ಟೆನಿಸ್‌ ಅಂಕಣದಲ್ಲಿ ಮತ್ತೆ ಸೆರೆನಾ,ಜೊಕೊ


Team Udayavani, Dec 9, 2017, 12:31 PM IST

1-nhh.jpg

ಸದ್ಯ ಟೆನಿಸ್‌ ಪ್ರೇಮಿಗಳಲ್ಲಿ ಇಂಥದೊಂದು ಯೋಚನೆ ಹುಟ್ಟಿಕೊಂಡಿದೆ. ಯಾಕೆಂದರೆ ವರ್ಷಗಳ ಕಾಲ ಅಂಕಣದಿಂದ ಹೊರಗುಳಿದಿದ್ದ ಖ್ಯಾತ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌, 12 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ ನೊವಾಕ್‌ ಜೊಕೊವಿಚ್‌ ಪುನಃ ಕೋರ್ಟ್‌ ಗೆ ಮರಳಲು ಸಜ್ಜಾಗಿದ್ದಾರೆ. 

ಆಸ್ಟ್ರೇಲಿಯಾ ಓಪನ್‌ಗೆ ಸೆರೆನಾ?
23 ಗ್ರ್ಯಾನ್‌ಸ್ಲಾಮ್‌ಗಳ ಒಡತಿಯಾದ ಅಮೆರಿಕದ ಸೆರೆನಾ ವಿಲಿಯಮ್ಸ್‌ ಮದುವೆ, ಮಗು ಅಂತ  ಒಂದು ವರ್ಷಗಳ ಕಾಲ ಟೆನಿಸ್‌ ಕೋರ್ಟ್‌ನಿಂದ ದೂರ ಇದ್ದರು. 2017ರ ಜನವರಿಯಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಸೆರನಾ ಆಡಿರುವ ಕೊನೆಯ ಅಂತಾರಾಷ್ಟ್ರೀಯ ಟೂರ್ನಿ. ಇದೀಗ ಮತ್ತೆ ಟೆನಿಸ್‌ ಅಭ್ಯಾಸ ಆರಂಭಿಸಿರುವ ಅವರು, 2018ರ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಇದು ಸಹಜವಾಗಿ ಕ್ರೀಡಾಭಿಮಾನಿಗಳಲ್ಲಿ ಉತ್ಸಾಹವನ್ನೂ ಪ್ರತಿಸ್ಪರ್ಧಿಗಳಿಗೆ ನಡುಕವನ್ನೂ ಹುಟ್ಟಿಸಿದೆ.

ಮಾಜಿ ವಿಶ್ವ ನಂ.1 ಶ್ರೇಯಾಂಕಿತ ಆಟಗಾರ್ತಿಯಾದ ಸೆರೆನಾ, ಈವರೆಗೆ 23 ಗ್ರ್ಯಾನ್‌ಸ್ಲಾಮ್‌ಗಳನ್ನು ಗೆದ್ದುಕೊಂಡಿದ್ದಾರೆ. ಅದರಲ್ಲಿ 7 ಆಸ್ಟ್ರೇಲಿಯಾ ಓಪನ್‌, 3 ಫ್ರೆಂಚ್‌ ಓಪನ್‌, 7 ವಿಂಬಲ್ಡನ್‌, 6 ಯುಎಸ್‌ ಓಪನ್‌ ಸೇರಿವೆ. ಎದುರಾಳಿ ಆಟಗಾರ್ತಿಯರು ನಡುಗುವಂಥ ಬಲಾಡ್ಯ ಹೊಡೆತಗಳನ್ನು ಬಾರಿಸುವ ಸಾಮರ್ಥ್ಯ ಸೆರೆನಾಗಿದೆ.

ಜೊಕೊ ಕೂಡ ಮರಳುವ ಸಾಧ್ಯತೆ
ರೋಜರ್‌ ಫೆಡರರ್‌, ರಾಫೆಲ್‌ ನಡಾಲ್‌, ಆ್ಯಂಡಿ ಮರ್ರೆ, ಸ್ಟಾನ್‌ ವಾವ್ರಿಂಕಾ…. ಇಂತಹ ಬಲಾಡ್ಯ ಆಟಗಾರರಿಗೆ ಬಿಸಿ ಮುಟ್ಟಿಸುವ ಸಾಮರ್ಥ್ಯ ಇರುವ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌. ಭುಜದ ಶಸ್ತ್ರಚಿಕಿತ್ಸೆಯ ಹಿನ್ನೆಲೆಯಲ್ಲಿ ಕಳೆದ  ವಿಂಬಲ್ಡನ್‌ ಆಡಿರುವುದೇ ಕೊನೆ. ಆಮೇಲೆ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ವೈದ್ಯರ ಸಲಹೆಯಂತೆ ದೀರ್ಘಾವಧಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಚೇತರಿಸಿಕೊಂಡಿರುವ ಅವರು, ಪುನಃ ಟೆನಿಸ್‌ ಕೋರ್ಟ್‌ಗೆ ಮರಳುವ ಸಾಧ್ಯತೆ ಇದೆ. ಇದಕ್ಕೆ ಆಸ್ಟ್ರೇಲಿಯಾ ಓಪನ್‌ ವೇದಿಕೆಯಾದರೂ ಆಗಬಹುದು.

