ಅವಳೆಂಬ “ಚೆಂದ’ಮಾರುತ


Team Udayavani, Dec 13, 2017, 1:25 PM IST

13-36.jpg

ಮೊನ್ನೆ ಮೊನ್ನೆ “ಒಖಿ’ ಚಂಡಮಾರುತ ಅಪ್ಪಳಿಸಿ, ಅದೆಷ್ಟೋ ಜನರ ಬದುಕಿನ ನೆಮ್ಮದಿಯನ್ನು ಕಸಿಯಿತು. ರಾಕ್ಷಸೀ ಸ್ವರೂಪದ ಚಂಡಮಾರುತಕ್ಕೆ “ಒಖಿ’ಯಂಥ (ನೇತ್ರ) ಚೆಂದದ, ಹೆಣ್ಣಿನ ಹೆಸರು! ಹೆಣ್ಣು ಸುಕೋಮಲೆ, ಸಹನಾಮೂರ್ತಿ, ತ್ಯಾಗಮಯಿ. ಆಕೆಯನ್ನು ಹೂವಿಗೆ, ಬಳ್ಳಿಗೆ, ನದಿಗೆ ಹೋಲಿಸಿದ್ದಾರೆ. ಪ್ರಕೃತಿಯನ್ನೂ “ಮಾತೆ’ ಎಂದೇ ಪೂಜಿಸುತ್ತೆ¤àವೆ. ಹಾಗಿದ್ದ ಮೇಲೆ ಜನರ ಬದುಕನ್ನು ಬುಡಮೇಲು ಮಾಡುವ ಪ್ರಾಕೃತಿಕ ವಿಕೋಪಗಳಿಗೂ ಹೆಣ್ಣಿನ ಹೆಸರೇ? ಯಾಕೆ ಈ ವೈರುಧ್ಯ? ಕೆರೋಲ್‌, ಬೆಟ್ಸೆ, ಕತ್ರಿನಾ, ಮರಿಯಾ, ರೀಟಾ… ಹೀಗೆ ಕರೆಯುವುದು ಮಹಿಳಾ ಶೋಷಣೆಯಲ್ಲವೇ?… ಹೀಗೊಂದು ಕೂಗು ಎದ್ದು, ಆ ಕುರಿತು ದಶಕಗಳ ಕಾಲ ಹೋರಾಟ ನಡೆದ ಮೇಲಷ್ಟೇ, ಪುರುಷ ಚಂಡಮಾರುತಗಳು ಎದ್ದಿದ್ದು. ಹರಿಕೇನ್‌ ಹಿಂದಿನ ಹರಿಕಥೆ ಇಲ್ಲಿದೆ…    

2000ನೇ ಇಸವಿ; ಮಿಯಾಮಿ, ಫ್ಲೋರಿಡಾ- “ಹರಿಕೇನ್‌ ಡೆಬ್ಬಿ ಯಾವುದೇ ಸಮಯಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರಿಕೆ ವಹಿಸಿ, ಎಲ್ಲಾ ಸಿದ್ಧತೆ ಮಾಡಿಟ್ಟುಕೊಳ್ಳಿ’… ಹೀಗೆಂದು ಪದೇಪದೆ ಟಿ.ವಿ, ಪೇಪರ್‌, ರೇಡಿಯೋಗಳಲ್ಲಿ ಸುದ್ದಿ ಬರುತ್ತಿದ್ದರೆ, ಅಮೆರಿಕೆಯ ಫ್ಲೋರಿಡಾದಲ್ಲಿ ವಾಸವಾಗಿದ್ದ ನಮಗೆ ಎದೆ ನಡುಗಿತ್ತು. ಮರಗಳನ್ನೇ ಉರುಳಿಸುವ ಪ್ರಬಲ ಗಾಳಿ, ಮನೆ ಮುಳುಗಿಸುವ ನೀರು, ಎಲ್ಲೆಂದರಲ್ಲಿ ಧೂಳು- ಮರಳು, ಕವಿದ ಕತ್ತಲು… ಹೀಗೆ ಅದೊಂದು ದುಃಸ್ವಪ್ನ! ಎಲ್ಲರೂ ಡೆಬ್ಬಿಗೆ ಮನಸೋ ಇಚ್ಛೆ ಬಯ್ಯುವವರೇ. ಪಾಪ, ನಮ್ಮ ನೆರೆಯ ಹುಡುಗಿ ಡೆಬ್ಬಿ “ಛೇ,ನನಗೆ ಒಂಥರಾ ಆಗುತ್ತೆ, ಇದಕ್ಕೇಕೆ ನನ್ನ ಹೆಸರು?’ ಎಂದು ಬೇಸರ ಮಾಡಿಕೊಂಡಿದ್ದಳು. “ಹೆಸರಿನಲ್ಲಿ ಏನಿದೆ?’ ಎಂದು ಅವಳನ್ನು ಸಮಾಧಾನಪಡಿಸಿದರೂ ಈ ಚಂಡಮಾರುತಗಳ ಹೆಸರಿನ ಹಿಂದಿನ ಕತೆ ದೊಡ್ಡದೇ!!

