Updated at Sun,25th Jun, 2017 3:45AM IST
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತೆಂಡುಲ್ಕರ್‌-ಝಾಕೀರ್‌ ಹುಸೇನ್‌ ಅತ್ಯಪೂರ್ವ ಜುಗಲ್‌ಬಂದಿ; Watch

ಮುಂಬಯಿ : ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಬ್ಯಾಟಿಂಗ್‌ನಲ್ಲಿ ವಿಶ್ವ ಪ್ರಸಿದ್ಧರು. ಅದೇ ರೀತಿ ಝಾಕೀರ್‌ ಹುಸೇನ್‌ ಅವರು ತಬಲಾ ವಾದನದಲ್ಲಿ ವಿಶ್ವಮಾನ್ಯರು. ಎರಡು ಬೇರೆ ಬೇರೆ ಕ್ಷೇತ್ರಗಳ ಈ ದಿಗ್ಗಜ ಪ್ರತಿಭೆ ಒಂದೇ ವೇದಿಕೆಯಲ್ಲಿ  ಜುಗುಲ್‌ ಬಂದಿ ನಡೆಸಿಕೊಟ್ಟರೆ ಅದು ಹೇಗೀದ್ದೀತು ?

ಅತ್ಯಾಶ್ಚರ್ಯವಲ್ಲವೆ ? ಹೌದು, ಆದರೂ ಈ ಎರಡು ವಿಶ್ವ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಜುಗಲ್‌ಬಂದಿ ನಡೆಸಿಕೊಟ್ಟಿವೆ. ಉಭಯತರ ಅಭಿಮಾನಿಗಳಿಗೆ ಇದೊಂದು ಅತ್ಯಪೂರ್ವ ರಸಪ್ರಸಂಗ; ರಸ ನಿಮಿಷ; ಅದನ್ನು ಸವಿಯುವುದೇ ಅವರ ಪಾಲಿನ ಒಂದು ಸೌಭಾಗ್ಯ.

ಸಚಿನ್‌ ತೆಂಡುಲ್ಕರ್‌ ಇಂಥದ್ದೊಂದು ಅತ್ಯಪೂರ್ವ ಜುಗಲ್‌ಬಂದಿ ಕಾರ್ಯಕ್ರಮವನ್ನು ತಾನು ವಿಶ್ವ ಪ್ರಸಿದ್ಧ ತಬಲಾ ವಾದಕ ಝಾಕೀರ್‌ ಹುಸೇನ್‌ ಅವರೊಂದಿಗೆ ನಡೆಸಿರುವ ವಿಡಿಯೋ ಒಂದನ್ನು ತೆಂಡುಲ್ಕರ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ  ಹಾಕಿದ್ದಾಗ ಅವರ ಅಭಿಮಾನಿಗಳ ಆನಂದಾಶ್ಚರ್ಯಕ್ಕೆ ಪಾರವೇ ಇರಲಿಲ್ಲ. 

ಇಲ್ಲೀಗ ಆ ವಿಡಿಯೋ ಇದೆ; ನೀವೂ ನೋಡಿ - ಈ ಅತ್ಯಪೂರ್ವ ಜುಗಲ್‌ಬಂದಿಯ ಸವಿಯನ್ನು ಸವಿಯಿರಿ.


More News of your Interest

Back to Top