ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಪರಿವರ್ತನೆ

ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಜಯ ಖಂಡಿತ

Team Udayavani, Dec 20, 2021, 6:15 PM IST

ಸಾಮೂಹಿಕ ವಿವಾಹಗಳಿಂದ ಸಾಮಾಜಿಕ ಪರಿವರ್ತನೆ

ಗಜೇಂದ್ರಗಡ: ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳು ಸೌಹಾರ್ದ ಕೇಂದ್ರಗಳಾಗಿ ಪರಿವರ್ತನೆ ಯಾಗಬೇಕಾದರೆ ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ನಡೆಸಬೇಕೆಂದು ಹೂವಿನ ಹಡಗಲಿ ಗವಿಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಸಮೀಪದ ಜಿಗೇರಿ ಗ್ರಾಮದಲ್ಲಿ ಲಿ. ಶ್ರೀ ಗುರುಸಿದ್ದೇಶ್ವರ ಶ್ರೀಗಳ 36ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕು ಕಂಡುಕೊಳ್ಳಬಹುದು. ಜೊತೆಗೆ ಪರಸ್ಪರ ಪ್ರೀತಿ, ವಿಶ್ವಾಸ ವೃದ್ಧಿಸುತ್ತದೆ. ‌ ಮನುಷ್ಯ ಜೀವನದಲ್ಲಿ ಸರಳತೆ ಪಾಲಿಸಬೇಕು. ಅಂದಾಗ ಮಾತ್ರ ಜಿವನದಲ್ಲಿ ಸುಖ, ಶಾಂತಿ, ನೆಮ್ಮದಿ ಕಾಣಲು ಸಾಧ್ಯ ಎಂದರು.

ಇಂದಿನ ದಿನಮಾನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆಮದುವೆ ಕಬ್ಬಿಣದ ಕಡಲೆ ಇದ್ದಂತೆ. ಉಳ್ಳವರು ಸಾಮೂಹಿಕ ವಿವಾಹದಂತಹ ಸತ್ಕಾರ್ಯಕ್ಕೆ ಮುಂದಾಗಿ ಬಡವ, ಶ್ರೀಮಂತ, ಮೇಲು, ಕೀಳೇನ್ನದೆ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ನಡೆಸುವ ಎಲ್ಲ ಸತ್ಕಾರ್ಯಗಳಿಗೆ ಜಯ ಖಂಡಿತ. ಇಂತಹ ಸಾಮಾಜಿಕ ಕಳಕಳಿಯಿಂದ ನಡೆಯುವ ಧರ್ಮ ಕಾರ್ಯಗಳು ಭಗವಂತನಿಗೆ ಇಷ್ಟ. ಜೊತೆಗೆ ಸಮಾಜವನ್ನು ಈಗಲೂ ಕಾಡುತ್ತಿರುವ ವರದಕ್ಷಿಣೆ ನಿರ್ಮೂಲನೆಗೆ ಎಲ್ಲರೂ ಸಂಕಲ್ಪ ತೊಡಬೇಕು ಎಂದರು.

ಜೀಗೇರಿ ಗುರುಸಿದ್ದೇಶ್ವರ ಮಠದ ಗುರುಸಿದ್ದೇಶ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ‌ ಹಿತ ಕಾಯಲು ಹಾಗೂ ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ‌ಹೆಚ್ಚಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳ ಸಂಖ್ಯೆ ಕ್ಷೀಣಿಸುತ್ತಿವೆ. ಹೀಗಾಗಿ, ಬಡ ಹಾಗೂ ಕೂಲಿಕಾರರಿಗೆ ವಿವಾಹಗಳು ಭಾರವಾಗಿ ಪರಿಣಮಿಸುತ್ತಿವೆ.

ಆದ್ದರಿಂದ ಸಮಾಜದಲ್ಲಿನ ಉಳ್ಳವರು‌ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಶ್ರೀಸಾಮಾನ್ಯರಕಲ್ಯಾಣಕ್ಕೆ ನೆರವಾಗಬೇಕು. ಅಂದಾಗ ಮಾತ್ರ ಸಮಾಜದ ‌ ಲ್ಲಿನ ಕೀಳರಿಮೆ ಕಣ್ಮರೆಯಾಗಲು ಸಾಧ್ಯ ಎಂದರು.