ಹೆಸರೇಕೆ ಬೇಕು?
ಹರಿಕೇನ್‌, ಸೈಕ್ಲೋನ್‌, ತೂಫಾನು ಎಲ್ಲವೂ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಕಡಿಮೆ ಒತ್ತಡದ ಪ್ರದೇಶದತ್ತ ರಭಸವಾಗಿ ಮುನ್ನುಗ್ಗುವ ಗಾಳಿ. ಜಗತ್ತಿನ ಬೇರೆ ಬೇರೆ ಸಮುದ್ರಗಳಲ್ಲಿ ಉಂಟಾಗುವ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಅನಾದಿಕಾಲದಿಂದಲೂ ಚಂಡಮಾರುತಗಳು ಅಪಾರ ಹಾನಿ ಮಾಡುತ್ತಲೇ ಬಂದಿವೆ. ಅವುಗಳಿಗೆ ಹೆಸರಿಟ್ಟು ಗುರುತಿಸುವ ಕೆಲಸ ಕಳೆದೊಂದು ಶತಮಾನದಿಂದ ನಡೆದುಬಂದಿದೆ.

ಆರಂಭದಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಈ ವಿದ್ಯಮಾನ ಗುರುತಿಸಲು ತಜ್ಞರು ಭೂಮಿಯ ಅಕ್ಷಾಂಶ ಮತ್ತು ರೇಖಾಂಶವನ್ನು ಬಳಸುತ್ತಿದ್ದರು. ವಿಶ್ವ ಹವಾಮಾನ ಸಂಸ್ಥೆ ಪ್ರಕಾರ, ಇದು ಗುರುತಿಸಲು ಕಠಿಣ. ಹೆಸರಿಟ್ಟಾಗ ಜನರಿಗೆ ನೆನಪಿಟ್ಟುಕೊಳ್ಳಲು ಸುಲಭ. ಮಾಧ್ಯಮಗಳಲ್ಲಿ ಸುದ್ದಿ ಕೊಡುವಾಗ ಬರೀ ಸಂಖ್ಯೆ ಅಥವಾ ವೈಜ್ಞಾನಿಕ ಹೆಸರು ನೀಡಿ ಜನರನ್ನು ಎಚ್ಚರಿಸುವುದು ಸುಲಭವಲ್ಲ. ಹೆಸರಿ¨ªಾಗ ಬೇಗನೆ ಮನಸ್ಸಿನಲ್ಲಿ ಉಳಿದು, ಬಾಯಿಂದ ಬಾಯಿಗೆ ಸುದ್ದಿ ಹರಡಿ ಜನರು ಪೂರ್ವ ಸಿದ್ಧತೆ ಕೈಗೊಳ್ಳಲು ಸಹಾಯಕ. ಹಾಗೆಯೇ ಯಾವ ಪ್ರದೇಶದಿಂದ ಎಲ್ಲಿಗೆ ಚಂಡಮಾರುತ ಧಾವಿಸುತ್ತಿದೆ ಎಂದು ಜನರ ಮೂಲಕ ಪತ್ತೆ ಸುಲಭಸಾಧ್ಯ.

