Updated at Sun,23rd Jul, 2017 9:30AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ನನ್ನ ಪ್ರೀತಿಗೆ ಕೊಂಚವೂ ಜಾಗವಿಲ್ಲವಾ?

ಗೆಳತಿ, 
ಇದುವರೆಗೂ ನಿನ್ನನ್ನು ಮರೆಯಬೇಕು ಅಂತ ತುಂಬಾ ಸಾರಿ ಅಂದುಕೊಂಡೆ. ನಿನ್ನೆಲ್ಲಾ ನೆನಪುಗಳು ಕಣ್ಮರೆಯಾಗಿ ಸಹಜವಾಗಿ ಬದುಕಬೇಕೆಂದೆ. ಆದರೆ ಅದು ನನ್ನಿಂದ ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆಲ್ಲಾ ನಿನ್ನ ಮೇಲೆ ಪ್ರೀತಿ ಹೆಚ್ಚಾಗ್ತಿದೆ. ನಿನಗೇ ಗೊತ್ತಲ್ಲ, ನಾನು ನಿನ್ನ ಎಷ್ಟು ಪ್ರೀತಿಸ್ತೀನಿ ನಿನ್ನ ಅಂತ. ನನ್ನದು ನಿಷ್ಕಲ್ಮಶ ಪ್ರೀತಿ, ಮೃದು ಮನಸ್ಸಿನವ ನಾನು ಅಂತ ನೀನ್ಯಾವಾಗಲೂ ಹೇಳುತ್ತಿದ್ದೆ. ಬದುಕಿದರೆ ನಿನ್ನ ಜೊತೆ, ನಿನಗಾಗಿ ಈ ಜೀವ, ಜೀವನ ಅಂತಲೂ ಹೇಳುತ್ತಿದ್ದೆ ನನ್ನೆಲ್ಲಾಕನಸುಗಳಿಗೆ ನೀ ಕಾರಣವಾಗಿದ್ದೆ.

ಅದೆಷ್ಟೋ ಬಾರಿ ನನ್ನ ಪ್ರೀತಿಯನ್ನು ನಿನ್ನ ಬಳಿ ಹೇಳಿಕೊಂಡೆ. ಪ್ರೀತಿಸು ಅಂತ ಕರುಣೆಯಿಂದ ಬೇಡಿಕೊಂಡೆ, ಬದುಕಿನುದ್ದಕ್ಕೂ ಜೊತೆಯಾಗಿ ಆರದ ದೀಪದಂತೆ ನೋಡಿಕೊಳ್ಳುವೆನೆಂದು ಭರವಸೆ ಕೊಟ್ಟೆ. ಬಾಳ ಸಂಗಾತಿ ನೀನಾಗಬೇಕೆಂದೂ ಆಸೆ ಪಟ್ಟೆ. ಬರಡಾದ ಬದುಕಿನಲ್ಲಿ "ಮಂಜಿನ ಹನಿ'ಯಂತೆ ನೀ ಬಂದೆ. ನನ್ನ ಪಡೆದು ಮುದ್ದಿಸಬೇಕೆಂದರೆ ನೀನೇಕೆ ಒಪ್ಪದೆ ನಿರಾಕರಿಸಿದೆ? ನಿನ್ನ ಪಡೆಯಲು ನಾ ಯೋಗ್ಯನಲ್ಲವಾ? ಅಥವಾ ನಿನ್ನಲ್ಲಿ ನನ್ನ ಪ್ರೀತಿಗೆ ಜಾಗವಿಲ್ಲವಾ? ಈ ದೇಹವೇ ನೀನಾಗಿರುವಾಗ ನಿನ್ನ ಪುಟ್ಟ ಹೃದಯದಲ್ಲಿ ನನ್ನ ಪ್ರೀತಿಗೆ ಕೊಂಚವೂ ಜಾಗವಿಲ್ಲವಾ? ನೀನಿಲ್ಲದೆ ನನ್ನೀ ಜೀವನ ಶೂನ್ಯವೆಂಬಂತಾದರೂ ನನ್ನ ಮೇಲೆ ಕನಿಕರ ಬಾರದೆ? ನಿನಗಾಗಿ ನನ್ನೀ ಜೀವನವನ್ನೇ ಅರ್ಪಣೆ ಮಾಡಿದ್ದೀನಿ. ಬಾರದ ಲೋಕಕ್ಕೆ ಹೋಗುವ ಮುನ್ನ ನನ್ನೀ ಪ್ರೀತಿಯನ್ನು ಒಪ್ಪಿಕೊಳ್ಳುವೆಯಾ?ಎಷ್ಟೋ ವರ್ಷ ಕಾದಿದ್ದೀನಿ, ಇನ್ನೂ ಕಾಯ್ತಿàನಿ. ಆದಷ್ಟೂ ಬೇಗ ನನ್ನ ಪ್ರೀತಿ ಒಪ್ಪಿಕೋ, ಪ್ಲೀಸ್‌...

- ವೀರೇಶ್‌ ದೊಡ್ಡಮನಿ


Back to Top