ಟೂರ್‌ “ಫಾಲ್ಸ್‌’:ಮಾಯಾನಗರಿ ಸುತ್ತಮುತ್ತಲಿನ ಮಿನಿ ಜೋಗಗಳು


Team Udayavani, Jul 14, 2018, 5:21 PM IST

101.jpg

 ಮಳೆಯನ್ನು ಬೆನ್ನಟ್ಟುವುದು ಅನೇಕರಿಗೆ ಅದೇನೋ ಥ್ರಿಲ್ಲಿಂಗ್‌. ಬೆಂಗಳೂರಿನಲ್ಲೂ “ಮಾನ್ಸೂನ್‌ ಚೇಸಿಂಗ್‌ಪ್ರಿಯ’ರು ನೆನೆಯುತ್ತಾ, ಮಾಯಾನಗರಿಯ ಮೇರೆ ದಾಟುತ್ತಾರೆ. ಮಳೆಯಲ್ಲಿ ತಾವೂ ನೆನೆದು, ಮನಸ್ಸನ್ನು ತೊಯ್ದುಕೊಂಡು ತಾಜಾವಾಗಿ ಮತ್ತೆ ಬೆಂಗಳೂರಿನ ಗೂಡಿಗೆ ಮರಳುತ್ತಾರೆ. ಅದೇ ರೀತಿ “ಫಾಲ್ಸ್‌ ಚೇಸಿಂಗ್‌’ ಕೂಡ ಅಂಥದ್ದೇ ಖುಷಿಯ ಬಾಲ ಹಿಡಿದು ಹೊರಡುವ ಸಾಹಸ. ಬೈಕ್‌ ಅಥವಾ ಕಾರನ್ನೇರಿ ಜಲಪಾತಗಳನ್ನು ನೋಡಿ ಬರುವವರಿಗೆ ಬೆಂಗಳೂರಿನ ಸುತ್ತಮುತ್ತ ಸಾಕಷ್ಟು ಮನೋಹರ ದೃಶ್ಯಗಳ ಕಚಗುಳಿಯಿದೆ. ಒಂದು ದಿನದಲ್ಲಿ ಜಲವೈಭವ ನೋಡಿ, ಹಿಂದಿರುಗುವುದಾದರೆ, ಹತ್ತಿರದ ಜಲಪಾತಗಳು ಯಾವುವು? ಅಂಥ ಮಿನಿ ಜೋಗಗಳ ಟೂರಿಂಗ್‌ ಟಿಪ್ಪಣಿ ಇದು… 

1. ಚುಂಚಿ ಫಾಲ್ಸ್‌
ಕಲ್ಲುಬಂಡೆಗಳು, ಸುತ್ತಲೂ ಹಸಿರು, ಇವುಗಳ ಮಧ್ಯೆ ಇದೆ ಚುಂಚಿ ಫಾಲ್ಸ್‌. ಕನಕಪುರದ ಬಳಿ ಇದೆ ಈ ಜಲಪಾತ. ಬೇಸಿಗೆಕಾಲದಲ್ಲಿ ಏದುಸಿರು ಬಿಡುವ ಜಲಪಾತ ಮಳೆಗಾಲ ಮತ್ತು ಚಳಿಗಾಲದಲ್ಲಿ ಮೈದುಂಬಿ ಹೊರ ರಾಜ್ಯಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾರಿಗೆ ವ್ಯವಸ್ಥೆ ಅಷ್ಟಾಗಿ ಇಲ್ಲದಿರುವುದರಿಂದ ಸ್ವಂತ ವಾಹನವಿದ್ದರೆ ಅನುಕೂಲ. ವಾಹನಗಳನ್ನು ಮರಗಳ ಕೆಳಗೆ ಪಾರ್ಕ್‌ ಮಾಡಿ ಒಂದು ಚಿಕ್ಕ ಟ್ರೆಕ್‌ ಮಾಡಿದರೆ ಜಲಪಾತ ತಲುಪಿಬಿಡಬಹುದು. 
ದೂರ(ಬೆಂಗಳೂರಿನಿಂದ): 83 ಕಿ.ಮೀ.
ಸುತ್ತಮುತ್ತ: ಸಂಗಮ

