ಹಿಂದಿ ಹೇರಿಕೆ: ಎಷ್ಟು ವಾಸ್ತವ, ಎಷ್ಟು ಕಾಲ್ಪನಿಕ?


Team Udayavani, Jul 26, 2017, 7:36 AM IST

26-ankaka-1.jpg

1963ರ ಕಾಯ್ದೆಯನ್ನು ರದ್ದು ಪಡಿಸಿ ಮೋದಿ ಸರಕಾರ ಇಂಗ್ಲಿಷ್‌ ಬಳಕೆಗೆ ತಿಲಾಂಜಲಿ ಬಿಡುವ ಸಾಹಸಕ್ಕೆ ಕೈ ಹಾಕೀತೆಂಬ ಹೆದರಿಕೆ ಕರ್ನಾಟಕಕ್ಕಾಗಲಿ, ಇತರ ಹಿಂದಿಯೇತರ ರಾಜ್ಯಗಳಿಗಾಗಲಿ ಇನ್ನೂ ಇದ್ದಲ್ಲಿ ಇವು ಕೇಂದ್ರ ಸರಕಾರದ ಮಟ್ಟದಲ್ಲಿ ದ್ವಿಭಾಷಾ ಸೂತ್ರದ (ಹಿಂದಿ ಇಂಗ್ಲಿಷ್‌) ಜಾರಿಗೆ ಅವಕಾಶ ಕಲ್ಪಿಸುವ ಸಂವಿಧಾನ ತಿದ್ದುಪಡಿಗೆ ಒತ್ತಾಯ ಹಾಕಬೇಕು. ಇಂಥ ಎಗ್ಗಿಲ್ಲದ ಅಪಾಯಕಾರಿ ಕೆಲಸಕ್ಕೆ ಬಿಜೆಪಿ ಸರಕಾರ ಮುಂದಾಗುವ ಸಾಧ್ಯತೆ ಇಲ್ಲವೆಂದೇ ತೋರುತ್ತದೆ. 

ಬೆಂಗಳೂರು ಮೆಟ್ರೋದ ವಿವಿಧ ನಿಲ್ದಾಣಗಳಲ್ಲಿನ ಫ‌ಲಕಗಳಲ್ಲಿ ಹಿಂದಿ ಅಕ್ಷರಗಳನ್ನು ಬಳಸಲಾಗಿರುವುದನ್ನು ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳನ್ನು ನೋಡಿದರೆ, ಹಿಂದಿಯೇತರರಿರುವ ಪ್ರದೇಶಗಳಲ್ಲಿ ನಿಜಕ್ಕೂ ಹಿಂದಿ ಹೇರಲಾಗುತ್ತಿದೆಯೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ. ಹಾಗೆ ನೋಡಿದರೆ ಮೆಟ್ರೋ ರೈಲು ನಿಲ್ದಾಣಗಳಲ್ಲಿರುವ ನಾಮಫ‌ಲಕಗಳಲ್ಲಿ ಹಿಂದಿ ಅಕ್ಷರಗಳಿಗೆ ಪ್ರಾಶಸ್ತ್ಯ ನೀಡಲಾಗಿಲ್ಲ. ಕನ್ನಡ ಹಾಗೂ ಇಂಗ್ಲಿಷ್‌ ಹೆಸರುಗಳ ಬಳಿಕವಷ್ಟೆ ಹಿಂದಿಯ ಅಕ್ಷರಗಳು ಕಾಣಿಸಿಕೊಳ್ಳುತ್ತಿವೆ. ಬಹಳ ಹಿಂದಿನಿಂದಲೇ ವಿವಿಧ ರೈಲ್ವೇ ವಲಯಗಳಲ್ಲಿ ಪ್ಯಾಸೆಂಜರ್‌ ರೈಲುಗಳಲ್ಲಿ ಇಂಗ್ಲಿಷ್‌ನೊಂದಿಗೆ ಹಿಂದಿಯ ಬಳಕೆಯೂ ಸಾಗಿ ಬಂದಿದೆ. “ಉಳಿದ ರೈಲುಗಳು ಬೆಂಗಳೂರು ಮೆಟ್ರೋದ ಹಾಗಲ್ಲ; ಅವು ವಿವಿಧ ರಾಜ್ಯಗಳಲ್ಲಿ ಹಾದು ಹೋಗಬೇಕಿರುವುದರಿಂದ ಹಿಂದಿ ಬಳಕೆ ಅಲ್ಲಿ ಸಮರ್ಥನೀಯ’ ಎಂದೇನೋ ವಾದಿಸುವವರಿರಬಹುದು. ಬೆಂಗಳೂರು ಮೆಟ್ರೋದಲ್ಲಿ ಹಿಂದಿ ಬಳಕೆಯ ವಿರುದ್ಧದ ಪ್ರತಿಭನೆಯ ಹಿಂದಿನ ತಾರ್ಕಿಕತೆಯನ್ನು ಒಪ್ಪಿಕೊಂಡರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಾತ್ರ ಸಂಚರಿಸುವ ರೈಲುಗಳ ನಾಮ ಫ‌ಲಕಗಳು ಹಾಗೂ ನಮ್ಮ ಸ್ಥಾನಗಳ ಸೂಚಕ ಫ‌ಲಕಗಳಲ್ಲಿ ಹಿಂದಿಗೆ ಯಾಕೆ ಸ್ಥಾನ ಕಲ್ಪಿಸಲಾಗಿದೆ ಎಂಬ ಪ್ರಶ್ನೆಯನ್ನೂ ನಾವು ಕೇಳಬಹುದಾಗಿದೆ. 

