ಮೂರು ತಲೆಮಾರು


Team Udayavani, Mar 3, 2017, 11:51 AM IST

Janaru.jpg

ಅಜ್ಜಿ… ಅಬ್ಟಾ ನಮ್ಮ ಕಾಲಕ್ಕೂ ಈಗಿನ ಕಾಲಕ್ಕೂ ಎಷ್ಟು ವ್ಯತ್ಯಾಸ! ಮನೆಯಲ್ಲಿ ಅಪ್ಪ ಅಮ್ಮ ಇದ್ದರೂ ಅಜ್ಜಿಯದೇ ಮೇಲುಗೈ. ಅಜ್ಜಿ ಹಾಕಿದ ಗೆರೆ ಅಪ್ಪನೇ ದಾಟುತ್ತಿರಲಿಲ್ಲವೆಂದ ಮೇಲೆ ಇನ್ನು ನಮ್ಮ ಪಾಡೇನು? ಲೋವರ್‌ ಸೆಕೆಂಡರಿ ಮುಗಿಸಿದರೆ ಅದೇ ಒಂದು ಸಾಹಸ. ಅಲ್ಲಿಂದ ಮುಂದೆ ಓದುತ್ತೇನೆ ಎಂಬ ಉಸಿರೂ ಬರುವ ಹಾಗಿಲ್ಲ. ಅನಂತರ ಏನಿದ್ದರೂ ಹಾಡು ಹಸೆ ಕಲಿಯಬೇಕು. ಅಡುಗೆಗೆ ಸಹಾಯ ಮಾಡಬೇಕು. ಬಟ್ಟೆ ಒಗೆ, ಪಾತ್ರೆ ಬೆಳಗು, ಚಿಕ್ಕತಮ್ಮ ತಂಗಿಯರನ್ನು ಶಾಲೆಗೆ ತಯಾರು ಮಾಡು ಇಷ್ಟೇ.

ದೇವರನಾಮ ಬಿಟ್ಟು ಸಣ್ಣಗೆ ಬೇರೆ ಒಂದು ಹಾಡೂ ಗುನುಗಬಾರದು. ಅಜ್ಜಿಯೋ ಅಮ್ಮನೋ ದೊಡ್ಡ ಕಣ್ಣು ಬಿಟ್ಟು ಹೆದರಿಸುತ್ತಿದ್ದರು. “ನಾಳೆ ಮದುವೆಯಾಗಿ ಬೇರೆ ಮನೆಗೆ ಹೋಗುವ ಹುಡುಗಿ ಕೊಂಚ ಘನ ಗಂಭೀರ ಕಲಿ’ ಎನ್ನುತ್ತಿದ್ದರು. ನಮ್ಮ ಇಷ್ಟದ ಹಾಗೆ ಮಲಗಲೂ ಅವಕಾಶವಿಲ್ಲ. “ಏನದು ಹೆಣ್ಣುಮಕ್ಕಳು ಅಂಗಾತನಾಗಿ ಗಂಡಸಿನ ಹಾಗೆ ಮಲಗೋದು, ಪಕ್ಕಕ್ಕೆ ತಿರುಗಿ ಮಲಗು’ ಎಂದು ಗದರಿಸುತ್ತಿದ್ದರು. ಕತೆಪುಸ್ತಕ ಓದಿದರೆ ಕೆಟ್ಟು ಹೋಗುತ್ತಾರೆಂದು ಅದೂ ಓದಬಾರದು. ತೀರಾ ಹೊತ್ತು ಕೊಲ್ಲಲು ಕಷ್ಟವಾದರೆ ಬೇಕಾದರೆ ಒಂದು ನಾಲ್ಕು ಜನ ಮಕ್ಕಳಿಗೆ ಮನೆಪಾಠ ಹೇಳಿಕೊಡಬಹುದು. ಹೊರಗೆ ಕೆಲಸಕ್ಕೆ ಕಳಿಸುವುದೂ ಒಂದು ಆಂದೋಲನವೇ. ಟೀಚರ್‌ ಕೆಲಸ ಅಂದರೆ ಸ್ವಲ್ಪ ವಾಸಿ.