ಹೀಗೆ ಅನುಕೂಲ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೊದ ಮೊದಲು ಚಂಡಮಾರುತ ಅಪ್ಪಳಿಸಿದ ಸ್ಥಳ, ಬಲಿಯಾದ ಹಡಗು, ಸಂತರು, ಕುಖ್ಯಾತ ವ್ಯಕ್ತಿಗಳು, ಗ್ರೀಕ್‌ ಅಕ್ಷರಗಳು ಹೀಗೆ ಅನುಕೂಲವೆನಿಸಿದ ಹೆಸರುಗಳನ್ನು ಇಡಲಾಯಿತು. ಆದರೆ, 1953ರಲ್ಲಿ ಮಹಿಳೆಯರ ಹೆಸರನ್ನು ಚಂಡಮಾರುತಗಳಿಗೆ ಇಡುವ ಪದ್ಧತಿ ಶುರುವಾಯಿತು. ಆಲಿಸ್‌ ಎಂಬುದು ಮಹಿಳೆಯ ಹೆಸರು ಹೊತ್ತ ಮೊದಲ ಚಂಡಮಾರುತ. ಈ ಪದ್ಧತಿ ಅನೇಕ ವಿರೋಧ ಮತ್ತು ಹೋರಾಟದ ನಡುವೆಯೂ 1978ರವರೆಗೆ ಅಂದರೆ ಎರಡೂವರೆ ದಶಕಗಳ ಕಾಲ ಮುಂದುವರಿಯಿತು.

ಮಹಿಳೆಯರ ಹೆಸರೇ ಏಕೆ?
ನಿಖರವಾಗಿ ಇಂಥದ್ದೇ ಕಾರಣ ಎಂದು ತಿಳಿದಿಲ್ಲವಾದರೂ ಇತಿಹಾಸ ಮತ್ತು ಹಳೆಯ ಕೃತಿಗಳ ಪ್ರಕಾರ ಹೆಸರಿನ ಹಿಂದಿನ ಉದ್ದೇಶ ಹೀಗಿರಬಹುದು.
– ನಾವಿಕರಲ್ಲಿ ಸಮುದ್ರ ಮತ್ತು  ನೌಕೆಯನ್ನು ಸ್ತ್ರೀಲಿಂಗವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಸಮುದ್ರದಲ್ಲಿ ಹುಟ್ಟುವ ಚಂಡಮಾರುತಕ್ಕೆ ಮಹಿಳೆಯರ ಹೆಸರಿಟ್ಟಿರಬಹುದು.
– ದೀರ್ಘ‌ಕಾಲ ಸಮುದ್ರಯಾನ ಕೈಗೊಳ್ಳುತ್ತಿದ್ದ ನಾವಿಕರು ತಮ್ಮ ಪ್ರೇಯಸಿಯರಿಂದ ದೂರ ಇರುತ್ತಿದ್ದರು. ವಿರಹದಿಂದ ಬಳಲುತ್ತಿದ್ದ ನಾವಿಕರು ಅದೇ ನೆನಪಿನಲ್ಲಿ ಚಂಡಮಾರುತಕ್ಕೆ ತಮಗಿಷ್ಟದ ಹೆಸರಿಟ್ಟಿರಬಹುದು.
– ಕೆಲವೊಮ್ಮೆ ತೀರಕ್ಕೆ ಹತ್ತಿರ ಬಂದು ಕೆಣಕಿ, ಮತ್ತೆ ಹಲವು ಬಾರಿ ಅಪ್ಪಳಿಸುತ್ತಿದ್ದ ಚಂಡಮಾರುತಗಳು ಮಹಿಳೆಯರ ಸ್ವಭಾವದಂತೆ ಹೇಳಲಸಾಧ್ಯ, ಪ್ರಕ್ಷುಬ್ಧ ಎಂಬ ಅಭಿಪ್ರಾಯ. ಹಾಗಾಗಿ ಅಂಥ ಹೆಸರುಗಳು! ಮಾಧ್ಯಮಗಳಲ್ಲೂ ಚಂಡಮಾರುತಗಳಿಗೆ ಸ್ತ್ರೀಲಿಂಗವನ್ನೇ ಬಳಸಲಾಗುತ್ತಿತ್ತು.
– ಮಹಿಳೆ ಎಂದರೆ ಹೇಗೋ ಜೀವನದಲ್ಲಿ ಪ್ರವೇಶಿಸಿ ನಂತರ ಆಸ್ತಿ, ದುಡ್ಡು ಎÇÉಾ ಕೊಂಡೊಯ್ಯುವವಳು ಎಂಬ ತಮಾಷೆ, ವ್ಯಂಗ್ಯ ಮತ್ತು ತಿರಸ್ಕಾರ.

