“ಯಾವ ದೇವರಿಗೆ ಹೂ’ ಎಂದು ಪ್ರಶ್ನಿಸಿ ಮಹಿಳೆಯ ಮಾಂಗಲ್ಯ ಸರ ಕದ್ದರು  


Team Udayavani, Feb 14, 2023, 12:38 PM IST

tdy-9

ಬೆಂಗಳೂರು: ಮಹಿಳೆಯೊಬ್ಬರ ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದ ಭಾವ- ಭಾಮೈದನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನ ಏಕಲವ್ಯನಗರದ ಕಬ್ಬಾಳು ಅಲಿ ಯಾಸ್‌ ಚಂದು(27) ಮತ್ತು ರಘು ಅಲಿಯಾಸ್‌ ರವಿ(37) ಬಂಧಿತರು. ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 111 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಕ್ಕೆ ಪಡೆಯಲಾಗಿದೆ.

ಫೆ.7ರಂದು ಬೆಳಗ್ಗೆ 8.45ರ ಸುಮಾರಿಗೆ ಡಾ| ಎ.ಆದಿಲಕ್ಷ್ಮೀ ಎಂಬುವರು ಸನ್‌ಸಿಟಿಯ ವಾಟರ್‌ ಟ್ಯಾಂಕ್‌ ಹತ್ತಿರವಿರುವ ಪಾರಿಜಾತ ಮರದಲ್ಲಿ ಹೂ ಕಿತ್ತುಕೊಳ್ಳುತ್ತಿದ್ದರು. ಆಗ ಆರೋಪಿಯೊಬ್ಬ ಬಂದು ಯಾವ ದೇವರಿಗೆ ಹೂ ಎಂದಿದ್ದಾನೆ. ಆದಿಲಕ್ಷ್ಮೀ ಕೃಷ್ಣ ದೇವರಿಗೆ ಎಂದು ಪ್ರತಿಕ್ರಿಯಿಸಿದ್ದಾರೆ. ನಂತರ ನಡೆದುಕೊಂಡು ಹೋಗುವಾಗ ತನ್ನ ಸ್ನೇಹಿತನ ಜತೆ ಬೈಕ್‌ನಲ್ಲಿ ಹಿಂಬಾಲಿಸಿದ ಆರೋಪಿಗಳು ಸರ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ.

ಸಹೋದರ ಬಿಡಿಸಲು, ಭಾವನ ಜತೆ ಸೇರಿ ಸರ ಕಳವು: ಕಬ್ಬಾಳು ಮತ್ತು ಆತನ ಸಹೋದರ ಕಳ್ಳರಾಗಿದ್ದಾರೆ. 2022ರ ನವೆಂಬರ್‌ನಲ್ಲಿ ಕಬ್ಬಾಳು ಸಹೋದರ ದೇವಸ್ಥಾನ ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ. ಮತ್ತೂಂದೆಡೆ ಸರ ಕಳವು ಪ್ರಕರಣದಲ್ಲಿ ಕಬ್ಬಾಳು ಜೈಲು ಸೇರಿದ್ದ. ಈ ವೇಳೆ ಜೈಲಿ ನಲ್ಲಿದ್ದ ಮಂಜ ಅಲಿಯಾಸ್‌ ಕಳ್ಳ ಮಂಜನ ಪರಿಚಯವಾಗಿದೆ. ತನ್ನ ಸಹೋದರನನ್ನು ಜೈಲಿನಿಂದ ಬಿಡಿಸಲು ಹಣದ ಅಗತ್ಯದ ಬಗ್ಗೆ ಚರ್ಚಿಸಿದ್ದಾನೆ. ಆಗ ಮಂಜ ಸರ ಕಳವು ಮಾಡಲು ಯೋಜನೆ ರೂಪಿಸಿದ್ದು,. ಇಬ್ಬರು ಮಂಡ್ಯ, ಚಾಮರಾಜನಗರ, ಮೈಸೂರಿನಲ್ಲಿ ಕಳವು ಮಾಡಿದ್ದರು. ಬಳಿಕ ಮಂಜ ನಾಪತ್ತೆಯಾಗಿದ್ದು, ಕಬ್ಬಾಳು ಬೆಂಗಳೂರಿಗೆ ಬಂದಿದ್ದ. ಇದೇ ವೇಳೆ ತುಮಕೂರು ಜೈಲಿನಿಂದ ಕಳವು ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಸಹೋದರಿಯ ಪತಿ (ಭಾವ) ರಘು ಅಲಿಯಾಸ್‌ ರವಿನನ್ನು ಕಬ್ಬಾಳ ಭೇಟಿಯಾಗಿ ಇಬ್ಬರು ಒಂದೇ ದಿನ ಮೂರು ಕಡೆ ಸರ ಕಳವು ಮಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-wwewq

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

HDK (3)

Prajwal Revanna ಬರುತ್ತಿರುವುದು ಸಮಾಧಾನ ತಂದಿದೆ:ಎಚ್ ಡಿಕೆ ಹೇಳಿದ್ದೇನು?

Rajiv-Kumar

Jammu and Kashmir; 35 ವರ್ಷದಲ್ಲೇ ಗರಿಷ್ಠ ಮತದಾನ: ಶೀಘ್ರ ವಿಧಾನಸಭೆಗೆ?

1-wqeewqe

Maharashtra;ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ

1-asdsadsad

Hubballi; ರೈಲ್ವೆ ಮೇಲ್ಸೇತುವೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ

1-aaaaaaa

Insults ; ಮತ್ತೆ ಆರ್ ಸಿಬಿ, ಕೊಹ್ಲಿಗೆ ಟಾಂಗ್ ನೀಡಿ ಆಕ್ರೋಶಕ್ಕೆ ಗುರಿಯಾದ ರಾಯುಡು

ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ: ಜಗದೀಪ್ ಧನಕರ್

ಔಷಧೀಯ ಸಂಶೋಧನಾ ಕ್ಷೇತ್ರದಲ್ಲಿ ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ: ಜಗದೀಪ್ ಧನಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

4

Arrested: ಬೀದಿಬದಿ ಮಲಗಿದ್ದವರ ಹತ್ಯೆ: ಸರಣಿ ಹಂತಕನ ಸೆರೆ

7

Rave Party: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-wwewq

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

1-aasasa

Bidar: ಬ್ರೇಕ್ ಫೇಲ್ ಆಗಿ ಆಲದ ಮರಕ್ಕೆ‌ ಢಿಕ್ಕಿಯಾದ ಸಾರಿಗೆ ಬಸ್

HDK (3)

Prajwal Revanna ಬರುತ್ತಿರುವುದು ಸಮಾಧಾನ ತಂದಿದೆ:ಎಚ್ ಡಿಕೆ ಹೇಳಿದ್ದೇನು?

Rajiv-Kumar

Jammu and Kashmir; 35 ವರ್ಷದಲ್ಲೇ ಗರಿಷ್ಠ ಮತದಾನ: ಶೀಘ್ರ ವಿಧಾನಸಭೆಗೆ?

1-wqeewqe

Maharashtra;ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ: ಉದ್ವಿಗ್ನತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.