ಹಿಂದಿ ಮಾತ್ರವಲ್ಲ, ಯಾವುದೇ ಭಾಷೆಯ ವಿರುದ್ಧವೂ ಪ್ರತಿಭಟನೆ ನಡೆಸುವ ಹಕ್ಕು ಜನರಿಗಿದೆ ಎಂಬುದು ಹೌದಾದರೂ ಈಗ ನಡೆಯುತ್ತಿರುವ ಪ್ರತಿಭಟನೆ ಬಹುಶಃ ಸರಿಯಾದ ಕಾರಣಕ್ಕಾಗಿ ನಡೆಯುತ್ತಿಲ್ಲ ಎಂದೇ ಹೇಳಬೇಕಾಗಿದೆ. ವಾಸ್ತವವಾಗಿ, ಹೆಚ್ಚಿನ ಮೆಟ್ರೋ ಸಂಚಾರಿಗಳು ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗಿರುವ ಫ‌ಲಕಗಳಲ್ಲಿ ಹಿಂದಿ ಅಕ್ಷರಗಳಿರುವುದನ್ನು ಬಹುಶಃ ಗಮನಿಸಿಯೇ ಇರಲಾರರು! ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿನ ಸಚಿವರು ಕೇವಲ ಹಿಂದಿಯಲ್ಲಷ್ಟೇ ಮಾತನಾಡುತ್ತಿದ್ದಾರೆಂಬುದು ನಿಜ. ಹಾಗೆ ನೋಡಿದರೆ, ಗುಜರಾತಿ ಮಾತೃಭಾಷೆಯವರಾದ ನಮ್ಮ ರಾಜ್ಯಪಾಲ ವಜೂಭಾಯ್‌ವಾಲಾ ಅವರು ಹಿಂದಿಯಲ್ಲಷ್ಟೇ ಮಾತನಾಡುತ್ತಾರೆ. ಆದ್ದರಿಂದಲೇ ಅವರು ಇದುವರೆಗಿನ ಕರ್ನಾಟಕದ ರಾಜ್ಯಪಾಲರ ಪೈಕಿ ಅತ್ಯಂತ ಅಪಾರ್ಥಕ್ಕೊಳಗಾಗಿರುವ ರಾಜ್ಯಪಾಲರೆನಿಸಿದ್ದಾರೆ. ಅವರೇನು ಹೇಳಿಕೆ ನೀಡುತ್ತಾರೋ, ಅದು ಕರ್ನಾಟಕದ ಹೆಚ್ಚಿನವರಿಗೆ ಅರ್ಥವಾಗುವುದಿಲ್ಲ. ವಾಸ್ತವವೇನೆಂದರೆ ಹೆಚ್ಚಿನ ಕೇಂದ್ರ ಸಚಿವರಿಗೆ ಇಂಗ್ಲಿಷ್‌ ಮೇಲೆ ಪ್ರಭುತ್ವವಿಲ್ಲ. ಪ್ರಧಾನಿ  ಮೋದಿಯವರೇ ಕೇರಳದಂಥ ದಾಕ್ಷಿಣಾತ್ಯ ರಾಜ್ಯದಲ್ಲಿ ನಡೆದಿರುವ ಚುನಾವಣಾ ಸಭೆಗಳಲ್ಲಿ ಹಿಂದಿಯಲ್ಲೇ ಭಾಷಣ ಮಾಡಿದ್ದಾರೆ-ಅನುವಾದಕರನ್ನು ಬಳಸಿಕೊಳ್ಳದೆಯೇ. ಅಷ್ಟು ದೂರಕ್ಕೇಕೆ ಹೋಗುವುದು; ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ, ನಮ್ಮವರೇ ಆದ ಮಲ್ಲಿಕಾರ್ಜುನ ಖರ್ಗೆಯವರು ಕೂಡ, ಇಂಗ್ಲಿಷ್‌ನಲ್ಲಿ ಮಾತನಾಡಲು ಗೊತ್ತಿದ್ದರೂ ಹಿಂದಿಯಲ್ಲೇ ಹೇಳಿಕೆ ನೀಡಬಯಸುತ್ತಾರೆ. ಹಿಂದಿ ಭಾಷಾಜ್ಞಾನ ನಮ್ಮ ಕೇಂದ್ರ ಸಚಿವ ಅನಂತ ಕುಮಾರ್‌ ಬಿಜೆಪಿಯಲ್ಲಿ ಉನ್ನತ ಸ್ಥಾನ ದಕ್ಕಿಸಿಕೊಳ್ಳುವಲ್ಲಿ ನೆರವಾಗಿದೆ. ಬಿಜೆಪಿ ನಾಯಕರು ಹಿಂದಿಯೇತರ ಜನರ ಮೇಲೆ ಹಿಂದಿ ಹೇರಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂಬ ಆಪಾದನೆಯನ್ನು ಒತ್ತಟ್ಟಿಗಿಟ್ಟರೂ ಅವರು ಹಿಂದಿಗೆ ಮಣೆ ಹಾಕುತ್ತಿದ್ದಾರೆಂದು ದೂರುವುದಾದರೆ, ಮಲ್ಲಿಕಾರ್ಜುನ ಖರ್ಗೆಯವರ ಬಗೆಗೂ ಈ ಮಾತು ಅನ್ವಯವಾಗುತ್ತದೆ ಎಂಬುದನ್ನು ಅಗತ್ಯವಾಗಿ ಗಮನಿಸಬೇಕು.

ಪ್ರಧಾನಿ ಹಾಗೂ ಅವರ ಸಚಿವರು ಹಿಂದಿ ಬಳಕೆ ಮಾಡುತ್ತಿರುವುದನ್ನು ಹಿಂದಿ ಹೇರಿಕೆ ಎಂದು ವ್ಯಾಖ್ಯಾನಿಸುವ ಹಾಗಿಲ್ಲ. ಅವರು ಹಿಂದಿ ಬಳಸುತ್ತಿರುವುದಕ್ಕೆ ಕಾರಣ, ಬಹುಶಃ ಅವರು ದಕ್ಷಿಣದ ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಹಿಂದಿಯೇತರ ಜನರ ಭಾವನೆಗಳಿಗೆ ಮಣೆ ಹಾಕುತ್ತಿಲ್ಲ ಎನ್ನುವುದಾಗಿರಬಹುದು. ಇದುವರೆಗೂ ಕೇಂದ್ರದ ಯಾರೇ ಸಚಿವರಾಗಲಿ ಹಿರಿಯ ಅಧಿಕಾರಿಯಾಗಲಿ; ಅವರಿಗೆ ಹಿಂದಿ ಬರುತ್ತಿಲ್ಲ ಎಂಬ ಕಾರಣಕ್ಕಾಗಿ ಅವರಿಗೆ ದಂಡ ವಿಧಿಸಲಾಗಿರುವ ಪ್ರಕರಣ ವರದಿಯಾಗಿಲ್ಲ. 