ಮೇಲಿನ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲವು ಹಿರಿಯ ನಾವಿಕರು, “ಚಂಡಮಾರುತ ಎಂದೊಡನೆ ಜನರು ಹೆದರಿ ಕಂಗಾಲಾಗುತ್ತಾರೆ. ಮಹಿಳೆಯರ ಹೆಸರಿಟ್ಟರೆ ತಾಯಿಯ ನೆನಪಾಗುತ್ತದೆ. ತಾಯಿ ಎಂದರೆ ಕರುಣಾಮಯಿ, ಅಂಥ ತೊಂದರೆ ಇಲ್ಲ, ಜನ ಹೆದರದಿರಲಿ ಎನ್ನುವ ಕಾರಣಕ್ಕೆ ಹೀಗೆ ಇಡಲಾಗುತ್ತಿತ್ತು’ ಎನ್ನುತ್ತಾರೆ.

ಅರವತ್ತರ ದಶಕದಲ್ಲಿ ಮಹಿಳಾ ಸಮಾನತೆಯ ಕೂಗು ಬಲವಾದಾಗ ಚಂಡಮಾರುತಗಳ ಹೆಸರೂ ಚರ್ಚೆಗೆ ಬಂತು. ಸಾಕಷ್ಟು ಜನ ಪತ್ರ ಬರೆದು, ಮನವಿ ಸಲ್ಲಿಸಿದರೂ ಹವಾಮಾನ ತಜ್ಞರು ಮಹಿಳೆಯರ ಹೆಸರನ್ನೇ ಇಡಲು ಬಯಸುತ್ತಾರೆ. ಪುರುಷರ ಹೆಸರು ಇಡಬೇಕೆಂಬುದು ಕೆಲವರ ವೈಯಕ್ತಿಕ ಅಭಿಪ್ರಾಯ. ಹಾಗೆ ನೋಡಿದರೆ, ತುಂಬಾ ಮಹಿಳೆಯರು ತಮ್ಮ ಹೆಸರನ್ನು ಚಂಡಮಾರುತಗಳಿಗೆ ಇಡಬೇಕು ಎಂದು ಕೋರುತ್ತಾರೆ ಎಂದು ರಾಷ್ಟ್ರೀಯ ಚಂಡಮಾರುತ ಸಮಿತಿಯ ಆರ್ನಾಲ್ಡ… ವಾದಿಸಿದ್ದರು. ಹೋರಾಟ ಅಲ್ಲಿಗೇ ನಿಲ್ಲಲಿಲ್ಲ. ಸತತ ಪ್ರಯತ್ನದ ಫ‌ಲವಾಗಿ 1978ರಲ್ಲಿ ಮೊದಲ ಬಾರಿಗೆ ಪುರುಷರ ಹೆಸರನ್ನು ಚಂಡಮಾರುತಕ್ಕೆ ಇಡಲು ಆರಂಭಿಸಿದರು. “ಬಾಬ್‌’ ಎನ್ನುವುದು ಮೊದಲ ಪುರುಷ ಹೆಸರಿನ ಚಂಡಮಾರುತ. ಕಡೆಗೂ ಹೆಸರಿನÇÉಾದರೂ ಸಮಾನತೆ ದೊರೆಯಿತು!

ಕೊನೆಯಾದ ಕತ್ರಿನಾ
ಚಂಡಮಾರುತಗಳ ಹೆಸರಿಗೂ ನಿವೃತ್ತಿ ಎಂಬುದಿದೆ. ಅಪಾರ ನಷ್ಟ ಉಂಟುಮಾಡಿದ, ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದ ಚಂಡಮಾರುತಗಳ ಹೆಸರನ್ನು ಮತ್ತೆ ಬಳಸಲಾಗುವುದಿಲ್ಲ. ಆ ಹೆಸರನ್ನು ಮತ್ತೆ ಇಟ್ಟರೆ ಅದೇ ರೀತಿ ಮರುಕಳಿಸಬಹುದು ಎಂಬ ಶಂಕೆ, ಚರಿತ್ರೆಯಲ್ಲಿ ಅಪಾಯಕಾರಿ ಎಂದು ದಾಖಲಾಗಿದ್ದು ಮತ್ತೆ ಬೇಡ ಎಂಬ ಉದ್ದೇಶ, ಹಾಗೂ ಮಡಿದವರಿಗೆ ಗೌರವ ಸಲ್ಲಿಸುವ ಉದ್ದೇಶ ಇದರ ಹಿಂದಿದೆ. ಉದಾಹರಣೆಗೆ 2005ರಲ್ಲಿ ಬಂದಿದ್ದ “ಕತ್ರಿನಾ’ ಹೆಸರನ್ನು ನಿವೃತ್ತಗೊಳಿಸಲಾಗಿದೆ. ಹಾಗೆಯೇ ಕತ್ರಿನಾ ಜನಪ್ರಿಯ ಹೆಸರಾಗಿದ್ದರೂ ಆ ವರ್ಷ ಜನಿಸಿದ ಮಕ್ಕಳಿಗೆ ಈ ಹೆಸರಿಟ್ಟವರು ತೀರಾ ಕಡಿಮೆ ಜನ!

