲ್ಲಿ ನಿರತರಾಗಿದ್ದಾರೆ.

ಅಯಾಜ್ ಎನ್ನುವ ಆಪತ್ಫಾಂದವ : ಅಯಾಜ್ ತನ್ನ ‘KHIDMAT’  ಎನ್ನುವ ಆಟೋದಲ್ಲಿ ಉಚಿತ ಸೇವೆಯನ್ನು ನೀಡುತ್ತಿದ್ದಾರೆ. ಅಗತ್ಯವಿರುವವರಿಗಾಗಿ ಹಾಗೂ ಕೋವಿಡ್ ಕಾರ್ಯಕರ್ತರನ್ನು ಉಚಿತವಾಗಿ ಆಸ್ಪತ್ರೆಗೆ ಬಿಟ್ಟು ಬರುತ್ತಾರೆ. ಅನಾರೋಗ್ಯರಾಗಿರುವವನ್ನು ಉಚಿತವಾಗಿ ಆಟೋದಲ್ಲಿ ಬಿಟ್ಟು ಬರುತ್ತಾರೆ. ಲಾಕ್ ಡೌನ್ ಪ್ರಾರಂಭವಾದ ದಿನದಿಂದ ಇದುವರೆಗೂ ಸುಮಾರು 200 ಕ್ಕೂ ಅಧಿಕ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದ್ದಾರೆ.ಬಡವರಿಗಾಗಿ ಸದಾ ಅಯಾಜ್ ಸೇವೆ ಮಾಡುತ್ತಾ ಬಂದಿದ್ದಾರೆ. ಹಿಂದೆ ಎನ್ .ಜಿ, ಓ ನ ಊಟವನ್ನು ಉಚಿತವಾಗಿ ನೀಡುತ್ತಿದ್ದರು.

ಶಿಥಲ್ ಸರೋಡ್  ಎನ್ನುವ ದಿಟ್ಟೆ : ಮುಂಬೈ ಮೂಲದ ಆಟೋ ಡ್ರೈವರ್ ಶಿಥಲ್.ಉಚಿತವಾಗಿ ಅನಾರೋಗ್ಯ ಹಾಗೂ ಬಡವರಿಗೆ ತನ್ನ ಆಟೋದಲ್ಲಿ ಬಿಟ್ಟು ಬರುತ್ತಾರೆ. ಸಂಸಾರದ ಹೊಟ್ಟೆ ಭರ್ತಿಗಾಗಿ ದುಡಿಯುವ ಶಿಥಲ್ ಈ ಸಮಯದಲ್ಲಿ ಮಾನವೀಯತೆಯನ್ನು ಸಾರುತ್ತಿರುವುದು ನಿಜಕ್ಕೂ ಗ್ರೇಟ್. ಇವರಿಗೆ ಈ ಕೆಲಸ ಮನಸ್ಸಿಗೆ ತೃಪ್ತಿ ನೀಡುತ್ತದೆ ಅಂತೆ. ಈ ಸಮಯದಲ್ಲಿ ಸಂಸಾರದೊಮದಿಗೆ ಕೂತು ಮನೆಯವರ ಆರೈಕೆ ಮಾಡಬೇಕಾದ ಶಿಥಲ್ ಈ ಮಾನವೀಯತೆಯ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯ ಹಾಗೂ ಪ್ರೇರಣೀಯ.

ಪುರುಷೋತ್ತಮ್ಲಾಲ್ ಗುಪ್ತಾ : ಥಾಣೆ ಮೂಲದ ಆಟೋ ಚಾಲಕನಾಗಿರುವ ಇವರು, ಸಹಾಯಕ್ಕಾಗಿ ಹಣ ಸಂಗ್ರಹಿಸಿ ಅದರ ಮೂಲಕ ಬಡವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ. ದಿನಕೂಲಿ ಕಾರ್ಮಿಕರಿಗಾಗಿ ಇವರು ಹಣ ಸಂಗ್ರಹಿಸಿ ಅದರಲ್ಲಿ ಆಹಾರ ಕಿಟ್ ಗಳನ್ನು ಬಡವರಿಗೆ  ಹಸ್ತಾಂತರ ಮಾಡುತ್ತಿದ್ದಾರೆ.

 

-ಸುಹಾನ್ ಶೇಕ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯಸಭೆ ಚುನಾವಣೆ: ಟಿಕೆಟ್‌ಗಾಗಿ ಬಿಜೆಪಿಯಲ್ಲಿ ತೀವ್ರ ಲಾಬಿ

ರಾಜ್ಯಸಭೆ ಚುನಾವಣೆ: ಟಿಕೆಟ್‌ಗಾಗಿ ಬಿಜೆಪಿಯಲ್ಲಿ ತೀವ್ರ ಲಾಬಿ

ನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆ

ನಮ್ಮಲ್ಲಿ 198 ಹೊಸ ತಳಿ! ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಈ ಅಂಶ: ಝಡ್‌ಎಸ್‌ಐ ಶೋಧನೆ

ಎನ್‌ಐಸಿ ಪೋರ್ಟಲ್‌ಗ‌ಳ ಮೂಲಕ ಅಧಿವೇಶನ?

