ಚೌಕಟ್ಟು ಮನೆ


Team Udayavani, Jul 17, 2017, 2:50 AM IST

house.jpg

ಚೌಕಟ್ಟು ಎಂದಾಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಬಾಗಿಲಿನ ಇಲ್ಲವೆ ಕಿಟಕಿಯ ಚೌಕಟ್ಟು. ಆದರೆ ಮನೆಯಲ್ಲಿ ಇತರೆ ಚೌಕಟ್ಟುಗಳೂ ಇರುತ್ತವೆ. ಫೊಟೊ ಫ್ರೆàಮ್‌ ಚಿತ್ರಗಳಿಗೆ ವಿಶೇಷ ಮೆರಗು ನೀಡುವ ರೀತಿಯಲ್ಲೇ ಇತರೆ ಮಾದರಿಯ ಚೌಕಟ್ಟುಗಳೂ ಕಾರ್ಯನಿರ್ವಹಿಸುತ್ತವೆ. ಅನೇಕ ಸೌಂದರ್ಯ ವರ್ಧಕಗಳಿಗೆ ಅವುಗಳದೇ ಆದ ವಿಶೇಷಣಗಳಿದ್ದು, ಕೇವಲ ಒಂದು “ಗಡಿ’ ಆಗಿರದೆ ಕೆಲ ಮುಖ್ಯ ಕಾರ್ಯಗಳನ್ನೂ ನಿರ್ವಸುತ್ತವೆ. ಸೀಲಿಂಗ್‌ ಸುತ್ತಲೂ ಕಾರ್ನಿಸ್‌ ಮೌಲ್ಡಿಂಗ್‌ ನೀಡುವ   ಮುಖ್ಯ ಕಾರಣ- ಅದು ಗೋಡೆ ಹಾಗೂ ಸೂರಿನ ಕೆಳಭಾಗದ ಸಂಧಿರೇಖೆಯಲ್ಲಿರಬಹುದಾದ ನ್ಯೂನತೆಗಳನ್ನು ಮುಚ್ಚಿ, ಎರಡನ್ನೂ ಬೆಸೆಯಲು ಸಹಾಯಕವಾಗಿರಲಿ ಎಂಬುದೇ ಆಗಿರುತ್ತದೆ.

ಮೂಲೆಗಳನ್ನು ಭದ್ರಪಡಿಸಲು 
 ಸಾಮಾನ್ಯವಾಗಿ ಎಲ್ಲಕ್ಕಿಂತ ಘಾಸಿಗೊಳಗಾಗಿ ಚಕ್ಕೆ ಏಳುವುದು, ಮಕ್ಕಾಗುವುದು ಮೂಲೆಗಳೇ. ಅದೇ ರೀತಿಯಲ್ಲಿ ಮೂಲೆಗಳನ್ನು ಸದೃಢಪಡಿಸಿದರೆ, ಮಧ್ಯಭಾಗವೂ ಗಟ್ಟಿಗೊಳ್ಳುತ್ತದೆ. ಆದುದರಿಂದ ಸಾಮಾನ್ಯವಾಗಿ ಮೂಲೆಗಳನ್ನು ಕಾಯ್ದುಕೊಳ್ಳಲು ವಿಶೇಷ ಚೌಕಟ್ಟುಗಳನ್ನು ನೀಡಲಾಗುತ್ತದೆ. ಮರದ ಪ್ಯಾನೆಲಿಂಗ್‌ ಅಥವಾ  ಲ್ಯಾಮಿನೇಟ್‌ ಶೀಟುಗಳನ್ನು ಅಂಟಿಸಿದಾಗ – ಅವುಗಳ ಮೂಲೆ ಹೆಚ್ಚು ಹಾನಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ, ಮರದ ಮೌಲ್ಡಿಂಗ್‌, ಬೀಡಿಂಗ್‌ ಪಟ್ಟಿಗಳನ್ನು ಬಳಸಿ ಸದೃಢಗೊಳಿಸಲಾಗುತ್ತದೆ. ವಾರ್ಡ್‌ರೋಬ್‌ ಗಳಲ್ಲಿ ಮುಖ್ಯವಾಗಿ ಬೀಗದ ಕೈ ತಾಗಿ ಲ್ಯಾಮಿನೇಟ್‌ಗಳ ಎಡ್ಜ್ ಮುರಿಯಬಹುದು. ಆದುದರಿಂದ ಟೀಕ್‌ ಇಲ್ಲವೆ ಇತರೆ ಮರದ ಚೌಕಟ್ಟನ್ನು ನೀಡಿ, ಗಟ್ಟಿಗೊಳಿಸುವುದರ ಜೊತೆಗೆ ಅದರ ಸೌಂದರ್ಯವನ್ನೂ ಹೆಚ್ಚಿಸಬಹುದು!