ಯೋಚನೆ ಮಾಡಿ ಅಳೆದೂ ಸುರಿದೂ ಕಳಿಸುತ್ತಿದ್ದರು. ಆದರೂ ಮೈ ತುಂಬಾ ಸೆರಗು ಹೊದ್ದು ತಲೆ ಬಗ್ಗಿಸಿ ನೆಲ ನೋಡುತ್ತಾ ಹೋಗಬೇಕು ಬರಬೇಕು. ಶಾಲೆಯ ಬಳಿ ತಲೆ ಎತ್ತಿದರೆ ಇನ್ನು ವಾಪಸು ಮನೆಯ ಬಳಿ ಬಂದಾಗಲೇ ತಲೆ ಎತ್ತಬೇಕು. ಸಂಬಳ ತಂದು ಪೂರ್ತಿ ಅಜ್ಜಿಯ ಕೈಗೋ ಅಪ್ಪನ ಕೈಗೋ ಕೊಡಬೇಕು. ತನ್ನ ಖರ್ಚಿಗೆ ಒಂದೆರಡು ರೂಪಾಯಿಗಳನ್ನು ಕೊಡೆಂದು ಗೋಗರೆಯಬೇಕು. ಇಷ್ಟಕ್ಕೂ ನಿಂಗೇನು ಖರ್ಚಿರುತ್ತೆ? ಬೇಕಾದ್ದು ನಾವೇ ತಂದು ಕೊಡುತ್ತೇವಲ್ಲ ಎಂಬ ಒಗ್ಗರಣೆ ಬೇರೆ. ಉಡುವ ಸೀರೆ, ಲಂಗ, ಚೋಲಿ, ಬಾಡಿ ಎಲ್ಲವೂ ಅಜ್ಜಿ ಅಥವಾ ಅಮ್ಮ ತಂದದ್ದು ದೂಸರಾ ಮಾತಿಲ್ಲದೆ ಹಾಕಿಕೊಳ್ಳಬೇಕು. ನಾಜೂಕಿನ ಸೀರೆ ಒಂದೂ ಇಲ್ಲ. ಎಲ್ಲ ವಾಯಿಲ್‌ ಸೀರೆಗಳು. ಇಷ್ಟವಾದರೂ ಅದೇ ಆಗದಿದ್ದರೂ ಅದೇ. ಇನ್ನು ಸ್ನೋ ಪೌಡರು ಇವೆಲ್ಲಾ ಕನಸೇ ಸರಿ. ಮುಖದ ತುಂಬ ಅರಿಶಿಣ, ಕಣ್ಣಿಗೆ ಕಾಡಿಗೆ, ಹಣೆಗೆ ಕಲೆಸಿದ ಕುಂಕುಮ. ಇಷ್ಟೇ ಅಲಂಕಾರ.