ಜಾತ್ಯತೀತತೆಯ ಬಗ್ಗೆ ಕೊರಳೆತ್ತಿ ಮಾತನಾಡುವವರು ಹಾಗೂ ಹಿಂದುತ್ವದ ವಿರುದ್ಧದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವವರು ಬೆಂಗಳೂರು ಮೆಟ್ರೋದಲ್ಲಿ ನಡೆಯುತ್ತಿರುವ ಹಿಂದಿ ವಿರೋಧಿ ಪ್ರತಿಭಟನೆಯಿಂದ ಉದ್ಭವಿಸಿರುವ ಪರಿಸ್ಥಿತಿಯ ಲಾಭವನ್ನು ಬಹುಕ್ಷಿಪ್ರವಾಗಿ ಪಡೆದುಕೊಳ್ಳಲು ಹೊರಟಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಇತಿಹಾಸಕಾರ ರಾಮಚಂದ್ರ ಗುಹಾ ಅವರು “ಹೀಗೆ ಹಿಂದಿಗೆ ನೀಡಿರುವ ಅವಕಾಶ, ಗೋಳ್ವಾಲ್ಕರ್‌ ಆರಾಧನೆಯ ಒಂದು ರೂಪಕ; ಅಥವಾ ಅದು ಜನತೆಯನ್ನು ಇನ್ನಷ್ಟು ಧ್ರುವೀಕರಣಕ್ಕೆ ಒಳಪಡಿಸಿ ಬಿಜೆಪಿಯ ವೋಟ್‌ ಬ್ಯಾಂಕನ್ನು ಪ್ರಬಲಗೊಳಿಸುವ ಹುನ್ನಾರವೆ?’ ಎಂದು ಪ್ರಶ್ನಿಸುವಷ್ಟು ಮುಂದುವರಿದಿದ್ದಾರೆ.

ಶಾಸ್ತ್ರೀಜಿ ನೀಡಿದ್ದ ಆಶ್ವಾಸನೆ
ದೇಶದಲ್ಲಿ 1963 ಹಾಗೂ 1965ರ ನಡುವಣ ಅವಧಿಯಲ್ಲಿದ್ದ ಪರಿಸ್ಥಿತಿ ಇಂದು ಇಲ್ಲ. ಈ ಅವಧಿಯಲ್ಲಿ ಎರಡು ಅಧಿಕೃತ ಭಾಷೆಗಳಲ್ಲೊಂದಾದ ಇಂಗ್ಲಿಷನ್ನು ಕೈ ಬಿಡಲಾಗಿತ್ತು. ಸಂವಿಧಾನದ 343ನೆಯ ವಿಧಿಯನ್ವಯ ಈ ತೀರ್ಮಾನವನ್ನು ಸರಕಾರ ಕೈಗೊಂಡಿತ್ತು. ಈ ವಿಧಿಯಡಿಯ ಕಾಯ್ದೆಯ ಪ್ರಕಾರ ಇಂಗ್ಲಿಷ್‌ನ ಅಧಿಕೃತ ಬಳಕೆಯನ್ನು 15 ವರ್ಷಗಳಿಗೆಂದು ಸೀಮಿತಗೊಳಿಸಲಾಗಿತ್ತು (1950ರಿಂದ). ಆದರೆ ಅದಾದ ಬಳಿಕವೂ ಕೇಂದ್ರ ಹಾಗೂ ಹಿಂದಿಯೇತರ ಜನರ ಪಾಲಿಗೆ ಅಧಿಕೃತ ಭಾಷೆಯಾಗಿ ಇಂಗ್ಲಿಷ್‌ ಮುಂದುವರಿಯಿತು. ಇದಕ್ಕೆ ಕಾರಣ, ಮೇಲೆ ಹೇಳಿದ 15 ವರ್ಷಗಳ ಗಡುವಿನ ಆಚೆಗೆ ಇಂಗ್ಲಿಷನ್ನು ಅಧಿಕೃತ ಭಾಷೆಯನ್ನಾಗಿ ಬಳಸಲು ಅನುಕೂಲವಾಗುವಂತೆ ಕಾಯ್ದೆಯೊಂದನ್ನು ರೂಪಿಸಲು ಸಂಸತ್ತಿಗೆ ಅಧಿಕಾರ ಕಲ್ಪಿಸಿಕೊಡುವ ಉಪನಿಬಂಧನೆಯೊಂದನ್ನು 343ನೆಯ ವಿಧಿಯಡಿಯಲ್ಲಿ ಸೇರಿಸಲು ಅವಕಾಶ ಲಭಿಸಿದ್ದು, ಹೀಗೆ ಉಪನಿಬಂಧನೆಯ ಸೇರ್ಪಡೆ 
ಸಾಧ್ಯವಾದುದು, ಆಗಿನ ಕೇಂದ್ರೀಯ ಶಾಸನ ಸಭೆಯ ಮುತ್ಸದ್ದಿತನದಿಂದಾಗಿ.