ಬಾಗಿಲು ಕಿಟಕಿಗಳಿಗೆ ಮತ್ತೂಂದು ಚೌಕಟ್ಟು
ಮನೆಯ ಹೊರಗೆ ಮುಖ್ಯವಾಗಿ ಒಂದೆರಡು ಇಂಚು ದಪ್ಪ ಹಾಗೂ ನಾಲ್ಕಾರು ಇಂಚು ಅಗಲದ ಫ್ರೆàಂ ಮಾದರಿಯ ಬೀಡಿಂಗ್‌ ಅನ್ನು ಸಿಮೆಂಟ್‌ನಲ್ಲಿ ಮಾಡುವುದುಂಟು. ಹೀಗೆ ಮಾಡುವುದರಿಂದ ಬಾಗಿಲು ಕಿಟಕಿಗಳ ಚೆಂದ ಹೆಚ್ಚುವುದರ ಜೊತೆಗೆ ಅವುಗಳಿಗೆ ಹೆಚ್ಚುವರಿ ರಕ್ಷಣೆಯೂ ಸಿಗುತ್ತದೆ. ಇತ್ತೀಚಿನ ದಿನಗಳಲ್ಲಿ ಆರು ಇಂಚಿನ ಕಾಂಕ್ರಿಟ್‌ ಬ್ಲಾಕಿನ ಉಪಯೋಗ ಹೆಚ್ಚಿದ್ದು, ಕಿಟಕಿ ಬಾಗಿಲುಗಳ ಫ್ರೆàಮ್‌ ಕಡೇಪಕ್ಷ ನಾಲ್ಕು ಇಂಚು ಇದ್ದರೂ ಹೊರಗೆ ಸುತ್ತಲೂ ಸುಮಾರು ಒಂದು ಇಂಚಿನಷ್ಟು ಮಾತ್ರ ಗೋಡೆ ಇರುತ್ತದೆ. ತೆರೆದ ಸ್ಥಳಗಳ ಮೇಲೆ ಸಜಾj ಇದ್ದರೂ, ಅಕ್ಕ ಪಕ್ಕದಿಂದ ಬೀಸುವ ಗಾಳಿ ಮಳೆಗೆ ಈ ಮೊದಲು ಇರುತ್ತಿದ್ದ ದಪ್ಪನೆಯ ಗೋಡೆಗಳಲ್ಲಿ ಹುದುಗಿಸಿ ಇಡುತ್ತಿದ್ದ ಕಿಟಕಿ ಬಾಗಿಲುಗಳಿಗೆ ಸಿಗುತ್ತಿದ್ದ ರೀತಿಯಲ್ಲಿ ಈಗ ರಕ್ಷಣೆ ಸಿಗುವುದಿಲ್ಲ. ಆದುದರಿಂದ ಹೆಚ್ಚುವರಿ ಚೌಕಟ್ಟು ಮಾಡಿದರೆ ಎಲಿವೇಷನ್‌ ಚೆನ್ನಾಗಿ ಕಾಣಿಸುವುದರ ಜೊತೆಗೆ ದುಬಾರಿ ಮರಮುಟ್ಟುಗಳಿಗೂ ರಕ್ಷಣೆ ಕೊಟ್ಟಂತಾಗುತ್ತದೆ.

ನೋಟಕ್ಕೊಂದು ಚೌಕಟ್ಟು ಒದಗಿಸಿ
ಮನೆ ಇಡಿಯಾಗಿ ಇಲ್ಲವೇ ಅದರ ಒಂದು ಭಾಗ ಸುಂದರವಾಗಿ ಕಾಣಲು ಸೂಕ್ತ ಚೌಕಟ್ಟನ್ನು ಒದಗಿಸುವುದು ಅಗತ್ಯ. ನೀವೂ ಗಮನಿಸಿರಬಹುದು. ಛಾಯಾಗ್ರಾಹಕರು, ಕೈಯಲ್ಲಿ ಕ್ಯಾಮರ ಇಲ್ಲದಿದ್ದರೂ ಒಂದು ದೃಶ್ಯ ಇಲ್ಲವೇ ಮುಖವನ್ನು ನೋಡಲು ಒಂದು ಚೌಕಟ್ಟನ್ನು ಮಾಡಿಕೊಳ್ಳಲು ತಮ್ಮ ಎರಡೂ ಹೆಬ್ಬೆರಳುಗಳನ್ನು ಸೇರಿಸಿ ಅಡ್ಡಡ್ಡಕ್ಕೆ ಇಡುತ್ತಾರೆ. ತೋರುಬೆರಳುಗಳೆರಡನ್ನೂ ಲಂಬವಾಗಿಟ್ಟು ದಿಢೀರ್‌ ಫ್ರೆàಂ ಮಾಡಿಕೊಂಡು, ಅದರ ಮೂಲಕ ವೀಕ್ಷಿಸುತ್ತಾರೆ. 