2. ಶಿವನಸಮುದ್ರ
ನಗರದ ಸುತ್ತಮುತ್ತಲಿನ ಅಚ್ಚುಮೆಚ್ಚಿನ ಪಿಕ್‌ನಿಕ್‌ ಸ್ಪಾಟ್‌ಗಳಲ್ಲಿ ಶಿವನಸಮುದ್ರವೂ ಒಂದು. ಮಂಡ್ಯ ಜಿಲ್ಲೆಯಾಗಿ ಹರಿಯುವ ಕಾವೇರಿ ನದಿ ಕೊರಕಲ್ಲುಗಳನ್ನು ಹಾದುಹೋಗುತ್ತಾ ಶಿವನಸಮುದ್ರದಲ್ಲಿ ರುದ್ರರಮಣೀಯ ಜಲಪಾತವಾಗಿ ಹರಿಯುತ್ತದೆ. ಕಾವೇರಿ ನದಿ ಮುಂದಕ್ಕೆ ಹರಿಯುತ್ತಾ ಬೇರ್ಪಟ್ಟು ಗಗನಚುಕ್ಕಿ, ಭರಚುಕ್ಕಿ ಜಲಪಾತಗಳಾಗಿ ಜನ್ಮತಳೆಯುತ್ತದೆ. ಹಾಲಿನಂತೆ ಭೋರ್ಗರೆಯುವ ಜಲಪಾತವನ್ನು ನೋಡುತ್ತಿದ್ದರೆ ಮೈಜುಮ್ಮೆನ್ನುತ್ತದೆ. ಜೊತೆಯಲ್ಲಿ ಕ್ಯಾಮೆರಾ ಇದ್ದರಂತೂ ಕೈತುಂಬಾ ಕೆಲಸ. ಸುತ್ತಲಿನ ಸೀನರಿಗಳನ್ನು ಸೆರೆಹಿಡಿದು ಸಂತಸಪಡಬಹುದು. ಇಲ್ಲಿ ತೆಪ್ಪದ ರೈಡಿನ ಮಜವನ್ನೂ ಅನುಭವಿಸಬಹುದು.
ದೂರ: 110 ಕಿ.ಮೀ.
ಸುತ್ತಮುತ್ತ: ತಲಕಾಡು, ಸೋಮನಾಥಪುರ

3. ಮುತ್ಯಾಳ ಮಡುವು
ಆನೇಕಲ್‌ ಬಳಿಯಿರುವ ಈ ಜಲಪಾತ ಪರ್ಲ್ ಫಾಲ್ಸ್‌ ಎಂದೇ ಹೆಸರುವಾಸಿ. ಜಲಪಾತಕ್ಕೆ  ಆ ಹೆಸರು ಬಂದಿದ್ದರ ಹಿಂದೆ ಒಂದು ಕಾರಣವಿದೆ. ಈ ಪುಟ್ಟ ಜಲಪಾತದಲ್ಲಿ ನೀರು ಕೆಳಕ್ಕೆ ಹರಿದು ಹತ್ತಿರದ ಬಂಡೆಗಳಿಗೆ ಡಿಕ್ಕಿ ಹೊಡೆದು ನೊರೆಯುಕ್ಕುತ್ತದೆ. ಈ ಬೆಳೊ°ರೆಗಳು ಮುತ್ತುಗಳಂತೆ ಗೋಚರಿಸುವುದರಿಂದ ಜಲಪಾತಕ್ಕೆ ಆ ಹೆಸರು ಬಂದಿತು. ಪುಟ್ಟ ಜಲಪಾತವಾದರೂ ಮನಸ್ಸು ಮುದಗೊಳ್ಳಲು ಬೇಕಾದ ಪರಿಸರ ಈ ಪ್ರದೇಶದ ವೈಶಿಷ್ಟéತೆ. 
ದೂರ: 43 ಕಿ.ಮೀ.
ಸುತ್ತಮುತ್ತ: ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌

4. ಮೇಕೆದಾಟು


ಕನಕಪುರದ ಸಂಗಮದಲ್ಲಿ ಅರ್ಕಾವತಿ ಮತ್ತು ಕಾವೇರಿ ಸೇರಿಕೊಂಡು ಸುಮಾರು 3 ಕಿ.ಮೀ ಮುಂದಕ್ಕೆ ಹರಿಯುವಲ್ಲಿ ವೇಗ ಮತ್ತು ರೌದ್ರತೆಯನ್ನು ಪಡೆದುಕೊಳ್ಳುತ್ತದೆ. ಹಿಂದೊಮ್ಮೆ ಮೇಕೆಯನ್ನು ಹುಲಿಯೊಂದು ಅಟ್ಟಿಸಿಕೊಂಡು ಬಂದಿತಂತೆ. ಅದಕ್ಕೆ ಅಡ್ಡವಾಗಿ ಹೊಳೆ ಎದುರಾದಾಗ ಮೇಕೆ ಸಿಕ್ಕಿಕೊಂಡಿತೆಂದು ಹುಲಿ ಭಾವಿಸಿತು. ಆದರೆ ಅದರ ಆಶ್ಚರ್ಯಕ್ಕೆ ಮೇಕೆ ಈ ಬದಿಯಿಂದ ಇನ್ನೊಂದು ಬದಿಗೆ ಹಾರುವುದರಲ್ಲಿ ಯಶ ಕಂಡಿತು. ಆ ಜಾಗವೇ ಮೇಕೆದಾಟು. ಚಿತ್ರವಿಚಿತ್ರ ತಿರುವುಗಳಲ್ಲಿ ಬಳುಕುವ ದೃಶ್ಯ ಮನಮೋಹಕ.
ದೂರ: 93 ಕಿ.ಮೀ.
ಸುತ್ತಮುತ್ತ: ಸಂಗಮ, ಬೃಂದಾವನ