ರಾಕ್ಸಿ ಬೋಲ್ಟನ್‌
“ಕೆರೋಲ್‌, ಬೆಟ್ಸೆ, ಕತ್ರಿನಾ  ಹೀಗೆ ಸುಮ್ಮನೇ ತಮ್ಮ ಹೆಸರನ್ನು ದುರಂತ- ಹಾನಿ ಉಂಟು ಮಾಡುವ ಚಂಡಮಾರುತದೊಂದಿಗೆ ಬೆಸೆಯುವುದಕ್ಕೆ ಮಹಿಳೆಯರ ವಿರೋಧವಿದೆ’ ಎಂದು ಹವಾಮಾನ ತಜ್ಞರ ಏಕಪಕ್ಷೀಯ ಧೋರಣೆ ವಿರುದ್ಧ ಬಹಿರಂಗವಾಗಿ ಅರವತ್ತರ ದಶಕದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿಟ್ಟ ಮಹಿಳೆ ಅಮೆರಿಕೆಯ ಫ್ಲೋರಿಡಾದ ರಾಕ್ಸಿ ಬೋಲ್ಟನ್‌. ಈ ರೀತಿಯ  ಹೆಸರುಗಳು ಮಹಿಳೆಯರ ಕುರಿತ ಅವಹೇಳನಕಾರಿ ಧೋರಣೆಯ ಪ್ರತಿಫ‌ಲನ. ಹಾಗಾಗಿ, ಇದು ಬದಲಾಗಬೇಕು. ಮಾತ್ರವಲ್ಲ ಹರಿಕೇನ್‌ ಶಬ್ದದಲ್ಲಿ ಇರುವ ಹರ್‌ (“ಹರ್‌’ ಅಂದರೆ “ಅವಳ’) ತೆಗೆದು ಹಿಮಿಕೇನ್‌ (ಹಿಮ್‌-ಅವನು) ಎಂದು ಹೆಸರಿಸಬೇಕೆಂದು ಆಕೆ ಒತ್ತಾಯಿಸಿದ್ದರು. “ಇಲ್ಲದಿದ್ದರೆ, ಬೀದಿ, ಸೇತುವೆ ಮತ್ತು ಕಟ್ಟಡಗಳಿಗೆ ತಮ್ಮ ಹೆಸರಿಟ್ಟರೆ ಖುಷಿ ಪಡುವ ರಾಜಕಾರಣಿಗಳ ಹೆಸರನ್ನು ಈ ಚಂಡಮಾರುತಗಳಿಗೆ ಇಡಿ!’ ಎಂದೂ ಅವರು ಆಗ್ರಹಿಸಿದ್ದರು. ಆದರೆ, ಅದನ್ನು ಬಾಲಿಶ ಎಂದು ಹವಾಮಾನ ಸಂಸ್ಥೆ ತಿರಸ್ಕರಿಸಿತ್ತು. ರಾಕ್ಸಿ ಹೋರಾಟ ಒಂದೂವರೆ ದಶಕದ ತನಕವೂ ಮುಂದುವರಿದಿತ್ತು.