ಮನೆಗೆ ಹೆಚ್ಚು ಮೆರಗು ನೀಡುವಂತೆ ಎರಡೂ ಬದಿಗೆ ಮರಗಳನ್ನು ಬೆಳೆಸುವುದು ಸಾಮಾನ್ಯ. ಗೇಟಿಗೆ ಹೆಚ್ಚುವರಿ ಗಮನ ಸೆಳೆಯುವಂತೆ ಮಾಡಲು ಅದಕ್ಕೊಂದು ಫ್ರೆàಂ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಮೊದಲೆಲ್ಲ ಮನೆಯ ಪ್ರವೇಶದಲ್ಲಿ ಮಲ್ಲಿಗೆ ಹೂವಿನ ಚಪ್ಪರ ಹಾಕಿ, ಅದರ ಮೂಲಕ ಮನೆಯನ್ನು ಹೊಕ್ಕರೆ ಸುಂದರವಾದ ಸುವಾಸನೆ ಭರಿತ ಆಹ್ವಾನದಂತಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಹಸಿರು ಕಾಣೆಯಾಗುತ್ತಿದ್ದರೂ, ಕಡೇಪಕ್ಷ ಒಂದೆರಡು ಸಾಲು ಹೆಂಚನ್ನು ಏಳು ಇಲ್ಲ ಎಂಟು ಅಡಿ  ಎತ್ತರದಲ್ಲಿ ಕಮಾನಿನ ರೀತಿಯಲ್ಲಿ ಹಾಕಿದರೆ ಇದೂ ಕೂಡ ಚೌಕಟ್ಟಿನ ರೀತಿಯಲ್ಲೇ ಕಾರ್ಯ ನಿರ್ವಸುತ್ತದೆ.

ಮನೆಯೊಳಗೆ ಫ್ರೆàಮ್‌
ಲಿವಿಂಗ್‌ ಡೈನಿಂಗ್‌ ಮಧ್ಯೆ ಒಂದು ಆರ್ಚ್‌ – ಕಮಾನು ನೀಡಿ ಒಂದು ರೀತಿಯಲ್ಲಿ ಕಂಡೂ ಕಾಣದಂತೆ ಸ್ಥಳಗಳನ್ನು ವಿಭಜಿಸುವುದರ ಜೊತೆಗೆ ಅವುಗಳನ್ನು ಈ ಚೌಕಟ್ಟು ಸುಂದರಗೊಳಿಸುತ್ತವೆ. ಇದೇ ರೀತಿಯಲ್ಲಿ ಯುಟಿಲಿಟಿಗೆ ಹೋಗುವ ದಾರಿ ಹೆಚ್ಚು ತೆರೆದು ಕೊಂಡಿದ್ದರೆ, ಅದನ್ನು ಚಿಕ್ಕದಾಗಿಸಲೂ ಕೂಡ ಸಣ್ಣದೊಂದು ಚೌಕಟ್ಟು ನಿರ್ಮಿಸಿಕೊಳ್ಳಬಹುದು. ಈ ಚೌಕಟ್ಟು ವಿವಿಧ ಉಪಯೋಗಿ ಸ್ಥಳಗಳನ್ನು ನಿರ್ದಿಷ್ಟರೀತಿಯಲ್ಲಿ ಬೇರ್ಪಡಿಸಲೂ ಕೂಡ ಸಹಾಯಕಾರಿ. ಇತ್ತೀಚಿನ ದಿನಗಳಲ್ಲಿ ಓಪನ್‌ ಕಿಚನ್‌ಗಳು ಜನಪ್ರಿಯಗೊಳ್ಳುತ್ತಿದ್ದು, ಇದು ಅಡುಗೆ ಮನೆ- ಇದು ಊಟದ ಮನೆ ಎಂದು ಒಂದು ಮಟ್ಟದ ವರೆಗೂ ಗುರಿತಿಸಿಕೊಳ್ಳಲೂ ಸಹಾ ಆರ್ಚ್‌ ಇಲ್ಲ ಇತರೆ ರೀತಿಯ ಚೌಕಟ್ಟುಗಳು ಸಹಾಯಕಾರಿ.

