‘ಕಾಟನ್ ಪೇಟೆ ಗೇಟ್’ ನಲ್ಲಿ ಮುಗಿಯಿತು ಮಾತುಕತೆ
Team Udayavani, Feb 16, 2022, 1:45 PM IST
“ಆರ್. ಎಸ್ ಪ್ರೊಡಕ್ಷನ್ಸ್’ ಬ್ಯಾನರ್ನಲ್ಲಿ ಆರ್. ಶ್ರೀನಿವಾಸ್ ನಿರ್ಮಾಣದ ಇಪ್ಪತ್ತನೆಯ ಚಿತ್ರ “ಕಾಟನ್ಪೇಟೆ ಗೇಟ್’ನ ಮಾತಿನ ಭಾಗದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಯಿತು.
ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಕಾಟನ್ಪೇಟೆ ಗೇಟ್’ ಚಿತ್ರದ ಬಹುಭಾಗ ಚಿತ್ರೀಕರಣ ಬೆಂಗಳೂರು, ಹೈದರಾಬಾದ್ ಸುತ್ತಮುತ್ತ ನಡೆಸಲಾಗಿದೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಬಾಕಿಯಿರುವ ಚಿತ್ರದ ಒಂದು ಹಾಡಿನ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ “ಕಾಟನ್ಪೇಟೆ ಗೇಟ್’ ಚಿತ್ರಕ್ಕೆ ತೆಲುಗಿನಲ್ಲಿ “ಸೀತಣ್ಣಪೇಟಾ ಗೇಟ್’ ಎಂದು ಹೆಸರಿಡಲಾಗಿದ್ದು, ವೈ. ರಾಜಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಇದನ್ನೂ ಓದಿ:ತಾಜ್ ಮಹಲ್ ಆವರಣದಲ್ಲಿ ಹನುಮಾನ್ ಚಾಲೀಸಾ ಪಠಣಕ್ಕೆ ಯತ್ನ: ಪೋಲೀಸರ ತಡೆ
“ಕಾಟನ್ಪೇಟೆ ಗೇಟ್’ ಚಿತ್ರದ ನಾಲ್ಕು ಹಾಡುಗಳಿಗೆ ಎನ್. ಎಸ್ ಪ್ರಸು ಸಂಗೀತ ಸಂಯೋಜನೆಯಿದೆ. ಚಿತ್ರಕ್ಕೆ ಚಿಡತಾಲ ನವೀನ್ ಹಾಗೂ ಯೋಗಿ ರೆಡ್ಡಿ ಛಾಯಾಗ್ರಹಣ, ಶಿವ ಸರ್ವಣಿ ಸಂಕಲನವಿದೆ. ಚಿತ್ರಕ್ಕೆ ಬಯ್ಯವರಪು ರವಿ ಸಂಭಾಷಣೆ ಬರೆದಿದ್ದಾರೆ. ವೇಣುಗೋಪಾಲ್, ಯಶ್ವನ್, ಸುರಭಿ ತಿವಾರಿ, ಅನುಶಾ ಜೈನ್, ಸುಧೀಕ್ಷಾ, ಕಿಸ್ಲೆ ಚೌಧರಿ , ಪಾರ್ಥು ಮುಂತಾದವರು “ಕಾಟನ್ಪೇಟೆ ಗೇಟ್’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bank Of Bhagyalakshmi: ಬ್ಯಾಂಕ್ನತ್ತ ದೀಕ್ಷಿತ್ ಚಿತ್ತ
Ragini Dwivedi; ಸಂಜು ಜೊತೆ ರಾಗಿಣಿ ಡ್ಯಾನ್ಸ್ ; ಮಂಗ್ಲಿ ಹಾಡಿಗೆ ಭರ್ಜರಿ ಸ್ಟೆಪ್
YouTube ನಲ್ಲಿ ಹೊಂದಿಸಿ ಬರೆಯಿರಿ; ಉಚಿತವಾಗಿ ನೋಡಿ, ಇಷ್ಟವಾದರೆ ಕಾಸು ಹಾಕಿ…
ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮುಖಂಡೆ
Sandalwood: ರಿಷಿ ಖುಷಿ!: ಅಕೌಂಟ್ಗೆ ಮತ್ತೊಂದು ಚಿತ್ರ ತ್ತೊ
MUST WATCH
ಹೊಸ ಸೇರ್ಪಡೆ
Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ
ಲೀಡ್ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ
Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ
Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು