3ನೇ ಹಂತದ ಮುಳುಗಡೆ ಪ್ರಕ್ರಿಯೆ

ಶುರು 10 ಕೋಟಿ ಮೊತ್ತದ ಮೊದಲ ಆರಂಭಿಕ ಕಾಮಗಾರಿಗೆ ಅನುಮೋದನೆ | 5801 ಎಕರೆ ಭೂ ಸ್ವಾಧೀನ ­

Team Udayavani, Apr 20, 2021, 7:40 PM IST

hdfhhr

ವರದಿ : ಶ್ರೀಶೈಲ ಕೆ. ಬಿರಾದಾರ

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲಿ ಮುಳುಗಡೆಯಾಗಲಿರುವ ಬಾಗಲಕೋಟೆ ನಗರದ ಸಂತ್ರಸ್ತರಿಗೆ ಪುನರ್‌ವಸತಿ, ಪುನರ್‌ ನಿರ್ಮಾಣ ಕಲ್ಪಿಸುವ ಬಹು ಮಹತ್ವದ ಕಾರ್ಯಕ್ಕೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. 3ನೇ ಯೂನಿಟ್‌ ನಿರ್ಮಾಣ ಕಾಮಗಾರಿಗೆ ಅನುಮೋದನೆ ನೀಡಿದೆ.

ಹೌದು, ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯ 523 ಮೀಟರ್‌ದಿಂದ 525 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಸಂತ್ರಸ್ತರು, ಬಾಡಿಗೆದಾರರಿಗೆ ಪುನರ್‌ ವಸತಿ ಕಲ್ಪಿಸಲು ನಗರದ ದಡ್ಡೇನವರ ಕ್ರಾಸ್‌ನಿಂದ ಮುಚಖಂಡಿ ಹಾಗೂ ಶಿಗಿಕೇರಿ ವ್ಯಾಪ್ತಿಯ 1640 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಭೂಮಿಯಲ್ಲಿ ಒಟ್ಟು 5 ಬ್ಲಾಕ್‌ ಮಾದರಿಯ ಸೆಕ್ಟರ್‌ಗಳನ್ನು ನಿರ್ಮಿಸಿ, ನಗರದ 3ನೇ ಹಂತದ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

5801 ಎಕರೆ ಭೂ ಸ್ವಾಧೀನ:

ಆಲಮಟ್ಟಿ ಜಲಾಶಯದ ಹಿನ್ನೀರ ವ್ಯಾಪ್ತಿಯಲ್ಲಿ ಮುಳುಗಡೆಯಾದ ಬಾಗಲಕೋಟೆಯ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು 1987-89ರಲ್ಲಿ 4544 ಎಕರೆ ಸ್ವಾಧೀನ ಪಡಿಸಿಕೊಂಡರೆ, 2013-14ರಲ್ಲಿ 1257 ಎಕರೆ ಬಿಟಿಡಿಎ ವಶಪಡಿಸಿಕೊಂಡಿದೆ. 3ನೇ ಹಂತದ 1640 ಎಕರೆ ಭೂಮಿ ಅಗತ್ಯವಿದ್ದು, ಅದರಲ್ಲಿ 282 ಎಕರೆ ಭೂಮಿಯ ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಅದನ್ನೂ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ನವನಗರ ಯೂನಿಟ್‌ -1ರ ನಿರ್ಮಾಣಕ್ಕೆ 1521 ಎಕರೆ, 2ನೇ ಯೂನಿಟ್‌ ನಿರ್ಮಾಣಕ್ಕೆ 1333 ಎಕರೆ ಬಳಸಿಕೊಂಡಿದ್ದು, ಯೂನಿಟ್‌ -3ರ ನಿರ್ಮಾಣಕ್ಕಾಗಿ 1257 ಎಕರೆ ಬಳಕೆ ಮಾಡಲು ಕ್ರಿಯಾಯೋಜನೆ ರೂಪಿಸಲಾಗಿದೆ. ಇನ್ನುಳಿದ ನೀರು ಸರಬರಾಜು ಯೋಜನೆಗಳಿಗೆ 69 ಎಕರೆ, ತೋಟಗಾರಿಕೆ ವಿವಿಗೆ 300 ಎಕರೆ, ಕೆಐಎಡಿಬಿ ಯೂನಿಟ್‌-1ರ ನಿರ್ಮಾಣಕ್ಕೆ 257 ಎಕರೆ, ಸರ್ಕಾರಿ, ಅರೆಸರಕಾರಿ, ಖಾಸಗಿ ಸಂಸ್ಥೆಗಳಿಗೆ 610.8 ಎಕರೆ ಹಂಚಿಕೆ ಮಾಡಿದ್ದು, ಮುರಮ್‌ ಕ್ವಾರಿ 22 ಎಕರೆ, ಲಿಂಕ್‌ ರಸ್ತೆಗಳಿಗಾಗಿ 117 ಎಕರೆ ಬಳಸಿಕೊಳ್ಳಲಾಗುತ್ತಿದೆ.