ಅಡ್ಡ ತಡೆಯದೆ ಹಿಡಿದಿಡುವ ಚೌಕಟ್ಟುಗಳು
ತೆರೆದ ಸ್ಥಳಗಳಲ್ಲಿ ಯಾರು ಬೇಕಾದರೂ ಹೇಗೆ ಬೇಕಾದರೂ ಓಡಾಡಬಹುದಾದರೂ ಅನೇಕ ಕಾರಣಗಳಿಂದಾಗಿ ಕೆಲವೊಂದು ಚೌಕಟ್ಟುಗಳು “ಲಕ್ಷ್ಮಣ ರೇಖೆ’ ಯಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಮಕ್ಕಳು ತೀರಾ ಚಿಕ್ಕವರಿದ್ದಾಗ, ದೈಹಿಕವಾಗಿ ತಡೆಯುವಂತೆ ತಡೆಗಳನ್ನು ತಾತ್ಕಾಲಿಕವಾಗಿಯಾದರೂ ನೀಡಬೇಕಾಗುತ್ತದೆ. ಕಿಚನ್‌ ಪ್ರತ್ಯೇಕವಾಗಿದ್ದರೆ ಇವು ಸಾಮಾನ್ಯವಾಗಿ, ಮೋಟು ಬಾಗಿಲುಗಳಂತೆ ಇರುತ್ತವೆ. ಮಕ್ಕಳು ನಮಗೆ ಕಾಣುತ್ತಿದ್ದರೂ ಅವರು ಅಡುಗೆ ಮನೆ ಒಳಗೆ ಬರಲು ಆಗುವುದಿಲ್ಲ.  ಮಕ್ಕಳು ದೊಡ್ಡವರಾದಮೇಲೆ, ಅಡಿಗೆ ಮನೆಯಲ್ಲಿ ಒಲೆ ಇದೆ. ಮಕ್ಕಳು ಒಳಹೊಕ್ಕರೆ ಸುಡುವ ಭೀತಿ ಇರುತ್ತದೆ. ಅದರಿಂದ ಒಳಗೆ ಬರಬೇಡಿ ಎಂದು ಹೇಳಿದರೆ ದೊಡ್ಡವರ ಮಾತು ಕೇಳಿಯಾರು. ಆದರೆ ಅವರಿಗೆ ಆ ಒಂದು ಲಕ್ಷ್ಮಣ ರೇಖೆಯನ್ನು ತೆರೆದ ಕಿಚನ್‌ಗಳಲ್ಲಿ ಹಾಕಿಕೊಡಲು ಕಷ್ಟ. ಆದುದರಿಂದ ತೆರೆದ ಕಿಚನ್‌ಗಳಲ್ಲಿ ಆರ್ಚ್‌ ಮಾದರಿಯ ಚೌಕಟ್ಟನ್ನು ನಿರ್ಮಿಸಿ. ಅದರ ಹೊರಗೆ ಉಳಿಯಬೇಕು ಎಂದರೆ, ಅದೂ ಒಂದು ರಕ್ಷಕ ಚೌಕಟ್ಟಾಗಿ ಉಳಿಯಬಲ್ಲದು!

ಚೌಕಟ್ಟುಗಳು ತೀರ ಕ್ಲಿಷ್ಟಕರವಾಗಿದ್ದರೆ. ಚಿತ್ರಕ್ಕಿಂತ ಚೌಕಟ್ಟೇ ಪ್ರಧಾನವಾಗಿದ್ದರೆ, ಮೂಲ ಆಶಯಕ್ಕೆ ಕಂಟಕವಾಗಬಹುದು. ಆದರೆ ಸೂಕ್ತರೀತಿಯಲ್ಲಿ ಫ್ರೆàಂಗಳನ್ನು ಬಳಸಿದರೆ, ಲಾಭದ ಜೊತೆಗೆ ಸೌಂದರ್ಯವೂ ಹೆಚ್ಚುವುದರಲ್ಲಿ ಸಂಶಯವಿಲ್ಲ.

ಹೆಚ್ಚಿನ ಮಾಹಿತಿಗೆ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

ಟಾಪ್ ನ್ಯೂಸ್

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

Uppunda ಡಿವೈಡರ್‌ಗೆ ಬೊಲೇರೊ ವಾಹನ ಢಿಕ್ಕಿ: ಓರ್ವ ಸಾವು; ಐವರಿಗೆ ಗಾಯ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.