ಈ ನಿರ್ಬಂಧನೆಯಡಿ ಸಂಸತ್ತು 1965ರ ಬಳಿಕವೂ ಇಂಗ್ಲಿಷನ್ನು ಹಿಂದಿಯೊಂದಿಗೆ ಅಧಿಕೃತ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ “1963ರ ಅಧಿಕೃತ ಭಾಷೆಗಳ ಕಾಯ್ದೆ’ಯನ್ನು ರೂಪಿಸಿತು. ತಮಿಳುನಾಡಿನಲ್ಲಿ (ಆಗಿನ ಮದ್ರಾಸ್‌ ರಾಜ್ಯದಲ್ಲಿ) ಹಿಂಸಾತ್ಮಕ ಹಿಂದಿ ವಿರೋಧಿ ಚಳವಳಿ ನಡೆದ ಪರಿಣಾಮವಾಗಿ “ಹಿಂದಿಯೇತರ ಭಾಷಿಕರಿರುವ ರಾಜ್ಯಗಳು ಬಯಸುವಷ್ಟು’ ಕಾಲವೂ ಇಂಗ್ಲಿಷ್‌ ಭಾಷೆ ಕೇಂದ್ರದ ಅಧಿಕೃತ ಭಾಷೆಯಾಗಿ ಮುಂದುವರಿಯುವುದೆಂಬ ಆಶ್ವಾಸನೆಯನ್ನು ಆಗಿನ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ನೀಡಿದರು. “ಹಿಂದಿಯೇತರ ಭಾಷಿಕರ ಗಂಟಲಲ್ಲಿ ಹಿಂದಿಯನ್ನು ಬಲವಂತವಾಗಿ ತುರುಕಲಾಗದು’ ಎಂಬ ಸುಪ್ರಸಿದ್ಧ ಹೇಳಿಕೆಯನ್ನು ಆಗಿನ ಕೇಂದ್ರ ಶಿಕ್ಷಣ ಮಂತ್ರಿ, ನ್ಯಾ| ಎಂ.ಸಿ. ಛಾಗ್ಲಾ ನೀಡಿದ್ದರು.

ಮೇಲೆ ಹೇಳಿದ ಕಾಯ್ದೆಗೆ 1967 ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಇಂಗ್ಲಿಷ್‌ನ 
ಬಳಕೆಗೆ ಮತ್ತಷ್ಟು ಬಲ ಬಂತು. ಈ ಕಾಯ್ದೆಯ ಪ್ರಕಾರ, ಇಂಗ್ಲಿಷ್‌ ಭಾಷೆಯ ಬಳಕೆಯನ್ನು ಮುಂದುವರಿಸುವುದು ಬೇಕಿಲ್ಲ
ವಾದರೆ ಎಲ್ಲ ಹಿಂದಿಯೇತರ ರಾಜ್ಯಗಳು ಹಾಗೆಯೇ ಸಂಸತ್ತು ಕೂಡ ಈ ಕುರಿತಂತೆ ನಿರ್ಣಯವೊಂದನ್ನು ಅಂಗೀಕರಿಸ
ಬೇಕಾಗುತ್ತದೆ. ಕರ್ನಾಟಕದಲ್ಲೀಗ ನಡೆಯುತ್ತಿರುವ ಚಳವಳಿ, ತಮಿಳುನಾಡಿನ ಆಂದೋಲನಕ್ಕಿಂತಲೂ ಹೆಚ್ಚು ತೀವ್ರವಾಗಿರುವುದನ್ನು ಪರಿಗಣಿಸಿದರೆ, ಹಿಂದಿಯೇತರ ರಾಜ್ಯಗಳು ಇಂಗ್ಲಿಷ್‌ನ ಬಳಕೆಗೆ ಕೊನೆಯ ವಿದಾಯ ಹೇಳುವುದು ಅಸಂಭವವೆಂದೇ ತೋರಿಬರುತ್ತದೆ.

ಅನೇಕರಿಗೆ ಈ ಮಾತು ರುಚಿಸದೇ ಹೋಗಬಹುದು. ಆದರೆ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಹಿಂದಿ ಇಂದು ಭಾರತ ಸರಕಾರದ ಉಪಭಾಷೆಯಾಗಿದೆ. ಇಂಗ್ಲಿಷ್‌ ಕೇವಲ ಸಹವರ್ತಿ ಅಧಿಕೃತ ಭಾಷೆಯಾಗಿದೆ.

