Sanitary Napkins ಶುಚಿ ಯೋಜನೆಗೆ ಮರುಚಾಲನೆ ಗುಣಮಟ್ಟದಲ್ಲಿ ರಾಜಿ ಬೇಡ


Team Udayavani, Jan 16, 2024, 6:00 AM IST

1-wddsad

ರಾಜ್ಯದ ಪ್ರೌಢ ಮತ್ತು ಪದವಿಪೂರ್ವ ಶಾಲೆಗಳಲ್ಲಿ ಕಲಿಯುತ್ತಿರುವ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗೆ ಮರುಚಾಲನೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಅದರಂತೆ ಮುಂದಿನ ಎರಡು ವಾರಗಳಲ್ಲಿ ರಾಜ್ಯದ 17.45 ಲಕ್ಷ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸಲಾಗುವುದು. ಹೆಣ್ಣು ಮಕ್ಕಳ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದ ಹದಿ ಹರೆಯದ ಹೆಣ್ಣು ಮಕ್ಕಳಲ್ಲಿ ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಶುಚಿತ್ವ ಕಾಯ್ದುಕೊಳ್ಳುವ ಬಗೆಗೆ ಅರಿವು ಮೂಡಿಸುವ ಜತೆಯಲ್ಲಿ ಅವರಲ್ಲಿ ಆರೋಗ್ಯ ರಕ್ಷಣೆಯ ಕಾಳಜಿ ಮೂಡಿಸುವ ಮಹತ್ತರ ಉದ್ದೇಶದೊಂದಿಗೆ ಆರಂಭಿಸಲಾಗಿದ್ದ ಯೋಜನೆಗೆ ಮರುಚಾಲನೆ ನೀಡುವ ರಾಜ್ಯ ಸರಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ ಮತ್ತು ಸಮುಚಿತವಾದುದಾಗಿದೆ.

ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದಾಗಿ ಅವರನ್ನು ವಿವಿಧ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಕಾಡುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳಾಗಿದ್ದರೂ, ವಿಷಯದಲ್ಲಿ ಹೆಣ್ಣು ಮಕ್ಕಳು ಕೀಳರಿಮೆಯ ಮನೋಭಾವವನ್ನು ಹೊಂದಿದ್ದಾರೆ. ಇದೇ ವೇಳೆ ಮಕ್ಕಳ ಹೆತ್ತವರು ಮತ್ತು ಹಿರಿಯರು ಕೂಡ ಮುಟ್ಟಿನ ಸ್ರಾವದ ನಿರ್ವಹಣೆಗೆ ಹಿಂದಿನಂತೆ ಹಳೆಯ ಬಟ್ಟೆ ಬಳಕೆಯಂತಹ ಅವೈಜ್ಞಾನಿಕ ವಿಧಾನಗಳ ಬಳಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದಾಗಿ ಹದಿಹರೆಯದ ಹೆಣ್ಮಕ್ಕಳು ಅನಿವಾರ್ಯವಾಗಿ ಇದೇ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮತ್ತೂಂದೆಡೆ ಋತುಸ್ರಾವದ ಕುರಿತಂತೆ ಸಮರ್ಪಕ ತಿಳಿವಳಿಕೆ ಇಲ್ಲದಿರುವುದರಿಂದಾಗಿ ಅವರು ಶುಚಿತ್ವವನ್ನು ನಿರ್ಲಕ್ಷಿಸುವುದೂ ಇದೆ. ಇದರಿಂದಾಗಿ ಹೆಣ್ಣುಮಕ್ಕಳನ್ನು ವಿವಿಧ ತೆರನಾದ ಅನಾರೋಗ್ಯ ಕಾಡುವಂತಾಗಿದೆ.

ಕಾರಣದಿಂದಾಗಿಯೇ ರಾಜ್ಯ ಸರಕಾರಶುಚಿಯೋಜನೆಯನ್ನು ಜಾರಿಗೊಳಿ  ಸಿತ್ತು. ಆದರೆ ಕೊರೊನಾ ಸಾಂಕ್ರಾಮಿಕ ವಕ್ಕರಿಸಿ, ಆನ್‌ಲೈನ್‌ ತರಗತಿಗಳು ಚಾಲ್ತಿಗೆ ಬಂದ ಸಂದರ್ಭದಲ್ಲಿ ಯೋಜನೆಗೆ ಗ್ರಹಣ ಬಡಿದಿತ್ತು. ಒಂದೂವರೆ ವರ್ಷದ ಬಳಿಕ ಶಾಲಾ ತರಗತಿಗಳು ಆರಂಭಗೊಂಡರೂ ಯೋಜನೆ ಪುನರಾರಂಭಗೊಂಡಿರಲಿಲ್ಲ. ಕೊನೆಗೂ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರಶುಚಿಯೋಜನೆಗೆ ಮರುಚಾಲನೆ ನೀಡಲು ಮುಂದಾಗಿದೆ. ಅದರಂತೆ ಟೆಂಡರ್‌ ಪ್ರಕ್ರಿಯೆಯಾದಿಯಾಗಿ ಬಹುತೇಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು ಅಂತಿಮ ಹಂತದ ತಪಾಸಣೆಯನ್ನು ಪೂರ್ಣಗೊಳಿಸಿ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ನ್ಯಾಪ್‌ಕಿನ್‌ಗಳನ್ನು ಪೂರೈಕೆ ಮಾಡಲು ಭರದ ಸಿದ್ಧತೆ ನಡೆದಿದೆ.