ಇದೇ ಸಂದರ್ಭದಲ್ಲಿ 8 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಬೆಳದಟ್ಟಿ ಹಿರೇಮಠದ ಶಿವಸಂಗಮೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ‌ ಸ್ವಾಮೀಜಿ, ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮುಖಂಡರಾದ ಮಿಥುನ್‌ ಪಾಟೀಲ, ಶರಣಪ್ಪ ದೊಣ್ಣೆಗುಡ್ಡ, ಮುದಿಯಪ್ಪ ಕರಡಿ, ‌ ಬಸವರಾಜ ಮೂಲಿಮನಿ, ಆರ್‌.ಕೆ.ಚವ್ಹಾಣ, ಅಂದಪ್ಪ ಬಿಚೂರ, ಶಶಿಧರ ಹೂಗಾರ, ನೀಲಪ್ಪ ಗುರಿಕಾರ, ಮಹಾಂತೇಶ ಪೂಜಾರ, ಪರಶು‌ ರಾಮ ಚಿಲಝರಿ, ಮಲ್ಲಿಕಾರ್ಜುನ ಅವಾರಿ ಇತರರು ಇದ್ದರು.

ಟಾಪ್ ನ್ಯೂಸ್

1-wwewq

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

HDK (3)

Prajwal Revanna ಬರುತ್ತಿರುವುದು ಸಮಾಧಾನ ತಂದಿದೆ:ಎಚ್ ಡಿಕೆ ಹೇಳಿದ್ದೇನು?

Rajiv-Kumar

Jammu and Kashmir; 35 ವರ್ಷದಲ್ಲೇ ಗರಿಷ್ಠ ಮತದಾನ: ಶೀಘ್ರ ವಿಧಾನಸಭೆಗೆ?

1-wqeewqe

Maharashtra;ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ

1-asdsadsad

Hubballi; ರೈಲ್ವೆ ಮೇಲ್ಸೇತುವೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ

1-aaaaaaa

Insults ; ಮತ್ತೆ ಆರ್ ಸಿಬಿ, ಕೊಹ್ಲಿಗೆ ಟಾಂಗ್ ನೀಡಿ ಆಕ್ರೋಶಕ್ಕೆ ಗುರಿಯಾದ ರಾಯುಡು

ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ: ಜಗದೀಪ್ ಧನಕರ್

ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ: ಜಗದೀಪ್ ಧನಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadaga: ಸರ್ಕಾರಿ ಬಸ್, ಬೈಕ್ ನಡುವೆ ಭೀಕರ ಅಪಘಾತ, ರೈತರಿಬ್ಬರು ಸ್ಥಳದಲ್ಲೇ ಮೃತ್ಯು…

ಭೀಕರ ರಸ್ತೆ ಅಪಘಾತ; ಬಿತ್ತನೆ ಬೀಜ ಖರೀದಿಸಲು ಬಂದಿದ್ದ ರೈತರಿಬ್ಬರು ಸ್ಥಳದಲ್ಲೇ ಮೃತ್ಯು

RTO ಅಧಿಕಾರಿಗಳಿಂದ ಹೆದ್ದಾರಿಯಲ್ಲೇ ಬಸ್ ಸೀಜ್… ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ!

RTO ಅಧಿಕಾರಿಗಳಿಂದ ಬಸ್ ಸೀಜ್… ಗದಗದಲ್ಲಿ ಆಂಧ್ರ ಪ್ರವಾಸಿಗರ ಪರದಾಟ!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-wwewq

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

1-aasasa

Bidar: ಬ್ರೇಕ್ ಫೇಲ್ ಆಗಿ ಆಲದ ಮರಕ್ಕೆ‌ ಢಿಕ್ಕಿಯಾದ ಸಾರಿಗೆ ಬಸ್

HDK (3)

Prajwal Revanna ಬರುತ್ತಿರುವುದು ಸಮಾಧಾನ ತಂದಿದೆ:ಎಚ್ ಡಿಕೆ ಹೇಳಿದ್ದೇನು?

Rajiv-Kumar

Jammu and Kashmir; 35 ವರ್ಷದಲ್ಲೇ ಗರಿಷ್ಠ ಮತದಾನ: ಶೀಘ್ರ ವಿಧಾನಸಭೆಗೆ?

1-wqeewqe

Maharashtra;ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.