ಹೃದಯ ಕದ್ದವ ಕರ್ಚೀಫ್ ಕೊಟ್ಟು ಹೋದ…


Team Udayavani, May 30, 2017, 2:39 PM IST

hrudaya-kaddava.jpg

ಅವನು ನನ್ನನ್ನು ನೋಡಿ ಸ್ಮೈಲ್ ಕೊಟ್ಟ ಅಷ್ಟೇ! ಮತ್ತೂಮ್ಮೆ ಅವನ ಗುಳಿ ಕೆನ್ನೆಯೊಳಗೆ ನಾನು ಬಿದ್ದು ಹೋಗಿ¨ªೆ. ಅದ್ಯಾವಾಗ ನಿದ್ರಾದೇವಿ ನನ್ನನ್ನಾವರಿಸಿಕೊಂಡಳ್ಳೋ ಗೊತ್ತಿಲ್ಲ, ಎದ್ದು ನೋಡಿದ್ರೆ ಅವನಿರಲಿಲ್ಲ! ಆದ್ರೆ ನನ್ನ ಬ್ಯಾಗ್‌ ಮೇಲೆ ಅವನ ಕರವಸ್ತ್ರ ಇತ್ತು!  

ಲೈಫ‌ಲ್ಲಿ ಯಾವಾಗ ಏನಾಗುತ್ತೆ ಅಂತ ಹೇಳ್ಳೋಕಾಗಲ್ಲ! ಇಷ್ಟ ಇಲ್ಲದೆ ಇರೋ ಮದುವೆಗೆ ಹೋಗಿ ಇಷ್ಟ ಪಡೋದೇನೋ ಸಿಕ್ಕಿತು. ಹೌದು, ಸ್ವಲ್ಪ ದಿನಗಳ ಹಿಂದೆ ಆಫೀಸಿಗೆ ರಜಾ ಹಾಕಿ ಮನೆಗೆ ಹೋದರೆ ಅಮ್ಮನ ಒತ್ತಾಯ: ಮದುವೆಗೆ ಹೋಗು ಅಂತ. ಅವರಿಗೆ ಹೋಗೋಕಾಗ್ತಿಲ್ಲ ಅಂತ ನನ್ನ ಮೇಲೆ ಆ ಹತ್ತಿರದ ನೆಂಟರ ಮದುವೆಗೆ ಹೋಗಿ ಮುಖ ತೋರಿಸಿ ಬರುವ ಹೊಣೆಯನ್ನು ಹೊರಿಸಿದರು. 

ಸರಿ, ಅಮ್ಮನಿಗೆ ಬೇಜಾರು ಮಾಡಬಾರದು ಅಂತ ಹೋದೆ. ಮದುವೆ ಮನೆಯಲ್ಲಿ ತುಂಬಾ ಹುಡುಕಿದೆ, ನನಗೆ ಕಂಪನಿ ಕೊಡುವವರು ಯಾರಾದರೂ ಅಲ್ಲಿ ಸಿಗುತ್ತಾರೇನೋ ಅಂತ. ಯಾರೂ ಕಾಣಿಸಲಿಲ್ಲ. ಸುಮ್ಮನೆ ಒಂದು ಕಡೆ ಹೋಗಿ ಕುಳಿತುಕೊಂಡೆ. ಆವಾಗಲೇ ಅವನು ನನ್ನನ್ನು ಹಾದು ಹೋಗಿದ್ದು. ಸುಮಾರು ಆರಡಿ ಉದ್ದ, ಮುದ್ದು ಮುಖ, ಕುರುಚಲು ಗಡ್ಡ, ಚೆಂದದ ಜುಬ್ಟಾ ಹಾಕಿಕೊಂಡು, ಕೈಯÇÉೊಂದು ಚೆಂದದ ಕರವಸ್ತ್ರ… ನೋಡ್ತಾ ಇದ್ರೆ ಮತ್ತೆ ಮತ್ತೆ ನೋಡಬೇಕು ಅಂತಾ ಅನ್ನಿಸೋ ಅವನ ಮುಖ, ಗುಳಿ ಬೀಳುವ ಕೆನ್ನೆ… 

