ರಾಜ್ಯ ಹೆದ್ದಾರಿಗಳಲ್ಲಿನ ಟೋಲ್‌ಗೆ ವಿರೋಧ

Team Udayavani, Jul 15, 2017, 10:54 AM IST

shanmugappa.jpg

ಬೆಂಗಳೂರು: ಕೆಶಿಪ್‌ ಯೋಜನೆಯಡಿ ನಿರ್ಮಿಸಿರುವ 19 ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೂಡಲೆ ಕೈಬಿಡದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್‌.ಷಣ್ಮುಗಪ್ಪ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ 27 ಟೋಲ್‌ ರಸ್ತೆಗಳಿದ್ದು, ಪ್ರತಿ ವರ್ಷ 6 ಸಾವಿರ ಕೋಟಿ ರೂ.ಗಳನ್ನು ಟೋಲ್‌ ಮೂಲಕ ಸಂಗ್ರಹಿಸುತ್ತಿದ್ದಾರೆ. ಪ್ರತಿ ಕಿ.ಮೀ.ಗೆ ಲಾರಿ ಮಾಲೀಕರು 4ರೂ.ನಂತೆ ಟೋಲ್‌ ಪಾವತಿಸುತ್ತಿದ್ದು, ಇದು ಡಿಸೇಲ್‌ ದರಕ್ಕಿಂತಲೂ ದುಬಾರಿಯಾಗಿದೆ. ಕಾಮಗಾರಿ ಪೂರ್ಣ ಮುಗಿಯುವ ಮೊದಲೇ 19 ರಸ್ತೆಗೆ ಸುಣ್ಣಬಣ್ಣ ಬಳಿದು ಟೋಲ್‌ ಪ್ಲಾಜಾ ನಿರ್ಮಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

19 ರಸ್ತೆಗಳಲ್ಲಿ ಟೋಲ್‌ ಸಂಗ್ರಹ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಲಾರಿ, ಟ್ಯಾಕ್ಸಿ, ಕ್ಯಾಬ್‌ ಹಾಗೂ ಇತರೆ ವಾಹನದ ಮಾಲೀಕರ ಸಂಘದ ಸಭೆ ಜು.23ರಂದು ವಿಜಯಪುರದಲ್ಲಿ ನಡೆಯಲಿದೆ. ಅಷ್ಟರೊಳಗೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ನಿರ್ಧಾರವನ್ನು ಆ ದಿನದ ಸಭೆಯಲ್ಲಿ ತೆಗೆದುಕೊಳ್ಳಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಟೋಲ್‌ ಮೂಲಕ ರಾಜ್ಯ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ರಸ್ತೆ ನಿರ್ಮಾಣವಾಗಿ 15-20 ವರ್ಷ ಕಳೆದರೂ ಟೋಲ್‌ ಸಂಗ್ರಹ ಮಾಡುತ್ತಿದ್ದಾರೆ. ನೈಸ್‌ ರಸ್ತೆಯ ಟೋಲ್‌ ಅವಧಿ ಮುಗಿದು ನಾಲ್ಕು ವರ್ಷವಾದರೂ ಇನ್ನೂ ಅದನ್ನು ಮುಂದುವರಿಸಿದ್ದಾರೆ. ಟೋಲ್‌ ಮೂಲಕ ಕೋಟ್ಯಂತರ ರೂ. ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಜಿಎಸ್‌ಟಿ ಜಾರಿ ನಂತರ ವಾಣಿಜ್ಯ ತೆರಿಗೆ ಸೆಸ್‌ ಕಡಿತ ಮಾಡಲಾಗಿದೆ.

ಆದರೆ, ಪ್ರತಿ 30 ಕಿ.ಮೀ.ಗೆ ಆರ್‌ಟಿಒ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಒಮ್ಮೆ ತಪಾಸಣೆ ಮಾಡಿದ ಲಾರಿಯನ್ನೇ ಮತ್ತೆ ಮತ್ತೆ ತಪಾಸಣೆ ಮಾಡುತ್ತಿರುತ್ತಾರೆ. ಕರ್ನಾಟಕ ಹೊರತುಪಡಿಸಿ ಬೇರ್ಯಾವ ರಾಜ್ಯದಲ್ಲೂ ಇಂಥ ಸ್ಥಿತಿ ಇಲ್ಲ. ರಾಜ್ಯ ಸರ್ಕಾರ ನಮ್ಮ ಯಾವ ಬೇಡಿಕೆಗೂ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಸಂಘದ ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ, ಟ್ಯಾಕ್ಸಿ ಅಸೋಸಿಯೇಷನ್‌ನ ರಾಧಾಕೃಷ್ಣ ಹೊಳ್ಳ ಇತರರಿದ್ದರು.

ಟಾಪ್ ನ್ಯೂಸ್

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

putturPuttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Puttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

4

Arrested: ಬೀದಿಬದಿ ಮಲಗಿದ್ದವರ ಹತ್ಯೆ: ಸರಣಿ ಹಂತಕನ ಸೆರೆ

7

Rave Party: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

ಕೌಟುಂಬಿಕ ಕಲಹ: ಪತ್ನಿಯನ್ನೇ ಹತ್ಯೆಗೈದು ದೇಹದ ಭಾಗಗಳನ್ನು ತುಂಡರಿಸಿ ವಿಕೃತಿ ಮೆರೆದ ಪತಿ

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Threat: ವಿಮಾನಕ್ಕೆ ಬಾಂಬ್ ಬೆದರಿಕೆ… ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Tamil filmmaker: ಹೃದಯಾಘಾತದಿಂದ ಕಾಲಿವುಡ್‌ನ ಖ್ಯಾತ ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

Producer Swagat Babu: ಕನ್ನಡದ ಖ್ಯಾತ ನಿರ್ಮಾಪಕ ಸ್ವಾಗತ್‌ ಬಾಬು ನಿಧನ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

ಮತ್ತಿಮನೆ, ಸಂಪೇಕಟ್ಟೆ ಭಾಗದಲ್ಲಿ ಮೊಬೈಲ್ ನೆಟ್ ವರ್ಕ್ ಸಮಸ್ಯೆ: ಟವರ್ ಏರಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.