ಅಭಿಮಾನಿಗೆ ಪಂದ್ಯದ ಟಿಕೆಟ್ ಕೊಡಿಸಿದ ವಿರಾಟ್ ಕೊಹ್ಲಿ
Team Udayavani, Jul 5, 2019, 5:34 AM IST
ಲಂಡನ್: ಭಾರತ-ಬಾಂಗ್ಲಾ ಪಂದ್ಯದ ವೇಳೆ ತಂಡವನ್ನು ಹುರಿದುಂಬಿಸಿ ರಾತ್ರಿ ಬೆಳಗಾಗುವುದರೊಳಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧರಾದ 87ರ ಹರೆಯದ ಚಾರುಲತಾ ಪಟೇಲ್ ಅವರಿಗೆ ಮುಂದಿನ ಪಂದ್ಯಗಳ ಟಿಕೆಟ್ ವ್ಯವಸ್ಥೆ ಮಾಡಿಕೊಡುವ ಮೂಲಕ ನಾಯಕ ವಿರಾಟ್ ಕೊಹ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಮಂಗಳವಾರದ ಪಂದ್ಯದಲ್ಲಿ ವಾದ್ಯ ಊದುತ್ತಾ ಕೆಮರಾ ಕಣ್ಣುಗಳಿಗೆ ಬಿದ್ದಿದ್ದ ಚಾರುಲತಾ ಪಟೇಲ್ ಅವರನ್ನು ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತಿತರು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು.
ಈ ಸಂದರ್ಭದಲ್ಲಿ ಕೊಹ್ಲಿ ಮುಂದಿನ ಪಂದ್ಯಕ್ಕೂ ಬನ್ನಿ ಎಂದು ಆಹ್ವಾನಿಸಿದಾಗ “ನನ್ನ ಬಳಿ ಟಿಕೆಟ್ ಇಲ್ಲ. ಹೀಗಾಗಿ ಬರುವುದು ಅಸಾಧ್ಯ’ ಎಂದಿದ್ದರು. ಆಗ ಕೊಹ್ಲಿ “ಟಿಕೆಟ್ ಚಿಂತೆ ಬೇಡ, ನಾನು ವ್ಯವಸ್ಥೆ ಮಾಡಿಕೊಡುತ್ತೇನೆ’ ಎಂದು ಭರವಸೆಯಿತ್ತಿದ್ದರು. ಫೈನಲ್ ಒಳಗೊಂಡಂತೆ ಮುಂದಿನ 3 ಪಂದ್ಯಗಳಿಗೆ ಕೊಹ್ಲಿ ಟಿಕೆಟ್ ಕೊಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