ನಾನು ಮರುಳಾಗಿದ್ದೆ. ಅದ್ಯಾವ ಘಳಿಗೆಯಲ್ಲಿ ಅವನನ್ನು ನೋಡಿದೆನೋ ನಾನಲ್ಲೇ ಕರಗಿಹೋದೆ. ಬುದ್ಧಿ ಬೇಡಾ ಅಂದರೂ, ಮನಸ್ಸು ನನ್ನ ಹಿಡಿತದಲ್ಲಿರಲಿಲ್ಲ. ಕಂಗಳು ಮತ್ತೆ ಮತ್ತೆ ಅವನನ್ನೇ ಕದ್ದು ಕದ್ದು ನೋಡುತ್ತಿತ್ತು. ಯಾರೋ ಕರೆದರು ಅಂತ ಲಗುಬಗೆಯಲ್ಲಿ ಹೋಗುವಾಗ ಅವನ ಚೆಂದದ ಕರವಸ್ತ್ರ ಬಿದ್ದು ಹೋಯಿತು. ಮೊದಲೇ ಹಿಡಿತದಲ್ಲಿರದ ಮನಸ್ಸು ಅದನ್ನು ಎತ್ತಿಕೋ ಎಂದಿತು. ಎತ್ತಿಕೊಂಡೆ. ಅವನು ಮತ್ತೂಮ್ಮೆ ಕಂಡರೆ ಕರವಸ್ತ್ರ ವಾಪಸ್ಸು ಮಾಡುವ ನೆಪದಲ್ಲಾದರೂ ಅವನನ್ನು ಮಾತಾಡಿಸಬಹುದು ಎಂದುಕೊಂಡೆ. ಆದರೆ ಅವನು ಮತ್ತೆ ಕಾಣಿಸಲಿಲ್ಲ. ಮದುವೆ ಮುಗಿಸಿಕೊಂಡು ಮನೆಗೆ ಬಂದರೂ ಮನಸ್ಸು ಅವನನ್ನು ಪದೇ ಪದೇ ನೆನಪಿಸ್ತಾ ಇತ್ತು. ಮನಸ್ಸಿಲ್ಲದ ಮನಸ್ಸಿನಿಂದ ಬೆಂಗಳೂರು ಬಸ್ಸನ್ನು ಹತ್ತಿದೆ. ಬಸ್ಸಲ್ಲಿ ಎಲ್ಲೂ ಜಾಗ ಸಿಗಲಿಲ್ಲ. ಇಡೀ ಬಸ್‌ ಜಾಲಾಡಿದಾಗ ಒಂದು ಮೂಲೆಯಲ್ಲಿ ಎರಡು ಜನ ಕುಳಿತುಕೊಳ್ಳುವ ಸೀಟ್‌ ಸಿಕ್ಕಿತು. ಅಬ್ಟಾ! ಆರಾಮಾಗಿ ಹೋಗಬಹುದು ಅಂತ ತುಂಬ ಖುಷಿಯಲ್ಲಿ¨ªೆ. 

ಮುಂದೆ ನೋಡ್ತೀನಿ ಮದುವೆ ಮನೆ ಹುಡುಗ! ದೇವೆÅ, ಏನಪ್ಪಾ ನಿನ್ನ ಲೀಲೆ ಅಂದುಕೊಂಡೆ. ಅವನು ಸೀದಾ ಬಂದು, ನನ್ನ ಪಕ್ಕದಲ್ಲಿ ಕುಳಿತುಕೊಂಡ. ನನಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ಭಯ. ಆವಾಗ ನೆನಪಾಗಿದ್ದು ಅವನ ಕರವಸ್ತ್ರ. “ನೆನ್ನೆ ಮದುವೆ ಮನೆಯಲ್ಲಿ ಇದನ್ನ ಕೊಡಬೇಕು ಅಂತ ನಿಮ್ಮನ್ನು ಕರೆದೆ, ನಿಮಗೆ ಕೇಳಿಸಲಿÇÉಾ, ತಗೊಳ್ಳಿ’ ಅಂತ ಕರವಸ್ತ್ರ ಹಿಂದಿರುಗಿಸುತ್ತಿರುವಾಗ ನನ್ನದೇನನ್ನೋ ಕಳಕೊಳ್ಳುತ್ತಿದ್ದೀನೇನೋ ಎನ್ನುವ ಭಾವ ಆವರಿಸಿತು. ಅವನು ನನ್ನನ್ನು ನೋಡಿ ಸೆ¾„ಲ್‌ ಕೊಟ್ಟ ಅಷ್ಟೇ! ಮತ್ತೂಮ್ಮೆ ಅವನ ಗುಳಿ ಕೆನ್ನೆಯೊಳಗೆ ನಾನು ಬಿದ್ದು ಹೋಗಿ¨ªೆ. ಅದ್ಯಾವಾಗ ನಿದ್ರಾದೇವಿ ನನ್ನನ್ನಾವರಿಸಿಕೊಂಡಳ್ಳೋ ಗೊತ್ತಿಲ್ಲ, ಎದ್ದು ನೋಡಿದ್ರೆ ಅವನಿರಲಿಲ್ಲ! ಆದ್ರೆ ನನ್ನ ಬ್ಯಾಗ್‌ ಮೇಲೆ ಅವನ ಕರವಸ್ತ್ರ ಇತ್ತು! ಅವನ್ಯಾಕೆ ಅದನ್ನು ಅಲ್ಲೇ ಇಟ್ಟು ಹೋದ? ಗೊತ್ತಿಲ್ಲ. ನನ್ನ ಹೃದಯವನ್ನು ಕದ್ದುಕೊಂಡು ಹೋದವನು, ಕರವಸ್ತ್ರವನ್ಯಾಕೆ ಉಡುಗೊರೆಯಾಗಿ ನೀಡಿದ್ದಾ?! ಉತ್ತರ ಗೊತ್ತಿಲ್ಲ. ಅವನನ್ನು ನೆನೆಸಿಕೊಂಡಾಗಲೆಲ್ಲ ಖುಷಿ ಆಗುತ್ತೆ. ಅವನನ್ನು ಅಂದಿನಿಂದ ಹುಡುಕುತ್ತಲೇ ಇದ್ದೇನೆ. ಏಯ್‌ ಗುಳಿಗೆನ್ನೆಯ ಹುಡುಗಾ ಮತ್ತೆ ಸಿಕ್ತೀಯಾ?

– ಮೇಘಾ ಹೆಗಡೆ

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.