ರೋಜರ್‌-ಟೆಕು ಜೋಡಿಗೆ ಪುರುಷರ ಡಬಲ್ಸ್‌ ಪ್ರಶಸ್ತಿ

Team Udayavani, Sep 10, 2017, 6:35 AM IST

Jean-Julien-Rojer,Horia-Tec.jpg

ನ್ಯೂಯಾರ್ಕ್‌: ಹಾಲೆಂಡಿನ ಜೀನ್‌ ಜೂಲಿಯನ್‌ ರೋಜರ್‌ ಮತ್ತು ರೊಮೇನಿಯಾದ ಹೊರಿಯ ಟೆಕು ಸೇರಿಕೊಂಡು ಯುಎಸ್‌ ಓಪನ್‌ ಪುರುಷರ ಡಬಲ್ಸ್‌ ಪ್ರಸಸ್ತಿಯನ್ನೆತ್ತಿದ್ದಾರೆ. ಇದು ಈ ಜೋಡಿಗೆ ಒಲಿದ ಮೊದಲ ಅಮೆರಿಕನ್‌ ಪ್ರಶಸ್ತಿ. 2015ರಲ್ಲಿ ಇವರು ವಿಂಬಲ್ಡನ್‌ ಡಬಲ್ಸ್‌ ಕಿರೀಟ ಏರಿಸಿಕೊಂಡಿದ್ದರು.

ಶುಕ್ರವಾರ ರಾತ್ರಿ ನಡೆದ ಫೈನಲ್‌ನಲ್ಲಿ 12ನೇ ಶ್ರೇಯಾಂಕದ ರೋಜರ್‌-ಟೆಕು ಸ್ಪೇನಿನ 11ನೇ ಶ್ರೇಯಾಂಕದ ಫೆಲಿಶಿಯಾನೊ ಲೋಪೆಜ್‌-ಮಾರ್ಕ್‌ ಲೋಪೆಜ್‌ ವಿರುದ್ಧ 6-4, 6-3 ಅಂತರದ ಜಯ ಸಾಧಿಸಿದರು. “ಓಪನ್‌ ಎರಾ’ದ ಬಳಿಕ (1968) ಹತ್ತರಾಚೆಯ ಶ್ರೇಯಾಂಕದ 2 ಜೋಡಿಗಳು ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಕಾಣಿಸಿಕೊಂಡದ್ದು ಇದೇ ಮೊದಲು. ಸೆಮಿಫೈನಲ್‌ನಲ್ಲಿ ಮೊದಲ ಸೆಟ್‌ ಕಳೆದುಕೊಂಡೂ ವಿಶ್ವದ ಅಗ್ರ ಶ್ರೇಯಾಂಕದ ಹೆನ್ರಿ ಕಾಂಟಿನೆನ್‌-ಜಾನ್‌ ಪಿಯರ್ ಅವರನ್ನು ಮಣಿಸುವ ಮೂಲಕ ರೋಜರ್‌-ಟೆಕು ಫೈನಲ್‌ ಗೆಲುವಿನ ಮುನ್ಸೂಚನೆ ನೀಡಿದ್ದರು.

ಇನ್ನೊಂದೆಡೆ ಸ್ಪೇನಿನ ಜೋಡಿಯೊಂದು ಕಳೆದ 4 ವರ್ಷಗಳಲ್ಲಿ 3ನೇ ಸಲ ಯುಎಸ್‌ ಓಪನ್‌ ಫೈನಲ್‌ಗೆ ಲಗ್ಗೆ ಇರಿಸಿದರೂ ಪ್ರಶಸ್ತಿ ವಂಚಿತವಾಯಿತು. ಇಲ್ಲಿ ಕೊನೆಯ ಸಲ ಪುರುಷರ ಡಬಲ್ಸ್‌ ಗೆದ್ದ ಸ್ಪೇನಿಗರೆಂದರೆ ಸರ್ಗಿಯೊ ಕ್ಯಾಸಲ್‌-ಎಮಿಲಿಯೊ ಸ್ಯಾಂಸೆಜ್‌. ಇದು 1988ರಷ್ಟು ಹಿಂದಿನ ಸಾಧನೆಯಾಗಿದೆ.

ಸಾನಿಯಾ-ಪೆಂಗ್‌ ಪರಾಭವ
ನ್ಯೂಯಾರ್ಕ್‌
: ಭಾರತದ ಸಾನಿಯಾ ಮಿರ್ಜಾ-ಚೀನದ ಶುಯಿ ಪೆಂಗ್‌ ಜೋಡಿಯ ಯುಎಸ್‌ ಓಪನ್‌ ವನಿತಾ ಡಬಲ್ಸ್‌ ಅಭಿಯಾನ ಸೆಮಿಫೈನಲಿಗೆ ಕೊನೆಗೊಂಡಿದೆ. 4ನೇ ಶ್ರೇಯಾಂಕದ ಇಂಡೋ-ಚೈನೀಸ್‌ ಜೋಡಿಯನ್ನು ದ್ವಿತೀಯ ಶ್ರೇಯಾಂಕದ ಮಾರ್ಟಿನಾ ಹಿಂಗಿಸ್‌ (ಸ್ವಿಜರ್‌ಲ್ಯಾಂಡ್‌)-ಯುಂಗ್‌ ಜಾನ್‌ ಚಾನ್‌ (ಚೈನೀಸ್‌ ತೈಪೆ) ಸೇರಿಕೊಂಡು 6-4, 6-4 ನೇರ ಸೆಟ್‌ಗಳಲ್ಲಿ ಮಣಿಸಿದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಜೆಕ್‌ ಗಣರಾಜ್ಯದ ಆಟಗಾರ್ತಿಯರೇ ಎದುರಾಗಿದ್ದರು. 7ನೇ ಶ್ರೇಯಾಂಕದ ಲೂಸಿ ರಡೆಕಾ-ಕ್ಯಾಥರಿನಾ ಸಿನಿಯಕೋವಾ 3ನೇ ಶ್ರೇಯಾಂಕದ ಲೂಸಿ ಸಫ‌ರೋವಾ-ಬಾಬೊìರಾ ಸ್ಟ್ರೈಕೋವಾ ವಿರುದ್ಧ 6-2, 7-5 ಅಂತರದ ಗೆಲುವು ಸಾಧಿಸಿದರು.