ಶಾಲಾಕಾಲೇಜುಗಳಿಗೆ ಪೂರೈಸಲುದ್ದೇಶಿಸಿರುವ ಸ್ಯಾನಿಟರಿ ನ್ಯಾಪ್‌ಕಿನ್‌ ಅನ್ನು ಪರೀಕ್ಷಿಸಿಯೇ ಮಕ್ಕಳಿಗೆ ವಿತರಿಸಲು ಸರಕಾರ ಕ್ರಮ ಕೈಗೊಂಡಿದೆಯಾದರೂ ಬಗ್ಗೆ ಇನ್ನಷ್ಟು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಆವಶ್ಯಕತೆ ಇದೆ. ನ್ಯಾಪ್‌ಕಿನ್‌ಗಳ ಗುಣಮಟ್ಟದಲ್ಲಿ ಎಲ್ಲೂ ರಾಜಿ ಮಾಡಿಕೊಳ್ಳದೆ ಅತ್ಯಂತ ಸುರಕ್ಷಿತ ಮತ್ತು ನಿಗದಿಪಡಿಸಲಾದ ಮಾನದಂಡಗಳಿಗನುಗುಣವಾಗಿ ತಯಾರಿಸಲ್ಪಟ್ಟ ನ್ಯಾಪ್‌ಕಿನ್‌ಗಳೇ ಶಾಲಾಕಾಲೇಜುಗಳಿಗೆ ಸರಬರಾಜಾಗುವಂತೆ ಕಟ್ಟೆಚ್ಚರ ವಹಿಸಬೇಕು. ಬಳಕೆ ಅವಧಿ ಮುಗಿದಿರುವ, ಕಳಪೆ ಗುಣಮಟ್ಟದ ಮತ್ತು ದೋಷಪೂರಿತ ನ್ಯಾಪ್‌ಕಿನ್‌ಗಳ ಬಳಕೆ ಕೂಡ ಹೆಣ್ಣು ಮಕ್ಕಳಿಗೆ ಕಿರಿಕಿರಿ ಉಂಟು ಮಾಡುವ ಮತ್ತು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಇತ್ತ ಸರಕಾರ ಗಂಭೀರ ಲಕ್ಷ್ಯ ಹರಿಸಬೇಕು. ಇದರ ಜತೆಯಲ್ಲಿ ತರಬೇತಿ ಪಡೆದ ಆರೋಗ್ಯ ಸಿಬಂದಿಯಿಂದ ನ್ಯಾಪ್‌ಕಿನ್‌ಗಳ ಸಮರ್ಪಕ ಬಳಕೆ ಮತ್ತು ಇದರ ಪ್ರಯೋಜನಗಳ ಕುರಿತಂತೆ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ಟಾಪ್ ನ್ಯೂಸ್

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಬದಲಾದ ವಿಭಾಗಕ್ಕೆ ಹೊಂದಾಣಿಕೆ

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

police crime

Sandeshkhali ಪ್ರಕರಣಕ್ಕೆ ದಿಢೀರ್‌ ತಿರುವು : ಇಬ್ಬರು ಸಂತ್ರಸ್ತೆಯರಿಂದ ದೂರು ವಾಪಸ್‌!

Exam

SSLC; ಕೃಪಾಂಕದಿಂದ 1.70 ಲಕ್ಷ ವಿದ್ಯಾರ್ಥಿಗಳು ಪಾಸ್‌!

bjp-congress

Hindu ಸಂಖ್ಯೆ ಕುಸಿತ: ಕೈ-ಕಮಲ ವಾಕ್ಸಮರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಶಾಂತಿಯುತ ಮತದಾನ: ಸಾಂಘಿಕ ಪ್ರಯತ್ನ ಸಫ‌ಲ…

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

ಹೆಣ್ಣು ಭ್ರೂಣ ಹತ್ಯೆಗೆ ಸಂಪೂರ್ಣ ಕಡಿವಾಣ ಬೀಳಲಿ

IMD

ಮತದಾನಕ್ಕೆ ಬಿಸಿಲು ಅಡ್ಡಿಯಾಗದಿರಲಿ

Editorial:ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Editorial: ಮಣಿಪುರ- ಒಡೆದ ಮನಸು‌ ಬೆಸೆಯುವ ಕಾರ್ಯವಾಗಲಿ

Economy

ಉತ್ಪಾದನ ವಲಯದಲ್ಲಿ ಜಿಗಿತ: ಆರ್ಥಿಕತೆಗೆ ಮತ್ತಷ್ಟು ಬಲ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Exam 2

SSLC ಪರೀಕ್ಷೆ-2 ಜೂನ್‌ 7ರಿಂದ ; ನೋಂದಣಿಗೆ ಮೇ 16ರ ವರೆಗೆ ಅವಕಾಶ

34

GT Vs CSK: ನಿರ್ಗಮನ ಬಾಗಿಲಲ್ಲಿ ಗುಜರಾತ್‌ ಪ್ಲೇ ಆಫ್‌ ಜಪದಲ್ಲಿ ಚೆನ್ನೈ

1-24-friday

Daily Horoscope: ಉದ್ಯೋಗ ಸ್ಥಾನದಲ್ಲಿ ಬದಲಾದ ವಿಭಾಗಕ್ಕೆ ಹೊಂದಾಣಿಕೆ

31

Congress: ಕುಮಾರಸ್ವಾಮಿ, ದೇವರಾಜೇಗೌಡ ವಿರುದ್ಧ ಎಸ್‌ಐಟಿಗೆ ಕಾಂಗ್ರೆಸ್‌ ದೂರು

1-wqeqewwqe

India ಲೋಕಸಭೆ ಚುನಾವಣೆಯಲ್ಲಿ ಅಮೆರಿಕ ಹಸ್ತಕ್ಷೇಪ: ರಷ್ಯಾ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.