ಅಮ್ಮ…
ಅಬ್ಟಾ ಈ ಅಮ್ಮ ಇನ್ನೂ ಹಳೆ ಕಾಲದವಳ ತರಾ ಆಡುತ್ತಾಳೆ. ತಾನು ಕಟ್ಟುನಿಟ್ಟಿನಲ್ಲಿ ಸಂಪ್ರದಾಯದಲ್ಲಿ ಬೆಳೆದೆ ಎಂದು ನಮ್ಮನ್ನೂ ಹಾಗೆ ಬೆಳೆಸಲು, ಅದೇ ಗೊಡ್ಡು ಸಂಪ್ರದಾಯ ಹೇರಲು ಬರುತ್ತಾಳೆ. ಕಾಲೇಜಿಗೆ ಹೋಗಲು ಲಂಗದಾವಣಿಯನ್ನೇ ಹಾಕಬೇಕಂತೆ. ಥೂ! ಏನು ಗೋಳ್ಳೋ! ಹೋಗಲಿ ಅದೇ ಹಾಕೋಣ, ನಾನಂತೂ ನಂಗಿಷ್ಟದ ಬಣ್ಣದ ಲಂಗದಾವಣಿಯನ್ನು ಮ್ಯಾಚಿಂಗ್‌ ಬಳೆಗಳನ್ನು ತಂದುಕೊಂಡಿದ್ದೇನೆ. ನಮ್ಮ ಕಾಲೇಜಿಗೆ ಸುನೀತಾ ಅಂತ ಬರ್ತಾಳೆ, ಯಾವಾಗಲೂ ಪಂಜಾಬಿ ಡ್ರೆಸ್‌ ಹಾಕ್ತಾಳೆ. ಎಷ್ಟು ಚೆಂದ ಇರತ್ತೆ. ಭುಜದ ಎರಡೂ ಕಡೆ ಬರುವ ಆಗಾಗ ಜಾರುವ ದುಪ್ಪಟ್ಟಾವನ್ನು ಸ್ಟೈಲಾಗಿ ಏರಿಸಿಕೊಳ್ಳೋದರಲ್ಲಿ ಏನು ಮಜಾ! ಇರಲಿ ಇನ್ನು ಸ್ವಲ್ಪ ದಿನ ಕಳೀಲಿ, ಆಮೇಲೆ ನಾನೂ ತೊಗೊಳೆ¤àನೆ. ಬಿಡ್ತೀನಾ! ಬಟ್ಟೆಗಳನ್ನು ಅಮ್ಮನೇ ಬಂದು ಕೊಡಿಸಬೇಕಂತೆ. ಛೆ! ಈ ಅಮ್ಮನಿಗೆ ಒಂದೂ ಟೇಸ್ಟ್‌ ಇಲ್ಲ ಎಂಥಧ್ದೋ ಕಲರ್‌ ಆರಿಸ್ತಾಳೆ. ಅದಕ್ಕೆ ನಾನು ಅಪ್ಪನಿಗೆ ಬೆಣ್ಣೆ ಸವರಿ ಪಕ್ಕದ ಮನೆಯ ಲಲಿತೆಯ ಜೊತೆ ಹೋಗಿ ನಂಗೆಂಥದ್ದು ಬೇಕೋ ಅಂಥದ್ದು ತಂದುಕೊಂಡೆ. 