ಕೇಂದ್ರ ಕಚೇರಿಗಳಲ್ಲಿ ಕನ್ನಡವೇಕೆ ಕೂಡದು?
1963ರ ಕಾಯ್ದೆಯನ್ನು ರದ್ದು ಪಡಿಸುವ ಮೂಲಕ ಮೋದಿ ಸರಕಾರ ಇಂಗ್ಲಿಷ್‌ ಬಳಕೆಗೆ ತಿಲಾಂಜಲಿ ಬಿಡುವ ಸಾಹಸಕ್ಕೆ ಕೈ ಹಾಕೀತೆಂಬ ಹೆದರಿಕೆ ಕರ್ನಾಟಕಕ್ಕಾಗಲಿ, ಇತರ ಹಿಂದಿಯೇತರ ರಾಜ್ಯಗಳಿಗಾಗಲಿ ಇನ್ನೂ ಇದ್ದಲ್ಲಿ ಇವು ಕೇಂದ್ರ ಸರಕಾರದ ಮಟ್ಟದಲ್ಲಿ ದ್ವಿಭಾಷಾ ಸೂತ್ರದ (ಹಿಂದಿ ಮತ್ತು ಇಂಗ್ಲಿಷ್‌) ಜಾರಿಗೆ ಅವಕಾಶ ಕಲ್ಪಿಸುವ ಸಂವಿಧಾನ ತಿದ್ದುಪಡಿಗೆ ಒತ್ತಾಯ ಹಾಕಬೇಕು. ಇಂಥ ಎಗ್ಗಿಲ್ಲದ ಅಪಾಯಕಾರಿ ಕೆಲಸಕ್ಕೆ ಬಿಜೆಪಿ ಸರಕಾರ ಮುಂದಾಗುವ ಸಾಧ್ಯತೆ ಇಲ್ಲವೆಂದೇ ತೋರುತ್ತದೆ. ಕಾರಣ, ದಕ್ಷಿಣದ ರಾಜ್ಯಗಳಲ್ಲಿ ಹಾಗೂ ಪಶ್ಚಿಮ ಬಂಗಾಲದಲ್ಲಿ ಒಳಹಾದಿಗಳನ್ನು ನಿರ್ಮಿಸಿಕೊಳ್ಳುವುದು ಬಿಜೆಪಿಯ ಈಗಿನ ಬಯಕೆಯಾಗಿದೆ.

ಈಗೊಂದು ಪ್ರಶ್ನೆ – ಕರ್ನಾಟಕದಲ್ಲಿರುವ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಕನ್ನಡದ ಬಳಕೆ ಯಾಕೆ ಸಾಧ್ಯವಿಲ್ಲ? ಈ ಪ್ರಶ್ನೆಯನ್ನು ಕೇಳಲು ಕಾರಣವಿದೆ. 2003ರಲ್ಲಿ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಸಂವಿಧಾನದ ಎಂಟನೆಯ ಪರಿಚ್ಛೇದದಲ್ಲಿ ಉಲ್ಲೇಖೀತವಾಗಿರುವ ಎಲ್ಲ ಭಾಷೆಗಳನ್ನೂ ಕೇಂದ್ರ ಸರಕಾರದ ಅಧಿಕೃತ ಭಾಷೆಯೆಂದು ಪರಿಗಣಿಸುವ ಪ್ರಸ್ತಾವದ ಸಾಧಕ – ಬಾಧಕಗಳನ್ನು ಪರಿಶೀಲಿಸುವುದಕ್ಕೆಂದು ಸಮಿತಿಯೊಂದನ್ನು ಅಸ್ತಿತ್ವಕ್ಕೆ ತಂದಿತ್ತು. ಈ ಸಮಿತಿಯ ಗತಿ ಆಮೇಲೆ ಏನಾಯಿತೆಂದು ತಿಳಿಯದು. ಇ.ಎಂ.ಎಸ್‌. ನಂಬೂದ್ರಿಪಾಡ್‌ ಅವರು ಕೇರಳದ ಮುಖ್ಯಮಂತ್ರಿಯಾಗಿದ್ದಾಗ ಇಂಥದೊಂದು ಪ್ರಸ್ತಾವವನ್ನು ಕೇಂದ್ರದ ಮುಂದಿರಿಸಿದ್ದರು.

ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.