Horrific!;ಹಲ್ಲೆ ಮಾಡಿ ಬೀದಿಯಲ್ಲಿ ಮಹಿಳೆಯ ಅರೆಬೆತ್ತಲೆ ಮೆರವಣಿಗೆ:ಯಾರೂ ಸಹಾಯ ಮಾಡಲಿಲ್ಲ!

ಪಂಜಾಬ್ ಬಂಗಾಳಕ್ಕಿಂತ ಕಡಿಮೆ ಇಲ್ಲ ಎಂದು ಬಿಜೆಪಿ ಆಕ್ರೋಶ

Team Udayavani, Apr 6, 2024, 9:41 PM IST

rape

ಚಂಡೀಗಢ: ಪಂಜಾಬ್‌ನ ತರ್ನ್ ತರನ್‌ನ ವಾಲ್ತೋಹಾ ಗ್ರಾಮದಲ್ಲಿ ನಡೆದ ಭೀಕರ ಮನುಕುಲವೇ ತಲೆತಗ್ಗಿಸುವ ಘಟನೆಯೊಂದರಲ್ಲಿ, 55 ವರ್ಷದ ಮಹಿಳೆಯೊಬ್ಬರನ್ನು ಥಳಿಸಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಲಾಗಿದೆ.

ಸಂತ್ರಸ್ತೆಯ ಪರೇಡ್ ನಡೆಸುತ್ತಿರುವ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಸಂತ್ರಸ್ತೆಯ ಮಗ ಯುವತಿಯೊಂದಿಗೆ ಓಡಿಹೋಗಿ ಆಕೆಯ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ಕೆಲವೇ ದಿನಗಳಲ್ಲಿ ಮಾರ್ಚ್ 31 ರಂದು ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಪ್ರಕಾರ, ಸಂತ್ರಸ್ತೆ  ಮಗನ ಪತ್ನಿಯ ಮನೆಯ ಕಡೆಯವರು ಸಂತ್ರಸ್ತೆ  ಮನೆಯಲ್ಲಿ ಒಬ್ಬರೇ ಇದ್ದ ಸಮಯದಲ್ಲಿ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದು ಹಾಕಿ ಬೀದಿಯಲ್ಲಿ ಪರೇಡ್ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೂವರನ್ನು ಕುಲ್ವಿಂದರ್ ಕೌರ್ ಮಣಿ, ಶರಣಜಿತ್ ಸಿಂಗ್ ಶಾನಿ ಮತ್ತು ಗುರ್ಚರಣ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಬಿಜೆಪಿ ಆಕ್ರೋಶ ಹೊರ ಹಾಕಿದೆ. “ಪಂಜಾಬ್ ಮತ್ತು ಬಂಗಾಳದಲ್ಲಿ ಏನು ನಡೆಯುತ್ತಿದೆ ಎಂಬುದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ತರ್ನ್ ತರಣ್‌ನಲ್ಲಿ ನಡೆದ ಘಟನೆ ಎಲ್ಲರನ್ನೂ ನಾಚಿಕೆಪಡಿಸಿದೆ ಎಂದು ಬಿಜೆಪಿ ನಾಯಕ ಆರ್‌ಪಿ ಸಿಂಗ್ ಹೇಳಿದ್ದಾರೆ.

‘ಪಂಜಾಬ್‌ನ ಪ್ರಸ್ತುತ ಎಎಪಿ ಸರ್ಕಾರವು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಮೇಲಾಗಿ, ಘಟನೆ ಸಂಭವಿಸಿದಾಗಿನಿಂದ ಯಾರೂ ಯಾವುದೇ ಕ್ರಮ ಕೈಗೊಂಡಿಲ್ಲ”ಎಂದು ಬಿಜೆಪಿ ನಾಯಕ ಎಸ್‌ಎಸ್ ಚನ್ನಿ ಕಿಡಿ ಕಾರಿದ್ದಾರೆ.

ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಮಾತನಾಡಿ, ‘ಈ ಘಟನೆಯನ್ನು ತೀವ್ರ ಪದಗಳಲ್ಲಿ ಖಂಡಿಸಿದರೆ ಸಾಲದು, ನಮ್ಮ ಹೆಣ್ಣನ್ನು ಬೀದಿಯಲ್ಲಿ ಈ ರೀತಿ ಮಾಡಿದ್ದು ನಾಚಿಕೆಗೇಡಿನ ಸಂಗತಿ.ನಮ್ಮ ಗುರುಗಳು ಯಾವತ್ತೂ ಮಹಿಳೆಯರನ್ನು ಗೌರವಿಸಿದ್ದಾರೆ, ಆದರೆ ಇಂದು , ಈ ನಿಷ್ಪ್ರಯೋಜಕ ಸರಕಾರದ ಮುಂದಾಳತ್ವದಲ್ಲಿ ಗಂಡಸರು ಮಹಿಳೆಯ ಬಟ್ಟೆ ಹರಿದು ಗ್ರಾಮದಲ್ಲಿ ಮೆರವಣಿಗೆ ಮಾಡಿ 15 ದಿನ ಕಳೆದರೂ ಪೊಲೀಸರಿಗೆ ಸಿಕ್ಕಿಲ್ಲವೇ?”ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಘಟನೆಯನ್ನು ಖಂಡಿಸಿದ್ದು, ‘ಯಾರೂ ಮಹಿಳೆಗೆಗೆ ಸಹಾಯ ಮಾಡಲು ಮುಂದೆ ಬಂದಿಲ್ಲ. ಪೊಲೀಸರಾಗಲೀ ಅಥವಾ ಸ್ಥಳೀಯರಾಗಲೀ ನೆರವಾಗಿಲ್ಲ. ಇದು ಆಘಾತಕಾರಿ ಘಟನೆಯಾಗಿದೆ ಮತ್ತು ಮಹಿಳಾ ಆಯೋಗ ಈ ವಿಷಯದ ಬಗ್ಗೆ ಸ್ವಯಂ ಅರಿವನ್ನು ತೆಗೆದುಕೊಂಡಿದೆ. ನಾನು ಸದಸ್ಯರನ್ನು ವಿಚಾರಣೆಗೆ ಕಳುಹಿಸುತ್ತಿದ್ದೇನೆ. ಅಪರಾಧಿಗಳ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಮಾದರಿ ನೀತಿ ಸಂಹಿತೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣ ಆಯೋಗಕ್ಕೆ ಪತ್ರ ಬರೆಯುತ್ತೇವೆ” ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

8-doddanagudde

ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

raichur

Raichur: ಗೇಟ್ ಹಾರಿ ಕಳವು ಮಾಡಿದ ಮಹಿಳೆ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.