ಅಮ್ಮ ಧುಮು ಧುಮು ಅಂತ ಇದ್ದಳು. ನಾನೂ ಸುಮ್ಮನಿದ್ದೆ. ಆಮೇಲೆ ಅವಳೇ ಸರಿಹೋದಳು. ಇನ್ನು ಕಾಲೇಜಿನಲ್ಲಿ ಗಂಡುಹುಡುಗರನ್ನು ಮಾತೇ ಆಡಿಸಬಾರದಂತೆ. ಅಲ್ಲ ಏನು ಇವಳ ಕಾಲ ಕೆಟ್ಟುಹೋಯೆ¤à? ತಲೆ ಬಗ್ಗಿಸಿ ಹೋಗಲು? ಯಾಕೆ ಮಾತಾಡಿಸಬಾರದು? ಅವರೇನು ಹುಲಿನಾ ಕರಡಿನಾ? ಜೊತೆಯಲ್ಲಿ ಓದುವಾಗ ಮಾತಾಡದೇನೇ ಇರಲು ಆಗತ್ತಾ? ತರಲೆ ಮಾಡಿದರೆ ನಂಗೂ ಬುದ್ಧಿ ಕಲಿಸಲು ಬರತ್ತೆ ಅಲ್ವಾ? ಇನ್ನು ಕಾಲೇಜಿನ ಗೆಳತಿಯರ ಜೊತೆ ಸಿನೆಮಾಗೆ ಹೊಟೇಲ್‌ಗೆ ಹೋಗಬಾರದಂತೆ! ಹØಹಾØ, ಯಾರು ಕೇಳ್ತಾರೆ ಇವಳ ಮಾತು? ಶ್ರೀದೇವಿ ಸಿನೆಮಾ ಬಂದರೆ ಬಿಡಕ್ಕೆ ಆಗತ್ತಾ? ಶಾಸಿŒ ಹೊಟೇಲ್‌ನ ಮಸಾಲೆ ದೋಸೆ ಜಾಮೂನು ತಿನ್ನದೆ ಇರಲು ಆಗತ್ತಾ? ಅಪ್ಪನ್ನ ಪೂಸಿ ಹೊಡೆದು ಅಮ್ಮನಿಗೆ ಗೊತ್ತಾಗದ ಹಾಗೆ ಪಾಕೆಟ್‌ ಮನಿ ಸ್ಯಾಂಕ್ಷನ್‌ ಮಾಡಿಸಿಕೊಂಡಿದ್ದೇನೆ. ಅದರಲ್ಲಿ ಇವೆಲ್ಲ  ಖರ್ಚು ನೋಡಿಕೊಳೆ¤àನೆ. ಸಿನೆಮಾಗೆ ಹೋಗಿದ್ದೆ ಎಂದು ಹೇಳಲು ನನಗೇನು ಹುಚ್ಚೇ? ನಾನೆಲ್ಲಿ ಕಾಲೇಜಿಗೆ ಹೋಗಿ, ಸಿನೆಮಾ ನೋಡಿ ಲವ್‌ ಮಾಡೋದು ಕಲಿತು ಲವ್‌ಮ್ಯಾರೇಜ್‌ ಮಾಡಿಕೊಳೆ¤àನೋ ಅಂತ ಈ ಅಮ್ಮನಿಗೆ ಭಯ. ಲವ್‌ ಮಾಡಿದ್ರೆ ಏನು ತಪ್ಪು? ಬೇರೆ ಜಾತಿ ಹುಡುಗನ್ನ ನಾನ್ಯಾಕೆ ಲವ್‌ ಮಾಡಲಿ. ನಂಗೇನು ಗೊತ್ತಾಗಲ್ವಾ? ನಮ್ಮ ಜನದ ಹುಡುಗನ್ನೇ ನೋಡಿ ಲವ್‌ ಮಾಡ್ತೀನಿ. ಏನು ಮಾಡ್ತಾಳೆ ಈ ಅಮ್ಮ ನೋಡೋಣ! 

