ಬಂಜಾರ ಸಮಾಜದವರಿಗೆ ಪರಿಕ್ಷಾ ತರಬೇತಿ


Team Udayavani, Jul 2, 2021, 9:02 PM IST

2-15

ದಾವಣಗೆರೆ: ತಾಂಡಾ ಅಭಿವೃದ್ಧಿ ನಿಗಮ, ಬಂಜಾರ ಎಜ್ಯುಕೇಶನಲ್‌ ಅಕಾಡೆಮಿ ಟ್ರಸ್ಟ್‌ ಹಾಗೂ ಬೆಂಗಳೂರಿನ ಸಾಧನಾ ತರಬೇತಿ ಸಂಸ್ಥೆ ಸಹಭಾಗಿತ್ವದಲ್ಲಿ ಬಂಜಾರ ಸಮಾಜದ 100 ಅರ್ಹ ಪದವೀಧರ ಅಭ್ಯರ್ಥಿಗಳಿಗೆ ಕೆಎಎಸ್‌ ಪೂರ್ವಭಾವಿ ಹಾಗೂ ಮುಖ್ಯ ಪರೀಕ್ಷೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಿರೀಶ್‌ ಡಿ.ಆರ್‌. ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನ ಕಾರಣದಿಂದ ಬಂಜಾರ ಸಮುದಾಯದ ಪದವೀಧರರಿಗೆ ಪ್ರತಿಭೆ ಇದ್ದರೂ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಪಡೆಯಲು ಆಗುತ್ತಿಲ್ಲ. ಇದನ್ನು ಮನಗಂಡು ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗಾಗಿ ಉಚಿತ ತರಬೇತಿ ನೀಡಲು ಯೋಜನೆ ಹಾಕಿಕೊಳ್ಳಲಾಗಿದೆ.

ಬೆಂಗಳೂರಿನ ವಿಜಯನಗರದಲ್ಲಿರುವ ಪ್ರತಿಷ್ಠಿತ ಸಾಧನಾ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು ಎಂದರು. ಉಚಿತ ತರಬೇತಿಗಾಗಿ ಅರ್ಜಿ ನಮೂನೆಯನ್ನು ಸಾಧನಾ ಕೋಚಿಂಗ್‌ ಸೆಂಟರ್‌ನ ಅಧಿಕೃತ ವೆಬ್‌ ಸೈಟ್‌ ಡಿಡಿಡಿ. ಡೌನ್‌ಲೋಡ್‌ ಮಾಡಿಕೊಂಡು ಸೂಕ್ತ ದಾಖಲಾತಿಗಳೊಂದಿಗೆ ಜು. 10ರೊಳಗೆ ಸಲ್ಲಿಸಬೇಕು.

ಪದವಿ ಅಂಕಗಳ ಮೆರಿಟ್‌ ಆಧಾರ ಇಲ್ಲವೇ ಪ್ರವೇಶ ಪರೀಕ್ಷೆ ಮೂಲಕ ತರಬೇತಿಗೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಯ ಊಟ ಹಾಗೂ ವಸತಿ ವೆಚ್ಚವನ್ನು ಅವರ ಆರ್ಥಿಕ ಪರಿಸ್ಥಿತಿ ಆಧರಿಸಿ ಬಂಜಾರ ಎಜ್ಯುಕೇಶನಲ್‌ ಅಕಾಡೆಮಿ ಟ್ರಸ್ಟ್‌ ಮತ್ತು ತಾಂಡಾ ಅಭಿವೃದ್ಧಿ ನಿಗಮ ಭರಿಸಲಿದೆ. ಒಂದು ವರ್ಷ ಅವಧಿಯ ತರಬೇತಿ ಇದಾಗಿದೆ.

ಇದೇ ಮೊದಲ ಬಾರಿಗೆ ಉಚಿತ ತರಬೇತಿ ಹಮ್ಮಿಕೊಂಡಿದ್ದು, ಬಂಜಾರ ಸಮಾಜದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 99024 88801 ಅಥವಾ 99024 88803 ಸಂಪರ್ಕಿಸಬಹುದು ಎಂದು ತಿಳಿಸಿದರು.

ಜಾಧವ್‌ಗೆ ಸ್ಥಾನಮಾನ ಕೊಡಿ: ಬಂಜಾರ ಗುರುಪೀಠದ ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ ಮಾತನಾಡಿ, ಸಂಸದ ಉಮೇಶ್‌ ಜಾಧವ್‌ ಅವರಿಗೆ ಕೇಂದ್ರದಲ್ಲಿ ಸ್ಥಾನಮಾನ ನೀಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದು, ಅದನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಪ್ರತಿಯೊಂದು ಜಿಲ್ಲೆಯಲ್ಲಿಯೂ ಕಸೂತಿ ಘಟಕ ತೆರೆದು ಬಂಜಾರ ಮಹಿಳೆಯರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ವಿಶ್ವ ಬಂಜಾರ ರಕ್ಷಣಾ ವೇದಿಕೆಯ ಜಿ. ಮಂಜು ನಾಯ್ಕ, ಪ್ರಮುಖರಾದ ಪ್ರವೀಣಕುಮಾರ್‌ ಎಸ್‌. ಸುದ್ದಿಗೋಷ್ಠಿಯಲ್ಲಿದ್ದರು.

ಟಾಪ್ ನ್ಯೂಸ್

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

1-MPP

Madhya Pradesh:ಡಿಸ್ಟಿಲರಿಯಲ್ಲಿದ್ದ 58 ಬಾಲ ಕಾರ್ಮಿಕರ ರಕ್ಷಣೆ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

KARADI (2)

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

Shamanuru Shivashankarappa

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

mp renukacharya

ಬಿಎಸ್ ವೈ ವಿರುದ್ದದ ಷಡ್ಯಂತ್ರದ ಹಿಂದೆ ಪ್ರಭಾವಿ ಸಚಿವರಿದ್ದಾರೆ: ರೇಣುಕಾಚಾರ್ಯ

17

Priyanka Jarakiholi: ಸಮಸ್ಯೆ ಇರುವ ಮಾತ್ರಕ್ಕೆ ಪ್ರತ್ಯೇಕ ರಾಜ್ಯ ಪ್ರಸ್ತಾವ ಸಲ್ಲ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ಶಿಥಿಲಾವಸ್ಥೆ ತಲುಪಿದ ಕಟ್ಟಡದಲ್ಲಿ ತರಗತಿ ನಡೆಸಬೇಡಿ: ಶಿಕ್ಷಣ ಇಲಾಖೆ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

ತೈಲ ದರ ಏರಿಕೆಗೆ ಬಿಜೆಪಿ ಕೆಂಡ ರಾಜ್ಯದಲ್ಲಿ ರಾಜಕೀಯ ಬೆಂಕಿ

1-wqeqwewqe

Japan ಈಗ ಮಾಂಸ ಭಕ್ಷಕ ಬ್ಯಾಕ್ಟೀರಿಯಾ ಭೀತಿ!;ಸೋಂಕು ತಗಲಿದ 48 ಗಂಟೆಯಲ್ಲೇ ಸಾವು

sanjay-raut

TDP ಸ್ಪೀಕರ್‌ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲ: ಉದ್ಧವ್‌ ಪಕ್ಷ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.