ಹೆಸರಿನ ಆಯ್ಕೆ ಹೇಗಾಗುತ್ತೆ?
– ಜಾಗತಿಕ ಪವನಶಾಸ್ತ್ರ ಸಂಸ್ಥೆ ಮತ್ತು ಪ್ರಾದೇಶಿಕ ಸಮಿತಿ, ಸೂಚಿಸಲ್ಪಟ್ಟಿರುವ ಹೆಸರುಗಳನ್ನು ಜನಮತಗಣನೆಯ ಆಧಾರದಲ್ಲಿ ನಿರ್ಧರಿಸುತ್ತದೆ. 
– ಸುಲಭವಾಗಿ ಉಚ್ಚರಿಸಲಾಗುವ, ಎರಡು ಅಥವಾ ಮೂರು ಅಕ್ಷರದ, ಆಯಾ ಪ್ರದೇಶಗಳಲ್ಲಿ ಬಳಸಲ್ಪಡುವ ಹೆಸರುಗಳನ್ನು ಆಯ್ಕೆ ಮಾಡಲಾಗುತ್ತದೆ.
– ಇಂಗ್ಲೀಷಿನ “ಎ’ ಅಕ್ಷರದಿಂದ ಆರಂಭವಾಗುವ ಹೆಸರು ವರ್ಷದ ಮೊದಲ ಚಂಡಮಾರುತಕ್ಕೆ ಇಡಲಾಗುತ್ತದೆ. ನಂತರ ಬಿ, ಸಿ ಹೀಗೆ ಪಟ್ಟಿ ಮುಂದುವರಿಯುತ್ತದೆ.
– ವರ್ಷ ಸಮಸಂಖ್ಯೆಯಲ್ಲಿ ಕೊನೆಗೊಂಡರೆ ಸಮಸಂಖ್ಯೆಯ ಚಂಡಮಾರುತಗಳಿಗೆ ಮಹಿಳೆಯರ ಹೆಸರು ಮತ್ತು ಬೆಸಸಂಖ್ಯೆಗೆ ಪುರುಷರ ಹೆಸರು. ಅದೇ ಬೆಸಸಂಖ್ಯೆಯ ವರ್ಷದಲ್ಲಿ ಮಹಿಳೆಯರ ಹೆಸರು ಬೆಸಸಂಖ್ಯೆಗೆ ಮತ್ತು ಪುರುಷರದ್ದು ಸಮಸಂಖ್ಯೆಗೆ ಇಡಲಾಗುತ್ತದೆ.
– ಆರು ವರ್ಷಗಳ ಹೆಸರಿನ ಪಟ್ಟಿಯನ್ನು ತಯಾರಿಸಲಾಗುತ್ತದೆ. ಪ್ರತೀ ವರ್ಷದ ಪಟ್ಟಿಯಲ್ಲಿ ಇಪ್ಪತ್ತೂಂದು ಹೆಸರಿರುತ್ತವೆ. ಅಷ್ಟೂ ಹೆಸರುಗಳು ಬಳಕೆಯಾದಲ್ಲಿ ಗ್ರೀಕ್‌ ಅಕ್ಷರಗಳನ್ನು ಬಳಸಲಾಗುತ್ತದೆ.   

ಹೆಚ್ಚು ಹಾನಿ!
2014ರ ಅಮೆರಿಕದ ವೈಜ್ಞಾನಿಕ ಸಂಶೋಧನೆ ಪ್ರಕಾರ ಮಹಿಳೆಯರ ಹೆಸರುಳ್ಳ ಚಂಡಮಾರುತಗಳು ಹೆಚ್ಚಿನ ಪ್ರಮಾಣದಲ್ಲಿ ಜೀವಹಾನಿ ಮತ್ತು ನಷ್ಟವನ್ನುಂಟು ಮಾಡಿದೆ! ಇದಕ್ಕೆ ಮುಖ್ಯ ಕಾರಣವೆಂದರೆ, ಪುರುಷರ ಹೆಸರಿದ್ದರೆ ಶಕ್ತಿಯುತ ಮತ್ತು ಭೀಕರ ಎಂದು ಜನರು ಭಾವಿಸಿ ಎಚ್ಚರಿಕೆ ವಹಿಸುತ್ತಾರೆ. ಮಹಿಳೆಯರ ಹೆಸರಿದ್ದಾಗ ಅಪಾಯಕಾರಿಯಲ್ಲ ಎಂಬ ಭರವಸೆಯಿಂದ ನಿರ್ಲಕ್ಷಿಸುತ್ತಾರೆ.ಇದನ್ನು ತಾರತಮ್ಯ ಅನ್ನುವುದು ಸರಿಯಲ್ಲ.ಆದರೆ ಮಹಿಳೆ ಅಬಲೆ-ಕೋಮಲೆ ಮತ್ತು ಮೃದುಹೃದಯಿ ಎಂದು ರೂಢಿಗತವಾಗಿ ಬಂದು ಈಗಲೂ ಹಾಗೇ ಇರುವ ಸುಪ್ತ ಮನೋಭಾವ ಎಂಬುದು ಸಂಶೋಧಕರ ಅಭಿಪ್ರಾಯ.

– ಡಾ.ಕೆ.ಎಸ್‌.ಚೈತ್ರಾ

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.