ಎರಡೂ ಸೆಟ್‌ಗಳಲ್ಲಿ ಸಾನಿಯಾ-ಪೆಂಗ್‌ ಜೋಡಿಯ ಆರಂಭ ಉತ್ತಮ ಮಟ್ಟದಲ್ಲೇ ಇತ್ತು. ಆದರೆ ನಿರ್ಣಾಯಕ ಹಂತದಲ್ಲಿ ಇವರಿಂದ ಒತ್ತಡವನ್ನು ನಿಭಾಯಿಸಲಾಗಲಿಲ್ಲ. 10 ಬ್ರೇಕ್‌ ಪಾಯಿಂಟ್‌ಗಳಲ್ಲಿ ಕೇವಲ ಎರಡನ್ನಷ್ಟೇ ಪರಿವರ್ತಿಸಲು ಸಾಧ್ಯವಾಯಿತು. ಇನ್ನೊಂದೆಡೆ ಹಿಂಗಿಸ್‌-ಚಾನ್‌ ಏಳರಲ್ಲಿ 4 ಬ್ರೇಕ್‌ ಪಾಯಿಂಟ್‌ಗಳ ಲಾಭವೆತ್ತಿದರು. ವಿನ್ನರ್ ಹೊಡೆತಗಳಲ್ಲೂ ಎದುರಾಳಿ ಜೋಡಿಯೇ ಮುಂದಿತ್ತು (44-22).

ದ್ವಿತೀಯ ಸೆಟ್‌ನಲ್ಲಿ ಸಾನಿಯಾ-ಪೆಂಗ್‌ 3-1ರ ಮುನ್ನಡೆ ಸಾಧಿಸಿದಾಗ ಸ್ಪರ್ಧೆ ಮುಂದಿನ ಸೆಟ್‌ಗೆ ವಿಸ್ತರಿಸಲ್ಪಡುತ್ತದೆಂದೇ ಭಾವಿಸಲಾಗಿತ್ತು. ಆದರೆ ಹಿಂಗಿಸ್‌ ದಿಟ್ಟ ಹೋರಾಟವೊಂದನ್ನು ತೋರ್ಪಡಿಸಿ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.ಇದು ಈ ವರ್ಷ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಗ್ರ್ಯಾನ್‌ಸ್ಲಾಮ್‌ ಪ್ರದರ್ಶನವಾಗಿದೆ. ಆಸ್ಟ್ರೇಲಿಯನ್‌ ಓಪನ್‌ ಮತ್ತು ವಿಂಬಲ್ಡನ್‌ನಲ್ಲಿ 3ನೇ ಸುತ್ತಿನಲ್ಲಿ ಸೋತಿದ್ದ ಸಾನಿಯಾ ಜೋಡಿ, ಫ್ರೆಂಚ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಎಡವಿತ್ತು.

ಟಾಪ್ ನ್ಯೂಸ್

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ಡಿಕೆಶಿ ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿರುಗೇಟು

D. K. Shivakumar ಬದಲಾವಣೆಗಿದು ಕಾಲವಲ್ಲ; ರಾಜಣ್ಣಗೆ ಜಿ.ಸಿ. ಚಂದ್ರಶೇಖರ್‌ ತಿರುಗೇಟು

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಕಾಂಗ್ರೆಸ್‌ನ ಗ್ಯಾರಂಟಿ ಚುನಾವಣಾ ಅಕ್ರಮ ಅಲ್ಲ: ಸುಪ್ರೀಂ ಕೋರ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweewqewqe

Coach;ಕುತೂಹಲ ಮೂಡಿಸಿದ ಗೌತಮ್‌ ಗಂಭೀರ್‌-ಜಯ್‌ ಶಾ ಭೇಟಿ

1-qewqwewq

IPL 2024; ಮೈದಾನದ ಸಿಬಂದಿಗೆ ಬಹುಮಾನ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

1-wwqewewq

French Open-2024: ರಫೆಲ್‌ ನಡಾಲ್‌, ಮರ್ರೆ ಮನೆಗೆ

1-wqq2q342

FIH ಪ್ರೊ ಲೀಗ್‌ ಹಾಕಿ : ಆರ್ಜೆಂಟೀನಾ ವಿರುದ್ಧ ರೋಚಕ ಜಯ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

ನರೇಗಾದಡಿ ಕಾಲುಸಂಕ ರಚನೆಗೆ ಅವಕಾಶ ಇಲ್ಲ; ಕರಾವಳಿಯಲ್ಲಿ ಅತ್ಯಗತ್ಯ ಕಾಮಗಾರಿಗೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.