2017ರಲ್ಲಿ ಹಳೇ ಹುಲಿಗಳದ್ದೇ ಕಾದಾಟ
2017ರ ಅವಧಿಯಲ್ಲಿ ಟೆನಿಸ್‌ ಅಂಗಳದಲ್ಲಿ ಅಬ್ಬರಿಸಿದ್ದು, ಹಳೇ ಹುಲಿಗಳು. ಆಸ್ಟ್ರೇಲಿಯಾ ಓಪನ್‌ನಲ್ಲಿ ನಡೆದ ಫೈನಲ್‌ನಲ್ಲಿ ಭರ್ಜರಿ ಹೋರಾಟ ನಡೆಸಿದ್ದು, ರೋಜರ್‌ ಫೆಡರರ್‌ ಮತ್ತು ರಾಫೆಲ್‌ ನಡಾಲ್‌. ಇಬ್ಬರೂ ಖ್ಯಾತ ಆಟಗಾರರು. ಆದರೆ ಮರ್ರೆ, ಜೊಕೊ, ವಾವ್ರಿಂಕಾ ಕೈಚಳಕ ಆರಂಭವಾದ ಮೇಲೆ ಇವರ ಪ್ರಭಾವ ಕುಗ್ಗಿತ್ತು. ಆದರೆ 2017 ಹಳೇ ಹುಲಿಗಳಿಗೆ ಮರುಜೀವ ನೀಡಿದೆ. ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ನಡಾಲ್‌ಗೆ ಸೋಲುಣಿಸಿದ ಫೆಡರರ್‌ 5 ವರ್ಷಗಳ ನಂತರ ಪುನಃ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಪಡೆದರು. ಆನಂತರ ಫ್ರೆಂಚ್‌ ಓಪನ್‌ನಲ್ಲಿ ವಾವ್ರಿಂಕಾಗೆ ಸೋಲುಣಿಸಿದ ನಡಾಲ್‌ ಟ್ರೋಫಿ ಎತ್ತಿದರು. ಹಾಗೇ ವಿಂಬಲ್ಡನ್‌, ಯುಎಸ್‌ ಓಪನ್‌ನಲ್ಲಿಯೂ ಫೆಡರರ್‌ ಜಯ ಸಾಧಿಸಿದರು. ವರ್ಷದಲ್ಲಿ ನಡೆಯುವ 4 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ನಾಲ್ಕೂ ಪ್ರಶಸ್ತಿಯನ್ನು ಫೆಡರರ್‌, ನಡಾಲ್‌ ಪಡೆದಿರುವುದು ವಿಶೇಷ.

ರೋಚಕತೆ ಯಾಕೆ?
ಟೆನಿಸ್‌ನಲ್ಲಿ ತೀವ್ರ ಹಣಾಹಣಿ ಇದ್ದರೆ ಮಾತ್ರ ರೋಚಕತೆ ಹುಟ್ಟಿಕೊಳ್ಳುತ್ತೆ. ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಪಂದ್ಯ ವೀಕ್ಷಿಸುತ್ತಾರೆ. ಫೆಡರರ್‌, ನಡಾಲ್‌, ಮರ್ರೆ… ಇಂತಹ ದಿಗ್ಗಜರಿಗೆ ಸವಾಲು ನೀಡಬೇಕು ಅಂದರೆ ಜೊಕೊ ಕೋರ್ಟ್‌ಗೆ ಬರಲೇಬೇಕು. ಹಾಗೆಯೇ ಮಹಿಳೆ ಆಟಗಾರ್ತಿಯರಲ್ಲಿ ಸಿಮೊನಾ ಹಾಲೆಪ್‌, ಯುಂಗ್‌ ಜಾನ್‌ಚಾಂಗ್‌, ಗಾರ್ಬಿಯನ್‌ ಮುಗುರುಜ, ಕ್ಯಾರೊಲಿನ್‌ ಒಜ್ನಿಯಾಕಿ… ಇವರ ಗೆಲುವಿನ ಓಟಕ್ಕೆ ತಡೆ ನೀಡಬೇಕಾದರೆ ಅಲ್ಲಿ ಸೆರೆನಾ ವಿಲಿಯಮ್ಸ್‌ ಇರಲೇಬೇಕು.

ಟಾಪ್ ನ್ಯೂಸ್

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.