ಈ ಮಗುವಿನ ನಡೆ ಎಷ್ಟು ನಿಸ್ವಾರ್ಥ ಅಲ್ವಾ : ತಾನು ನೆನೆದರೂ ನಾಯಿಯನ್ನು ನೆನೆಯಲು ಬಿಡುತ್ತಿಲ್ಲ
Team Udayavani, May 1, 2021, 10:10 AM IST
ಚಿಕ್ಕ ಚಿಕ್ಕ ಮಕ್ಕಳು ಏನು ಮಾಡಿದರೂ ಕೂಡ ಅದನ್ನು ನೋಡಲು ಸುಂದರವಾಗಿರುತ್ತದೆ. ಅಲ್ಲದೆ ನಾವು ಎಷ್ಟೇ ಬೇಸರದಲ್ಲಿದ್ದರೂ ಒಂದರಗಳಿಗೆ ಮಕ್ಕಳ ಜೊತೆ ನಿಂತು ಅವರು ಆಟವಾಡುದನ್ನು ನೋಡಿದರೆ ಮನಸ್ಸಿಗೆ ಉಲ್ಲಾಸದ ಜೊತೆ ಖುಷಿಯಾಗುತ್ತದೆ. ಮುಗ್ಧ ಮನಸ್ಸಿನ ಆ ಕಂದಮ್ಮಗಳ ಆಟವೇ ಹಾಗಿರುತ್ತದೆ.
ಇನ್ನು ಕೆಲವು ಬಾರಿ ಮಕ್ಕಳು ಮಾಡುವ ಕೆಲಸಗಳು ದೊಡ್ಡವರಿಗೂ ಕೂಡ ಸ್ಪೂರ್ತಿಯಾಗುತ್ತವೆ. ಅಲ್ಲದೆ ಪಾಠವನ್ನು ಕಲಿಸುವಂತಿರುತ್ತದೆ. ಇದಕ್ಕೆ ಸಾಕ್ಷಿಯಾಗುವಂತಹ ಸುದ್ದಿಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಕಾಣಸಿಗುತ್ತದೆ. ಇಂತಹದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ನೋಡುಗರನ್ನು ಖುಷಿ ಪಡಿಸುತ್ತಿದೆ.
@HopkinsBRFC ಎನ್ನುವ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಆ ವಿಡಿಯೋದಲ್ಲಿ ಮಗುವೊಂದು ಮಳೆಯಲ್ಲಿ ತಾನು ನೆನೆದರೂ ಕೂಡ ತನ್ನ ಸಂಗಡ ಇರುವ ನಾಯಿಯನ್ನು ನೆನೆಯಲು ಬಿಡದೆ ಕೊಡೆ ಹಿಡಿಯುತ್ತಿದೆ. ಕೇವಲ 11 ಸೆಕೆಂಡುಗಳು ಇರುವ ಈ ವಿಡಿಯೋದಲ್ಲಿ ಮಗುವಿನ ಆಟ ಎಂಥವರನ್ನೂ ಒಂದುಕ್ಷಣ ತಿರುಗಿ ನೋಡುವಂತೆ ಮಾಡಿದೆ.
ಸುರಿಯುತ್ತಿರುವ ಮಳೆಯಲ್ಲಿ ನೆನೆಯುತ್ತಿದ್ದ ನಾಯಿಯ ಕಷ್ಟಕ್ಕೆ ಮರುಗಿದ ಮಗು ತಾನು ಹಿಡಿದಿದ್ದ ಕೊಡೆಯನ್ನೇ ಶ್ವಾನಕ್ಕೆ ಹಿಡಿಯುವ ದೃಶ್ಯವಿದು. ತಾನು ಮಳೆಯಲ್ಲಿ ಒದ್ದೆಯಾಗುತ್ತಿದ್ದರೂ ಅದರ ಬಗ್ಗೆ ಚಿಂತಿಸದ ಈ ಮಗು ಶ್ವಾನವನ್ನು ಆದಷ್ಟು ಕೊಡೆಯೊಳಗೆ ತರುವ ಪ್ರಯತ್ನ ಮಾಡುತ್ತಿದ್ದಳು.
ಈ ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಮುಗ್ಧ ಮಗುವಿನ ಈ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
This little girl will go far in life pic.twitter.com/QAPEKwq3Em
— ❤️A page to make you smile again ❤️ (@HopkinsBRFC) April 30, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.