4584 ಸಂತ್ರಸ್ತರು: ಯೂನಿಟ್‌-3ರ ವ್ಯಾಪ್ತಿಗೆ (523ರಿಂದ 525 ಮೀಟರ್‌ ವ್ಯಾಪ್ತಿಯಲ್ಲಿ) ಬರುವ ಸಂತ್ರಸ್ತರ ಕುರಿತು ಸಾಮಾಜಿಕ, ಆರ್ಥಿಕ ಸಮೀಕ್ಷೆ ಕೈಗೊಂಡಿದ್ದು, ಇದರ ಅನ್ವಯ 2421 ಜನ ಮೂಲ ಸಂತ್ರಸ್ತರು, 1163 ಬಾಡಿಗೆದಾರರು ಸಂತ್ರಸ್ತರಾಗಲಿದ್ದಾರೆ. ಈ ಸಂತ್ರಸ್ತರಿಗೆ ಯೂನಿಟ್‌-3ರಲ್ಲಿ ಪುನರ್‌ ವಸತಿ ಕಲ್ಪಿಸಲಾಗುತ್ತಿದೆ. ಯೂನಿಟ್‌-3ರನ್ನು ಸುಮಾರು 300ರಿಂದ 500 ಎಕರೆಗೆ 1 ಬ್ಲಾಕ್‌ದಂತೆ ಆಧುನಿಕ ಮಾದರಿಯ 5 ಬ್ಲಾಕ್‌ ರಚಿಸಲು ಉದ್ದೇಶಿಸಲಾಗಿದೆ. ಇಲ್ಲಿ ಎ ಮಾದರಿ ನಿವೇಶನಗಳನ್ನು 8,238, ಬಿ ಮಾದರಿ-3,866, ಸಿ ಮಾದರಿ-2236, ಡಿ ಮಾದರಿ-2262, ಇ ಮಾದರಿ 1337 ಸೇರಿ ಒಟ್ಟು 17,939 ನಿವೇಶನ ರಚಿಸಲಾಗುತ್ತಿದೆ. ಯೂನಿಟ್‌-3ರ ನಕ್ಷೆ ಅನುಮೋದನೆ ದೊರೆತಿದ್ದು, ಬಾಗಲಕೋಟೆ ನಗರದ ಮಹಾ ಯೋಜನೆಗೆ ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ.

ವಿವಿಧ ಕಾಮಗಾರಿಗೆ ಅನುಮೋದನೆ: ಯುನಿಟ್‌-3ರಲ್ಲಿ ರಸ್ತೆ, ರಸ್ತೆ ಬದಿಯಲ್ಲಿನ ಚರಂಡಿ ಹಾಗೂ ಇತರೆ ಕಾಮಗಾರಿ ಸೇರಿದಂತೆ ಒಟ್ಟು 10.50 ಕೋಟಿ ರೂ.ಗಳ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರ ಜತೆ 13 ಕೋಟಿ ರೂ. ಗಳ ಬೇರೆ ಬೇರೆ ಕಾಮಗಾರಿಗಳಿಗೆ ಬಿಟಿಡಿಎ ಬೋರ್ಡ್‌ ಸಭೆಯಲ್ಲಿ ಅನುಮೋದನೆ ನೀಡಿದೆ.

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Lok Sabha Election 2024: ಸ್ವಾಭಿಮಾನದ ಕಿಚ್ಚು; ಯಾರಿಗೆ ನಷ್ಟ-ಲಾಭ !

Lok Sabha Election 2024: ಸ್ವಾಭಿಮಾನದ ಕಿಚ್ಚು; ಯಾರಿಗೆ ನಷ್ಟ-ಲಾಭ !

Mahalingapura: ಅಕ್ರಮ ಭ್ರೂಣಹತ್ಯೆ ಪ್ರಕರಣ: ಮೂವರ ಬಂಧನ, ಏಳು ಜನರ ವಿರುದ್ಧ ಪ್ರಕರಣ ದಾಖಲು

Mahalingapura: ಅಕ್ರಮ ಭ್ರೂಣಹತ್ಯೆ ಪ್ರಕರಣ: ಮೂವರ ಬಂಧನ, ಏಳು ಜನರ ವಿರುದ್ಧ ಪ್ರಕರಣ ದಾಖಲು

Lok sabha Election: ತ್ರಿಕೋನ ಪೈಪೋಟಿ- ಒಗ್ಗಟ್ಟಿಗೆ ಬಾದಾಮಿ ಬೆಟ್ಟದಷ್ಟೇ ತಾಪತ್ರಯ

Lok sabha Election: ತ್ರಿಕೋನ ಪೈಪೋಟಿ- ಒಗ್ಗಟ್ಟಿಗೆ ಬಾದಾಮಿ ಬೆಟ್ಟದಷ್ಟೇ ತಾಪತ್ರಯ

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.