5. ತೊಟ್ಟಿಕಲ್ಲು ಫಾಲ್ಸ್‌
ನಗರಕ್ಕೆ ತುಂಬಾ ಹತ್ತಿರವಿರುವ ಜಲಪಾತವೆಂದರೆ ತೊಟ್ಟಿಕಲ್ಲು ಜಲಪಾತ. ಬಹುತೇಕ ಸ್ಥಳೀಯರು ಈ ಜಲಪಾತವನ್ನು ಸ್ವರ್ಣಮುಖೀ ಜಲಪಾತವೆಂದೂ ಕರೆಯುತ್ತಾರೆ. ಮರಗಳು, ಹಸಿರನ್ನು ಹೊದ್ದಿರುವ ಈ ಪ್ರದೇಶವನ್ನು ತಲುಪಲು ಸ್ವಲ್ಪ ಚಾರಣವನ್ನೂ ಮಾಡಬೇಕಿದೆ. ಚಾರಣ ಎಂದರೆ ಗಂಟೆಗಟ್ಟಲೆ ಮಾಡುವಂಥದ್ದಲ್ಲ. ಕೆಲವೇ ಕಿ.ಮೀ ದೂರದಷ್ಟು ಮಾತ್ರ. ಹೀಗಾಗಿ ಇಲ್ಲಿಗೆ ಭೇಟಿ ಕೊಟ್ಟರೆ ಪಿಕ್‌ನಿಕ್‌ ಮತ್ತು ಟ್ರೆಕ್ಕಿಂಗ್‌ ಎರಡೂ ಮಾಡಿದಂತಾಗುತ್ತೆ. 
ದೂರ: 35 ಕಿ.ಮೀ.
ಸುತ್ತಮುತ್ತ: ಚೂಡಾಹಳ್ಳಿ ಅಣೆಕಟ್ಟು

6. ಕೈಗಲ್‌ ಫಾಲ್ಸ್‌
ಪ್ರಾಣಿ, ಪಕ್ಷಿ, ಸಸ್ಯ ರಾಶಿಯ ಸಮೂಹದಲ್ಲಿ, ಕೌಂಡಿನ್ಯ ಅಭಯಾರಣ್ಯದ ಬಳಿಯೇ ಇರುವ ಕೈಗಲ್‌ ಫಾಲ್ಸ್‌ ಪ್ರಕೃತಿಪ್ರೇಮಿಗಲಿಗೆ ಹಬ್ಬವನ್ನುಂಟು ಮಾಡುವ ಜಾಗ. 40 ಅಡಿ ಎತ್ತರದ ಬಂಡೆಯ ಮೇಲಿಂದ ಬೀಳುವ ಕೈಗಲ್‌ ತೊರೆ ಜಲಪಾತವಾಗಿ ಕಣ್ಮನ ಸೂರೆಗೊಳ್ಳುತ್ತೆ. ಜಲಪಾತದ ಹತ್ತಿರದಲ್ಲಿ ಹಲವಾರು ಕೆರೆಗಳಿದ್ದು ಫೋಟೊಗ್ರಾಫ‌ರ್‌ಗಳ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ನೆಲೆಗೊಂಡಿರುವ ಈ ಜಲಪಾತವನ್ನು ನಗರದಿಂದ ಕೆಲ ಗಂಟೆಗಳ ಪ್ರಯಾಣ ಮಾಡಿ ತಲುಪಬಹುದು. 
ದೂರ: 119 ಕಿ.ಮೀ.
ಸುತ್ತಮುತ್ತ: ಅಂತರಗಂಗೆ, ಅವನಿ ಗ್ರಾಮ (ಕೋಲಾರ)

ಟಾಪ್ ನ್ಯೂಸ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Dharwad: ಐಐಟಿ ನೂತನ ನಿರ್ದೇಶಕರಾಗಿ ಪ್ರೊ.ಮಹಾದೇವ ನೇಮಕ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

Adani-Ambaniಯಿಂದ ಎಷ್ಟು ಕಪ್ಪು ಹಣ ಪಡೆದಿದ್ದೀರಿ? ರಾಹುಲ್‌ ವಿರುದ್ಧ ಮೋದಿ ವಾಗ್ದಾಳಿ

8-kvasantha-bangera

K. Vasantha Bangera: ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಅಸ್ತಂಗತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Tulu Movie: ಕತಾರ್ ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್”         

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.