ಎನ್‌ಐಸಿ ಪೋರ್ಟಲ್‌ಗ‌ಳ ಮೂಲಕ ಅಧಿವೇಶನ?

ಪುಲ್ವಾಮಾ ದಾಳಿ ರೂವಾರಿ ಹತ್ಯೆ

ಪುಲ್ವಾಮಾ ದಾಳಿ ರೂವಾರಿ ಹತ್ಯೆ

ಒಂದು ದೇಶ,ಒಂದು ಮಾರುಕಟ್ಟೆ; ಎಪಿಎಂಸಿ ಹಂಗಿನಿಂದ ಅನ್ನದಾತ ಪಾರು

ಒಂದು ದೇಶ,ಒಂದು ಮಾರುಕಟ್ಟೆ; ಎಪಿಎಂಸಿ ಹಂಗಿನಿಂದ ಅನ್ನದಾತ ಪಾರು

ಅಮೆರಿಕ-ಚೀನ ಏರ್‌ಲೈನ್‌ ಸಮರ

ಅಮೆರಿಕ-ಚೀನ ಏರ್‌ಲೈನ್‌ ಸಮರ

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

ಮಹಾ: ನಿಸರ್ಗ ನಿಟ್ಟುಸಿರು; ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cycle Day : ಅಪ್ಪನ ಅಟ್ಲಾಸ್ ಸೈಕಲ್ ಮತ್ತು ನೆನಪು

World Cycle Day : ಅಪ್ಪನ ಅಟ್ಲಾಸ್ ಸೈಕಲ್ ಮತ್ತು ನೆನಪು

Bitter-Gourd

ಕಹಿ, ಕಹಿ ಹಾಗಲಕಾಯಿ…ಆರೋಗ್ಯಕ್ಕೆ ಹಲವು ಸಿಹಿ ಉಪಯೋಗವಿದೆ!

ವಿಕೆಟ್ ಹಿಂದೆ ನಿಲ್ಲಲಾಗದವರು:16 ತಿಂಗಳ ಅಂತರದಲ್ಲಿ ಟೀಂ ಇಂಡಿಯಾದಲ್ಲಿ ಆಡಿದ್ದರು 5 ಕೀಪರ್ಸ್

ವಿಕೆಟ್ ಹಿಂದೆ ನಿಲ್ಲಲಾಗದವರು:16 ತಿಂಗಳ ಅಂತರದಲ್ಲಿ ಟೀಂ ಇಂಡಿಯಾದಲ್ಲಿ ಆಡಿದ್ದರು 5 ಕೀಪರ್ಸ್

Web-tdy-1

ಸೈಕಲ್ ಮೆಕ್ಯಾನಿಕ್ ಸಮಾಜ ಸೇವೆ ಮಾಡಿ ಪದ್ಮ ಶ್ರೀ ಗೌರವ ಪಡೆದದ್ದು ಹೇಗೆ ಗೊತ್ತಾ ?

ವಿಟಮಿನ್ ಸಿ ಆಹಾರ

ಇವು ರೋಗ ನಿರೋಧಕ ಶಕ್ತಿ ಹೆಚ್ಚಿಸುವ “ವಿಟಮಿನ್ ಸಿ” ಆಹಾರಗಳು…

MUST WATCH

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

ಹೊಸ ಸೇರ್ಪಡೆ

22percent

ಹಾಸನ ಜಿಲ್ಲೆಯಲ್ಲಿ ಶೇ.22ರಷ್ಟು ಹೆಚ್ಚು ಮಳೆ

ಧಾರಾಕಾರ ಸುರಿದ ವರ್ಷಧಾರೆ : 154 ಮಿಮೀ ಮಳೆ

ಧಾರಾಕಾರ ಸುರಿದ ವರ್ಷಧಾರೆ : 154 ಮಿಮೀ ಮಳೆ

chalane hasn

ವರ್ತುಲ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಚಾಲನೆ

kudi-neeru

ಕುಡಿವ ನೀರಿಗೆ ಆದ್ಯತೆ ನೀಡಿ: ಶಾಸಕ

ಉದ್ಯೋಗ ಖಾತ್ರಿ ಉತ್ತಮ ಅವಕಾಶ

ಉದ್ಯೋಗ ಖಾತ್ರಿ ಉತ್ತಮ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.