ವಿಶ್ವಕಪ್ ಮಳೆ ನಗೆ…
Team Udayavani, Jun 13, 2019, 5:13 AM IST
ಲಂಡನ್: ಪ್ರಸಕ್ತ ವಿಶ್ವಕಪ್ ಏಕದಿನ ಕೂಟದ ಕೆಲವು ಪಂದ್ಯಗಳು ಭಾರೀ ಮಳೆಗೆ ಬಲಿಯಾಗಿವೆ. ಈ ನಡುವೆಯೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿವಿಧ ಫೋಟೊಗಳನ್ನು ಎಡಿಟ್ ಮಾಡಿ ಅಣಕವಾಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದೆ.
ಆಟಗಾರರು ದೋಣಿಯೊಳಗೆ ಆಡುತ್ತಿರುವುದು, ನೀರಿನೊಳಗೆ ಆಕ್ಸಿಜನ್ ಸಿಲಿಂಡರ್ ಕಟ್ಟಿಕೊಂಡು ಆಡುತ್ತಿರುವುದು, ಈಜುಕೊಳದಲ್ಲಿ ಕ್ರಿಕೆಟ್ ಆಡುತ್ತಿರುವುದು… ಹೀಗೆ ನಾನಾ ಬಗೆಯ ಎಡಿಟೆಡ್ ಸ್ವಾರಸ್ಯಕರ ಫೋಟೊಗಳನ್ನು ಕಾಣಬಹುದಾಗಿದೆ. ಈ ನಡುವೆ ವಿಶ್ವಕಪ್ ಲಾಂಛನಕ್ಕೆ ಕೊಡೆ ಹಿಡಿಯುವ ಮೂಲಕವೂ ಅಣಕ ಮಾಡಲಾಗಿದೆ. ಟಾಸ್ ಗೆದ್ದ ಶ್ರೀಲಂಕಾ ಮೊದಲು ಸ್ವಿಮ್ಮಿಂಗ್ ಆಯ್ದುಕೊಂಡಿದೆ ಎಂಬುದು ಮತ್ತೂಂದು ಜೋಕ್!