ಮಗಳು…
ಅಯ್ಯೋ ಈ ಅಜ್ಜಿಯ ಕಾರುಬಾರಿನಲ್ಲಿ ಮನೇಲಿ ಜೋರಾಗಿ ಉಸಿರಾಡೋದೂ ಕಷ್ಟಾನಪ್ಪಾ. ಮೊದಲೇ ಕೈಲಾಗಲ್ಲ ತನ್ನ ಪಾಡಿಗೆ ತಾನು ಇರಬಾರದೇ? ಅಮ್ಮ ಎಷ್ಟೋ ವಾಸಿ. ಕೆಲಸಕ್ಕೆ ಹೋಗೋದರಿಂದ ಅಮ್ಮನಿಗೆ ಹೊರಗಿನ ಪ್ರಪಂಚ ಹೇಗಿರುತ್ತೆ ಅಂತ ಗೊತ್ತು. ಇನ್ನು ಈ ಅಜ್ಜಿ ಗೆ ಏನು ಗೊತ್ತು? ನನಗೆ ತುಂಬಾ ಸಲಿಗೆ ಕೊಟ್ಟಿದ್ದೇನೆಂದು ಅಮ್ಮನಿಗೂ ಬೈಯುತ್ತಾಳೆ. ಅಜ್ಜಿ ನಮ್ಮನೆಗೆ ಬಂದಾಗಲೆಲ್ಲಾ ನಂಗೂ ಅವಳಿಗೂ ಲಟಾಪಟಿ. “ಈ ಪ್ಯಾಂಟ್‌ ಹಾಕಬೇಡ, ಟೀ ಶರ್ಟ್‌ ಟೈಟು, ಬೇರೆ ಹಾಕ್ಕೋ. ಹಣೆಗೆ ಲಕ್ಷಣವಾಗಿ ಕುಂಕುಮ ಇಡು. ಮಲ್ಲಿಗೆ ಹೂವಿದೆ. ಲಕ್ಷಣವಾಗಿ ಮುಡಕೊಂಡು ಹೋಗಬಾರದಾ’ ಹೀಗೇ ಇವಳ ವಟವಟ. ಹುಶ್‌! ಜೀನ್ಸ್‌ ಹಾಕಿ ಯಾರಾದ್ರೂ ಮಲ್ಲಿಗೆ ಮುಡೀತಾರಾ? ಇವಳಿಗೆ ಹುಚ್ಚಾ? ಅಷ್ಟು ಎತ್ತರದ ಚಪ್ಪಲಿ ಯಾಕೆ ಹಾಕ್ತೀಯ ಸೊಂಟ ಉಳುಕಲ್ವಾ? ಅಂತಾಳೆ. “ಅಯ್ಯೋ ಅಜ್ಜಿ , ನೀನು ಸದ್ಯ ಸುಮ್ಮನಿರು. ನಿನ್ನ ಬಾಯಿ ಬಂದ್‌ ಮಾಡಲು ಏನು ಮಾಡಬೇಕು’ ಎಂದರೆ ಅಮ್ಮನನ್ನು ಜೋರಾಗಿ ಕರೆಯುತ್ತಾಳೆ “ನೋಡೇ ನಿನ್ನ ಮಗಳ ಮಾತು ಕೇಳಿದೆಯಾ?’ ಅಮ್ಮ ಪಾಪ ನನಗೂ ಹೇಳಲಾರದೆ ಅಜ್ಜಿಗೂ ಸಮಾಧಾನ ಮಾಡಲಾರದೆ ಕಕ್ಕಾಬಿಕ್ಕಿಯಾಗುತ್ತಾಳೆ. ನಂಗೇ ಹೇಳ್ತಾಳೆ, “ಅವಳಿಗೆ ಎದುರುತ್ತರ ಕೊಡಬೇಡ ಪುಟ್ಟಿà, ನಿಂಗಿಷ್ಟ ಬಂದ ಹಾಗಿರು. ಅವಳ ಕಣ್ಣಿಗೆ ಹೆಚ್ಚು ಬೀಳಬೇಡ’ ಅಂತ. ಅಜ್ಜಿ ಮೇಲೆ ಎಷ್ಟೇ ಕೋಪ ಇದ್ದರೂ ಅವಳು ಮಾಡುವ ತಿಂಡಿಗಳು ವಾವ್‌! ಸೂಪರ್ರಾಗಿರತ್ತೆ. ಅಜ್ಜಿ ಮಾಡುವ ಕೋಡುಬಳೆ ಐದು ಬೆರಳಿಗೂ ಒಂದೊಂದು ಜೋಡಿಸಿ ಮೆಲ್ಲುವಾಗ ಅಜ್ಜಿಯಂತಹ ದೇವತೆಯೇ ಇಲ್ಲಾ ಅನಿಸತ್ತೆ. ಆಗ ಮಾತ್ರ ಅಜ್ಜಿ ಹೇಳಿದ್ದೆಲ್ಲಾ ಮೌನಗೌರಿ ತರಾ ಕೇಳಿ ಅಜ್ಜಿ ಕೈಲಿ ಮುದ್ದು ಮಾಡಿಸ್ಕೊಳ್ತೀನಿ. ಇತ್ತೀಚೆಗೆ ನನ್ನ ಫ್ರೆಂಡ್‌ ನಯನ್‌ ಮೇಲೆ ಅಜ್ಜಿಗೆ ಒಂದು ಕಣ್ಣು. ಅವನು ಬೇರೆ ಜಾತಿ, ಅವನ ಜೊತೆ ಏನು ನಿನ್ನ ಗೆಳೆತನ, ತಿರುಗಾಟ’ ಅಂತಾಳೆ. ಅಮ್ಮ ಒಳಗೇ ಮುಸಿ ಮುಸಿ ನಗುತ್ತಾಳೆ. ಅಜ್ಜಿಗೆ ಗೊತ್ತಿಲ್ಲ , ನಾನು ನಯನ್‌ನ್ನೇ ಮದುವೆ ಆಗ್ತಿàನಿ ಅಂತ. ತಿಳಿದರೆ ಬಾಯಿ ಬಡಿದುಕೊಳ್ತಾಳೆ. ಆದರೆ ನಾನು ನಯನ್‌ ಡಿಸೈಡ್‌ ಮಾಡಿ ಆಗಿದೆ. ನನ್ನ ಅವನ ಅಪ್ಪ , ಅಮ್ಮ ಕೂಡಾ ಗ್ರೀನ್‌ ಸಿಗ್ನಲ್‌ ಕೊಟ್ಟಾಗಿದೆ. ಅಜ್ಜಿನ ಹೇಗೋ ಒಪ್ಪಿಸೋಣ ಬಿಡು, ಇನ್ನೂ ಟೈಮಿದೆಯಲ್ಲ !

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.